ಕೃಷ್ಣ ಜನ್ಮಾಷ್ಟಮಿ ವಿಶೇಷ-ಗುಜಿಯಾ ರೆಸಿಪಿ

By: Divya
Subscribe to Boldsky

ಗುಜಿಯಾ ಎನ್ನುವುದು ಉತ್ತರ ಭಾರತದ ಸಾಂಪ್ರದಾಯಿಕ ಸಿಹಿ ತಿಂಡಿ. ವಿಶೇಷ ಸಂದರ್ಭದಲ್ಲಿ ಹಾಗೂ ಹಬ್ಬ ಹರಿದಿನಗಳಲ್ಲಿ ಇದನ್ನು ತಯಾರಿಸಲಾಗುತ್ತದೆ. ಸಿಹಿ ಹೂರಣವನ್ನು ತುಂಬಿ ತಯಾರಿಸುವ ಈ ಸಿಹಿಗೆ ಕರಣಿ ಎಂತಲೂ ಕರೆಯುತ್ತಾರೆ. ದಕ್ಷಿಣ ಭಾರತದಲ್ಲಿ ಗುಜಿಯಾದ ಸಿಹಿ ಹೂರಣಕ್ಕೆ ತೆಂಗಿನ ತುರಿ ಮತ್ತು ಬೆಲ್ಲದ ಮಿಶ್ರಣ ಮಾಡಿ ತಯಾರಿಸುತ್ತಾರೆ. ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ತಯಾರಿಸುವ ಈ ಸಿಹಿ ತಿಂಡಿಯ ವ್ಯತ್ಯಾಸವೆಂದರೆ ಒಳಗಡೆ ತುಂಬುವ ಹೂರಣ. ವಿವಿಧ ಸ್ಥಳಕ್ಕೆ ಅನುಗುಣವಾಗಿ ಕಾಜ್ಜಿಕಾಯಲ್ಲು ಮತ್ತು ಕರ್ಜಿಕಾಯಿ ಎಂದು ಕರೆಯುತ್ತಾರೆ.

ಮಾವಾ/ಖೋಯಾ ಗುಜಿಯಾ ಸಿಹಿ ತಿಂಡಿಯ ಒಳಗಡೆ ಸಿಹಿಯ ಹೂರಣ ಹಾಗೂ ಹೊರಗಡೆ ಗರಿಗರಿಯಾದ ಕವಚದಿಂದ ಕೂಡಿರುತ್ತದೆ. ಇದು ನೋಡಲು ಸ್ವಲ್ಪ ದೋಣಿಯಾಕಾರದಲ್ಲಿರುತ್ತದೆ. ಖೋಯಾ, ಸೂಜಿ, ಸಕ್ಕರೆ ಮತ್ತು ಒಣ ಹಣ್ಣುಗಳ ಮಿಶ್ರಣದಿಂದ ತಯಾರಾಗುವ ಈ ಸಹಿ ತಿಂಡಿಯ ಪಾಕವಿಧಾನ ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದು. ದೀರ್ಘ ವಿಧಾನದಲ್ಲಿ ತಯಾರಿಸಬೇಕಾಗಿರುವುದರಿಂದ ಪಾಕವಿಧಾನಕ್ಕೂ ಮುಂಚೆ ನಿಖರವಾದ ಯೋಜನೆಯನ್ನು ಹೊಂದಿರಬೇಕು.

ಮನೆಯಲ್ಲಿ ಈ ರುಚಿಕರವಾದ ಸಿಹಿಯನ್ನು ತಯಾರಿಸಲು ಉತ್ಸುಕರಾಗಿದ್ದರೆ, ನಾವಿಲ್ಲಿ ನೀಡಿರುವ ವಿಡಿಯೋ ಪಾಕವಿಧಾನ ಮತ್ತು ಹಂತ ಹಂತವಾದ ಚಿತ್ರವಿವರಣೆಯ ಮೊರೆಹೋಗಬಹುದು.

