Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬ್ರೇಕ್‌ಫಾಸ್ಟ್ ಹಾಗೂ ಸ್ನ್ಯಾಕ್ಸ್‌ಗೆ ಹೆಲ್ತಿ ಎಗ್‌ಫಿಟ್ಟರ್: ಮೈ ತೂಕ ಕಡಿಮೆ ಮಾಡ ಬಯಸುವವರಿಗೆ ಆರೋಗ್ಯಕರ ರೆಸಿಪಿ
ನಾದಿಯಾಹುಸೈನ್ ಸೂಪರ್ ಅಡುಗೆಗಳ ಮೂಲಕ ಗಮನ ಸೆಳೆದಿರುವ ಇನ್‌ಫ್ಲೂಯನ್ಸರ್, ಇವರು ಎಗ್‌ಫಿಟ್ಟರ್ ರೆಸಿಪಿ ಶೇರ್ ಮಾಡಿದ್ದು ಭಾರತೀಯ ಆಹಾರಶೈಲಿಗೆ ಹೊಂದುವಂತಿದೆ. ನೀವು ಆರೋಗ್ಯಕರ ಸ್ನ್ಯಾಕ್ಸ್ ಅಥವಾ ಬ್ರೇಕ್‌ಪಾಸ್ಟ್ ಬಯಸುವುದಾದರೆ ಸೂಪರ್ ರೆಸಿಪಿ ಇದಾಗಿದೆ. ತೂಕ ಇಳಿಕಕೆಯ ಡಯಟ್ ಮಾಡುವವರಿಗೆ, ಜಿಮ್‌ಗೆ ಹೋಗುವವರಿಗೆ, ಮಕ್ಕಳಿಗೆ ಹೇಳಿ ಮಾಡಿಸಿದಂಥ ರೆಸಿಪಿಯಿದು ನೋಡಿ:

ಎಗ್‌ಫಿಟ್ಟರ್ ರೆಸಿಪಿ:
ಈರುಳ್ಳಿ 2
ಸ್ವಲ್ಪ ಸೊಪ್ಪು (ನೀವು 4-5 ಬಗೆಯ ಸೊಪ್ಪು ಬೇಕಾದರೂ ಬಳಸಬಹುದು, ಎಷ್ಟು ಬಗೆಯ
ಸೊಪ್ಪು ಬೇಕಾದರೂ ಸೇರಿಸಬಹುದು)
30ಗ್ರಾಂ ಪಾರ್ಸ್ಲೆ
1 ಚಮಚ ಉಪ್ಪು
4 ಚಮಚ ಕಡ್ಲೆ ಹಿಟ್ಟು
4 ಮೊಟ್ಟೆ
ಎಣ್ಣೆ (ಫ್ರೈ ಮಾಡಲು)
ಇದರ ಜೊತೆಗೆ ಸರ್ವ್ ಮಾಡಿ
ಯಾವುದೇ ಫ್ಲೇವರ್ ಇಲ್ಲದಿರುವ ಯೋಗರ್ಟ್
50 ml
1/2 ನಿಂಬೆಹಣ್ಣು
ಚಿಟಿಕೆಯಷ್ಟು ಉಪ್ಪು
ಚಿಲ್ಲಿ ಫ್ಲೇಕ್ಸ್(ಒಣ ಮೆಣಸಿನ ಬೀಜ)
ಮಾಡುವ ವಿಧಾನ
- ನೀವು ಈರುಳ್ಳಿಯನ್ನು ತುಂಬಾ ಚಿಕ್ಕದಾಗಿ ಕತ್ತರಿಸಬೇಕು
- ಇನ್ನು ಸೊಪ್ಪು ಕೂಡ ಚಿಕ್ಕದಾಗಿ ಕತ್ತರಿಸಿ ಒಂದು ರೌಂಡ್ ರುಬ್ಬಿ
- ನಂತರ ಅದನ್ನು ಒಂದು ಬೌಲ್‌ಗೆ ಹಾಕಿ
- ಈಗ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿ.
- ಮೊಟ್ಟೆಯನ್ನು ಒಡೆದು ಹಾಕಿ
- ಕಡ್ಲೆಹಿಟ್ಟು ಹಾಕಿ ಚೆನ್ನಾಗಿ ಕದಡಿ
- ನಾವು ಆಮ್ಲೆಟ್‌ಗೆ ಕದಡುವ ರೀತಿಯಲ್ಲಿ ಕದಡಬೇಕು.
- ಈಗ ತವಾಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಈ ಮಿಶ್ರಣ ಸುರಿದು ಒಂದು ಬದಿ 5-7 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ ಮತ್ತೆ ಮಗುಚಿ ಹಾಕಿ ಬೇಯಿಸಿ.
