Latest Updates
-
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್!
ಹಬ್ಬದ ಸ್ಪೆಷಲ್: ಹೀರೇಕಾಯಿ ಬಜ್ಜಿ ರೆಸಿಪಿ
ಸಾಯಂಕಾಲ ಬಾಯಿ ಚಪ್ಪರಿಸಲು ಏನಾದರೂ ಹೊಸ ರುಚಿಯಿದ್ದರೆ ಅದರ ಖುಷಿಯೇ ಬೇರೆ. ನಿಜ, ತಿನ್ನಲು ಸ್ವಲ್ಪ ಗರಿ ಗರಿಯಾಗಿ ಬಾಯಿತುಂಬುವ ತಿಂಡಿ ಎಂದರೆ ಹೀರೆಕಾಯಿ ಬಜ್ಜಿ. ದಕ್ಷಿಣ ಭಾರತದ ಪ್ರಸಿದ್ಧ ಲಘು ಆಹಾರ ಅಥವಾ ಕುರುಕಲು ತಿಂಡಿಗಳಲ್ಲಿ ಇದೂ ಒಂದು. ರುಚಿಕರವಾದ ಮಸಾಲೆ ಹಾಗೂ ಕಡಲೇ ಹಿಟ್ಟಿನ ಮಿಶ್ರಣದಲ್ಲಿ ಹೀರೇಕಾಯಿ ಹೋಳನ್ನು ಅದ್ದಿ ಎಣ್ಣೆಯಲ್ಲಿ ಬಿಡಲಾಗುವುದು.
ಸಾಯಂಕಾಲದ ಟೀ ಸಮಯದಲ್ಲಿ, ವಿಶೇಷ ಕಾರ್ಯಕ್ರಮದ ಊಟಕ್ಕೆ ಹಾಗೂ ಮದುವೆ ಮುಂಜಿಗಳಲ್ಲೂ ಇದನ್ನು ತಯಾರಿಸಲಾಗುತ್ತದೆ. ಮೃದುವಾದ ಹೀರೇಕಾಯಿ ಹೋಳು/ತಾಳಿ ಗರಿಗರಿಯಾದ ಕಡಲೇ ಹಿಟ್ಟಿನ ಮಿಶ್ರಣದ ಕವಚದೊಂದಿಗೆ ಬಾಯಲ್ಲಿ ನೀರು ತರಿಸುವಂತೆ ಮಾಡುತ್ತದೆ. ಸ್ನೇಹಿತರು ಅಥವಾ ಸಂಬಂಧಿಕರ ಅನಿರೀಕ್ಷಿತ ಆಗಮನದ ಸಂದರ್ಭದಲ್ಲಿ ಅಥವಾ ಹೊಸ ರುಚಿ ತಿನ್ನಬೇಕು ಎನ್ನುವ ಬಯಕೆ ಉಂಟಾದಾಗ ಬಹು ಬೇಗ ಹಾಗೂ ಸರಳ ಪಾಕವಿಧಾನದಿಂದ ಹೀರೇಕಾಯಿ ಬಜ್ಜಿಯನ್ನು ತಯಾರಿಸಬಹುದು.
ಈ ರುಚಿಕರವಾದ ಬಜ್ಜಿಯನ್ನು ನಿಮ್ಮ ಕುಟುಂಬದವರಿಗೆ ಮಾಡಿ ಬಡಿಸುವ ಹವಣಿಕೆಯಲ್ಲಿದ್ದರೆ ಈ ಕೆಳಗೆ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯ ಮೊರೆ ಹೋಗಬಹುದು.