ಗುಜಿಯಾ ವಿಡಿಯೋ ರೆಸಿಪಿ

gujiya recipe
ಗುಜಿಯಾ ರೆಸಿಪಿ | ಗುಜಿಯಾ ವಿಡಿಯೋ ರೆಸಿಪಿ | ಫ್ರೈಡ್ ಖೋಯಾ ಗುಜಿಯಾ ರೆಸಿಪಿ
ಗುಜಿಯಾ ರೆಸಿಪಿ | ಗುಜಿಯಾ ವಿಡಿಯೋ ರೆಸಿಪಿ | ಫ್ರೈಡ್ ಖೋಯಾ ಗುಜಿಯಾ ರೆಸಿಪಿ
Prep Time
1 Hours
Cook Time
2H
Total Time
3 Hours

Recipe By: ಪ್ರಿಯಾಂಕಾ ತ್ಯಾಗಿ

Recipe Type: ಸಿಹಿ ತಿಂಡಿ

Serves: 12 ಕರ್ಜಿಕೈ/ಗುಜಿಯಾ

Ingredients
 • ತುಪ್ಪ - 5 ಟೀ ಚಮಚ

  ಎಲ್ಲಾ ಉದ್ದೇಶದ ಹಿಟ್ಟು (ಮೈದಾ) - 2 ಕಪ್‍ಗಳು

  ಉಪ್ಪು - 1/2 ಟೀ ಚಮಚ

  ನೀರು - 1/2 ಕಪ್

  ಸೂಜಿ ರವೆ - 1/2 ಕಪ್

  ಖೋಯಾ (ಮಾವಾ) - 200 ಗ್ರಾಂ

  ಹಚ್ಚಿಕೊಂಡ ಗೋಡಂಬಿ - 1/2 ಕಪ್

  ಹಚ್ಚಿಕೊಂಡ ಬಾದಾಮಿ - 1/2 ಕಪ್

  ಒಣದ್ರಾಕ್ಷಿ -15-18

  ಸಕ್ಕರೆ ಹಿಟ್ಟು/ಪುಡಿ - 3/4 ಕಪ್

  ಏಲಕ್ಕಿ ಪುಡಿ - 1/2 ಟಿಚಮಚ

  ಎಣ್ಣೆ - ಕರಿಯಲು

  ಕರ್ಜಿಕಾಯಿ/ಗುಜಿಯಾ ತಯಾರಿಸುವ ಅಚ್ಚು

Red Rice Kanda Poha
How to Prepare
 • 1. ಒಂದು ದೊಡ್ಡ ಪಾತ್ರೆ/ಬೌಲ್‍ನಲ್ಲಿ ಮೈದಾ ಮತ್ತು 3 ಟೀ ಚಮಚ ತುಪ್ಪವನ್ನು ಹಾಕಿ.

  2. ಚೆನ್ನಾಗಿ ಮಿಶ್ರಗೊಳಿಸಿ, 1/4 ಕಪ್ ನೀರನ್ನು ಸ್ವಲ್ಪ ಸ್ವಲ್ಪವಾಗಿಯೇ ಸೇರಿಸುತ್ತಾ ಹಿಟ್ಟನ್ನು ನಾದಿಕೊಳ್ಳಿ/ಕಲಸಿ. ಇದು ಗಟ್ಟಿಯಾದ ಮಿಶ್ರಣವಾಗಬೇಕು.

  3. 2-3 ಹನಿ ತುಪ್ಪವನ್ನು ಸೇರಿಸಿ ಇನ್ನೊಮ್ಮೆ ಕಲಸಿ

  4. ಮಿಶ್ರಣಕ್ಕೊಂದು ಸುಚಿಯಾದ ತೇವಾಂಶದಿಂದ ಕೂಡಿದ ಬಟ್ಟೆಯನ್ನು ಮುಚ್ಚಿ, 30 ನಿಮಿಷಗಳಕಾಲ ಬಿಡಿ.

