Latest Updates
-
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ?
ಮನೆಯಲ್ಲೇ ಸಿಂಪಲ್ ಆಗಿ ತಯಾರಿಸಿ ಶುದ್ಧ ದೇಸಿ ಮರುಳಾದ ತುಪ್ಪ
ಸಾಕಷ್ಟು ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳನ್ನು ಹೊಂದಿರುವ ತುಪ್ಪ ಯಾರಿಗೆ ತಾನೆ ಇಷ್ಟವಿಲ್ಲ?. ಹಲವರಂತೂ ತುಪ್ಪವಿಲ್ಲದೇ ಊಟ ಸಂಪೂರ್ಣವಾಗುವುದೇ ಇಲ್ಲ. ಆದರೆ ಬಾಯಿಯ ರುಚಿ ಹೆಚ್ಚಿಸುವ ಹಾಗೂ ನಿತ್ಯ ಸೇವಿಸುವ ಈ ತುಪ್ಪವನ್ನು ಯಾವಾಗಲೂ ಅಂಗಡಿಯಿಂದ ತಂದು ಸೇವಿಸುವುದು ಎಷ್ಟು ಸರಿ. ಅಥವಾ ಕೆಲವು ಬ್ರಾಂಡ್ ತುಪ್ಪ ಚೆನ್ನಾಗಿದೇ ಎಂದು ಸೇವಿಸುವುದು ಸರಿಯಾದರೂ ಇದರ ಪ್ಯೂರಿಟಿ ಬಗ್ಗೆ ನಮಗೆಷ್ಟು ಗೊತ್ತು ಅಲ್ಲವೇ?.

ಅದಕ್ಕೆ ಈ ಗೊಂದಲವೆಲ್ಲಾ ಏಕೆ ನಾವೆ ಮನೆಯಲ್ಲೇ ತಯಾರಿಸೋಣ ರುಚಿಕರ ಮರಳು,
ಮರಳಾದ ತುಪ್ಪ. ಅಯ್ಯೋ ತುಪ್ಪಾ ತಯಾರಿಸುವುದೇ ಎಷ್ಟು ದೊಡ್ಡ ಪ್ರಕ್ರಿಯೇ, ತುಂಬಾ
ಕಷ್ಟ, ಚೆನ್ನಾಗಿ ಬರದಿದ್ದರೆ, ರುಚಿ ಆಗದಿದ್ದರೆ ಎಂಬ ಗೊಂದಲ ನಿಮ್ಮನ್ನು
ಕಾಡುವುದು ಸಹಜ.
ನಾವಿಂದು ಹೇಳಲಿರುವ ಈ ಸುಲಭ ಹಂತಗಳ ಸಹಕಾಯದಿಂದ ನೀವೇ ಸುಲಭವಾಗಿ
ತುಪ್ಪತಯಾರಿಸಬಹುದು ಹೇಗೆ ಮುಂದೆ ನೋಡೋಣ:
* ನಿತ್ಯ ಹಾಲು ಕುದಿಸಿದ ನಂತರ ಹೆಚ್ಚು ಕೆನೆ ಇರುವಾಗ ಅದನ್ನು ತೆಗೆದು ಒಂದು
ಬಟ್ಟಲಿನಲ್ಲಿ ಸಂಗ್ರಹಿಸಿ. ಈ ರೀತಿ ದಿನಕ್ಕೆ 1 ಲೀಟರ್ ಹಾಲಿನಂತೆ ಕನಿಷ್ಠ ಒಂದು
ತಿಂಗಳು ಸಂಗ್ರಹಿಸಿದರೆ ಒಂದು ಬಟ್ಟಲು ಕೆನೆ ಸಂಗ್ರಹವಾಗುತ್ತದೆ.
* ಸಂಗ್ರಹವಾದ ಕೆನೆಯನ್ನು ತಪ್ಪದೇ ಫ್ರಿಡ್ಜ್ನಲ್ಲಿಡಿ
* ಹೀಗೆ ಸಂಗ್ರಹವಾದ ಹಾಲಿನ ಕೆನೆಗೆ ತಣ್ಣಗಿನ ನೀರಿನ್ನು ಹಾಕಿ ಮಿಕ್ಸಿ ಜಾರ್
ನಲ್ಲಿ ಕನಿಷ್ಠ 3 ನಿಮಿಷ ಮಿಕ್ಸಿ ಮಾಡಿ.
* ಹೀಗೆ ಮಾಡಿದ ನಂತರ ಕೆನೆಯಿಂದ ಬೆಣ್ಣೆ ರೂಪುಗೊಂಡು ನೀರಿನಲ್ಲಿ
ತೇಲುತ್ತದೆ.

* ಶುದ್ಧವಾದ ಬಟ್ಟೆಯನ್ನು ತೆಗೆದುಕೊಂಡು ಬೆಣ್ಣೆಯನ್ನು ಶೋಧಿಸಿ, ನೀರನ್ನು
ಸಂಪೂರ್ಣವಾಗಿ ಹಿಂಡಿ.
* ನಂತರ ಗಟ್ಟಿ ಬೆಣ್ಣೆಯನ್ನು ತೆಗೆದುಕೊಡು ಕಾದ ಬಾಣಲೆಗೆ ಹಾಕಿ ಸ್ವಲ್ಪ ಕುದಿ
ಶುರುವಾದ ನಂತರ ಒಂದು ಏಲಕ್ಕಿಯನ್ನು ಹಾಕಿ.

