Latest Updates
-
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ! -
ಬಿಗ್ ಬಾಸ್ ಕನ್ನಡ 13: ಈ ವಾರ ಎಲಿಮಿನೇಷನ್ ಇಲ್ಲವೇ? ಭಾವುಕ ಪತ್ರಗಳೇ ಬದಲಾಯಿಸಿದ ಆಟದ ಸಮೀಕರಣ! -
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ!
ಹೊಸ ರುಚಿಯ ಚಟ್ನಿ.. 10 ನಿಮಿಷದಲ್ಲಿ ಈ ಕೇರಳ ಶೈಲಿಯ ಚಟ್ನಿ ಮಾಡಿ! ಇಡ್ಲಿ-ದೋಸೆ ರುಚಿ ಡಬಲ್ ಪಕ್ಕಾ
ಹೊಸ ರುಚಿಯ ಚಟ್ನಿ! 10 ನಿಮಿಷದಲ್ಲಿ ಸಿದ್ಧ.. ಇಡ್ಲಿ ದೋಸೆಗೆ ಪರ್ಫೆಕ್ಟ್ ಕಾಂಬಿನೇಷನ್. ಕೇರಳ ಶೈಲಿಯ ಚಟ್ನಿ ಮಾಡಿ ನೋಡಿ. ಹೌದು, ದಕ್ಷಿಣ ಭಾರತದ ಸಾಂಬಾರ ಪದಾರ್ಥಗಳ ತವರೂರಾದ ಕೇರಳ, ತನ್ನ ವಿಶಿಷ್ಟ ಅಡುಗೆ ಶೈಲಿಗೆ ಹೆಸರುವಾಸಿ. ಇಡ್ಲಿ-ದೋಸೆಯಂತಹ ನಿತ್ಯ ಉಪಹಾರಗಳಿಗೆ ತೆಂಗಿನಕಾಯಿ ಚಟ್ನಿಯಿಂದ (Chutne) ಬೇಸರಗೊಂಡವರಿಗೆ, ಕೇರಳ ಶೈಲಿಯ ಪೇರಲ ಹಣ್ಣು ಮತ್ತು ತೆಂಗಿನಕಾಯಿ ಚಟ್ನಿ (Kerala Style Guava Chutney) ಹೊಸ ರುಚಿ ನೀಡುತ್ತದೆ.
ಪೇರಲ (Guava) ಹಣ್ಣನ್ನು ಸಾಮಾನ್ಯವಾಗಿ ಹಾಗೆಯೇ ಅಥವಾ ಉಪ್ಪು-ಖಾರ ಸೇರಿಸಿ ಸವಿಯಲಾಗುತ್ತದೆ. ಆದರೆ ನಿಮ್ಮ ಬೆಳಗಿನ ಉಪಹಾರಕ್ಕೆ ಆರೋಗ್ಯಕರ ಹಾಗೂ ವಿಶಿಷ್ಟ ಸ್ವಾದ ಬೇಕಿದ್ದರೆ, ಕೇರಳದ ಈ ವಿಶೇಷ ಚಟ್ನಿ ಅತ್ಯುತ್ತಮ ಆಯ್ಕೆ. ರುಚಿಯ ಜೊತೆಗೆ ಆರೋಗ್ಯವೂ: ಪೇರಲ ಹಣ್ಣು ನಾರಿನಂಶ ಮತ್ತು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಗೆ ಸಹಕರಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಚಟ್ನಿಯಲ್ಲಿ ಬಳಸುವ ತೆಂಗಿನ ಎಣ್ಣೆ ಮತ್ತು ಹಸಿ ಶುಂಠಿ ಪೌಷ್ಟಿಕಾಂಶದ ಮೌಲ್ಯವನ್ನು ವೃದ್ಧಿಸುತ್ತದೆ. ಆರೋಗ್ಯಕರ ಪೇರಲ ಮತ್ತು ತೆಂಗಿನಕಾಯಿಯ ಸಮ್ಮಿಶ್ರಣವಿರುವ ಈ ಸುಲಭ ರೆಸಿಪಿ ಮಾಡಲು ಬೇಕಾಗುವ ಸಾಮಗ್ರಿಗಳು & ತಯಾರಿಸುವ ಸರಳ ವಿಧಾನ ಇಲ್ಲಿದೆ.