  5. ಈ ಸಮಯದಲ್ಲೇ ಒಂದು ಬಾಣಲೆಯಲ್ಲಿ ಸೂಜಿ ರವೆಯನ್ನು ಹಾಕಿ ಹುರಿಯಿರಿ. ಇದು ಹೊಂಬಣ್ಣಕ್ಕೆ ತಿರುಗಿ, ಹುರಿದ ಪರಿಮಳ ಬರಲು ಆರಂಭವಾದ ತಕ್ಷಣ ಕೆಳಗಿಳಿಸಿ, ಸಂಪೂರ್ಣವಾಗಿ ಆರಲು ಬಿಡಿ.

  6. ನಂತರ ಒಂದು ದಪ್ಪ ತಳದ ಪಾತ್ರೆಯಲ್ಲಿ ಖೋಯಾವನ್ನು ಹಾಕಿ, ಬಿಸಿ ಮಾಡಿ.

  7. ಇದಕ್ಕೆ 1/2 ಟೀಚಮಚ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

  8. ತಳ ಹಿಡಿಯದಂತೆ ನಿರಂತರವಾಗಿ ತಿರುವುತ್ತಿರಿ. ಖೋಯಾ ಪಾತ್ರೆಯ ಸುತ್ತಲು ಬಿಡುತ್ತಾ ಬಂದು, ಮಧ್ಯಭಾಗದಲ್ಲಿ ಸೇರಿಕೊಳ್ಳಬೇಕು.

  9. ಆಗ ಉರಿಯನ್ನು ಆರಿಸಿ. ಒಂದೆಡೆ ಸಂಪೂರ್ಣವಾಗಿ ಆರಲು ಇಡಿ.

  10. ಬಿಸಿಯಾದ ಒಂದು ಪಾತ್ರೆ/ಬಾಣಲಿಯಲ್ಲಿ 1/2 ಟೀ ಚಮಚ ತುಪ್ಪವನ್ನು ಹಾಕಿ ಬಿಸಿಮಾಡಿ.

  11. ಅದಕ್ಕೆ ಹೆಚ್ಚಿಕೊಂಡ ಗೋಡಂಬಿ, ಬಾದಾಮಿ ಮತ್ತು ಒಣದ್ರಾಕ್ಷಿಯನ್ನು ಸೇರಿಸಿ ಹುರಿಯಿರಿ.

  12. ಒಣ ಹಣ್ಣುಗಳು ಸಂಪೂರ್ಣವಾಗಿ ಹುರಿಯುವವರೆಗೂ ತಿರುವುತ್ತಿರಿ.

  13. ಉರಿಯನ್ನು ಆರಿಸಿ. ಇವು ಸಂಪೂರ್ಣವಾಗಿ ಆರಲು ಒಂದೆಡೆ ಇಡಿ.

  14. ಆರಿದ ಖೋಯಾ ಜೊತೆಗೆ ಸೂಜಿ ರವೆಯನ್ನು ಸೇರಿಸಿ.

  15. ಇವುಗಳೊಂದಿಗೆ ಹುರಿದುಕೊಂಡ ಒಣ ಹಣ್ಣು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಇದಕ್ಕೆ ಸಕ್ಕರೆ ಸೇರಿಸುವ ಮುನ್ನ ಎಲ್ಲಾ ಸಾಮಾಗ್ರಿಗಳು ಸಂಪೂರ್ಣವಾಗಿ ತಣಿದಿರಬೇಕು.

  16. ಈಗ ಸಕ್ಕರೆ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

  17. ನಿಮ್ಮ ಅಂಗೈಗೆ ಎಣ್ಣೆಯನ್ನು ಸವರಿಕೊಳ್ಳಿ.

  18. ಈ ಸಿಹಿ ಹೂರಣವನ್ನು ಅಂಗೈಲಿ ಹಾಕಿಕೊಂಡು, ಚಿಕ್ಕ ಚಿಕ್ಕ ಪೇಡೆಯ ಗಾತ್ರದಲ್ಲಿ, ಮೃದುವಾದ ಉಂಡೆಯನ್ನು ಮಾಡಿಕೊಳ್ಳಿ.

  19. ಮೈದಾ ಹಿಟ್ಟಿನ ಮಿಶ್ರಣವನ್ನು ಪುರಿಯ ಆಕೃತಿಯಲ್ಲಿ ಲಟ್ಟಿಸಿಕೊಳ್ಳಿ.

