ನವರಾತ್ರಿ ಸ್ಪೆಷಲ್: ಹೀರೇಕಾಯಿ ಬಜ್ಜಿ ರೆಸಿಪಿ

By: Divya Pandith
Subscribe to Boldsky

ಸಾಯಂಕಾಲ ಬಾಯಿ ಚಪ್ಪರಿಸಲು ಏನಾದರೂ ಹೊಸ ರುಚಿಯಿದ್ದರೆ ಅದರ ಖುಷಿಯೇ ಬೇರೆ. ನಿಜ, ತಿನ್ನಲು ಸ್ವಲ್ಪ ಗರಿ ಗರಿಯಾಗಿ ಬಾಯಿತುಂಬುವ ತಿಂಡಿ ಎಂದರೆ ಹೀರೆಕಾಯಿ ಬಜ್ಜಿ. ದಕ್ಷಿಣ ಭಾರತದ ಪ್ರಸಿದ್ಧ ಲಘು ಆಹಾರ ಅಥವಾ ಕುರುಕಲು ತಿಂಡಿಗಳಲ್ಲಿ ಇದೂ ಒಂದು. ರುಚಿಕರವಾದ ಮಸಾಲೆ ಹಾಗೂ ಕಡಲೇ ಹಿಟ್ಟಿನ ಮಿಶ್ರಣದಲ್ಲಿ ಹೀರೇಕಾಯಿ ಹೋಳನ್ನು ಅದ್ದಿ ಎಣ್ಣೆಯಲ್ಲಿ ಬಿಡಲಾಗುವುದು.

ಸಾಯಂಕಾಲದ ಟೀ ಸಮಯದಲ್ಲಿ, ವಿಶೇಷ ಕಾರ್ಯಕ್ರಮದ ಊಟಕ್ಕೆ ಹಾಗೂ ಮದುವೆ ಮುಂಜಿಗಳಲ್ಲೂ ಇದನ್ನು ತಯಾರಿಸಲಾಗುತ್ತದೆ. ಮೃದುವಾದ ಹೀರೇಕಾಯಿ ಹೋಳು/ತಾಳಿ ಗರಿಗರಿಯಾದ ಕಡಲೇ ಹಿಟ್ಟಿನ ಮಿಶ್ರಣದ ಕವಚದೊಂದಿಗೆ ಬಾಯಲ್ಲಿ ನೀರು ತರಿಸುವಂತೆ ಮಾಡುತ್ತದೆ. ಸ್ನೇಹಿತರು ಅಥವಾ ಸಂಬಂಧಿಕರ ಅನಿರೀಕ್ಷಿತ ಆಗಮನದ ಸಂದರ್ಭದಲ್ಲಿ ಅಥವಾ ಹೊಸ ರುಚಿ ತಿನ್ನಬೇಕು ಎನ್ನುವ ಬಯಕೆ ಉಂಟಾದಾಗ ಬಹು ಬೇಗ ಹಾಗೂ ಸರಳ ಪಾಕವಿಧಾನದಿಂದ ಹೀರೇಕಾಯಿ ಬಜ್ಜಿಯನ್ನು ತಯಾರಿಸಬಹುದು.

ಈ ರುಚಿಕರವಾದ ಬಜ್ಜಿಯನ್ನು ನಿಮ್ಮ ಕುಟುಂಬದವರಿಗೆ ಮಾಡಿ ಬಡಿಸುವ ಹವಣಿಕೆಯಲ್ಲಿದ್ದರೆ ಈ ಕೆಳಗೆ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯ ಮೊರೆ ಹೋಗಬಹುದು.

