Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
Kids Tiffin: ಈ ಟಿಫಿನ್ ಮಾಡಿ ಕಳಿಸಿ.. ಮಕ್ಕಳು ಇಷ್ಟಪಟ್ಟು ತಿಂತಾರೆ, ಶಾಲೆಯಿಂದ ಖಾಲಿ ಡಬ್ಬಿ ಬರುತ್ತೆ!
ಬೆಳಗ್ಗೆ ಟಿಫಿನ್ ಮಾಡೋ ಚಿಂತೆನಾ? ನೀವು ಮಾಡೋ ಟಿಫಿನ್ ಮಕ್ಕಳು ತಿಂತಾ ಇಲ್ವಾ? ಈ ಹೆಲ್ದಿ ಟಿಫಿನ್ (Healthy Recipe For Kids Tiffin) ಮಾಡಿ ಕಳಿಸಿ. ಮಕ್ಕಳು ಇಷ್ಟಪಟ್ಟು ತಿಂತಾರೆ, ಶಾಲೆಯಿಂದ ಖಾಲಿ ಡಬ್ಬಿ ಬರುತ್ತೆ. ವೀಕೆಂಡ್ ರಜೆ ಮುಗಿದ ತಕ್ಷಣ, ಮಕ್ಕಳನ್ನು ಶಾಲೆಗೆ ಕಳುಹಿಸುವ ಸಮಯ ಬರುತ್ತೆ. ಈ ವಾತಾವರಣದಲ್ಲಿ ಮಕ್ಕಳು ತಿಂಡಿ ತಿನ್ನಲು ಹಿಂದೇಟು ಹಾಕುತ್ತಾರೆ. ಈ ಸಂದರ್ಭದಲ್ಲಿ, ಪ್ರತಿ ತಾಯಿಯ ಚಿಂತೆ ಏನೆಂದರೆ, ಕಡಿಮೆ ಸಮಯದಲ್ಲಿ ಆರೋಗ್ಯಕರ ಮತ್ತು ರುಚಿಕರವಾದ ಅಡುಗೆ ಯಾವುದು ಮಾಡುವುದು. ನಿಮ್ಮ ಮಕ್ಕಳು ಸರಳ ಅನ್ನ ಅಥವಾ ಪಲಾವ್ ತಿಂದು ಬೇಸರಗೊಂಡಿದ್ದರೆ, ತರಕಾರಿಗಳನ್ನು ಬಳಸಿ ಈ ರೀತಿ ಹೆಲ್ದಿ ರೈಸ್ ಮಾಡಿ.
ಮಕ್ಕಳ ಟಿಫಿನ್‌ಗೆ ಕೇವಲ 15 ನಿಮಿಷದಲ್ಲಿ ಸೂಪರ್ ಹೆಲ್ದಿ ಲಂಚ್ ಮಾಡಬಹುದು. ಬಣ್ಣಬಣ್ಣದ ತರಕಾರಿಗಳೊಂದಿಗೆ ತಯಾರಿಸಿದ ಈ ಅನ್ನವು ರುಚಿಕರ ಮತ್ತು ಆರೋಗ್ಯಕರವಾಗಿರುತ್ತದೆ. ಇದನ್ನು ಮಕ್ಕಳ ಲಂಚ್ ಬಾಕ್ಸ್‌ಗೆ ಹಾಕಿದರೆ, ಖಂಡಿತವಾಗಿಯೂ ಬಾಕ್ಸ್ ಖಾಲಿಯಾಗಿ ಬರುತ್ತದೆ. ಮನೆಯಲ್ಲಿಯೂ ಸಹ ಅದೇ ಆಹಾರಕ್ಕಾಗಿ ಬೇಡಿಕೆ ಇಡುತ್ತಾರೆ. ಈ ಅಡುಗೆಯ ವಿಶೇಷತೆಯೆಂದರೆ, ಇದು ಬೇಗನೆ ತಯಾರಾಗುತ್ತದೆ ಮತ್ತು ತಾಯಂದಿರು ಹೆಚ್ಚು ಹೊತ್ತು ಅಡುಗೆ ಮನೆಯಲ್ಲಿ ಕಷ್ಟಪಡಬೇಕಾಗಿಲ್ಲ. ಈ ರೈಸ್ ಲಂಚ್ ಬಾಕ್ಸ್‌ಗೆ ಹೇಳಿಮಾಡಿಸಿದಂತಿದೆ.

