Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
1 ವಾರ ಈ ಗ್ರೀನ್ ಆಮ್ಲೆಟ್ ತಿನ್ನಿ..!! ಬೇಗ ತೂಕ ಇಳಿದು, ಸಣ್ಣ ಆಗ್ತೀರಾ.. ನಿಮಗೆ ಹಸಿವೇ ಆಗಲ್ಲ!
ಈ ಗ್ರೀನ್ ಆಮ್ಲೆಟ್ 1 ವಾರ ತಿನ್ನಿ..! ನಿಮಗೆ ಹಸಿವಾಗಲ್ಲ.. ನೀವು ಸಣ್ಣ ಆಗೋದು ಖಚಿತ. ತೂಕ ಇಳಿಕೆಗೆ ನಂಬರ್ 1 ಬ್ರೇಕ್‌ಫಾಸ್ಟ್ ಇದು. ಹೌದು, ಇತ್ತೀಚಿನ ದಿನಗಳಲ್ಲಿ ದೇಹದ ತೂಕ ನಿರ್ವಹಣೆ ಮತ್ತು ಆರೋಗ್ಯದ ಬಗ್ಗೆ ಜನರ ಜಾಗೃತಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ, ಬೆಳಗಿನ ಉಪಾಹಾರವು ಮಹತ್ವದ ಪಾತ್ರ ವಹಿಸುತ್ತದೆ. ತೂಕ ಇಳಿಸುವ (Weight Loss) ಗುರಿ ಹೊಂದಿರುವವರಿಗೆ, ಪ್ರೋಟೀನ್ ಮತ್ತು ಅಗತ್ಯ ಪೋಷಕಾಂಶಗಳಿಂದ ಕೂಡಿದ ಆಹಾರ ಸೇವನೆ ಅತ್ಯಗತ್ಯ.
ಸಾಮಾನ್ಯವಾಗಿ ತಯಾರಿಸುವ ಮೊಟ್ಟೆ ಆಮ್ಲೆಟ್‌ಗೆ ಆರೋಗ್ಯಕರ ಟ್ವಿಸ್ಟ್ ನೀಡಿ ತಯಾರಿಸುವ 'ಗ್ರೀನ್ ಆಮ್ಲೆಟ್' (Green Omelette) ಇದಕ್ಕೊಂದು ಅತ್ಯುತ್ತಮ ಪರಿಹಾರವಾಗಿದೆ. ಗ್ರೀನ್ ಆಮ್ಲೆಟ್ ರುಚಿಯಷ್ಟೇ ಅಲ್ಲದೆ, ಪಾಲಕ್‌ನಂತಹ ಸೂಪರ್‌ಫುಡ್‌ಗಳನ್ನು ಒಳಗೊಂಡಿರುವುದರಿಂದ ತೂಕ ಇಳಿಕೆಗೆ ಉತ್ತಮ. ಪಾಲಕ್‌ನಲ್ಲಿರುವ ಕಬ್ಬಿಣಾಂಶ, ವಿಟಮಿನ್‌ಗಳು ಹಾಗೂ ಕಡಿಮೆ ಕ್ಯಾಲೋರಿ ಅಂಶವು ಇದನ್ನು ಪರಿಪೂರ್ಣ ಉಪಹಾರವನ್ನಾಗಿಸುತ್ತದೆ.
ತೂಕ ಇಳಿಕೆಗೆ ಹೇಗೆ ಸಹಕಾರಿ?
ಆರೋಗ್ಯಕರ ಗ್ರೀನ್ ಆಮ್ಲೆಟ್ ತೂಕ ಇಳಿಕೆಗೆ ಏಕೆ ಸಹಕಾರಿ? ಎಂಬುವುದು ಹಲವರ ಪ್ರಶ್ನೆ. ಮೊಟ್ಟೆಗಳು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದ್ದರೆ, ಪಾಲಕ್ ಸೊಪ್ಪು ಕಬ್ಬಿಣಾಂಶ ಮತ್ತು ವಿಟಮಿನ್ 'ಕೆ' ಯಿಂದ ಸಮೃದ್ಧವಾಗಿದೆ. ಈ ಎರಡರ ಸಂಯೋಜನೆಯಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸುಲಭವಾಗಿ ದೊರೆಯುತ್ತವೆ.
ಪ್ರೋಟೀನ್ ನಮ್ಮನ್ನು ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಭಾವನೆಯಲ್ಲಿಡುವ ಮೂಲಕ ಅನಗತ್ಯ ಆಹಾರ ಸೇವನೆಯನ್ನು ತಡೆಯುತ್ತದೆ, ಇದು ತೂಕ ಇಳಿಕೆಗೆ ಪೂರಕವಾಗಿದೆ. ಅಲ್ಲದೆ, ಈ ವಿಶೇಷ ಆಮ್ಲೆಟ್‌ನ ತಯಾರಿಕೆ ಕೂಡ ಅತಿ ಸರಳ. ತೂಕ ಇಳಿಕೆಗೆ ನೆರವಾಗುವ ಈ ಗ್ರೀನ್ ಆಮ್ಲೆಟ್ (Spinach Egg Omelette) ತಯಾರಿಸಲು ಬೇಕಾದ ಪದಾರ್ಥಗಳು ಹೀಗಿವೆ.