heerekai bajji recipe
ಹೀರೇಕಾಯಿ ಬಜ್ಜಿ ಪಾಕವಿಧಾನ | ರಿಡ್ಜ್ ಗ್ರೌಂಡ್ ಬಜ್ಜಿ ರೆಸಿಪಿ | ಹಂತ ಹಂತವಾದ ಹೀರೇಕಾಯಿ ಬಜ್ಜಿ ಪಾಕವಿಧಾನ | ಹೀರೇಕಾಯಿ ಬಜ್ಜಿ ವಿಡಿಯೋ ಪಾಕವಿಧಾನ | ಬೀರೇಕಾಯಿ ಬಜ್ಜಿ ಪಾಕವಿಧಾನ
ಹೀರೇಕಾಯಿ ಬಜ್ಜಿ ಪಾಕವಿಧಾನ | ರಿಡ್ಜ್ ಗ್ರೌಂಡ್ ಬಜ್ಜಿ ರೆಸಿಪಿ | ಹಂತ ಹಂತವಾದ ಹೀರೇಕಾಯಿ ಬಜ್ಜಿ ಪಾಕವಿಧಾನ | ಹೀರೇಕಾಯಿ ಬಜ್ಜಿ ವಿಡಿಯೋ ಪಾಕವಿಧಾನ | ಬೀರೇಕಾಯಿ ಬಜ್ಜಿ ಪಾಕವಿಧಾನ
Prep Time
10 Mins
Cook Time
10M
Total Time
20 Mins

Recipe By: ಕಾವ್ಯಶ್ರೀ ಎಸ್

Recipe Type: ಕುರುಕಲು ತಿಂಡಿ/ಲಘು ಉಪಹಾರ

Serves: 4 ಬಜ್ಜಿ

Ingredients
 • ಹೀರೇಕಾಯಿ - 1/2

  ಕಡಲೇ ಹಿಟ್ಟು - 1/2 ಬೌಲ್

  ಅರಿಶಿನ - 1/2 ಟೀ ಚಮಚ

  ಇಂಗು - 1/4 ಟೀ ಚಮಚ

  ಖಾರದ ಪುಡಿ - 1 ಟೇಬಲ್ ಚಮಚ

  ಜೀರಿಗೆ - 1/2 ಟೀ ಚಮಚ

  ರುಚಿಗೆ ತಕ್ಕಷ್ಟು ಉಪ್ಪು

  ಎಣ್ಣೆ - 2 ಟೇಬಲ್ ಚಮಚ+ಕರಿಯಲು

  ನೀರು - 1 ಕಪ್

Red Rice Kanda Poha
How to Prepare
 • 1. ಒಂದು ಹೀರೇಕಾಯಿಯ ಅರ್ಧಭಾಗವನ್ನು ಕತ್ತರಿಸಿ, ಅದರ ಸಿಪ್ಪೆಯನ್ನು ತೆಗೆದುಕೊಳ್ಳಬೇಕು.

  2. ತೆಳುವಾದ ಒಂದೊಂದು ತಾಳಿ/ಸ್ಲೈಸ್ ನಂತೆ ಕತ್ತರಿಸಿಕೊಳ್ಳಬೇಕು.

  3. ಒಂದು ಪಾತ್ರೆಯಲ್ಲಿ ಕಡಲೇ ಹಿಟ್ಟನ್ನು ಹಾಕಿ.

  4. ಅದಕ್ಕೆ ಅರಿಶಿನ ಪುಡಿ ಮತ್ತು ಇಂಗನ್ನು ಸೇರಿಸಿ.

  5. ಕೆಂಪು ಮೆಣಸಿನ ಪುಡಿ/ಖಾರದ ಪುಡಿ ಮತ್ತು ಜೀರಿಗೆಯನ್ನು ಬೆರೆಸಿ.

  6. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

  7. ಒಂದು ಚಿಕ್ಕ ಪಾತ್ರೆಯಲ್ಲಿ 2 ಟೇಬಲ್ ಚಮಚ ಎಣ್ಣೆಯನ್ನು ಹಾಕಿ.

  8. ಎಣ್ಣೆಯು ಚೆನ್ನಾಗಿ ಬಿಸಿಯಾಗುವಂತೆ 1 ರಿಂದ 2 ನಿಮಿಷ ಕಾಯಲು ಬಿಡಿ.

