Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಘಮ್ಮೆನ್ನುವ ಹೆಸರು ಕಾಳು ದೋಸೆಯ ರುಚಿಗೆ ಮನ ಸೋಲದವರು ಉಂಟೇ?
ಬೆಳಗ್ಗೆ ಎದ್ದರೆ ಸಾಕಲು ಅಡುಗೆ ಮನೆಯಿಂದ ಬರುವ ದೋಸೆಯ ಶಬ್ದ ಕೇಳಿದರೆ ಬೆಳಗ್ಗೆ ತಿಂಡಿ ಮಾಡುವುದೇ ಬೇಡ ಎಂಬಂತಾಗಿ ಬಿಡುತ್ತದೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಇರುವವರಿಗೆ ಬೆಳಗ್ಗಿನ ಜಾವ ದೋಸೆ ತಿಂದು ತಿಂದು ಜಿಗುಪ್ಸೆಯೇ ಬಂದಿರುತ್ತದೆ.
ದಿನಬೆಳಗಾದರೆ ನೀರುದೋಸೆ, ಉದ್ದಿನ ದೋಸೆ, ಅವಲಕ್ಕಿ ದೋಸೆ, ಮೆಂತೆ ದೋಸೆಗಳನ್ನು ತಿಂದು ಸಾಕು ಸಾಕಾಗಿ ಹೋಗುತ್ತದೆ. ಹಾಗಾದರೆ ದೋಸೆಯನ್ನ ಬೇರೆ ಇನ್ಯಾವ ರೀತಿಯಲ್ಲಿ ತಯಾರಿಸಿ ಸೇವಿಸಬಹುದು ಎಂಬುದನ್ನು ನೀವು ಯೋಚಿಸುತ್ತಿದ್ದರೆ ಖಂಡಿತವಾಗಿಯೂ ನಿಮಗೊಂದು ಆರೋಗ್ಯಕರವಾದ ಹಾಗೂ ಸವಿ ಸವಿಯಾದ ದೋಸೆ ತಯಾರಿಸುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ :

ನಾವು ತಿನ್ನುವ ಆಹಾರ ಆರೋಗ್ಯಯುತವಾಗಿದ್ದರೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಒಳ್ಳೆಯದೇ. ಅದೇ ರೀತಿ ನಮ್ಮ ಆಹಾರ ರಂಗು ರಂಗಾಗಿದ್ದರೆ ಮಕ್ಕಳು ಅದನ್ನು ಹೆಚ್ಚು ಇಷ್ಟಪಡುತ್ತಾರೆ. ಹೀಗಾಗಿ ನೀವು ಬೆಳಗ್ಗಿನ ತಿಂಡಿಗೆ ಹೆಸರುಕಾಳಿನಿಂದ ತಯಾರಿಸಿದ ದೋಸೆಯನ್ನು ಮಾಡಿದರೆ ಖಂಡಿತವಾಗಿಯೂ ಎಲ್ಲರ ನಾಲಿಗೆ ರುಚಿಯನ್ನು ತಣಿಸಲು ನಿಮ್ಮಿಂದ ಸಾಧ್ಯವಿದೆ. ಹಾಗಾದರೆ ಹೆಸರುಕಾಳು ದೋಸೆಯನ್ನು ತಯಾರಿಸುವುದು ಹೇಗೆ...? ಇದಕ್ಕೆ ಬೇಕಾದ ಸಾಮಗ್ರಿಗಳೇನು ತಿಳಿದುಕೊಳ್ಳೋಣ
ಬೇಕಾಗುವ ಸಾಮಗ್ರಿಗಳು :
ಮೊಳಕೆಯೊಡೆದ ಹೆಸರುಕಾಳು : 2ಕಪ್,
ಈರುಳ್ಳಿ ಸಣ್ಣಗೆ ಕತ್ತರಿಸಿದ್ದು 1ಕಪ್,
ಕಾಯಿತುರಿ 1/2 ಕಪ್,ಹಸಿಮೆಣಸು 5,
ಶುಂಠಿ : ಸ್ವಲ್ಪ, ನೀರು ಅಳತೆಗೆ ತಕ್ಕಷ್ಟು,
ಉಪ್ಪು ರುಚಿಗೆ ತಕ್ಕಷ್ಟು,
ಕೊತ್ತಂಬರಿ ಸೊಪ್ಪು 1/4 ಕಪ್,
ಎಳ್ಳೆಣ್ಣೆ - ಸ್ವಲ್ಪ, ಜೀರಿಗೆ 2 ಚಮಚ