ಪೇರಲ ಚಟ್ನಿಗೆ ಬೇಕಾಗುವ ಸಾಮಗ್ರಿಗಳು
• ಪೇರಲ ಹಣ್ಣು - ಒಂದು
• ಹಸಿ ತೆಂಗಿನಕಾಯಿ - ½ ಕಪ್
• ಹಸಿ ಮೆಣಸಿನಕಾಯಿ - ಖಾರಕ್ಕೆ ತಕ್ಕಂತೆ
• ಹಸಿ ಶುಂಠಿ - ಒಂದು ಸಣ್ಣ ತುಂಡು
• ಕರಿಬೇವು - ಎಂಟು ಎಲೆಗಳು
• ಹುಣಸೆ ಹಣ್ಣಿನ ರಸ - ಒಂದು ಚಮಚ
• ಉಪ್ಪು - ರುಚಿಗೆ ತಕ್ಕಷ್ಟು
• ನೀರು - ಅಗತ್ಯಕ್ಕೆ ತಕ್ಕಂತೆ
ಒಗ್ಗರಣೆಗೆ
• ಎಣ್ಣೆ - ಒಂದು ಚಮಚ (ತೆಂಗಿನ ಎಣ್ಣೆ - ಕೇರಳದ ಸ್ವಾದಕ್ಕೆ ಅಗತ್ಯ)
• ಸಾಸಿವೆ - ½ ಚಮಚ
• ಒಣ ಮೆಣಸಿನಕಾಯಿ - ಒಂದು
• ಕರಿಬೇವು - ಆರು ಎಲೆಗಳು
ಪೇರಲ ಚಟ್ನಿ ತಯಾರಿಸುವ ವಿಧಾನ
- ಮೊದಲು, ಸಣ್ಣದಾಗಿ ಹೆಚ್ಚಿದ ಪೇರಲ ಹಣ್ಣಿನ ತುಂಡುಗಳು (ಬೀಜಗಳಿದ್ದರೆ ತೆಗೆಯಿರಿ), ತುರಿದ ತೆಂಗಿನಕಾಯಿ, ಹಸಿಮೆಣಸಿನಕಾಯಿ, ಶುಂಠಿ, ಕರಿಬೇವು, ಹುಣಸೆಹಣ್ಣು ಮತ್ತು ಉಪ್ಪನ್ನು ಮಿಕ್ಸರ್ ಜಾರ್ಗೆ ಹಾಕಿ. ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
- ಒಂದು ಸಣ್ಣ ಪ್ಯಾನ್ನಲ್ಲಿ ತೆಂಗಿನ ಎಣ್ಣೆ ಬಿಸಿ ಮಾಡಿ. ಕಾದ ನಂತರ ಸಾಸಿವೆ, ಒಣ ಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ ಫ್ರೈ ಮಾಡಿ.
- ತಯಾರಾದ ಬಿಸಿಬಿಸಿ ಒಗ್ಗರಣೆಯನ್ನು ರುಬ್ಬಿದ ಚಟ್ನಿಯ ಮೇಲೆ ಸುರಿಯಿರಿ. ಘಮಘಮಿಸುವ ಕೇರಳ ಶೈಲಿಯ ಪೇರಲ ಹಣ್ಣಿನ ಚಟ್ನಿ ಈಗ ಬಡಿಸಲು ಸಿದ್ಧ.
ಈ ಆಹಾರ ಜೋಡಿಗಳು
ಈ ವಿಶಿಷ್ಟ ಚಟ್ನಿ ಇಡ್ಲಿ ದೋಸೆಗೆ ಮಾತ್ರವಲ್ಲದೆ, ಗರಿಗರಿಯಾದ ವಡೆ, ಬಿಸಿಬಿಸಿ ಅಪ್ಪೆ, ಚಪಾತಿ ಅಥವಾ ಸ್ಯಾಂಡ್ವಿಚ್ ಜೊತೆಗೂ ರುಚಿಕರ. ಪೇರಲ ಹಣ್ಣಿನ ಲಘು ಸಿಹಿ ಮತ್ತು ಹಸಿಮೆಣಸಿನ ಖಾರದ ಸಮ್ಮಿಲನವು ನಾಲಿಗೆಗೆ ಹೊಸ ಅನುಭವ ನೀಡುತ್ತದೆ.
ಈ ಟ್ರಿಕ್ಸ್ ಫಾಲೋ ಮಾಡಿ
ಚಟ್ನಿಗಾಗಿ ಅತಿ ಹಣ್ಣಾದ ಅಥವಾ ಅತಿ ಕಾಯಿಯಾದ ಪೇರಲ ಹಣ್ಣನ್ನು ಬಳಸಬೇಡಿ. ಮಧ್ಯಮ ಹದದಲ್ಲಿ ಮಾಗಿದ ಹಣ್ಣು ಉತ್ತಮ. ಬೀಜಗಳು ಹೆಚ್ಚಿದ್ದರೆ, ರುಬ್ಬುವ ಮೊದಲು ಅವುಗಳನ್ನು ತೆಗೆದು ತಿರುಳನ್ನು ಮಾತ್ರ ಬಳಸುವುದರಿಂದ ಚಟ್ನಿ ನುಣ್ಣಗೆ ಬರುತ್ತದೆ.
ಒಟ್ಟಾರೆ, ಆರೋಗ್ಯ ಮತ್ತು ರುಚಿ ಎರಡನ್ನೂ ಹೊಂದಿರುವ ಈ ಕೇರಳ ಶೈಲಿಯ 'ಪೇರಲ ಹಣ್ಣು ಮತ್ತು ತೆಂಗಿನಕಾಯಿ ಚಟ್ನಿ' ಅನ್ನು ಹೊಸ ಅಡುಗೆ ಪ್ರಯೋಗಗಳನ್ನು ಇಷ್ಟಪಡುವವರು ಪ್ರಯತ್ನಿಸಬಹುದು. ಇಂದೇ ಈ ರೆಸಿಪಿಯನ್ನು ತಯಾರಿಸಿ ಸವಿಯಿರಿ. ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.



Click it and Unblock the Notifications

