Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನವರಾತ್ರಿ ವಿಶೇಷ: ಗುಲ್ಪಾವೇಟೆ ರೆಸಿಪಿ
ಗುಲ್ಪಾವೇಟೆ ಒಂದು ಕರ್ನಾಕದ ಸಾಂಪ್ರದಾಯಿಕ ಸಿಹಿ ತಿಂಡಿ. ಇದನ್ನು ಹೆಚ್ಚಾಗಿ ಹಬ್ಬ ಹರಿದಿನ ಹಾಗೂ ಉತ್ಸವದ ಸಂದರ್ಭದಲ್ಲಿ ತಯಾರಿಸುತ್ತಾರೆ. ಸಿಹಿ ತಿನಿಸಾದ ಇದನ್ನು ಗೋಧಿ ಹಿಟ್ಟು, ಬೆಲ್ಲದ ಪಾಕ, ತೆಂಗಿನ ತುರಿ ಮತ್ತು ಏಲಕ್ಕಿಯ ಮಿಶ್ರಣದಿಂದ ತಯಾರಿಸಲಾಗುತ್ತದೆ. ಇದಕ್ಕೆ ಬೆರೆಸುವ ತೆಂಗಿನ ತುರಿ ಮತ್ತು ಏಲಕ್ಕಿಯು ಗಲ್ಪಾವೇಟೆಯ ಪರಿಮಳ ಹಾಗೂ ರುಚಿಯನ್ನು ಹೆಚ್ಚಿಸುತ್ತವೆ.
ಕೆಲಸದ ಒತ್ತಡ ಅಥವಾ ಅನಿರೀಕ್ಷಿತ ಅತಿಥಿಗಳ ಆಗಮನಕ್ಕೂ ಈ ಸಿಹಿಯನ್ನು ಸರಳ ಹಾಗೂ ಸುಲಭವಾಗಿ ತಯಾರಿಸಬಹುದು. ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ಸಿಹಿ ನಿಮ್ಮ ಬಾಯಿರುಚಿಯನ್ನು ಹೆಚ್ಚಿಸುತ್ತದೆ. ಇದನ್ನು ಚಿರೋಟಿ ರವೆಯಿಂದಲೂ ತಯಾರಿಸಬಹುದು. ಆದರೆ ನಾವಿಲ್ಲಿ ಗೋಧಿ ಹಿಟ್ಟನ್ನು ಬಳಸಿದ್ದೇವೆ. ನಿಮಗೂ ಈ ಸಿಹಿ ತಿಂಡಿಯ ಪಾಕವಿಧಾನವನ್ನು ತಿಳಿದುಕೊಳ್ಳಬೇಕೆಂದಿದ್ದರೆ ಈ ಕೆಳಗೆ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಗಮನಿಸಿ.

