Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಸ್ಪಂಜಿಗಿಂತ ಮೃದು! ನಿಮಿಷಗಳಲ್ಲಿ ಗುಜರಾತಿ ಸ್ಪೆಷಲ್ ಡೋಕ್ಲಾ ರೆಡಿ.. ಮಾಡೋದು ಹೇಗೆ?
ಯಾವಾಗಲೂ ಬಜ್ಜಿ, ಬೋಂಡಾ, ಪಕೋಡ ತಿಂದು ಬೇಜಾರ್ ಆಗಿದ್ಯಾ? ಈ ಬಾರಿ ಡಿಫರೆಂಟ್ ಆಗಿ ಡೋಕ್ಲಾ ಮಾಡಿ ಟೇಸ್ಟ್ ನೋಡಿ. ಇದಕ್ಕೆ ಕಡಲೆ ಹಿಟ್ಟು ಬೇಡ, ಹೆಸರು ಬೇಳೆ ಇದ್ದರೆ ಸಾಕು. ಹೌದು, ಕಡಲೆಹಿಟ್ಟಿನಿಂದ ಮಾಡುವ ಸಿಹಿ ಹಾಗೂ ಖಾರಾ ಡೋಕ್ಲಾ (Moong Dal Dhokla) ಗುಜರಾತಿನಲ್ಲಿ ಫೆವರಿಟ್. ಈಗ ಹೊಟೇಲ್ ಮೆನುಗಳಲ್ಲಿಯೂ ಡೋಕ್ಲಾ ಸ್ಥಾನ ಪಡೆದುಕೊಂಡಿದೆ. ನೀವು ನಿಮಿಷಗಳಲ್ಲಿ ಹೆಸರುಕಾಳಿನ ಡೋಕ್ಲಾ (Green Gram Dhokla) ತಯಾರಿಸಬಹುದು. ಇದು ಬೆಳಗ್ಗಿನ ತಿಂಡಿಗೂ ಉತ್ತಮ ಆಯ್ಕೆ. ಬನ್ನಿ, ಈ ಹೆಸರುಬೇಳೆ ಧೋಕ್ಲಾ ಮನೆಯಲ್ಲಿಯೇ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ.
ರುಚಿಕರ ಮತ್ತು ಆರೋಗ್ಯಕರ ತಿಂಡಿಯ ವಿಷಯಕ್ಕೆ ಬಂದಾಗ, ಹೊಟ್ಟೆ ಮತ್ತು ಹೃದಯವನ್ನು ಸಂತೋಷಪಡಿಸುವ ಏನಾದರೂ ತಕ್ಷಣವೇ ಬೇಕೆನಿಸುತ್ತದೆ. ಈ ಸಮಯದಲ್ಲಿ ನೀವು, ಹೆಸರುಬೇಳೆ ಧೋಕ್ಲಾ ಮಾಡಬಹುದು. ಇದು ಗುಜರಾತಿನ ಸಾಂಪ್ರದಾಯಿಕ ಉಪಹಾರ ಅಥವಾ ಖಾದ್ಯ. ಇದು ಎಷ್ಟು ರುಚಿಯೋ, ಆರೋಗ್ಯಕ್ಕೂ ಅಷ್ಟೆ ಹಿತ. ಈ ಧೋಕ್ಲಾವನ್ನು ಕಡಲೆ ಹಿಟ್ಟಿನ ಬದಲಿಗೆ ಪ್ರೋಟೀನ್ ಭರಿತ ಹೆಸರುಕಾಳಿನಿಂದ ತಯಾರಿಸಲಾಗುತ್ತದೆ. ಈ ಧೋಕ್ಲಾವನ್ನು ಕಡಲೆ ಹಿಟ್ಟಿನ ಬದಲಿಗೆ ಪ್ರೋಟೀನ್ ಭರಿತ ಹೆಸರುಕಾಳಿನಿಂದ ತಯಾರಿಸಲಾಗುತ್ತದೆ. ಇದು ಅದ್ಭುತವಾದ ರುಚಿಯನ್ನು ಹೊಂದಿರುವುದಲ್ಲದೆ, ನಿಮ್ಮ ಆರೋಗ್ಯ ದೃಷ್ಟಿಯಿಂದಲೂ ತುಂಬಾ ಒಳ್ಳೆಯದು.