  9. ನಂತರ ಮಿಶ್ರಣಕ್ಕೆ ಸುರಿಯಿರಿ.

  10. ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತಾ, ಮೃದುವಾದ ಬೆಣ್ಣೆಯಂತಹ ಮಿಶ್ರಣವನ್ನಾಗಿ ಮಾಡಿ.

  11. ಕರಿಯಲು/ಬೇಯಿಸಲು ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಲು ಇಡಿ.

  12. ಕತ್ತರಿಸಿಕೊಂಡ ಹೀರೇಕಾಯಿ ತಾಳಿಯನ್ನು ಕಡಲೇ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ. ಸರಿಯಾಗಿ ಅನ್ವಯಿಸಿಕೊಳ್ಳಬೇಕು.

  13. ಅದ್ದಿದ ಹೀರೇಕಾಯಿ ತಾಳಿಯನ್ನು ಎಣ್ಣೆಯಲ್ಲಿ ಬಿಡಿ. ಒಂದಾದ ಮೇಲೊಂದರಂತೆ ಎಣ್ಣೆಯಲ್ಲಿ ಬಿಡಬೇಕು.

  14. ಒಂದು ಭಾಗದಲ್ಲಿ ಬೆಂದ ನಂತರ ಇನ್ನೊಂದು ಭಾಗವನ್ನು ಬೇಯಿಸಲು ತಿರುವಬೇಕು.

  15. ಅವು ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ತಿರುಗುವ ತನಕವೂ ಎಣ್ಣೆಯಲ್ಲೇ ಬೇಯಿಸಬೇಕು.

  16. ಹೊಂಬಣ್ಣಕ್ಕೆ ತಿರುಗಿದ ಮೇಲೆ ಎಣ್ಣೆಯಿಂದ ತೆಗೆದು ಬೇರೆ ಪಾತ್ರೆಗೆ ವರ್ಗಾಯಿಸಿ. ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.

Instructions
 • 1. ಕಡಲೇ ಹಿಟ್ಟಿನ ಮಿಶ್ರಣವು ದೋಸೆ ಹಿಟ್ಟಿನಷ್ಟು ತೆಳು ಅಥವಾ ಸ್ಥಿರತೆಯನ್ನು ಹೊಂದಿರಬೇಕು.
 • 2. ಹೆಚ್ಚು ಗರಿ ಗರಿಯಾಗಿರಬೇಕೆಂದು ಬಯಸಿದರೆ ಒಂದು ಚಮಚ ಅಕ್ಕಿ ಹಿಟ್ಟನ್ನು ಸೇರಿಸಿಕೊಳ್ಳಬಹುದು.
Nutritional Information
 • ಸರ್ವಿಂಗ್ ಸೈಜ್ - 2 ಬಜ್ಜಿ
 • ಕ್ಯಾಲೋರಿ - 156.2 ಕ್ಯಾಲ್
 • ಫ್ಯಾಟ್ - 6.3 ಗ್ರಾಂ.
 • ಪ್ರೋಟೀನ್ - 4.1 ಗ್ರಾಂ.
 • ಕಾರ್ಬೋಹೈಡ್ರೇಟ್ - 22.5 ಗ್ರಾಂ.
 • ಸಕ್ಕರೆ - 1.1 ಗ್ರಾಂ.
 • ಫೈಬರ್ - 3.2 ಗ್ರಾಂ.