ಗ್ರೀನ್ ಆಮ್ಲೆಟ್‌ಗೆ ಬೇಕಾದ ಪದಾರ್ಥಗಳು
• ಮೊಟ್ಟೆ - 2
• ಪಾಲಕ್ ಸೊಪ್ಪು - 1 ಕಪ್
• ಚೀಸ್ - 1 ತುಂಡು
• ಮೆಣಸಿನ ಪುಡಿ - 1/2 ಚಮಚ
• ಕೊತ್ತಂಬರಿ ಸೊಪ್ಪು - ಸ್ವಲ್ಪ
• ಹಸಿ ಮೆಣಸಿನಕಾಯಿ - 1
• ಬೆಣ್ಣೆ - 1 ಚಮಚ
• ಹಾಲು - 1 ಚಮಚ
• ಉಪ್ಪು - ರುಚಿಗೆ ತಕ್ಕಷ್ಟು
ಗ್ರೀನ್ ಆಮ್ಲೆಟ್ ತಯಾರಿಸುವ ಸರಳ ವಿಧಾನ
ಪೌಷ್ಟಿಕಾಂಶಭರಿತ ಗ್ರೀನ್ ಆಮ್ಲೆಟ್ ತಯಾರಿಸುವ ಸರಳ ವಿಧಾನ ಇಲ್ಲಿದೆ. ಈ ಕೆಳಗಿನ ಹಂತಗಳನ್ನು ಬಳಸುವ ಮೂಲಕ ನೀವು ಹೆಲ್ದಿ ಆಮ್ಲೆಟ್ ರುಚಿ ಸವಿಯಬಹುದು.
- ಪಾಲಕ್ ಸಿದ್ಧತೆ: ಮೊದಲಿಗೆ, ಪಾಲಕ್ ಸೊಪ್ಪನ್ನು ಬಿಸಿ ನೀರಿನಲ್ಲಿ ಹಾಕಿ ಸ್ವಲ್ಪ ಸಮಯ ಬೇಯಿಸಿಕೊಳ್ಳಿ.
- ಈಗ ಮಿಶ್ರಣ ತಯಾರಿಕೆ: ಒಂದು ಬಟ್ಟಲಿಗೆ ಮೊಟ್ಟೆಗಳನ್ನೊಡೆದು, ಅದಕ್ಕೆ ಉಪ್ಪು, ಬೇಯಿಸಿದ ಪಾಲಕ್, ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಹಾಗೂ ಹಸಿ ಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಅಗತ್ಯವಿದ್ದರೆ, 1 ಚಮಚ ಹಾಲು ಸೇರಿಸಿ ಮಿಶ್ರಣವನ್ನು ಇನ್ನಷ್ಟು ಮೃದುಗೊಳಿಸಬಹುದು.
- ಆಮ್ಲೆಟ್ ತಯಾರಿಕೆ: ಒಲೆಯ ಮೇಲೆ ಆಮ್ಲೆಟ್ ಪ್ಯಾನ್ ಇಟ್ಟು, ಬೆಣ್ಣೆ ಸವರಿ ಬಿಸಿ ಮಾಡಿ.
- ಬೇಯಿಸುವುದು ಮತ್ತು ಚೀಸ್: ತಯಾರಿಸಿದ ಆಮ್ಲೆಟ್ ಮಿಶ್ರಣವನ್ನು ಬಿಸಿಯಾದ ಪ್ಯಾನ್‌ಗೆ ಹಾಕಿ ಹರಡಿ. ಅದರ ಮೇಲೆ ಚೀಸ್ ತುಂಡನ್ನು ತುರಿಯಿರಿ.
- ಸವಿಯುವುದು: ಎರಡೂ ಕಡೆ ಚೆನ್ನಾಗಿ ಬೆಂದ ನಂತರ ಈ ಆರೋಗ್ಯಕರ ಗ್ರೀನ್ ಆಮ್ಲೆಟ್ ಸವಿಯಿರಿ.
ಈ ಗ್ರೀನ್ ಆಮ್ಲೆಟ್ ದೇಹಕ್ಕೆ ಬೇಕಾದ ಶಕ್ತಿ ನೀಡುತ್ತದೆ. ಇದರ ಜೊತೆಗೆ, ತೂಕ ಇಳಿಕೆಯ ನಿಮ್ಮ ಪ್ರಯತ್ನಕ್ಕೆ ಅಗತ್ಯ ಬೆಂಬಲ ನೀಡುತ್ತದೆ. ಬೆಳಗಿನ ಉಪಾಹಾರದಲ್ಲಿ ಈ ಪೌಷ್ಟಿಕ ಆಮ್ಲೆಟ್ ಸೇರಿಸಿ ಆರೋಗ್ಯಕರ ಜೀವನಶೈಲಿ ಆರಂಭಿಸಿ.



Click it and Unblock the Notifications
