Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
ಈ ಮಾವಿನಕಾಯಿ ಉಪ್ಪಿನಕಾಯಿ ಹುಳಿ-ಖಾರ-ಸಿಹಿ ಮಿಶ್ರ ರುಚಿಯಿಂದ ಕೂಡಿದ್ದು ರುಚಿ ಸೂಪರ್ ಆಗಿರುತ್ತದೆ. ಇದನ್ನು ನೀವು ಈ ಸೀಸನ್‌ನಲ್ಲಿ ಮಾಡಿಟ್ಟರೆ ಒಂದು ವರ್ಷದವರೆಗೆ ಬಳಸಬಹುದು.
ಅನ್ನದ ಜೊತೆಗೆ ಇದೊಂದು ಚಮಚ ಹಾಕಿದರೆ ಸಾಕು, ಊಟದ ರುಚಿಯೇ ಹೆಚ್ಚುವುದು. ಮಾವಿನಕಾಯಿ ತುರಿದು ಮಾಡುವ ಉಪ್ಪಿನಕಾಯಿ ಇದಾಗಿದ್ದು ಇದಕ್ಕೆ ಎಣ್ಣೆಯೂ ಬಳಸಿಲ್ಲ ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಮಾವಿನಕಾಯಿ 2(ದೊಡ್ಡ ಗಾತ್ರದ್ದು ಆದರೆ 1 ಮಾವಿನಕಾಯಿ)
ಸಕ್ಕರೆ ( ಮಾವಿನಕಾಯಿ ಎಷ್ಟುಕೆಜಿ ಬಳಸುತ್ತೀರೋ ಅಷ್ಟು ಕೆಜಿ ಸಕ್ಕರೆ, 1 ಕೆಜಿ
ಮಾವಿನಕಾಯಿ ಆದರೆ 1 ಕೆಜಿ ಸಕ್ಕರೆ)
2 ಚಮಚ ವಿನೆಗರ್
1 ಚಚಮ ಅರಿಶಿಣ ಪುಡಿ
ರುಚಿಗೆ ತಕ್ಕ ಉಪ್ಪು
ರೋಸ್ಟ್ ಮಾಡಲು
ಒಣ ಮೆಣಸು 8-10
ಜೀರಿಗೆ ಒಂದೂವರೆ ಚಮಚ
ಸೋಂಪು 2 ಚಮಚ
ಕೊತ್ತಂಬರಿ ಬೀಜ 1 ಚಮಚ
ಮಾಡುವುದು ಹೇಗೆ?
- ಮಾವಿನಕಾಯಿ ಸಿಪ್ಪೆ ಸುಲಿಯಬೇಕು, ನಂತರ ತುರಿಯಿರಿ(ತುರಿಯನುವ ಪ್ಲೇಟ್ ಇಲ್ಲದಿದ್ದರ ಚಿಕ್ಕದಾಗಿ ಕತ್ತರಿಸಿ)
- ನಂತರ ಅದನ್ನು ಗಾಜಿನ ಪಾತ್ರೆ ಅಥವಾ ಭರಣಿ ಪಾತ್ರೆಯಲ್ಲಿ ಹಾಕಿಡಿ, ಸ್ಟೀಲ್ ಪಾತ್ರೆಯಲ್ಲಿ ಹಾಕಿದರೆ ಮಾವಿನಕಾಯಿ ಹುಳಿ ಇರುವುದರಿಂದ ರಿಯಾಕ್ಟ್ ಆಗುತ್ತೆ. ಈಗ ಮಾವಿನ ತುರಿ ಒಂದು ಬೌಲ್ ಇದ್ದರೆ ಅಷ್ಟೇ ಪ್ರಮಾಣದ ಸಕ್ಕರೆ ಸೇರಿಸಿ.
- ನೀವು ಸಕ್ಕರೆ ಬದಲಿಗೆ ಬ್ರೌನ್ ಶುಗರ್ ಕೂಡ ಬಳಸಬಹುದು.
- ಈ ಮಿಶ್ರಣವನ್ನು ಫ್ರಿಡ್ಜ್‌ನಲ್ಲಿ 8 ಗಂಟೆಗಳ ಕಾಲ ಇಡಬೇಕು.
- ನಂತರ ರೋಸ್ಟ್ ಮಾಡಲು ಹೇಳಿರುವ ಸಾಮಗ್ರಿಯನ್ನು ಒಂದೊಂದೇ ಬಾಣಲೆಗೆ ಹಾಕಿ ರೋಸ್ಟ್ ಮಾಡಿ ತಟ್ಟೆಗೆ ಹಾಕಿ, ಅವುಗಳನ್ನು ಆರಲು ಬಿಡಿ. ನಂತರ ಪುಡಿ ಮಾಡಿ.