ಹಂತ ಹಂತವಾದ ಹೀರೇಕಾಯಿ ಬಜ್ಜಿ ಪಾಕವಿಧಾನ

1. ಒಂದು ಹೀರೇಕಾಯಿಯ ಅರ್ಧಭಾಗವನ್ನು ಕತ್ತರಿಸಿ, ಅದರ ಸಿಪ್ಪೆಯನ್ನು ತೆಗೆದುಕೊಳ್ಳಬೇಕು.

heerekai bajji recipe

2. ತೆಳುವಾದ ಒಂದೊಂದು ತಾಳಿ/ಸ್ಲೈಸ್ ನಂತೆ ಕತ್ತರಿಸಿಕೊಳ್ಳಬೇಕು.

heerekai bajji recipe

3. ಒಂದು ಪಾತ್ರೆಯಲ್ಲಿ ಕಡಲೇ ಹಿಟ್ಟನ್ನು ಹಾಕಿ.

heerekai bajji recipe

4. ಅದಕ್ಕೆ ಅರಿಶಿನ ಪುಡಿ ಮತ್ತು ಇಂಗನ್ನು ಸೇರಿಸಿ.

heerekai bajji recipe
heerekai bajji recipe

5. ಕೆಂಪು ಮೆಣಸಿನ ಪುಡಿ/ಖಾರದ ಪುಡಿ ಮತ್ತು ಜೀರಿಗೆಯನ್ನು ಬೆರೆಸಿ.

heerekai bajji recipe
heerekai bajji recipe

6. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

heerekai bajji recipe
heerekai bajji recipe

7. ಒಂದು ಚಿಕ್ಕ ಪಾತ್ರೆಯಲ್ಲಿ 2 ಟೇಬಲ್ ಚಮಚ ಎಣ್ಣೆಯನ್ನು ಹಾಕಿ.

heerekai bajji recipe

8. ಎಣ್ಣೆಯು ಚೆನ್ನಾಗಿ ಬಿಸಿಯಾಗುವಂತೆ 1 ರಿಂದ 2 ನಿಮಿಷ ಕಾಯಲು ಬಿಡಿ.

heerekai bajji recipe

9. ನಂತರ ಮಿಶ್ರಣಕ್ಕೆ ಸುರಿಯಿರಿ.

heerekai bajji recipe

10. ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತಾ, ಮೃದುವಾದ ಬೆಣ್ಣೆಯಂತಹ ಮಿಶ್ರಣವನ್ನಾಗಿ ಮಾಡಿ.

heerekai bajji recipe
heerekai bajji recipe

11. ಕರಿಯಲು/ಬೇಯಿಸಲು ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಲು ಇಡಿ.

heerekai bajji recipe

12. ಕತ್ತರಿಸಿಕೊಂಡ ಹೀರೇಕಾಯಿ ತಾಳಿಯನ್ನು ಕಡಲೇ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ. ಸರಿಯಾಗಿ ಅನ್ವಯಿಸಿಕೊಳ್ಳಬೇಕು.

heerekai bajji recipe
heerekai bajji recipe

13. ಅದ್ದಿದ ಹೀರೇಕಾಯಿ ತಾಳಿಯನ್ನು ಎಣ್ಣೆಯಲ್ಲಿ ಬಿಡಿ. ಒಂದಾದ ಮೇಲೊಂದರಂತೆ ಎಣ್ಣೆಯಲ್ಲಿ ಬಿಡಬೇಕು.

heerekai bajji recipe

14. ಒಂದು ಭಾಗದಲ್ಲಿ ಬೆಂದ ನಂತರ ಇನ್ನೊಂದು ಭಾಗವನ್ನು ಬೇಯಿಸಲು ತಿರುವಬೇಕು.

heerekai bajji recipe

15. ಅವು ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ತಿರುಗುವ ತನಕವೂ ಎಣ್ಣೆಯಲ್ಲೇ ಬೇಯಿಸಬೇಕು.

heerekai bajji recipe

16. ಹೊಂಬಣ್ಣಕ್ಕೆ ತಿರುಗಿದ ಮೇಲೆ ಎಣ್ಣೆಯಿಂದ ತೆಗೆದು ಬೇರೆ ಪಾತ್ರೆಗೆ ವರ್ಗಾಯಿಸಿ. ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.

heerekai bajji recipe
heerekai bajji recipe
heerekai bajji recipe
[ 3.5 of 5 - 103 Users]
Subscribe Newsletter