ಫ್ರೈಡ್ ರೈಸ್ ಅನೇಕರಿಗೆ ಅಚ್ಚುಮೆಚ್ಚಿನ ತಿನಿಸು. ಮನೆಯಲ್ಲಿ ಉಳಿದ ಅನ್ನದಿಂದ ಕೆಲವೇ ನಿಮಿಷಗಳಲ್ಲಿ ಮಕ್ಕಳ ಲಂಚ್‌ಬಾಕ್ಸ್‌ಗೆ ಇದನ್ನು ಸಿದ್ಧಪಡಿಸಬಹುದು. ಹಲವರು ವಿವಿಧ ರೀತಿಯ ಫ್ರೈಡ್ ರೈಸ್‌ಗಳನ್ನು ತಯಾರಿಸುತ್ತಾರೆ. ಆದರೆ, ಮನೆಯಲ್ಲಿ ತಯಾರಿಸಿದಾಗ ಕೆಲವೊಮ್ಮೆ ಅದು ಅಷ್ಟೊಂದು ರುಚಿಕರವಾಗಿರುವುದಿಲ್ಲ. ನಾವು ಹೇಳುವ ವಿಧಾನದಂತೆ 'ವೆಜಿಟೇಬಲ್ ಫ್ರೈಡ್ ರೈಸ್' ಅನ್ನು ತಯಾರಿಸಿದರೆ, ಮನೆಯವರೆಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಈ ಫ್ರೈಡ್ ರೈಸ್ ಅನ್ನು ಕೇಲವೇ ನಿಮಿಷಗಳಲ್ಲಿ ಸಿದ್ಧಗೊಳಿಸಬಹುದು. ಕಡಿಮೆ ಸಮಯದಲ್ಲಿ ಬೇಗನೆ ತಯಾರಿಸಬಹುದಾದರೂ, ರುಚಿ ಮಾತ್ರ ಅದ್ಭುತವಾಗಿರುತ್ತದೆ. ಹಾಗಾದರೆ, ಈ ಸರಳ ವೆಜ್ ಫ್ರೈಡ್ ರೈಸ್ ಮಾಡಲು ಬೇಕಾಗುವ ಸಾಮಗ್ರಿಗಳು ಯಾವುವು? ಮತ್ತು ತಯಾರಿಸುವ ವಿಧಾನ ಹೇಗೆ ಎಂಬುದನ್ನು ಈಗ ನೋಡೋಣ.