  20. ಗುಜಿಯಾ ಅಚ್ಚಿನ ಒಳ ಭಾಗದಲ್ಲಿ ಎಣ್ಣೆಯನ್ನು ಸವರಿ.

  21. ಲಟ್ಟಿಸಿಕೊಂಡ ಪೂರಿಯ ಹಿಟ್ಟನ್ನು ಅಚ್ಚಿನಲ್ಲಿ ಇರಿಸಿ.

  22. ಖೋಯಾ ಮಿಶ್ರಣದ ಉಂಡೆಯನ್ನು ಮಧ್ಯದಲ್ಲಿ ಇರಿಸಿ. ಸುತ್ತಲು ನೀರನ್ನು ಅನ್ವಯಿಸಿ. ಹೀಗೆ ಮಾಡುವುದರಿಂದ ಕರ್ಜಿಕಾಯಿ /ಗುಜಿಯಾ ಸರಿಯಾದ ಆಕಾರದಲ್ಲಿ ಅಂಟಿಕೊಳ್ಳುತ್ತದೆ.

  23. ಅಚ್ಚನ್ನು ಮುಚ್ಚಿ. ಸುತ್ತಲೂ ಸರಿಯಾಗಿ ಒತ್ತಿ.

  24. ಹೆಚ್ಚುವರಿ ಹಿಟ್ಟನ್ನು ತೆಗೆದು, ಉಳಿದ ಹಿಟ್ಟಿಗೆ ಸೇರಿಸಿ.

  25. ಅಚ್ಚಿನ ಸುತ್ತಲು ಸರಿಯಾಗಿ ಒತ್ತಿ. ನಂತರ ಅಚ್ಚಿನಿಂದ ಕರ್ಜಿಕಾಯಿ /ಗುಜಿಯಾವನ್ನು ಹೊರ ತೆಗೆಯಿರಿ.

  26. ಗುಜಿಯಾ/ಕರ್ಜಿಕೈಅನ್ನು ಒಂದು ಬಟ್ಟೆಯಿಂದ ಮುಚ್ಚಿ.

  27. ಒಂದು ದಪ್ಪ ತಳದ ಪಾತ್ರೆಯಲ್ಲಿ ಕರಿಯಲು ಬೇಕಾದಷ್ಟು ಎಣ್ಣೆಯನ್ನು ಹಾಕಿ, ಸಾಮಾನ್ಯ ಉರಿಯಲ್ಲಿ ಬಿಸಿ ಮಾಡಿ.

  28. ಎಣ್ಣೆ ಬಿಸಿಯಾಗಿದೆಯೇ ಎಂದು ತಿಳಿಯಲು ಒಂದು ಚಿಕ್ಕ ಮೈದಾ ಹಿಟ್ಟಿನ ಉಂಡೆಯನ್ನು ಎಣ್ಣೆಯಲ್ಲಿ ಬಿಡಿ. ಆಗ ಆ ಉಂಡೆ ತಕ್ಷಣವೇ ನೊರೆಗಳೊಂದಿಗೆ ಮೇಲೆ ತೇಲಿ ಬಂದರೆ ಎಣ್ಣೆ ಕಾದಿದೆ ಎಂದರ್ಥ.

  29. ತಕ್ಷಣವೇ ತಯಾರು ಮಾಡಿಕೊಂಡಿರುವ ಕರ್ಜಿಕಾಯಿ/ಗುಜಿಯಾವನ್ನು ಹಾಕಿ, ಸಾಮಾನ್ಯ ಉರಿಯಲ್ಲಿ ಕರಿಯಿರಿ.