Recipe By: ಕಾವ್ಯಶ್ರೀ ಎಸ್
Recipe Type: ಕುರುಕಲು ತಿಂಡಿ/ಲಘು ಉಪಹಾರ
Serves: 4 ಬಜ್ಜಿ
-
ಹೀರೇಕಾಯಿ - 1/2
ಕಡಲೇ ಹಿಟ್ಟು - 1/2 ಬೌಲ್
ಅರಿಶಿನ - 1/2 ಟೀ ಚಮಚ
ಇಂಗು - 1/4 ಟೀ ಚಮಚ
ಖಾರದ ಪುಡಿ - 1 ಟೇಬಲ್ ಚಮಚ
ಜೀರಿಗೆ - 1/2 ಟೀ ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ - 2 ಟೇಬಲ್ ಚಮಚ+ಕರಿಯಲು
ನೀರು - 1 ಕಪ್
-
1. ಒಂದು ಹೀರೇಕಾಯಿಯ ಅರ್ಧಭಾಗವನ್ನು ಕತ್ತರಿಸಿ, ಅದರ ಸಿಪ್ಪೆಯನ್ನು ತೆಗೆದುಕೊಳ್ಳಬೇಕು.
2. ತೆಳುವಾದ ಒಂದೊಂದು ತಾಳಿ/ಸ್ಲೈಸ್ ನಂತೆ ಕತ್ತರಿಸಿಕೊಳ್ಳಬೇಕು.
3. ಒಂದು ಪಾತ್ರೆಯಲ್ಲಿ ಕಡಲೇ ಹಿಟ್ಟನ್ನು ಹಾಕಿ.
4. ಅದಕ್ಕೆ ಅರಿಶಿನ ಪುಡಿ ಮತ್ತು ಇಂಗನ್ನು ಸೇರಿಸಿ.
5. ಕೆಂಪು ಮೆಣಸಿನ ಪುಡಿ/ಖಾರದ ಪುಡಿ ಮತ್ತು ಜೀರಿಗೆಯನ್ನು ಬೆರೆಸಿ.
6. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
7. ಒಂದು ಚಿಕ್ಕ ಪಾತ್ರೆಯಲ್ಲಿ 2 ಟೇಬಲ್ ಚಮಚ ಎಣ್ಣೆಯನ್ನು ಹಾಕಿ.
8. ಎಣ್ಣೆಯು ಚೆನ್ನಾಗಿ ಬಿಸಿಯಾಗುವಂತೆ 1 ರಿಂದ 2 ನಿಮಿಷ ಕಾಯಲು ಬಿಡಿ.
9. ನಂತರ ಮಿಶ್ರಣಕ್ಕೆ ಸುರಿಯಿರಿ.
10. ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತಾ, ಮೃದುವಾದ ಬೆಣ್ಣೆಯಂತಹ ಮಿಶ್ರಣವನ್ನಾಗಿ ಮಾಡಿ.
11. ಕರಿಯಲು/ಬೇಯಿಸಲು ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಲು ಇಡಿ.
12. ಕತ್ತರಿಸಿಕೊಂಡ ಹೀರೇಕಾಯಿ ತಾಳಿಯನ್ನು ಕಡಲೇ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ. ಸರಿಯಾಗಿ ಅನ್ವಯಿಸಿಕೊಳ್ಳಬೇಕು.
13. ಅದ್ದಿದ ಹೀರೇಕಾಯಿ ತಾಳಿಯನ್ನು ಎಣ್ಣೆಯಲ್ಲಿ ಬಿಡಿ. ಒಂದಾದ ಮೇಲೊಂದರಂತೆ ಎಣ್ಣೆಯಲ್ಲಿ ಬಿಡಬೇಕು.
14. ಒಂದು ಭಾಗದಲ್ಲಿ ಬೆಂದ ನಂತರ ಇನ್ನೊಂದು ಭಾಗವನ್ನು ಬೇಯಿಸಲು ತಿರುವಬೇಕು.
15. ಅವು ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ತಿರುಗುವ ತನಕವೂ ಎಣ್ಣೆಯಲ್ಲೇ ಬೇಯಿಸಬೇಕು.
16. ಹೊಂಬಣ್ಣಕ್ಕೆ ತಿರುಗಿದ ಮೇಲೆ ಎಣ್ಣೆಯಿಂದ ತೆಗೆದು ಬೇರೆ ಪಾತ್ರೆಗೆ ವರ್ಗಾಯಿಸಿ. ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.
- 1. ಕಡಲೇ ಹಿಟ್ಟಿನ ಮಿಶ್ರಣವು ದೋಸೆ ಹಿಟ್ಟಿನಷ್ಟು ತೆಳು ಅಥವಾ ಸ್ಥಿರತೆಯನ್ನು ಹೊಂದಿರಬೇಕು.
- 2. ಹೆಚ್ಚು ಗರಿ ಗರಿಯಾಗಿರಬೇಕೆಂದು ಬಯಸಿದರೆ ಒಂದು ಚಮಚ ಅಕ್ಕಿ ಹಿಟ್ಟನ್ನು ಸೇರಿಸಿಕೊಳ್ಳಬಹುದು.
- ಸರ್ವಿಂಗ್ ಸೈಜ್ - 2 ಬಜ್ಜಿ
- ಕ್ಯಾಲೋರಿ - 156.2 ಕ್ಯಾಲ್
- ಫ್ಯಾಟ್ - 6.3 ಗ್ರಾಂ.
- ಪ್ರೋಟೀನ್ - 4.1 ಗ್ರಾಂ.
- ಕಾರ್ಬೋಹೈಡ್ರೇಟ್ - 22.5 ಗ್ರಾಂ.
- ಸಕ್ಕರೆ - 1.1 ಗ್ರಾಂ.
- ಫೈಬರ್ - 3.2 ಗ್ರಾಂ.
ಹಂತ ಹಂತವಾದ ಹೀರೇಕಾಯಿ ಬಜ್ಜಿ ಪಾಕವಿಧಾನ
1. ಒಂದು ಹೀರೇಕಾಯಿಯ ಅರ್ಧಭಾಗವನ್ನು ಕತ್ತರಿಸಿ, ಅದರ ಸಿಪ್ಪೆಯನ್ನು ತೆಗೆದುಕೊಳ್ಳಬೇಕು.

