Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ರೆಸಿಪಿ: ಜೇನು-ಭಾರತೀಯ ಶೈಲಿಯಲ್ಲಿ ಬೆಳ್ಳುಳ್ಳಿ ಚಿಕನ್ ಸ್ನ್ಯಾಕ್ಸ್, ರುಚಿ ಸೂಪರ್
ನೀವು ಚಿಕನ್ ಪ್ರಿಯರಾಗಿದ್ದರೆ ಈ ಬೆಳ್ಳುಳ್ಳಿ ಜೇನಿನ ಚಿಕನ್ ಟೇಸ್ಟ್ ತುಂಬಾನೇ ಇಷ್ಟವಾಗುವುದು. ವೀಕೆಂಡ್, ಹಬ್ಬಗಳು ಹೀಗೆ ವಿಶೇಷ ದಿನಗಳಿಗೆ ಪರ್ಫೆಕ್ಟ್ ಚಾಯ್ಸ್ ರೆಸಿಪಿ. ಈ ಚಿಕನ್ ರೆಸಿಪಿ ಮಾಡುವುದು ಕಷ್ಟವೇನಿಲ್ಲ, ನಮ್ಮ ಭಾರತೀಯ ಶೈಲಿಯಲ್ಲೇ ಇದನ್ನು ಮಾಡಬಹುದು. ಈ ರುಚಿಕರವಾದ ಚಿಕನ್ ಸ್ನ್ಯಾಕ್ಸ್ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಗ್ರಿ
ಬೋನ್ಲೆಸ್ ಚಿಕನ್1/2 ಕೆಜಿ
ಉಪ್ಪಿನ ಪುಡಿ
ಕಾಳು ಮೆಣಸಿನ ಪುಡಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್]
ಜೋಳದ ಹಿಟ್ಟು 2 ಚಮಚ
ಎಣ್ಣೆ
10-12 ಎಸಳು ಬೆಳ್ಳುಳ್ಳಿ (ಚಿಕ್ಕದಾಗಿ ಕತ್ತರಿಸಬೇಕು)
ಸಾಸ್ಗಳು
ಚಿಲ್ಲಿ ಸಾಸ್(ಕೆಂಪು ಚಿಲ್ಲಿ ಸಾಸ್)
ಸೋಯಾ ಸಾಸ್
ಟೊಮೆಟೊ ಸಾಸ್
ಎಳ್ಳು
ಸ್ಪ್ರಿಂಗ್ ಆನಿಯನ್
ಅಡುಗೆ ವಿಧಾನ:
ಸ್ಟೆಪ್ 1
ಬೋನ್ಲೆಸ್ ಚಿಕನ್
1/2 ಚಮಚ ಉಪ್ಪಿನ ಪುಡಿ
1/2 ಚಮಚ ಕಾಳು ಮೆಣಸಿನ ಪುಡಿ
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಜೋಳದ ಹಿಟ್ಟು 2 ಚಮಚ ಹಾಕಿ ಮಿಕ್ಸ್ ಮಾಡಿ.
ಮಿಕ್ಸ್ ಮಾಡಿ ಒಂದು ಗಂಟೆ ಇಡಿ.
ಸ್ಟೆಪ್ 2
ಒಂದು ಪ್ಯಾನ್ಗೆ ಎಣ್ಣೆ ಹಾಕಿ ಕಾಯಿಸಿ, ನಂತರ ಚಿಕನ್ ಹಾಕಿ ಫ್ರೈ ಮಾಡಿ
ಇಡಿ.
ಚಿಕನ್ ಚೆನ್ನಾಗಿ ಬೆಂದ ಮೇಲೆ ಎಣ್ಣೆಯಿಂದ ತೆಗೆದು ಒಂದು ತಟ್ಟೆಯಲ್ಲಿ
ಹಾಕಿಡಿ.
ಸ್ಟೆಪ್ 3
ಈಗ ಪ್ಯಾನ್ ಫ್ರೈ ಮಾಡಿದ ಎಣ್ಣೆಯನ್ನೇ 2 ಚಮಚ ಹಾಕಿ, ನಂತರ ಬೆಳ್ಳುಳ್ಳಿ, ಒಣ
ಮೆಣಸಿನ ಬೀಜ 1/2 ಚಮಚ ಹಾಕಿ ಫ್ರೈ ಮಾಡಿ.
ನಂತರ ರೆಡ್ ಚಿಲ್ಲಿ ಸಾಸ್ ಹಾಗೂ ಟೊಮೆಟೊ ಸಾಸ್ ಹಾಕಿ. ಟೊಮೆಟೊ ಸಾಸ್
ಹಾಕಿ.
ಸೋಯಾ ಸಾಸ್ 1/2 ಚಮಚ, ಜೇನು 2 ಚಮಚ ಹಾಕಿ.
ಎಣ್ಣೆ 1 ಚಮಚ ಹಾಕಿ
1 ಚಮಚ ವಿನೆಗರ್ ಹಾಕಿ
ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ಈಗ ಫ್ರೈ ಮಾಡಿಟ್ಟ ಚಿಕನ್ ಹಾಕಿ.
ನಂತರ ಚೆನ್ನಾಗಿ ಮಿಕ್ಸ್ ಮಾಡಿ
ನಂತರ 1 ಚಮಚ ಬಿಳಿ ಎಳ್ಳು ಹಾಕಿ.
ನಂತರ ಸ್ಪ್ರಿಂಗ್ ಆನಿಯನ್ ಹಾಕಿ ಮಿಕ್ಸ್ ಮಾಡಿದರೆ ಬೆಳ್ಳುಳ್ಳಿ ಜೇನು ಚಿಕನ್
ರೆಡಿ.
ಇತರ ಸಲಹೆ
- ಜೇನಿನಲ್ಲಿ ಹಲವು ಬಗೆಯ ಜೇನು ಸಿಗುವುದು, ಕಾಡು ಜೇನು, ಜೇನು ಸಾಕಣೆ ಮಾಡಿ ಸಿಕ್ಕಿದ ಜೇನು ಅಂತ ಎರಡು ಪ್ರಮುಖ ವಿಧಗಳು. ಇನ್ನು ಕೆಲವು ಕಡೆ ಕಲಬೆರಿಕೆ ಮಾಡಿದ ಜೇನು ಸಿಗುವುದು. ಆದ್ದರಿಂದ ನೀವು ನಾಡು ಜೇನು ಅಥವಾ ಕಕಾಡು ಜೇನು ಬಳಸಬಹುದು, ರುಚಿ ಭಿನ್ನ ಸಿಗುವುದು.
- ಜೇನು ಹಾಕಿದ ಮೇಲೆ ತುಂಬಾ ಹೊತ್ತು ಕಾಯಿಸಬೇಡಿ, ಜೇನು ಹಾಕಿದ ಒಂದು ನಿಮಿಷದಲ್ಲಿ ಗ್ಯಾಸ್ ಆಫ್ ಮಾಡಿ.
- ಜೇನು ಚಿಕನ್ಗೆ ಹಾಕಿ ಸಿಹಿ ಕಿಶ್ರಿತ ಫ್ಲೇವರ್ ಸೂಪರ್ ಅನಿಸುವುದು
- ಇದನ್ನು ಬಿಸಿ ಬಿಸಿ ಇರುವಾಗ ಸವಿಯಬೇಕು, ಇಲ್ಲಾಂದ್ರೆ ಟೇಸ್ಟ್ ಅನಿಸಲ್ಲ, ಆದ್ದರಿಂದ ಬಿಸಿ ಬಿಸಿ ಸವಿಯಿರಿ.



Click it and Unblock the Notifications
