Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ಅಕ್ಕಿ ಹಾಲುಬಾಯಿ ರೆಸಿಪಿ
ಹಾಲು ಕರ್ನಾಟಕದ ವಿಶೇಷ ರೆಸಿಪಿಗಳಲ್ಲಿ ಒಂದಾಗಿದೆ, ಹಬ್ಬಗಳು ಅದರಲ್ಲ ಪಂಚಮಿ ಹಬ್ಬದಲ್ಲಿ ಇದು ಇದ್ದೇ ಇರುತ್ತದೆ. ಅಲ್ಲದೆ ಹಳ್ಳಿ ಸೊಗಡಿ, ಕರ್ನಾಟಕ ಶೈಲಿಯ ಫೇಮಸ್ ಹೋಟೆಲ್ಗಳಲ್ಲಿಯೂ ಹಾಲುಬಾಯಿ ಸವಿಯಲು ಸಿಗುವುದು. ಈ ಹಾಲುಬಾಯಿಯನ್ನು ಅಕ್ಕಿ ಹಿಟ್ಟಿನಿಮದಲೂ ತಯಾರಿಸಬಹುದು, ರಾಗಿಯಿಂದಲೂ ತಯಾರಿಸಬಹುದು, ಎರಡೂ ರುಚಿಯಾಗಿರುತ್ತೆ.

ನಾವು ಇಲ್ಲಿ ಅಕ್ಕಿ ಹಾಕಿ ಹಾಲುಬಾಯಿ ರೆಸಿಪಿ ನೀಡಲಾಗಿದೆ ನೋಡಿ:
Recipe By: Reena TK
Recipe Type: Sweet
Serves: Depends
-
ಬೇಕಾಗುವ ಸಾಮಗ್ರಿ
1 ಕಪ್ ಅಕ್ಕಿ
1 ಕಪ್ ತೆಂಗಿನಕಾಯಿ ತುರಿ
3 ಕಪ್ ನೀರು
1 ಕಪ್ ಬೆಲ್ಲ
1/4 ಚಮಚ ಉಪ್ಪು
2 ಚಮಚ ತುಪ್ಪ/ ಬೆಣ್ಣೆ
1/4 ಚಮಚ ಏಲಕ್ಕಿ ಪುಡಿ
-
ಮಾಡುವ ವಿಧಾನ
* ಅಕ್ಕಿಯನ್ನು 2 ಗಂಟೆ ಕಾಲ ನೆನೆಹಾಕಿ.
* ನಂತರ ನೀರು ಸೋಸಿ ರುಬ್ಬಲು ಮಿಕ್ಸಿ ಬ್ಲೆಂಡರ್ಗೆ ಹಾಕಿ, ಜತೆ 1 ಕಪ್ ತೆಂಗಿನ ತುರಿ, 1/4 ಕಪ್ ನೀರು ಹಾಕಿ ನುಣ್ಣನೆ ರುಬ್ಬಿ.
* ಒಂದು ಪಾತ್ರೆಯಲ್ಲಿ 1 ಕಪ್ ಬೆಲ್ಲ ಹಾಕಿ ಎರಡು ಕಾಲು ಕಪ್ ನೀರು ಹಾಕಿ ಕುದಿಸಿ, ಬೆಲ್ಲದ ಪಾಕ ತಯಾರಿಸಿ. ಬೆಲ್ಲ ಸಂಪೂರ್ಣ ಕರಗಬೇಕು..
* ಈಗ ರುಬ್ಬಿದ ಅಕ್ಕಿ ಹಿಟ್ಟಿಗೆ 1/4 ಚಮಚ ಉಪ್ಪು ಹಾಕಿ ಚೆನ್ನಾಗಿ ಕಲೆಸಿ, ನಂತರ ಮಿಶ್ರಣವನ್ನು ಬೆಲ್ಲದ ಪಾಕದಲ್ಲಿ ಹಾಕಿ ತಿರುಗಿಸುತ್ತಾ ಬೇಯಿಸಿ.
* ಮಿಶ್ರಣ ಗಂಟು ಕಟ್ಟಬಾರದು, ತಿರುಗಿಸುತ್ತಲೇ ಇರಬೇಕು. ಈಗ ತುಪ್ಪ ಹಾಗೂ ಏಲಕ್ಕೆ ಪುಡಿ ಸೇರಿಸಿ ತಿರುಗಿಸುತ್ತಾಲೇ ಇರಿ. ಮಿಶ್ರಣ ಗಟ್ಟಿಯಾಗಲಾರಂಭಿಸಿದಾಗ ಉರಿಯಿಂದ ಇಳಿಸಿ ಚೆನ್ನಾಗಿ ತಿರುಗಿಸಿ.
* ಈಗ ಒಂದು ದೊಡ್ಡ ಪ್ಲೇಟ್ ಅಥವಾ ಅದೇ ರೀತಿಯ ಪಾತ್ರೆಗೆ ತುಪ್ಪ ಸವರಿ ಮಿಶ್ರಣವನ್ನು ಅದರಲ್ಲಿ ಹಾಕಿ ಒಂದೇ ಸಮವಾಗಿ ಹರಿ 30 ನಿಮಿಷ ಬಿಡಿ.
* ನಂತರ ಹಾಲುಬಾಯಿಯನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಅದರ ಮೇಲೆ ಗೋಡಂಬಿ ಅಥವಾ ಬಾದಾಮಿ ಇಟ್ಟು ಅಲಂಕರಿಸಿ ಸರ್ವ್ ಮಾಡಿ.
- ಸಾಂಪ್ರದಾಯಿಕವಾಗಿ ಹಾಲೂ ಬಾಯಿಯನ್ನು ಟ್ರೇ ಬದಲಿಗೆ ಬಾಳೆ ಎಲೆಯಲ್ಲಿ ಹಾಕಿ ಮಾಡಲಾಗುವುದು. * ಅಕ್ಕಿ ಬದಲಿಗೆ ರಾಗಿ ಹಾಕಿ ಕೂಡ ಹಾಲುಬಾಯಿ ತಯಾರಿಸಬಹುದು. * ಇದನ್ನು ಮಾಡಿ ಫ್ರಿಡ್ಜ್ನಲ್ಲಿಟ್ಟರೆ 2 ದಿನದವರೆಗೆ ಇಡಬಹುದು



Click it and Unblock the Notifications