ಹೆಸರು ಕಾಳು ಡೋಕ್ಲಾ ಮಾಡಲು ಬೇಕಾಗುವ ಸಾಮಾಗ್ರಿಗಳು
• ಹೆಸರು ಕಾಳು (ಹೆಸರು ಬೇಳೆ) - 1 ಕಪ್
• ಮೊಸರು - 1/2 ಕಪ್ ಅಥವಾ 2 ಸ್ಪೂನ್
• ಹಸಿ ಮೆಣಸಿನಕಾಯಿ - 2
• ಶುಂಠಿ ಪೇಸ್ಟ್ - 1 ಸ್ಪೂನ್
• ನಿಂಬೆ ರಸ - 1 ಸ್ಪೂನ್
• ಈನೋ ಅಥವಾ ಅಡುಗೆ ಸೋಡಾ - 1 ಸ್ಪೂನ್
• ಅರಿಶಿನ ಪುಡಿ - ಅರ್ಧ ಸ್ಪೂನ್
• ಉಪ್ಪು - ರುಚಿಗೆ ತಕ್ಕಷ್ಟು
• ಎಣ್ಣೆ - 2 ಸ್ಪೂನ್
• ಸಾಸಿವೆ - 1 ಸ್ಪೂನ್
• ಕರಿಬೇವಿನ ಎಲೆಗಳು - 8 ರಿಂದ 10
• ಸಕ್ಕರೆ - 1 ಚಮಚ
• ಕೊತ್ತಂಬರಿ ಸೊಪ್ಪು - ಸ್ವಲ್ಪ
ಹೆಸರು ಬೇಳೆ ಡೋಕ್ಲಾ ಮಾಡುವ ವಿಧಾನ
ಹೆಸರು ಬೇಳೆ ಡೋಕ್ಲಾ ಮಾಡುವ ಮೊದಲು, ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು 4 ರಿಂದ 5 ಗಂಟೆಗಳ ಕಾಲ ನೆನೆಸಿಡಬೇಕು. ಇದಾದ ಬಳಿಕ, ನೆನೆಸಿದ ಬೇಳೆಯನ್ನು ಶುಂಠಿ ಮತ್ತು ಹಸಿ ಮೆಣಸಿನಕಾಯಿಗಳೊಂದಿಗೆ ಮಿಕ್ಸರ್ನಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ತಯಾರಿಸಿದ ಪೇಸ್ಟ್ ಅನ್ನು ಒಂದು ಬಟ್ಟಲಿಗೆ ಹಾಕಬೇಕು. ಈಗ ಅದಕ್ಕೆ ಮೊಸರು, ನಿಂಬೆ ರಸ, ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಈಗ ಸ್ಟೀಮರ್ ಅಥವಾ ಬಾಣಲೆಯಲ್ಲಿ ನೀರನ್ನು ಬಿಸಿ ಮಾಡಿ, ಅದರ ಅಚ್ಚಿನಲ್ಲಿ ಎಣ್ಣೆಯನ್ನು ಸವರಬೇಕು.
ಈಗ ಹೆಸರು ಕಾಳು ಮಿಶ್ರಣಕ್ಕೆ ಈನೋ ಅಥವಾ ಅಡಿಗೆ ಸೋಡಾ ಸೇರಿಸಬೇಕು. ತಕ್ಷಣ ಅದನ್ನು ಅಚ್ಚಿನಲ್ಲಿ ಸುರಿಯಿರಿ. ಈಗ ಅದನ್ನು ಮುಚ್ಚಿ 15 ರಿಂದ 20 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಬೇಕು. ಇದಾದ ಬಳಿಕ, ಅದು ಬೆಂದ ಬಳಿಕ ಅದನ್ನು ತಣ್ಣಗಾಗಲು ಬಿಡಬೇಕು. ಮತ್ತು ತುಂಡುಗಳಾಗಿ ಕತ್ತರಿಸಬೇಕು. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಬಳಿಕ ಸಾಸಿವೆ ಮತ್ತು ಕರಿಬೇವು ಹಾಕಬೇಕು. ಈಗ ತಯಾರಿಸಿರುವ ಮಸಾಲೆಯನ್ನು ಧೋಕ್ಲಾದ ಮೇಲೆ ಸುರಿಯಬೇಕು. ನೀವು ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬಹುದು. ಇಷ್ಟು ಮಾಡಿದರೆ ಸಾಕು, ಗುಜರಾತಿನ ಸ್ಪೆಷಲ್ ಡಿಶ್ ಡೋಕ್ಲಾ ಸಿದ್ಧವಾಗುತ್ತದೆ.
ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತೆ
ಒಟ್ಟಾರೆ, ನಿಮ್ಮ ದೇಹ ಒಳಗಿನಿಂದ ಸ್ಟ್ರಾಂಗ್ ಆಗಿರಬೇಕಾದ್ರೆ ಹೆಸರುಕಾಳು ತಿನ್ನಿ. ಹೆಸರು ಕಾಳು ಸೆವನೆಯು ದೇಹವನ್ನು ಬಲಶಾಲಿಯಾಗಿಸುವುದಲ್ಲದೆ, ನಮ್ಮ ಮೂಳೆಗಳನ್ನೂ ಗಟ್ಟಿಮುಟ್ಟಾಗಿಸುತ್ತದೆ. ಇದನ್ನು ಸೇವಿಸುವುದರಿಂದ ದೇಹಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಜೀರ್ಣಕ್ರಿಯೆಗೆ ಉತ್ತಮವಾಗಿದೆ. ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೆಸರು ಕಾಳು ತಿನ್ನಲು ಇಷ್ಟವಾಗದಿದ್ದರೆ, ಡೋಕ್ಲಾ ಮಾಡಬಹುದು.



Click it and Unblock the Notifications
