Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹಲಸಿನ ಹಿಟ್ಟು ರೆಸಿಪಿ: ಅಕ್ಕಿ ನೆನೆಸಿ ಮಾಡಬಹುದು, ಅಕ್ಕಿ ಪುಡಿಯಿಂದಲೂ ಮಾಡಬಹುದು
ಹಲಸಿನ ಹಿಟ್ಟು ಅಥವಾ ಹಲಸಿನ ಗಟ್ಟಿ ಎಂದು ಕರೆಯಲ್ಪಡುವ ಹಲಸಿನ ಹಣ್ಣಿನಿಂದ ಮಾಡುವ ಈ ತಿನಿಸು ಇಷ್ಟಪಡದವರು ತುಂಬಾನೇ ವಿರಳ, ಅದು ಇಡ್ಲಿ ಪಾತ್ರೆಯಲ್ಲಿ ಹಬೆಯಲ್ಲಿ ಬೇಯುತ್ತಿದ್ದರೆ ಆಯ್ತಾ.... ಆಯ್ತಾ ಅಂತ ಅಮ್ಮನ ಹತ್ರ ಕೇಳಲಾರಂಭಿಸುತ್ತೇವೆ, ಅದರಲ್ಲಿಯೂ ಬಾಳೆಲೆಗಿಂತ ಅರಿಶಿಣ ಎಲೆ ಹಾಕಿದ್ದರೆ ಅದರ ಸುವಾಸನೆ ಇನ್ನೂ ಸೂಪರ್.
ಇದನ್ನು ಅಕ್ಕಿ ನೆನೆ ಹಾಕಿ ಅಕ್ಕಿಯನ್ನು ಗಟ್ಟಿಯಾಗಿ ರುಬ್ಬಿ ಮಾಡುತ್ತೇವೆ, ಅಲ್ಲದೆ ಈಗ ನಾವೆಲ್ಲಾ ಸುಲಭದ ಮಾರ್ಗ ನೋಡುತ್ತೇವೆ ಹಾಗಾಗಿ ಕಡಬು ಹಿಟ್ಟಿನ ಜೊತೆ ಕೂಡ ಮಾಡುತ್ತೇವೆ, ಆದರೆ ಅಕ್ಕಿ ರುಬ್ಬಿ ಮಾಡಿದರೆ ರುಚಿ ಹೆಚ್ಚು ಎಂಬುವುದನ್ನು ತಳ್ಳಿ ಹಾಕುವಂತಿಲ್ಲ.

ಈ ಹಲಸಿನ ಗಟ್ಟಿಗೆ ಬಕ್ಕೆ, ಕೂಳೆ ಈ ಎರಡೂ ಬಗೆಯ ಹಲಸಿನ ಹಣ್ಣು ಬಳಸಬಹುದು,
ಕೂಳೆ ಅಂದರೆ ಆ ಹಲಸಿನ ಹಣ್ಣು ಗಟ್ಟಿ ಇರುವುದಿಲ್ಲ ಅದನ್ನು ತೆಗೆದು ಸೋಸಣೆಗೆ
ಹಾಕಿ ಮೆಲ್ಲನೆ ಒತ್ತದರೆ ಸಾಕು ರಸ ತಟ್ಟೆಗೆ ಬೀಳುತ್ತದೆ, ನಂತರ ನಾರು
ಬಿಸಾಡಬಹುದು, ಅದೇ ಬಕ್ಕೆಯಾದರೆ ಅದನ್ನು ರುಬ್ಬಬೇಕು
(ಇಲ್ಲಿ ನಾನು ಕೂಳೆ, ಬಕ್ಕೆ ಎಂದು ನಮ್ಮ ಕಡೆ ಅಂದ್ರೆ ಕೊಡಗಿನ ಕಡೆ ಹೇಳುವ ಭಾಷೆ
ಬಳಸಿದ್ದೇನೆ, ಆದರೆ ನಿಮ್ಮಲ್ಲಿ ಬೇರೆ ರೀತಿ ಕರೆಯಬಹುದು)
ಮೊದಲಿಗೆ ಅಕ್ಕಿ ರುಬ್ಬಿ ಮಾಡುವ ಹಲಸಿನ ಹಿಟ್ಟು ನೋಡೋಣ:
2 ಅಕ್ಕಿ ಹುಟ್ಟು
ಒಂದೂವರೆ ಕಪ್ ಹಲಸಿನ ತೊಳೆ
ಬೆಲ್ಲ 1/4 ಕೆಜಿ
2 ಏಲಕ್ಕಿ
ಸ್ವಲ್ಪ ಹುರಿಗಟಲೆ
ಸ್ವಲ್ಪ ತೆಂಗಿನ ತುರಿ
ಸ್ವಲ್ಪ ತೆಂಗಿನಕಾಯಿ ಚಿಕ್ಕದಾಗಿ ಕತ್ತರಿಸಿದ್ದು
ಚಿಟಕೆಯಷ್ಟು ಉಪ್ಪು
ತುಪ್ಪ
ಮಾಡುವ ವಿಧಾನ
- ನೀವು ಅಕ್ಕಿಯ್ನು ಕನಿಷ್ಠ 5 ಗಂಟೆ ನೆನೆ ಹಾಕಿ, ನಂತರ ನೀರು ಸೋಸಿ ಗಟ್ಟಿಯಾಗಿ ರುಬ್ಬಿ
- ನೀವು ಹಲಸಿನ ಹಣ್ಣಿನ ರಸ ಮಿಕ್ಸ್ ಮಾಡುವುದಾದರೆ ಹಿಟ್ಟು ತುಂಬಾ ನೀರು ನೀರು ಆಗಬಾರದು, ಹಾಗಾಗಿ ಕೂಳೆ ಹಲಸಿನ ಹಣ್ಣು ಬಳಸುವುದಾದರೆ ಅಕ್ಕಿ ಪುಡಿ ಮಾಡಿ ಬಳಸುವುದು ಒಳ್ಳೆಯದು.