Recipe By: ಸುಮಾ ಜಯಂತ್
Recipe Type: ಸಿಹಿ ತಿಂಡಿ
Serves: 15 ಗುಲ್ಪಾವೇಟೆ
-
ತುಪ್ಪ - 9 ಟೇಬಲ್ ಚಮಚ+ ಅಲಂಕಾರಕ್ಕೆ
ಗೋಧಿ ಹಿಟ್ಟು - 1 ಬೌಲ್
ಬೆಲ್ಲ - 3/4 ಬೌಲ್
ನೀರು - 1, 1/4 ಕಪ್
ತೆಂಗಿನ ತುರಿ - 1/2 ಕಪ್
ಏಲಕ್ಕಿ ಪುಡಿ - 2, 1/2 ಟೀ ಚಮಚ
-
1. ಒಂದು ಪಾತ್ರೆಯಲ್ಲಿ 3 ಟೇಬಲ್ ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿ.
2. ಗೋಧಿ ಹಿಟ್ಟನ್ನು ಸೇರಿಸಿ.
3. ಮಧ್ಯಮ ಉರಿಯಲ್ಲಿ 5-7 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ಅದರ ಬಣ್ಣವು ತಿಳಿ ಹೊಂಬಣ್ಣಕ್ಕೆ ತಿರುಗಬೇಕು.
4. ಇದನ್ನು ಒಂದು ಪ್ಲೇಟ್‍ಗೆ ವರ್ಗಾಯಿಸಿ, ಒಂದೆಡೆ ಇಡಿ.
5. ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಹಾಕಿ ಬಿಸಿ ಮಾಡಿ.
6. ತಕ್ಷಣವೇ ನೀರನ್ನು ಸೇರಿಸಿ, ತಳಹಿಡಿಯುವುದನ್ನು ತಪ್ಪಿಸಿ.
7. ಬೆಲ್ಲವನ್ನು ಕರಗಿಸಿ, ಮಧ್ಯಮ ಉರಿಯಲ್ಲಿ 5 ನಿಮಿಷ ಕುದಿಯಲು ಬಿಡಿ.
8. 3 ಟೇಬಲ್ ಚಮಚ ತುಪ್ಪವನ್ನು ಸೇರಿಸಿ.
9. ಹುರಿದುಕೊಂಡ ಹಿಟ್ಟನ್ನು ಸೇರಿಸಿ ಮತ್ತು ಒಲೆಯ ಬೆಂಕಿಯನ್ನು ಆರಿಸಿ.
10. ಚೆನ್ನಾಗಿ ಮಿಶ್ರಗೊಳಿಸಿ ಒಂದು ಮುದ್ದೆಯ ಹದಕ್ಕೆ ತನ್ನಿ.
11. ತೆಂಗಿನ ತುರಿಯನ್ನು ಸೇರಿಸಿ.
12. ನಂತರ 3 ಟೇಬಲ್ ಚಮಚ ತುಪ್ಪವನ್ನು ಮತ್ತೆ ಸೇರಿಸಿ.
13. ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.
14. ನಿಮ್ಮ ಅಂಗೈಗೆ ತುಪ್ಪವನ್ನು ಸವರಿಕೊಳ್ಳಿ.
15. ನಿಮ್ಮ ಅಂಗೈನಿಂದ ಮಿಶ್ರಣವನ್ನು ನಾದಿ.
16. ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಸಣ್ಣ ಉಂಡೆಯನ್ನು ಮಾಡಿ.
17. ಒಂದು ಪ್ಲೇಟ್‍ನಲ್ಲಿ ಹಾಕಿ, ಸವಿಯಲು ನೀಡಿ.
- 1. ತೆಂಗಿನ ತುರಿಯ ಬದಲು ನುಣ್ಣಗೆ ಹೆಚ್ಚಿಕೊಂಡ ತೆಂಗಿನಕಾಯನ್ನು ಬಳಸಬಹುದು.
- 2. ಉಂಡೆ/ಲಡ್ಡೂ ಕಟ್ಟುವಾಗ ಮಿಶ್ರಣವು ಬೆಚ್ಚಗೆ ಇರಬೇಕು.
- ಸರ್ವಿಂಗ್ ಸೈಜ್ - 1 ಗುಲ್ಪಾವೇಟೆ
- ಕ್ಯಾಲೋರಿ - 296 ಕ್ಯಾಲ್
- ಫ್ಯಾಟ್ - 5.5 ಗ್ರಾಂ.
- ಪ್ರೋಟೀನ್ - 5 ಗ್ರಾಂ.
- ಕಾರ್ಬೋಹೈಡ್ರೇಟ್ - 46 ಗ್ರಾಂ.
- ಸಕ್ಕರೆ - 13.1 ಗ್ರಾಂ.
- ಫೈಬರ್ - 4 ಗ್ರಾಂ.
ಹಂತ ಹಂತವಾದ ಚಿತ್ರವಿವರಣೆ:
1. ಒಂದು ಪಾತ್ರೆಯಲ್ಲಿ 3 ಟೇಬಲ್ ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿ.

2. ಗೋಧಿ ಹಿಟ್ಟನ್ನು ಸೇರಿಸಿ.

3. ಮಧ್ಯಮ ಉರಿಯಲ್ಲಿ 5-7 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ಅದರ ಬಣ್ಣವು ತಿಳಿ ಹೊಂಬಣ್ಣಕ್ಕೆ ತಿರುಗಬೇಕು.

4. ಇದನ್ನು ಒಂದು ಪ್ಲೇಟ್‍ಗೆ ವರ್ಗಾಯಿಸಿ, ಒಂದೆಡೆ ಇಡಿ.

5. ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಹಾಕಿ ಬಿಸಿ ಮಾಡಿ.

6. ತಕ್ಷಣವೇ ನೀರನ್ನು ಸೇರಿಸಿ, ತಳಹಿಡಿಯುವುದನ್ನು ತಪ್ಪಿಸಿ.

7. ಬೆಲ್ಲವನ್ನು ಕರಗಿಸಿ, ಮಧ್ಯಮ ಉರಿಯಲ್ಲಿ 5 ನಿಮಿಷ ಕುದಿಯಲು ಬಿಡಿ.

8. 3 ಟೇಬಲ್ ಚಮಚ ತುಪ್ಪವನ್ನು ಸೇರಿಸಿ.

9. ಹುರಿದುಕೊಂಡ ಹಿಟ್ಟನ್ನು ಸೇರಿಸಿ ಮತ್ತು ಒಲೆಯ ಬೆಂಕಿಯನ್ನು ಆರಿಸಿ.

10. ಚೆನ್ನಾಗಿ ಮಿಶ್ರಗೊಳಿಸಿ ಒಂದು ಮುದ್ದೆಯ ಹದಕ್ಕೆ ತನ್ನಿ.

11. ತೆಂಗಿನ ತುರಿಯನ್ನು ಸೇರಿಸಿ.

12. ನಂತರ 3 ಟೇಬಲ್ ಚಮಚ ತುಪ್ಪವನ್ನು ಮತ್ತೆ ಸೇರಿಸಿ.

13. ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

14. ನಿಮ್ಮ ಅಂಗೈಗೆ ತುಪ್ಪವನ್ನು ಸವರಿಕೊಳ್ಳಿ.

15. ನಿಮ್ಮ ಅಂಗೈನಿಂದ ಮಿಶ್ರಣವನ್ನು ನಾದಿ.

16. ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಸಣ್ಣ ಉಂಡೆಯನ್ನು ಮಾಡಿ.

17. ಒಂದು ಪ್ಲೇಟ್‍ನಲ್ಲಿ ಹಾಕಿ, ಸವಿಯಲು ನೀಡಿ.

Click it and Unblock the Notifications