  30. ಎರಡು ಭಾಗದಲ್ಲೂ ಸರಿಯಾಗಿ ಬೇಯುವಂತೆ ಕೈಯಾಡಿಸುತ್ತಿರಿ. ಇದು ಹೊಂಬಣ್ಣಕ್ಕೆ ತಿರುಗಿ, ನೊರೆಗಳು ಕಡಿಮೆಯಾದರೆ ಬೆಂದಿದೆ ಎಂದರ್ಥ.(ಪ್ರತಿಯೊಂದು ಗುಜಿಯಾ/ಕರ್ಜಿಕಾಯಿ ಬೇಯಲು 10-15 ನಿಮಿಷ ಬೇಕಾಗುವುದು)

  31. ಬೆಂದ ತಕ್ಷಣ ಸರ್ವಿಂಗ್ ಬೌಲ್‍ಗೆ ವರ್ಗಾಯಿಸಿ.

Instructions
 • 1. ಗಟ್ಟಿಯಾದ ಹಿಟ್ಟನ್ನು ತಯಾರಿಸುವಾಗ ಸ್ವಲ್ಪ ನೀರನ್ನೇ ಬಳಸಬೇಕು. ಹಿಟ್ಟು ಜಿಗುಟಾದ/ಮೇಣದ ರೀತಿಯಲ್ಲಿ ಇರಬಾರದು.
 • 2. ಹಿಟ್ಟು ಒಣಗಿದಂತೆ ಆಗುವುದನ್ನು ತಪ್ಪಿಸಲು ತೇವಾಂಶದಿಂದ ಕೂಡಿರುವ ಬಟ್ಟೆಯನ್ನೇ ಮುಚ್ಚಿಡಬೇಕು.
 • 3. ಸೂಜಿ ರವೆ ಹುರಿದ ಪರಿಮಳ ಬರುವವರೆಗೂ ಚೆನ್ನಾಗಿ ಹುರಿಯಬೇಕು.
 • 4. ಹಿಟ್ಟನ್ನು ಪೂರಿಯ ರೀತಿ ಲಟ್ಟಿಸಿಕೊಳ್ಳುವಾಗ, ಉಳಿದ ಹಿಟ್ಟನ್ನು ಬಟ್ಟೆಯಿಂದ ಮುಚ್ಚಿಟ್ಟಿರಬೇಕು. ಇಲ್ಲವಾದರೆ ಹಿಟ್ಟು ಒಣಗಿದಂತಾಗುತ್ತದೆ.
 • 5. ಲಟ್ಟಿಸಿಕೊಳ್ಳುವ ಪೂರಿಯು ಅಚ್ಚಿಗಿಂತ ಒಂದು ಇಂಚು ದೊಡ್ಡದಾಗಿರಬೇಕು. ಆಗಲೇ ಆಕಾರವೂ ಸರಿಯಾಗಿ ಬರುತ್ತದೆ.
 • 6. ಕರ್ಜಿಕಾಯಿ/ಗುಜಿಯಾ ಒಳಗೆ ತುಂಬುವ ಹೂರಣವು ಅತಿಯಾದರೆ, ಎಣ್ಣೆಯಲ್ಲಿ ಕರಿಯುವಾಗ ಬಾಯಿ ಬಿಟ್ಟುಕೊಳ್ಳೂವುದು.
 • 7. ಅಚ್ಚಿನ ಸಂಧಿಯಲ್ಲಿ ನೀರನ್ನು ಅನ್ವಯಿಸಿಕೊಳ್ಳಬೇಕು. ಆಗಲೇ ಅಚ್ಚು ಸರಿಯಾಗಿ ಮುಚ್ಚಿಕೊಂಡು ಸುಂದರ ಆಕಾರ ಬರುವುದು.', 8. ಬೇರೆ ರೀತಿಯ ಸಿಹಿ ಮಿಶ್ರಣದಿಂದಲೂ ಈ ತಿಂಡಿಯನ್ನು ತಯಾರಿಸಬಹುದು.
 • 9. ಎಣ್ಣೆಯಲ್ಲಿ ಕರಿದ ನಂತರ ತಕ್ಷಣವೇ ಸಕ್ಕರೆ ಪುಡಿಯಲ್ಲೂ ಸಹ ಹೊರಳಾಡಿಸಬಹುದು.
Nutritional Information
 • ಸರ್ವಿಂಗ್ ಸೈಜ್ - 1 ಕರ್ಜಿಕೈ
 • ಕ್ಯಾಲೋರಿ - 200 ಕ್ಯಾಲ್
 • ಫ್ಯಾಟ್ - 8 ಗ್ರಾಂ
 • ಪ್ರೋಟೀನ್ - 2 ಗ್ರಾಂ
 • ಕಾರ್ಬೋಹೈಡ್ರೇಟ್ - 30 ಗ್ರಾಂ
 • ಸಕ್ಕರೆ - 18 ಗ್ರಾಂ
 • ಫೈಬರ್ - 1 ಗ್ರಾಂ
 • ಕಬ್ಬಿಣ - ಶೇ.8
 • ವಿಟಮಿನ್ ಎ - ಶೇ.2