ಮಾಡುವ ವಿಧಾನ : ಮೊದಲಿಗೆ ಒಂದು ಬಾಣಲೆಯನ್ನು ತೆಗೆದುಕೊಂಡು ಜೀರಿಗೆಯನ್ನು ಹುರಿದುಕೊಳ್ಳಿ. ಈಗ ಮೊಳಕೆಯೊಡೆದ ಹೆಸರುಕಾಳನ್ನು ತೊಳೆದುಕೊಂಡು ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು. ಇದರ ಜೊತೆಯಲ್ಲಿ ಹುರಿದಿಟ್ಟುಕೊಂಡ ಜೀರಿಗೆ, ಕೊತ್ತಂಬರಿ ಸೊಪ್ಪು, ಮೆಣಸಿನಕಾಯಿ ಹಾಗೂ ಶುಂಠಿಯನ್ನು ಹಾಕಿಕೊಳ್ಳಿ. ಅಳತೆಗೆ ತಕ್ಕಷ್ಟು ನೀರನ್ನು ಹಾಕಿಕೊಂಡು ಈ ಮಿಶ್ರಣವನ್ನು ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ
ರುಬ್ಬಿಕೊಂಡ ಮಿಶ್ರಣಕ್ಕೆ ಅಳತೆಗೆ ತಕ್ಕಷ್ಟು ಉಪ್ಪನ್ನು ಸೇರಿಸಬೇಕು. ಈಗ ಒಂದು ದೋಸೆ ತವಾವನ್ನು ತೆಗೆದುಕೊಂಡ ಗ್ಯಾಸ್ ಸ್ಟೌನ ಮೇಲೆ ಮಧ್ಯಮ ಉರಿಯಲ್ಲಿ ಇಡಬೇಕು. ತವಾಗೆ ಎಳ್ಳೆಣ್ಣೆಯನ್ನು ಸವರಿಕೊಂಡು ಬಳಿಕ ದೋಸೆ ಹಿಟ್ಟಿನಿಂದ ದೋಸೆ ಎರೆಯಿರಿ. ಈಗ ದೋಸೆಯ ಮೇಲೆ ಸಣ್ಣಗೆ ಕತ್ತರಿಸಿ ಇಟ್ಟುಕೊಂಡಿದ್ದ ಈರುಳ್ಳಿ ಹಾಗೂ ಕಾಯಿತುರಿಯನ್ನು ಸಿಂಪಡಣೆ ಮಾಡಿ. ಬೇಕಿದ್ದರೆ ನೀವು ಕೊತ್ತಂಬರಿ ಸೊಪ್ಪನ್ನು ಕೂಡ ಹಾಕಿಕೊಳ್ಳಬಹುದು.
ದೋಸೆಯ ಎರಡೂ ಬದಿ ಚೆನ್ನಾಗಿ ಕಾದ ಬಳಿಕ ದೋಸೆ ಹೆಂಚಿನಿಂದ ದೋಸೆಯನ್ನು ತೆಗೆಯಿರಿ. ಇದು ಖಾರ ದೋಸೆಯಾಗಿರುವ ಕಾರಣ ಇದರ ಜೊತೆ ನೆಂಜಿಕೊಳ್ಳಲು ಬೇರೆ ಪದಾರ್ಥಗಳು ಅನಿವಾರ್ಯ ಎನಿಸುವುದಿಲ್ಲ. ಬಿಸಿಬಿಸಿಯಾದ ಹೆಸರುಕಾಳು ದೋಸೆಯನ್ನು ನೀವು ತಾಜಾ ಬೆಣ್ಣೆ ಅಥವಾ ತುಪ್ಪದೊಂದಿಗೆ ಸವಿಯಬಹುದಾಗಿದೆ. ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವನ್ನು ಹೊಂದಿರುವ ಮೊಳಕೆಕಾಳನ್ನು ತಿನ್ನಲು ಇಷ್ಟಪಡದ ಮಕ್ಕಳಿಗೆ ನೀವು ಈ ರೀತಿ ದೋಸೆ ರೂಪದಲ್ಲಿ ತಿನ್ನಿಸಬಹುದಾಗಿದೆ.
ಅಧಿಕ ಪ್ರೊಟೀನ್ ಅಂಶವನ್ನು ಹೊಂದಿರುವ ಹೆಸರುಕಾಳು ತೂಕ ಇಳಿಕೆ ಮಾಡಬೇಕು ಎಂದುಕೊಂಡವರಿಗೆ ಉತ್ತಮ ಆಹಾರವಾಗಿದೆ. ಹೀಗಾಗಿ ಡಯಟ್ ಮಾಡುತ್ತಿರುವವರು ಸಹ ಈ ದೋಸೆಯನ್ನು ಬೆಳಗ್ಗಿನ ಉಪಹಾರವನ್ನಾಗಿ ಸೇವನೆ ಮಾಡಬಹುದಾಗಿದೆ. ಇನ್ನು ಕಡಿಮೆ ರಕ್ತದೊತ್ತಡ ಸಮಸ್ಯೆ ಹಾಗೂ ಹೃದ್ರೋಗದ ಸಮಸ್ಯೆಗಳಿಗೂ ರಾಮಬಾಣದಂತಿರುವ ಹೆಸರುಕಾಳಿನಿಂದ ತಯಾರಿಸಿದ ದೋಸೆಯು ವೃದ್ಧರಿಗೂ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.



Click it and Unblock the Notifications