2. ತೆಳುವಾದ ಒಂದೊಂದು ತಾಳಿ/ಸ್ಲೈಸ್ ನಂತೆ ಕತ್ತರಿಸಿಕೊಳ್ಳಬೇಕು.

3. ಒಂದು ಪಾತ್ರೆಯಲ್ಲಿ ಕಡಲೇ ಹಿಟ್ಟನ್ನು ಹಾಕಿ.

4. ಅದಕ್ಕೆ ಅರಿಶಿನ ಪುಡಿ ಮತ್ತು ಇಂಗನ್ನು ಸೇರಿಸಿ.

5. ಕೆಂಪು ಮೆಣಸಿನ ಪುಡಿ/ಖಾರದ ಪುಡಿ ಮತ್ತು ಜೀರಿಗೆಯನ್ನು ಬೆರೆಸಿ.

6. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

7. ಒಂದು ಚಿಕ್ಕ ಪಾತ್ರೆಯಲ್ಲಿ 2 ಟೇಬಲ್ ಚಮಚ ಎಣ್ಣೆಯನ್ನು ಹಾಕಿ.

8. ಎಣ್ಣೆಯು ಚೆನ್ನಾಗಿ ಬಿಸಿಯಾಗುವಂತೆ 1 ರಿಂದ 2 ನಿಮಿಷ ಕಾಯಲು ಬಿಡಿ.

9. ನಂತರ ಮಿಶ್ರಣಕ್ಕೆ ಸುರಿಯಿರಿ.

10. ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತಾ, ಮೃದುವಾದ ಬೆಣ್ಣೆಯಂತಹ ಮಿಶ್ರಣವನ್ನಾಗಿ ಮಾಡಿ.

11. ಕರಿಯಲು/ಬೇಯಿಸಲು ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಲು ಇಡಿ.

12. ಕತ್ತರಿಸಿಕೊಂಡ ಹೀರೇಕಾಯಿ ತಾಳಿಯನ್ನು ಕಡಲೇ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ. ಸರಿಯಾಗಿ ಅನ್ವಯಿಸಿಕೊಳ್ಳಬೇಕು.

13. ಅದ್ದಿದ ಹೀರೇಕಾಯಿ ತಾಳಿಯನ್ನು ಎಣ್ಣೆಯಲ್ಲಿ ಬಿಡಿ. ಒಂದಾದ ಮೇಲೊಂದರಂತೆ ಎಣ್ಣೆಯಲ್ಲಿ ಬಿಡಬೇಕು.

14. ಒಂದು ಭಾಗದಲ್ಲಿ ಬೆಂದ ನಂತರ ಇನ್ನೊಂದು ಭಾಗವನ್ನು ಬೇಯಿಸಲು ತಿರುವಬೇಕು.

15. ಅವು ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ತಿರುಗುವ ತನಕವೂ ಎಣ್ಣೆಯಲ್ಲೇ ಬೇಯಿಸಬೇಕು.

16. ಹೊಂಬಣ್ಣಕ್ಕೆ ತಿರುಗಿದ ಮೇಲೆ ಎಣ್ಣೆಯಿಂದ ತೆಗೆದು ಬೇರೆ ಪಾತ್ರೆಗೆ ವರ್ಗಾಯಿಸಿ. ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.

Click it and Unblock the Notifications