ಗುಜಿಯಾ ತಯಾರಿಸುವ ವಿಧಾನ:

1. ಒಂದು ದೊಡ್ಡ ಪಾತ್ರೆ/ಬೌಲ್‍ನಲ್ಲಿ ಮೈದಾ ಮತ್ತು 3 ಟೀ ಚಮಚ ತುಪ್ಪವನ್ನು ಹಾಕಿ.

gujiya recipe
gujiya recipe

2. ಚೆನ್ನಾಗಿ ಮಿಶ್ರಗೊಳಿಸಿ, 1/4 ಕಪ್ ನೀರನ್ನು ಸ್ವಲ್ಪ ಸ್ವಲ್ಪವಾಗಿಯೇ ಸೇರಿಸುತ್ತಾ ಹಿಟ್ಟನ್ನು ನಾದಿಕೊಳ್ಳಿ/ಕಲಸಿ. ಇದು ಗಟ್ಟಿಯಾದ ಮಿಶ್ರಣವಾಗಬೇಕು.

gujiya recipe
gujiya recipe

3. 2-3 ಹನಿ ತುಪ್ಪವನ್ನು ಸೇರಿಸಿ ಇನ್ನೊಮ್ಮೆ ಕಲಸಿ.

gujiya recipe

4. ಮಿಶ್ರಣಕ್ಕೊಂದು ಸುಚಿಯಾದ ತೇವಾಂಶದಿಂದ ಕೂಡಿದ ಬಟ್ಟೆಯನ್ನು ಮುಚ್ಚಿ, 30 ನಿಮಿಷಗಳಕಾಲ ಬಿಡಿ.

gujiya recipe
gujiya recipe

5. ಈ ಸಮಯದಲ್ಲೇ ಒಂದು ಬಾಣಲೆಯಲ್ಲಿ ಸೂಜಿ ರವೆಯನ್ನು ಹಾಕಿ ಹುರಿಯಿರಿ. ಇದು ಹೊಂಬಣ್ಣಕ್ಕೆ ತಿರುಗಿ, ಹುರಿದ ಪರಿಮಳ ಬರಲು ಆರಂಭವಾದ ತಕ್ಷಣ ಕೆಳಗಿಳಿಸಿ, ಸಂಪೂರ್ಣವಾಗಿ ಆರಲು ಬಿಡಿ.

gujiya recipe
gujiya recipe
gujiya recipe

6. ನಂತರ ಒಂದು ದಪ್ಪ ತಳದ ಪಾತ್ರೆಯಲ್ಲಿ ಖೋಯಾವನ್ನು ಹಾಕಿ, ಬಿಸಿ ಮಾಡಿ.

gujiya recipe

7. ಇದಕ್ಕೆ 1/2 ಟೀಚಮಚ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

gujiya recipe

8. ತಳ ಹಿಡಿಯದಂತೆ ನಿರಂತರವಾಗಿ ತಿರುವುತ್ತಿರಿ. ಖೋಯಾ ಪಾತ್ರೆಯ ಸುತ್ತಲು ಬಿಡುತ್ತಾ ಬಂದು, ಮಧ್ಯಭಾಗದಲ್ಲಿ ಸೇರಿಕೊಳ್ಳಬೇಕು.

gujiya recipe
gujiya recipe

9. ಆಗ ಉರಿಯನ್ನು ಆರಿಸಿ. ಒಂದೆಡೆ ಸಂಪೂರ್ಣವಾಗಿ ಆರಲು ಇಡಿ.