ಫ್ರೈಡ್ ರೈಸ್ ಮಾಡಲು ಬೇಕಾಗುವ ಸಾಮಾಗ್ರಿಗಳು
• ಬಾಸುಮತಿ ಅಕ್ಕಿ (ಬೇಯಿಸಿದ ಮತ್ತು ತಣ್ಣಗಾದದ್ದು) - 1 ಕಪ್
• ಮಿಕ್ಸ್ ವೆಜ್ (ಕ್ಯಾರೆಟ್, ಬಟಾಣಿ, ಕ್ಯಾಪ್ಸಿಕಂ, ಕಾರ್ನ್) - ½ ಕಪ್
• ಈರುಳ್ಳಿ - ಮಧ್ಯಮ ಗಾತ್ರದ 1 (ಸಣ್ಣಗೆ ಕತ್ತರಿಸಿದ್ದು)
• ಬೆಳ್ಳುಳ್ಳಿ - 2 ಎಸಳು (ಜಜ್ಜಿದ)
• ಕ್ಯಾಪ್ಸಿಕಂ - ¼ ಕಪ್ (ಸಣ್ಣಗೆ ಕತ್ತರಿಸಿದ್ದು)
• ಹಸಿರು ಈರುಳ್ಳಿ - 2 ಕತ್ತರಿಸಿದ್ದು (ಅಲಂಕಾರಕ್ಕೆ)
• ಸೋಯಾ ಸಾಸ್ - 1 ಸ್ಪೂನ್
• ಟೊಮೆಟೊ ಕೆಚಪ್ - 1 ಸ್ಪೂನ್ (ಮಕ್ಕಳ ರುಚಿಗೆ ತಕ್ಕಂತೆ)
• ರುಚಿಗೆ ತಕ್ಕಷ್ಟು ಉಪ್ಪು
• ಕಾಳು ಮೆಣಸು - ಚಿಟಿಕೆ
• ಎಣ್ಣೆ - 2 ಸ್ಪೂನ್
• ಚೈನೀಸ್ ಹರ್ಬ್ - ½ ಸ್ಪೂನ್ (ಬೇಕಿದ್ದರೆ)

ಫ್ರೈಡ್ ರೈಸ್ ಮಾಡವ ವಿಧಾನ
ಮೊದಲಿಗೆ ಅನ್ನವನ್ನು ತಯಾರಿಸಿ, ತಣ್ಣಗಾಗಲು ಬಿಡಿ. ಬಿಸಿ ಅನ್ನದಿಂದ ಮಾಡಿದರೆ ಫ್ರೈಡ್ ರೈಸ್‌ನ ವಿನ್ಯಾಸವು ಸರಿಯಾಗಿ ಬರುವುದಿಲ್ಲ ಎಂಬುದನ್ನು ನೆನಪಿಡಿ. ಬಳಿಕ, ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ತರಕಾರಿಗಳನ್ನು ಹುರಿದು ತೆಗೆಯಿರಿ. ಅದೇ ಎಣ್ಣೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿ. ನಂತರ ಕ್ಯಾರೆಟ್, ಬಟಾಣಿ, ಕಾರ್ನ್ ಮತ್ತು ಕ್ಯಾಪ್ಸಿಕಂ ಹಾಕಿ, 2 ರಿಂದ 3 ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಹುರಿಯಿರಿ. ತರಕಾರಿಗಳು ಗರಿಗರಿಯಾಗಿರಬೇಕು.

ಇದಾದ ಬಳಿಕ ಅದಕ್ಕೆ ಸೋಯಾ ಸಾಸ್, ಟೊಮೆಟೊ ಕೆಚಪ್, ಉಪ್ಪು, ಕಾಳು ಮೆಣಸು ಮತ್ತು ಚೈನೀಸ್ ಹರ್ಬ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ತಣ್ಣಗಾದ ಅನ್ನವನ್ನು ಹಾಕಿ, ಅನ್ನವು ಮುರಿಯದಂತೆ ನಿಧಾನವಾಗಿ ಕಲಸಿ. ಮಧ್ಯಮ ಉರಿಯಲ್ಲಿ 2 ರಿಂದ 3 ನಿಮಿಷ ಫ್ರೈ ಮಾಡಿ. ಇಷ್ಟು ಮಾಡಿದರೆ, ಈಗ ಬಿಸಿ ಬಿಸಿಯಾದ ಫ್ರೈಡ್ ರೈಸ್ ಸಿದ್ಧ. ಮಕ್ಕಳ ಊಟದ ಡಬ್ಬಿಯಲ್ಲಿ ಹಾಕುವ ಮೊದಲು ಹಸಿರು ಈರುಳ್ಳಿಯಿಂದ ಅಲಂಕರಿಸಿ.



Click it and Unblock the Notifications