* ಕನಿಷ್ಠ ಹತ್ತು ನಿಮಿಷ ಕಡಿಮೆ ಉರಿಯಲ್ಲಿ ಕುದಿಸಿ, ನಡುವೆ ಚಮಚದಿಂದ
ತಿರುವುತ್ತಿರಿ.
* 10 ನಿಮಿಷದ ನಂತರ ಘಮ ಘಮ ಎನ್ನುವ ಮರಳಾದ ಶುದ್ಧ ತುಪ್ಪ ಸವಿಯಲು ಸಿದ್ಧ.

Recipe By: Meghashree Devaraju
Recipe Type: Sides
Serves: 10
-
ಬೇಕಾಗುವ ಸಾಮಾಗ್ರಿಗಳು
ಹಾಲಿನ ಕೆನೆ: ಒಂದು ಕಪ್
ಏಲಕ್ಕಿ: 1
ನೀರು : 2 ಲೋಟ
-
ಮಾಡುವ ವಿಧಾನ
* ನಿತ್ಯ ಹಾಲು ಕುದಿಸಿದ ನಂತರ ಹೆಚ್ಚು ಕೆನೆ ಇರುವಾಗ ಅದನ್ನು ತೆಗೆದು ಒಂದು ಬಟ್ಟಲಿನಲ್ಲಿ ಸಂಗ್ರಹಿಸಿ. ಈ ರೀತಿ ದಿನಕ್ಕೆ 1 ಲೀಟರ್ ಹಾಲಿನಂತೆ ಕನಿಷ್ಠ ಒಂದು ತಿಂಗಳು ಸಂಗ್ರಹಿಸಿದರೆ ಒಂದು ಬಟ್ಟಲು ಕೆನೆ ಸಂಗ್ರಹವಾಗುತ್ತದೆ.
* ಸಂಗ್ರಹವಾದ ಕೆನೆಯನ್ನು ತಪ್ಪದೇ ಫ್ರಿಡ್ಜ್ನಲ್ಲಿಡಿ
* ಹೀಗೆ ಸಂಗ್ರಹವಾದ ಹಾಲಿನ ಕೆನೆಗೆ ತಣ್ಣಗಿನ ನೀರಿನ್ನು ಹಾಕಿ ಮಿಕ್ಸಿ ಜಾರ್ ನಲ್ಲಿ ಕನಿಷ್ಠ 3 ನಿಮಿಷ ಮಿಕ್ಸಿ ಮಾಡಿ.
* ಶುದ್ಧವಾದ ಬಟ್ಟೆಯನ್ನು ತೆಗೆದುಕೊಂಡು ಬೆಣ್ಣೆಯನ್ನು ಶೋಧಿಸಿ, ನೀರನ್ನು ಸಂಪೂರ್ಣವಾಗಿ ಹಿಂಡಿ.
* ನಂತರ ಗಟ್ಟಿ ಬೆಣ್ಣೆಯನ್ನು ತೆಗೆದುಕೊಡು ಕಾದ ಬಾಣಲೆಗೆ ಹಾಕಿ ಸ್ವಲ್ಪ ಕುದಿ ಶುರುವಾದ ನಂತರ ಒಂದು ಏಲಕ್ಕಿಯನ್ನು ಹಾಕಿ.
* ಕನಿಷ್ಠ ಹತ್ತು ನಿಮಿಷ ಕಡಿಮೆ ಉರಿಯಲ್ಲಿ ಕುದಿಸಿ, ನಡುವೆ ಚಮಚದಿಂದ ತಿರುವುತ್ತಿರಿ.
* 10 ನಿಮಿಷದ ನಂತರ ಘಮ ಘಮ ಎನ್ನುವ ಮರಳಾದ ಶುದ್ಧ ತುಪ್ಪ ಸವಿಯಲು ಸಿದ್ಧ.
- ನೆನಪಿಡಿ: ಕೆನೆಯನ್ನು ತಪ್ಪದೇ ಫ್ರಿಡ್ಜ್ನಲ್ಲಿ ಸಂಗ್ರಹಿಸಿ * ಕಡಿಮೆ ಉರಿಯಲ್ಲೇ ಬೆಣ್ಣೆ ಕಾಯಿಸಿ * ಏಲಕ್ಕಿ ಬಳಸುವುದು ರುಚಿಗಾಗಿ ನಿಮಗೆ ಅಗತ್ಯವಿದ್ದರೆ ವೀಳ್ಯದೆಲೆಯ ತೊಟ್ಟನ್ನು ಸಹ ಬಳಸಬಹುದು.
- ಕ್ಯಾಲೋರಿ - 123 ಗ್ರಾಂ
- ಕೊಬ್ಬು - 14 ಗ್ರಾಂ



Click it and Unblock the Notifications