ಈಗ ಸೊಪ್ಪು ಅಮ್ಲೆಟ್ ರೆಡಿಯಾದ ಮೇಲೆ ಅದನ್ನು ಟಿಪ್ ಮಾಡಿ ಸವಿಯಲು ಮಿಶ್ರಣ
ರೆಡಿ ಮಾಡಿ
ಯೋಗರ್ಟ್‌ಗೆ ಸ್ವಲ್ಪ ಉಪ್ಪು , ಚಿಲ್ಲಿ ಫ್ಲೇಕ್ಸ್ ಹಾಕಿ, ನಿಂಬೆ ಮಿಕ್ಸ್
ಮಾಡಿ
ಇನ್ನು ನೀವು ಚಿಲ್ಲಿ ಫ್ಲೇಕ್ಸ್ ಎಣ್ಣೆಗೆ ಹಾಕಿ ನಂತರ ಸೇರಿಸಿ ರುಚಿ ಸೂಪರ್
ಆಗಿರುತ್ತದೆ.
ಆರೋಗ್ಯಕರ ಸ್ನ್ಯಾಕ್ಸ್ ಅಥವಾ ಬ್ರೇಕ್‌ಫಾಸ್ಟ್ ಹುಡುಕುತ್ತಿದ್ದರೆ ಈ ರೆಸಿಪಿ ಸೂಪರ್ ಅಗಿರುತ್ತದೆ.
ಇತರ ಟಿಪ್ಸ್:
- ನೀವು ಸೊಪ್ಪಿನ ಎಗ್ ಫಿಟ್ಟರ್ ಅನ್ನು ಬೇರೆ ರೀತಿಯಲ್ಲಿಯೂ ಬಳಸಬಹುದು.
- ಮೊದಲಿಗೆ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಮೇಲೆ ಅದಕ್ಕೆ ಸೊಪ್ಪು ಹಾಕಿ ಬೇಯಿಸಿ ಗ್ರೈಂಡ್ ಮಾಡಿ ಬಳಸಬಹದು.
- ಇಲ್ಲಾಂದ್ರೆ ಸೊಪ್ಪು ಚಿಕ್ಕದಾಗಿ ಕತ್ತರಿಸಿ ಅದನ್ನು ಎಣ್ಣೆಯಲ್ಲಿ ಫ್ರೈ ಮಾಡಿ ರುಬ್ಬದೆ ಹಾಗೆಯೇ ಹಾಕಬಹುದು.
ತೂಕ ನಿಯಂತ್ರಣದಲ್ಲಿ ಇರುವವರಿಗೆ, ಮಧುಮೇಹಿಗಳಿಗೆ ಅತ್ಯುತ್ತಮವಾದ ಬ್ರೇಕ್‌ಫಾಸ್ಟ್ ಅಥವಾ ಸಂಜೆ ಹಸಿವಾಗಿದ್ದರೆ ಸ್ನ್ಯಾಕ್ಸ್ ಇದಾಗಿದೆ. ಮಗು ಸಂಜೆ ಶಾಲೆಯಿಂದ ಬರುವಾಗ ಇದನ್ನು ಮಾಡಿಕೊಟ್ಟರೆ ಖುಷಿಯಿಂದ ಸವಿಯುತ್ತಾರೆ, ಅಲ್ಲದೆ ಈ ಕುರುಕಲು ತಿಂಡಿ ಸವಿಯುವುದು ಕಡಿಮೆಯಾಗುವುದು.
ಬೆಳಗ್ಗೆ ಪಟ್ ಅಂತ ಮಾಡಬಹುದಾದ ರೆಸಿಪಿಯಿದು:
ಬೆಳಗ್ಗೆ ಹೆಚ್ಚು ಸಮಯವಿಲ್ಲ ಎಂದಾದರೆ ಬೆಳಗ್ಗೆ ಪಟ್ ಅಂತ ರೆಡಿ ಮಾಡಬಹುದು.
ಪಾಲಾಕ್, ಪಾರ್ಸ್ಲೆ ಸೇರಿ ನಿಮಗಿಷ್ಟವಾದ ಸೊಪ್ಪು ಬಳಸಬಹುದು. ನೀವು ಬೇಕೆಂದರೆ ನುಗ್ಗೆಕಾಯಿ ಸೊಪ್ಪು ಕೂಡ ಬಳಸಬಹುದು, ನುಗ್ಗೆಸೊಪ್ಪು ಆದರೆ ಫ್ರೈ ಮಾಡಿ ಹಾಕಿದರೆ ಸಾಕು, ಗ್ರೈಂಡ್ ಮಾಡಬೇಡಿ.



Click it and Unblock the Notifications