gujiya recipe

10. ಬಿಸಿಯಾದ ಒಂದು ಪಾತ್ರೆ/ಬಾಣಲಿಯಲ್ಲಿ 1/2 ಟೀ ಚಮಚ ತುಪ್ಪವನ್ನು ಹಾಕಿ ಬಿಸಿಮಾಡಿ.

gujiya recipe

11. ಅದಕ್ಕೆ ಹೆಚ್ಚಿಕೊಂಡ ಗೋಡಂಬಿ, ಬಾದಾಮಿ ಮತ್ತು ಒಣದ್ರಾಕ್ಷಿಯನ್ನು ಸೇರಿಸಿ ಹುರಿಯಿರಿ.

gujiya recipe
gujiya recipe
gujiya recipe

12. ಒಣ ಹಣ್ಣುಗಳು ಸಂಪೂರ್ಣವಾಗಿ ಹುರಿಯುವವರೆಗೂ ತಿರುವುತ್ತಿರಿ.

gujiya recipe

13. ಉರಿಯನ್ನು ಆರಿಸಿ. ಇವು ಸಂಪೂರ್ಣವಾಗಿ ಆರಲು ಒಂದೆಡೆ ಇಡಿ.

gujiya recipe

14. ಆರಿದ ಖೋಯಾ ಜೊತೆಗೆ ಸೂಜಿ ರವೆಯನ್ನು ಸೇರಿಸಿ.

gujiya recipe
gujiya recipe

15. ಇವುಗಳೊಂದಿಗೆ ಹುರಿದುಕೊಂಡ ಒಣ ಹಣ್ಣು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಇದಕ್ಕೆ ಸಕ್ಕರೆ ಸೇರಿಸುವ ಮುನ್ನ ಎಲ್ಲಾ ಸಾಮಾಗ್ರಿಗಳು ಸಂಪೂರ್ಣವಾಗಿ ತಣಿದಿರಬೇಕು.

gujiya recipe
gujiya recipe

16. ಈಗ ಸಕ್ಕರೆ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

gujiya recipe
gujiya recipe

17. ನಿಮ್ಮ ಅಂಗೈಗೆ ಎಣ್ಣೆಯನ್ನು ಸವರಿಕೊಳ್ಳಿ.

gujiya recipe

18. ಈ ಸಿಹಿ ಹೂರಣವನ್ನು ಅಂಗೈಲಿ ಹಾಕಿಕೊಂಡು, ಚಿಕ್ಕ ಚಿಕ್ಕ ಪೇಡೆಯ ಗಾತ್ರದಲ್ಲಿ, ಮೃದುವಾದ ಉಂಡೆಯನ್ನು ಮಾಡಿಕೊಳ್ಳಿ.

gujiya recipe

19. ಮೈದಾ ಹಿಟ್ಟಿನ ಮಿಶ್ರಣವನ್ನು ಪುರಿಯ ಆಕೃತಿಯಲ್ಲಿ ಲಟ್ಟಿಸಿಕೊಳ್ಳಿ.

gujiya recipe

20. ಗುಜಿಯಾ ಅಚ್ಚಿನ ಒಳ ಭಾಗದಲ್ಲಿ ಎಣ್ಣೆಯನ್ನು ಸವರಿ.

gujiya recipe

21. ಲಟ್ಟಿಸಿಕೊಂಡ ಪೂರಿಯ ಹಿಟ್ಟನ್ನು ಅಚ್ಚಿನಲ್ಲಿ ಇರಿಸಿ.

gujiya recipe

22. ಖೋಯಾ ಮಿಶ್ರಣದ ಉಂಡೆಯನ್ನು ಮಧ್ಯದಲ್ಲಿ ಇರಿಸಿ. ಸುತ್ತಲು ನೀರನ್ನು ಅನ್ವಯಿಸಿ. ಹೀಗೆ ಮಾಡುವುದರಿಂದ ಕರ್ಜಿಕಾಯಿ /ಗುಜಿಯಾ ಸರಿಯಾದ ಆಕಾರದಲ್ಲಿ ಅಂಟಿಕೊಳ್ಳುತ್ತದೆ.

