Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಈ ಲಡ್ಡು ಸೇವಿಸಿದರೆ ಮೈ ತೂಕ ಹೆಚ್ಚಲ್ಲ
ತೂಕ ಇಳಿಕೆಗಾಗಿ ಡಯಟ್ (ಆಹಾರಕ್ರಮ) ಪಾಲಿಸುವಾಗ ಸಿಹಿ ತಿನ್ನಬಾರದು, ಅದಿಕ ಕೊಲೆಸ್ಟ್ರಾಲ್ ಇರುವ ಆಹಾರಗಳನ್ನು ತಿನ್ನಬಾರದೆಂದು ಅವುಗಳೆನ್ನೆಲ್ಲಾ ದೂರವಿಡುತ್ತಾರೆ. ಆದರೆ ನಮ್ಮ ನಾಲಗೆ ಮಾತ್ರ ರುಚಿಯಾದ ಆಹಾರವನ್ನು ಬಯಸುತ್ತದೆ.

ಡಯಟ್ ಹೆಸರಿನಲ್ಲಿ ಪಥ್ಯ ಆಹಾರ ಸೇವಿಸುವುದು ಅಥವಾ ಒಂದೇ ಬಗೆಯ ಆಹಾರ ಸೇವಿಸುವುದು ಮಾಡಿದರೆ ಸಕತ್ ಬೋರ್ ಅನಿಸುವುದು. ಇಲ್ಲಿ ನಾವು ನಿಮಗೆ ಆರೋಗ್ಯಕರವಾದ ಲಡ್ಡು ರೆಸಿಪಿ ನೀಡಿದ್ದೇವೆ. ನಿಮಗೆ ಸಿಹಿ ತಿನ್ನಬೇಕೆಂದು ಅನಿಸಿದಾಗ ತೂಕ ಹೆಚ್ಚಾಗುತ್ತದೆ ಎಂಬ ಭಯವಿಲ್ಲದೇ ಸವಿಯಬಹುದಾದ ಲಡ್ಡು ರೆಸಿಪಿ ಇದಾಗಿದೆ.
ಇದನ್ನು ಓಟ್ಸ್ ಬಳಸಿ ಮಾಡಲಾಗಿದ್ದು, ರೆಸಿಪಿ ತುಂಬಾ ಸರಳವಾಗಿದ್ದು ಬನ್ನಿ ರೆಸಿಪಿ ಮಾಡುವುದು ಹೇಗೆ ಎಂದು ನೋಡೋಣ:
Recipe By: Anjali Rao
Recipe Type: Sweets
Serves: 2
-
ಬೇಕಾಗುವ ಸಾಮಗ್ರಿ
1 ಕಪ್ ಓಟ್ಸ್
1 ಚಮಚ ವಾಲ್ನಟ್ ಪುಡಿ
1 ಚಮಚ ಬಾದಾಮಿ ಪುಡಿ
2 ಚಮಚ ಎಳ್ಳು
2 ಚಮಚ ತುಪ್ಪ
2 ಚಮಚ ಬೆಲ್ಲ
1 ಚಿಕ್ಕ ಚಮಚ ಏಲಕ್ಕಿ ಪುಡಿ
2 ಚಮಚ ಹಾಲು
-
ಮಾಡುವ ವಿಧಾನ
* ಮೊದಲಿಗೆ ಪ್ಯಾನ್ ಬಿಸಿ ಮಾಡಿ ಅದಕ್ಕೆ ಓಟ್ಸ್ ಹಾಕಿ 2-3 ನಿಮಿಷ ರೋಸ್ಟ್ ಮಾಡಿ ಒಂದು ಪಾತ್ರೆಯಲ್ಲಿ ಹಾಕಿಡಿ.
* ನಂತರ ಎಳ್ಳು ಹಾಕಿ 2 ನಿಮಿಷ ರೋಸ್ಟ್ ಮಾಡಿ, ಒಂದು ಕಪ್‌ನಲ್ಲಿ ಹಾಕಿಡಿ.
* ನಂತರ ಪ್ಯಾನ್‌ಗೆ ತುಪ್ಪ ಹಾಕಿ, ಇದರಲ್ಲಿ ಬೆಲ್ಲ ಹಾಕಿ ಅಲುಗಾಡಿಸಿ, ಬೆಲ್ಲ ಕರಗಿದ ಬಳಿಕ ಸ್ವಲ್ಪ ತಣ್ಣಗಾಗಲು ಬಿಡಿ.
* ಇದಕ್ಕೆ ರೋಸ್ಟ್ ಮಾಡಿದ ಓಟ್ಸ್, ಎಳ್ಳು, ಪುಡಿ ಮಾಡಿದ ವಾಲ್ನಟ್, ಏಲಕ್ಕಿ, 2 ಚಮಚ ಹಾಲು ಹಾಕಿ ಮಿಕ್ಸ್ ಮಾಡಿ.
* ನಂತರ ಚೆನ್ನಾಗಿ ಮಿಶ್ರ ಮಾಡಿ, ಚಿಕ್ಕ-ಚಿಕ್ಕ ಉಂಡೆ ಮಾಡಿ.
ಇಷ್ಟು ಮಾಡಿದರೆ ಆರೋಗ್ಯಕರವಾದ ಲಡ್ಡು ರೆಡಿ. ಈ ಲಡ್ಡು ನಿಮಗೆ ಸಿಹಿ ತಿನ್ನ ಬೇಕೆನಿಸಿದಾಗ ಯಾವಾಗ ಬೇಕಾದರೂ ಮಾಡಿ ಸವಿಯಬಹುದು.
- ಸಲಹೆ: ಈ ಲಡ್ಡು ಮಕ್ಕಳಿಗೆ ನೀಡಿದರೆ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ, ಇದು ತುಂಬಾ ಆರೋಗ್ಯಕರವಾಗಿರುವುದರಿಂದ ಅವರಿಗೆ ಬೇಕಾದ ಪೋಷಕಾಂಶಗಳೂ ದೊರೆಯುತ್ತದೆ.
- ಸರ್ವ್ - 2
- ಒಂದು ಬಾಲ್ - 90ಕ್ಯಾ



Click it and Unblock the Notifications