- ಮಾರನೇಯ ದಿನ ಬಾಣಲೆ ಬಿಸಿ ಮಾಡಿ ಅದಕ್ಕೆ ಸಕ್ಕರೆ-ಮಾವಿನಕಾಯಿ ಮಿಶ್ರಣ, ಸ್ವಲ್ಪ ಅರಿಶಿಣ, ಉಪ್ಪು ಸೇರಿಸಿ. ಇವುಗಳನ್ನು 5-6 ನಿಮಿಷ ಸೌಟ್‌ನಿಂದ ಆಡಿಸುತ್ತಾ ಬೇಯಿಸಿ. ಮಾವಿನಕಾಯಿಯಲ್ಲಿರುವ ನೀರಿನಂಶ ಆವಿಯಾಗಬೇಕು. ಬೇಕಿದ್ದರೆ ಇನ್ನೊಂದು ಎರಡು ನಿಮುಷ ಹೆಚ್ಚು ಬಿಸಿ ಮಾಡಿ.
- ಸಿಹಿ ಬೇಕಿದ್ದರೆ ಇನ್ನೂ ಸ್ವಲ್ಪ ಸಿಹಿ ಸೇರಿಸಬಹುದು.
- ಈಗ ರೋಸ್ಟ್ ಮಾಡಿದ ಪುಡಿ ಹಾಕಿ ಕಡಿಮೆ ಉರಿಯಲ್ಲಿ ಮತ್ತೆ 2-3 ನಿಮಿಷ ಬೇಯಿಸಿ- ಹುಳಿ-ಸಿಹಿ-ಕಾರ ಮಿಶ್ರಿತ ಈ ಉಪ್ಪಿನಕಾಯಿ ತುಂಬಾನೇ ರುಚಿಯಾಗಿರುತ್ತದೆ.
ಇತರ ಸಲಹೆ
- ನೀವು ಬ್ರೌನ್ ಶುಗರ್ ಸೇರಿಸಿದರೆ ಉಪ್ಪಿನಕಾಯಿ ಕಪ್ಪು ಬಣ್ಣದಲ್ಲಿರುತ್ತದೆ, ಇಲ್ಲದಿದ್ದರೆ ಒಣಮೆಣಸು ಹಾಕುವುದರಿಂದ ಕೆಂಪು ಬಣ್ಣದಲ್ಲಿ ಇರುತ್ತದೆ
- ಇನ್ನು ಮಾವಿನ ಕಾಯಿ ಬೇಯಿಸುವಾಗ ಅಲ್ಲಿಯೇ ಇಡಿ, ಅತ್ತಿತ್ತ ಓಡಾಡಿದರೆ ತಳಹಿಡಿಯುವುದು, ಆದ್ದರಿಂದ ಅಲ್ಲೇ ಇದ್ದು ಸೌಟ್‌ನಿಂದ ಮಿಶ್ರಣವನ್ನು ಮಿಕ್ಸ್ ಮಾಡುತ್ತಾ ಬೇಯಿಸಿ.
- ಕೊನೆಯ ಹಂತದಲ್ಲಿ ವಿನೆಗರ್ ಸೇರಿಸಿ, ವಿನೆಗರ್ ಸೇರಿಸುವುದರಿಂದ ಉಪ್ಪಿನಕಾಯಿ ಹಾಳಾಗುವುದಿಲ್ಲ. ಈ ಉಪ್ಪಿನಕಾಯಿಯನ್ನು ನೀವು ಮುಂದಿನ ಮಾವಿನಕಾಯಿ ಸೀಸನ್‌ವರೆಗೆ ಬಳಸಬಹುದು. ವಿನೆಗರ್ ಬಳಸಿರುವುದರಿಂದ ಬೇಗನೆ ಫಂಗಸ್ ಹಿಡಿಯಲ್ಲ, ಅಲ್ಲದೆ ಮಾವಿನಕಾಯಿ ಬೇಯಿಸುತ್ತೇವೆ, ಇದರಿಂದ ಹೆಚ್ಚು ಬಾಳಿಕೆ ಬರುತ್ತದೆ.
ಈ ಮಾವಿನಕಾಯಿ ಉಪ್ಪಿನಕಾಯಿ ನೀವು ಈ ಸಮಯದಲ್ಲಿ ಮಾಡಿಟ್ಟರೆ ಮನೆಯಲ್ಲಿ ವಿಶೇಷ ಸಂದರ್ಭಗಳಲ್ಲಿ ಬಳಸಬಹುದು. ಇನ್ನು ಹೆಚ್ಚು ಮಾಡಿ ಮಾರಾಟ ಕೂಡ ಮಾಡಬಹುದು, ಇದರ ರುಚಿ ಸೂಪರ್ ಆಗಿರುವುದರಿಂದ ಒಮ್ಮೆ ಖರೀದಿಸಿದವರು ಇದನ್ನು ಮತ್ತೆ ಮಾಡಿಕೊಡಿ ಎಂದು ನಿಮ್ಮನ್ನು ಕೇಳಬಹುದು ಅಷ್ಟೊಂದು ರುಚಿಯಾಗಿರುತ್ತದೆ. ತುಂಬಾ ಹುಳಿ ಅನಿಸಲ್ಲ, ಸಿಹಿ ಅನಿಸಲ್ಲ, ಖಾರನೂ ಅನಿಸಲ್ಲ ಎಲ್ಲವೂ ಹದ ಮಿಶ್ರಣದಲ್ಲಿರುವ ಈ ಉಪ್ಪಿನಕಾಯಿ ರುಚಿ ಬೊಂಬಾಟ್.....



Click it and Unblock the Notifications