gujiya recipe
gujiya recipe

23. ಅಚ್ಚನ್ನು ಮುಚ್ಚಿ. ಸುತ್ತಲೂ ಸರಿಯಾಗಿ ಒತ್ತಿ.

gujiya recipe
gujiya recipe

24. ಹೆಚ್ಚುವರಿ ಹಿಟ್ಟನ್ನು ತೆಗೆದು, ಉಳಿದ ಹಿಟ್ಟಿಗೆ ಸೇರಿಸಿ.

gujiya recipe

25. ಅಚ್ಚಿನ ಸುತ್ತಲು ಸರಿಯಾಗಿ ಒತ್ತಿ. ನಂತರ ಅಚ್ಚಿನಿಂದ ಕರ್ಜಿಕಾಯಿ /ಗುಜಿಯಾವನ್ನು ಹೊರ ತೆಗೆಯಿರಿ.

gujiya recipe
gujiya recipe
gujiya recipe

26. ಗುಜಿಯಾ/ಕರ್ಜಿಕೈಅನ್ನು ಒಂದು ಬಟ್ಟೆಯಿಂದ ಮುಚ್ಚಿ.

gujiya recipe

27. ಒಂದು ದಪ್ಪ ತಳದ ಪಾತ್ರೆಯಲ್ಲಿ ಕರಿಯಲು ಬೇಕಾದಷ್ಟು ಎಣ್ಣೆಯನ್ನು ಹಾಕಿ, ಸಾಮಾನ್ಯ ಉರಿಯಲ್ಲಿ ಬಿಸಿ ಮಾಡಿ.

gujiya recipe

28. ಎಣ್ಣೆ ಬಿಸಿಯಾಗಿದೆಯೇ ಎಂದು ತಿಳಿಯಲು ಒಂದು ಚಿಕ್ಕ ಮೈದಾ ಹಿಟ್ಟಿನ ಉಂಡೆಯನ್ನು ಎಣ್ಣೆಯಲ್ಲಿ ಬಿಡಿ. ಆಗ ಆ ಉಂಡೆ ತಕ್ಷಣವೇ ನೊರೆಗಳೊಂದಿಗೆ ಮೇಲೆ ತೇಲಿ ಬಂದರೆ ಎಣ್ಣೆ ಕಾದಿದೆ ಎಂದರ್ಥ.

gujiya recipe

29. ತಕ್ಷಣವೇ ತಯಾರು ಮಾಡಿಕೊಂಡಿರುವ ಕರ್ಜಿಕಾಯಿ/ಗುಜಿಯಾವನ್ನು ಹಾಕಿ, ಸಾಮಾನ್ಯ ಉರಿಯಲ್ಲಿ ಕರಿಯಿರಿ.

gujiya recipe

30. ಎರಡು ಭಾಗದಲ್ಲೂ ಸರಿಯಾಗಿ ಬೇಯುವಂತೆ ಕೈಯಾಡಿಸುತ್ತಿರಿ. ಇದು ಹೊಂಬಣ್ಣಕ್ಕೆ ತಿರುಗಿ, ನೊರೆಗಳು ಕಡಿಮೆಯಾದರೆ ಬೆಂದಿದೆ ಎಂದರ್ಥ.(ಪ್ರತಿಯೊಂದು ಗುಜಿಯಾ/ಕರ್ಜಿಕಾಯಿ ಬೇಯಲು 10-15 ನಿಮಿಷ ಬೇಕಾಗುವುದು).

gujiya recipe
gujiya recipe
gujiya recipe

31. ಬೆಂದ ತಕ್ಷಣ ಸರ್ವಿಂಗ್ ಬೌಲ್‍ಗೆ ವರ್ಗಾಯಿಸಿ.

gujiya recipe
gujiya recipe
[ 4.5 of 5 - 26 Users]
Story first published: Thursday, August 10, 2017, 14:38 [IST]
Subscribe Newsletter