Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಡ್ರೈ ಗೋಬಿ ಮಂಚೂರಿಯನ್ ರೆಸಿಪಿ
ಗೋಬಿ ಮಂಚೂರಿಯನ್ ಮಾಡುವ ವಿಧಾನ ಸಾಮಾನ್ಯವಾಗಿ ಒಂದೇ ರೀತಿಯಿದ್ದರೂ ಆದರೆ ಪ್ರತಿಯೊಬ್ಬರು ಮಾಡುವಾಗ ಅದರ ರುಚಿ ಮಾತ್ರ ಭಿನ್ನವಾಗಿರುತ್ತೆ.
ಅದಕ್ಕೆ ಕಾರಣ ಅದಕ್ಕೆ ಬಳಸುವ ಸಾಮಗ್ರಿ ಹಾಗೂ ಅದರ ಪ್ರಮಾಣ. ಗೋಬಿ ಮಂಚೂರಿಯನ್ ಗ್ರೇವಿ ರೀತಿ ಮಾಡಬಹುದು, ಇಲ್ಲಾ ಡ್ರೈ ಮಾಡಬಹುದು. ಇಲ್ಲಿ ನಾಬವು ಗೋಬಿ ಮಂಚೂರಿಯನ್ ಡ್ರೈ ರೆಸಿಪಿ ನೀಡಿದ್ದೇವೆ.

ವೀಕೆಂಡ್ಗೆ ಫ್ರೈಡ್ರೈಸ್, ನೂಡಲ್ಸ್ ಇವುಗಳನ್ನು ತಯಾರಿಸಿದಾಗ ಜೊತೆಗೆ ಗೋಬಿ ಡ್ರೈ ಇದ್ದರೆ ಆಹಾರ ಇನ್ನಷ್ಟು ರುಚಿಕರವಾಗಿರುತ್ತೆ. ಇಲ್ಲಿ ನಾವು ಡ್ರೈ ಗೋಬಿ ಮಂಚುರಿಯನ್ ರೆಸಿಪಿ ನೀಡಿದ್ದೇವೆ ನೋಡಿ..
Recipe By: Reena TK
Recipe Type: Snacks
Serves: 4
-
ಬೇಕಾಗುವ ಸಾಮಗ್ರಿ
1 ಗೋಬಿ/ಹೂಕೋಸು (ಸ್ವಲ್ಪ ದೊಡ್ಡ ಗಾತ್ರದ್ದು)
1/2 ಕಪ್ ಮೈದಾ
1/4 ಕಪ್ ಜೋಳದ ಹಿಟ್ಟು
1 ಚಮಚ ಖಾರದ ಪುಡಿ
1/4 ಚಮಚ ಕಾಳುಮೆಣಸಿನ ಪುಡಿ (ತರಿತರಿ ಪುಡಿ ಮಾಡಿದ್ದು)
ರುಚಿಗೆ ತಕ್ಕ ಉಪ್ಪು (1/4 ಚಮಚ ಸಾಕಾಗುತ್ತೆ)
1/2 ಕಪ್ ನೀರು (ಬೇಕಿದ್ದರೆ ಇನ್ನು ಸ್ವಲ್ಪ ಹಾಕಿ
ಕರಿಯಲು ಎಣ್ಣೆ
ಮಂಚೂರಿಯನ್ ಸಾಸ್ಗೆ ಬೇಕಾಗುವ ಸಾಮಗ್ರಿ
11/2 ಚಮಚ ಎಣ್ಣೆ
1 ಚಮಚ ಬೆಳ್ಳುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)
1/2 ಚಮಚ ಶುಂಠಿ (ಚಿಕ್ಕದಾಗಿ ಕತ್ತರಿಸಿದ್ದು)
1/3 ಕಪ್ ಈರುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)
1/4 ಕಪ್ ಕ್ಯಾಪ್ಸಿಕಂ
1 ಚಮಚ ಸೋಯಾ ಸಾಸ್
2-3 ಚಮಚ ಚಿಲ್ಲಿ ಸಾಸ್
1-2 ಚಮಚ ಟೊಮೆಟೊ ಕೆಚಪ್
1/2 ಖಾರದ ಪುಡಿ (ಖಾರ ಕಡಿಮೆ ಇರುವ)
1/2 ಚಮಚ ವಿನೆಗರ್
1 ಚಮಚ ಸಕ್ಕರೆ
ರುಚಿಗೆ ತಕ್ಕ ಉಪ್ಪು
3-4 ಚಮಚ ನೀರು
ರುಚಿಗೆ ತಕ್ಕ ಉಪ್ಪು (1/4 ಚಮಚ )
2 ಚಮಚ ಸ್ಪ್ರಿಂಗ್ ಆನಿಯನ್ (ಈರುಳ್ಳಿ ಕಡ್ಡಿ)
-
ಮಾಡುವ ವಿಧಾನ:
* ಗೋಬಿಯನ್ನು ಬಿಡಿಸಿ ಸ್ವಚ್ಛ ಮಾಡಿ ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಅದರಲ್ಲಿ ಹಾಕಿಡಿ. ನಂತರ ನೀರನ್ನು ಸೋಸಿ ಇಡಿ (ಗೋಬಿಯಲ್ಲಿ ನೀರಿನಂಶ ಇರಬಾರದು, ಒಂದು ಬಟ್ಟೆಯಲ್ಲಿ ಹರಡಿಟ್ಟರೆ ಒಳ್ಳೆಯದು)
* ಈಗ ದಪ್ಪ ತಳವಿರುವ ಪ್ಯಾನ್ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ.