- ಬಕ್ಕೆ ಹಲಸಿನ ಹಣ್ಣಾದರೆ ಅಕ್ಕಿ ಜೊತೆಗೆ ಹಲಸಿನ ಹಣ್ಣನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ ರುಬ್ಬಿಕೊಳ್ಳಿ
- ಈಗ ಇದನ್ನು ಪಾತ್ರೆಗೆ ಹಾಕಿ ಚಿಟೆಕೆಯಷ್ಟು ಉಪ್ಪು, ಬೆಲ್ಲದ ಪುಡಿ, ಏಲಕ್ಕಿ, ತೆಂಗಿನ ತುರಿ, ಹುರಿಗಟಲೆ, ತೆಂಗಿನಕಾಯಿಯ ಚಿಕ್ಕ-ಚಿಕ್ಕ ಹೋಳುಗಳು ಎಲ್ಲವನ್ನೂ ಹಾಕಿ ಮಿಕ್ಸ್ ಮಾಡಿ
- ಈಗ ಎಲೆಗೆ ತುಪ್ಪ ಸವಾರಿ ಅದರಲ್ಲಿ ಹಿಟ್ಟು ಹಾಕು ಕೈಯಿಂದ ತಟ್ಟಿ ಎಲೆಯನ್ನು ಮುಚ್ಚಿ ಇಡ್ಲಿ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಅದರಲ್ಲಿ ಒಂದು ಇಡ್ಲಿ ತಟ್ಟೆ ಇಟ್ಟು ಇವುಗಳನ್ನು ಇಡಿ ಎಲ್ಲಾ ರೆಡಿಯಾದ ಮೇಲೆ ಇಡ್ಲಿ ಪಾತ್ರೆಯ ಬಾಯಿಯನ್ನು ಮುಚ್ಚಿ ಬೇಯಿಸಿ, ಇದು ಹಬೆಯಲ್ಲಿ ಬೇಯಲಿ.
- ನೀವು ಒಂದು 20 ನಿಮಿಷ ಬೇಯಿಸಿದರೆ ಅಕ್ಕಿ ರುಬ್ಬಿ ಮಾಡಿದ ಹಲಸಿನ ಗಟ್ಟಿ ರೆಡಿ,
ಇನ್ನು ಅಕ್ಕಿ ನೆನೆ ಹಾಕದೆ ಕಡಬು ಮಾಡಲು ಮಾಡಿದ್ದ ಅಕ್ಕಿ ಇಟ್ಟು ಇದ್ದರೆ ಅದಕ್ಕೆ ಹಲಸಿನ ಹಣ್ಣು ರುಬ್ಬಿ ಹಾಕಿ ಅದರಲ್ಲಿ ಈ ಮೇಲೆ ತಿಳಿಸಿದ ಎಲ್ಲಾ ವಸ್ತುಗಳನ್ನು ಹಾಕಿ ಮಿಕ್ಸ್ ಮಾಡಿಯೂ ಹಲಸಿನ ಹಿಟ್ಟು ಮಾಡಬಹುದು.
ಇದನ್ನು ಮಾಡಿದರೆ 2 ದಿನ ಇಟ್ಟು ಬಳಸಬಹುದು, ಅಲ್ಲದೆ ಹಲಸಿನ ಹಣ್ಣಿನ ಸೀಸನ್ ಮುಗಿಯುವ ಮುನ್ನ ಸವಿಯಲೇಬೇಕಾದ ಒಂದು ಆಹಾರವಾಗಿದೆ.



Click it and Unblock the Notifications
