Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಮನೆಯಲ್ಲಿ ಮಾಡುವ ಫ್ರೆಂಚ್ ಫ್ರೈ ಕ್ರಿಸ್ಪಿಯಾಗಿ ಬರಲು ಏನು ಮಾಡಬೇಕು?
ಫ್ರೆಂಚ್ ಫ್ರೈ ಮನೆಯಲ್ಲಿ ಮಾಡುವಾಗ ಏಕೆ ಮೆಕ್‌ಡೊನಾಲ್ಡ್‌ನಲ್ಲಿ ಸಿಗುವಷ್ಟು ಕ್ರಿಸ್ಪಿಯಾಗಿರಲ್ಲ ಎಂದು ನೀವು ಯೋಚಿಸಿದ್ದರೆ ಇಲ್ಲಿದೆ ನೋಡಿ ಪರ್ಫೆಕ್ಟ್ ಫ್ರೆಂಚ್ ಫ್ರೈ ರೆಸಿಪಿ.

ಫ್ರೆಂಚ್ ಫ್ರೈ ಮಾಡುವಾಗ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಸ್ಟೆಪ್ ಸ್ಟೆಪ್ ವಿವರಿಸಲಾಗಿದೆ ನೋಡಿ.
Recipe By: Reena TK
Recipe Type: Snacks
Serves: 2-3
-
ಬೇಕಾಗುವ ಸಾಮಗ್ರಿ
ಆಲೂಗಡ್ಡೆ 2
ಎಣ್ಣೆ
ರುಚಿಗೆ ತಕ್ಕ ಉಪ್ಪು
ಟೊಮೆಟೊ ಕೆಚಪ್
-
{recipe}{recipe}ಮಾಡುವುದು ಹೇಗೆ?
* 2 ದೊಡ್ಡ ಗಾತ್ರದ ಆಲೂಗಡ್ಡೆಯನ್ನು ತೆಗೆದು ಅದನ್ನು ನೀರಿನಿಂದ ತೊಳೆದು ಅದರ ಸಿಪ್ಪೆ ಸುಲಿಯಿರಿ. ನಂತರ ಮತ್ತೆ ತೊಳೆದು 1/2 ಇಂಚಿನಷ್ಟು ದಪ್ಪವಾಗಿ ಉದ್ದುದ್ದವಾಗಿ ಕತ್ತರಿಸಿ.
* ನಂತರ ಅವುಗಳನ್ನು ತಣ್ಣೀರಿನಲ್ಲಿ ಕನಿಷ್ಠಒಂದು ಗಂಟೆ ಅಥವಾ ಒಂದು ರಾತ್ರಿ ಇಡಿ. (7-8 ತಾಸು ಇಟ್ಟರೆ ಕ್ರಿಸ್ಪಿ ಆಗುವುದು ಅಧಿಕ)
* ನಂತರ ಮತ್ತೆ ಎರಡು ಬಾರಿ ತಣ್ಣೀರಿನಲ್ಲಿ ತೊಳೆದು ಬಟ್ಟೆಯನ್ನು ಅದ್ದಿ, ಅದರ ನೀರಿನಂಶ ತೆಗೆಯಿರಿ.
* ಈಗ ಎಣ್ಣೆಯನ್ನು ಪ್ಯಾನ್‌ಗೆ ಹಾಕಿ ಕುದಿಸಿ.
* ಎಣ್ಣೆ ಕುದಿ ಬರಲು ಪ್ರಾರಂಭಿಸಿದಾಗ ಸ್ವಲ್ಪ -ಸ್ವಲ್ಪ ಆಲೂಗಡ್ಡೆ ಹಾಕಿ, ಹೆಚ್ಚು ಹಾಕ ಬೇಡಿ. ತುಂಬಾ ಹಾಕಿದರೆ ಗರಿ ಗರಿಯಾಗುವುದಿಲ್ಲ. ಈಗ ಅದನ್ನು ಎಣ್ಣೆಯಿಂದ ತೆಗೆದು ಪೇಪರ್ ಟವಲ್‌ನಲ್ಲಿ ಇಡಿ.
* ಈಗ ಎಲ್ಲಾ ಒಮ್ಮೆ ಕರಿದ ಬಳಿಕ ಮತ್ತೆ ಎಣ್ಣೆ ಬಿಸಿ ಮಾಡಿ ಮತ್ತೊಮ್ಮೆ ಸ್ವಲ್ಪ -ಸ್ವಲ್ಪ ಹಾಕಿ ಎರಡು ಬಾರಿ ಕರಿಯಬೇಕು. ಆಗ ಕ್ರಿಸ್ಪಿ ಬರುತ್ತದೆ. ಇದನ್ನು ತಟ್ಟೆಗೆ ಹಾಕಿ ಕೂಡಲೇ ಉಪ್ಪು ಉದುರಿಸಿ ಮಿಕ್ಸ್ ಮಾಡಿ ಟೊಮೆಟೊ ಕೆಚಪ್ ಜೊತೆ ಸರ್ವ್ ಮಾಡಿ.
- ಫ್ರೆಂಚ್ ಫ್ರೈಸ್ ಮಾಡುವಾಗ ಮೊದಲ ಬಾರಿ 300 ಡಿಗ್ರಿ Cಯಷ್ಟು ಉಷ್ಣತೆಯಲ್ಲಿ ಫ್ರೈ ಮಾಡಿ, ನಂತರ ಎರಡನೇ ಬಾರಿ ಫ್ರೈ ಮಾಡುವಾಗ 400 ಡಿಗ್ರಿ Cಯಷ್ಟು ಉಷ್ಣತೆಯಲ್ಲಿ ಫ್ರೈ ಮಾಡಿ.
- ಪ್ರೊಟೀನ್ - 2ಗ್ರಾಂ
- ಕಾರ್ಬ್ಸ್ - 21ಗ್ರಾಂ
- ನಾರಿನಂಶ - 2ಗ್ರಾಂ
ಫ್ರೆಂಚ್ ಫ್ರೈಗೆ ಯಾವ ಆಲೂಗಡ್ಡೆ ಒಳ್ಳೆಯದು?
* ಹಳೆಯ
ಆಲೂಗಡ್ಡೆ ಫ್ರೆಂಚ್‌ಫ್ರೈಗೆ ಒಳ್ಳೆಯದು
* ಹೊಸ ಆಲೂಗಡ್ಡೆಯಲ್ಲಿ ನೀರಿನಂಶ ಅಧಿಕವಿರುವುದರಿಂದ ಅಷ್ಟು ಒಳ್ಳೆಯದಲ್ಲ.
ಫ್ರೆಂಚ್ ಫ್ರೈಗೆ ಎಷ್ಟು ಆಲೂಗಡ್ಡೆ ಬೇಕು?
ಒಂದು ಬಾರಿ ಸವಿಯಲು ಎರಡು ದೊಡ್ಡ ಗಾತ್ರದ ಆಲೂಗಡ್ಡೆ ಸಾಕಾಗುವುದು.
ಫ್ರೆಂಚ್ ಫ್ರೈಗೆ ಆಲೂಗಡ್ಡೆಯನ್ನು ನೆನೆ ಹಾಕಬೇಕು
ಏಕೆ?
* ಆಲೂಗಡ್ಡೆಯಲ್ಲಿ ಪಿಷ್ಠ ಅಂಶವಿದ್ದರೆ ಅದು ಆಲೂಗಡ್ಡೆ ಮೆತ್ತಗಾಗುವಂತೆ
ಮಾಡುವುದು. ಆ ಅಂಶ ತೆಗೆದರೆ ಕ್ರಿಸ್ಪಿ ಆಗುವುದು.
* ನೀರಿನಲ್ಲಿ ಹೆಚ್ಚು ನೆನೆ ಹಾಕಿದಷ್ಟೂ ಕ್ರಿಸ್ಪಿಯಾಗಿರುತ್ತದೆ.
ಏಕೆ ಇದನ್ನು ಎರಡು ಬಾರಿ ಫ್ರೈ ಮಾಡಬೇಕು?
ನಿಮಗೆ ಒಂದು ಬಾರಿ ಫ್ರೈ ಮಾಡಿದಾಗ ಅಷ್ಟು ಕ್ರಿಸ್ಪಿಯಾಗಿ ಬರುವುದಿಲ್ಲ. ಇದನ್ನು
ಡಬಲ್ ಫ್ರೈ ಮಾಡಿದಾಗ ತುಂಬಾ ಕ್ರಿಸ್ಪಿಯಾಗಿ ಬರುವುದು.



Click it and Unblock the Notifications