* ಇದೇ ಸಮಯಕ್ಕೆ ಒಂದು ಪಾತ್ರೆಗೆ ಮೈದಾ, ಜೋಳದ ಹಿಟ್ಟು, ಖಾರದ ಪಡಿ, ಕಾಳು ಮೆಣಸಿನ ಪುಡಿ ರುಚಿಗೆ ತಕ್ಕ ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಮಿಶ್ರ ಮಾಡಿ ಇಡಿ. ಹಿಟ್ಟು ತುಂಬಾ ನೀರಾಗಬಾರದು. ಈಗ ಇದಕ್ಕೆ ಗೋಬಿ ಹಾಕಿ ಮಿಶ್ರ ಮಾಡಿ ಇಡಿ.
* ಎಣ್ಣೆ ಕುದಿ ಬರಲು ಆರಂಭಿಸಿದರೆ ಸ್ಟೌವ್ ಅನ್ನು ಸಾಧಾರಣ ಉರಿಗೆ ತನ್ನಿ, ನಂತ ನ ಗೋಬಿಯನ್ನು ಹಾಕಿ ಫ್ರೈ ಮಾಡಿ. ಎಣ್ಣೆಯಲ್ಲಿ ಗೋಬಿ ಕರಿಯುವಾಗ ಆಗಾಗ ಆಡಿಸುತ್ತಾ ಇರಿ.
* ಎಣ್ಣೆಯಿಂದ ತೆಗದು ಪಾತ್ರೆಯಲ್ಲಿ ಹಾಕಿಡಿ. ತುಂಬಾ ಕ್ರಿಸ್ಪಿ (ಗರಿಗರಿಯಾಗಿ) ಬೇಕೆಂದರೆ ಫ್ರೈ ಮಾಡಿಟ್ಟ ಗೋಬಿಯನ್ನು ಮತ್ತೊಮ್ಮೆ ಫ್ರೈ ಮಾಡಿ.
ಗೋಬಿ ಮಂಚೂರಿಯನ್ ಮಾಡುವುದು ಹೇಗೆ?
* ಖಾರದ ಪುಡಿ ಸ್ವಲ್ಪ ನೀರು ಹಾಕಿ ಮಿಶ್ರ ಮಾಡಿ ಒಂದು ಬದಿಯಲ್ಲಿ ತೆಗೆದಿಡಿ(ಈ ವಿಧಾನ ಗೋಬಿ ತುಂಬಾ ಕೆಂಪು ಬಣ್ಣ ನೀಡುತ್ತದೆ).
*ಈಗ ಅಗಲವಾದ ಪ್ಯಾನ್ಗೆ 11/2 ಚಮಚ ಎಣ್ಣೆ ಹಾಕಿ ಕಾಯಿಸಿ.
* ಎಣ್ಣೆ ಬಿಸಿಯಾದಾಗ ಅದಕ್ಕೆ ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ ಹಾಕಿ ಒಂದೆರಡು ನಿಮಿಷ ಸೌಟ್ನಿಂದ ಆಡಿಸಿ.
* ಈಗ ಸ್ಪ್ರಿಂಗ್ ಆನಿಯನ್ ಮತ್ತು ಕ್ಯಾಪ್ಸಿಕಂ ಹಾಕಿ 2 ನಿಮಿಷ ಸೌಟ್ನಿಂದ ಆಡಿಸಿ.
* ಈಗ ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮೆಟೊ ಕೆಚಪ್, ಕೆಂಪು ಖಾರದ ಪೇಸ್ಟ್, ಸಕ್ಕರೆ ಮತ್ತು ವಿನಗೆರ್ ಹಾಕಿ ಮಿಶ್ರ ಮಾಡಿ.
* ಸ್ವಲ್ಪ ನೀರು ಹಾಕಿ, ಸ್ವಲ್ಪ ಕಾಳು ಮೆಣಸಿನ ಪುಡಿ ಹಾಕಿ ಮಿಶ್ರ ಮಾಡಿ.
* ಮಿಶ್ರಣ ಗಟ್ಟಿಯಾಗುವರೆಗೆ ಸೌಟ್ನಿಂದ ಆಡಿಸುತ್ತಾ ಫ್ರೈ ಮಾಡಿ.
* ಸಾಸ್ ಸ್ವಲ್ಪ ಸಿಹಿ, ಸ್ವಲ್ಪ ಹುಳಿ, ಖಾರ ಮಿಶ್ರಿತವಾಗಿರಬೇಕು. ರುಚಿ ನೋಡಿ ಉಪ್ಪು ಬೇಕಿದ್ದರೆ, ಸ್ವಲ್ಪ ಉಪ್ಪು ಸೇರಸಿ.
* ಈಗ ಫ್ರೈ ಮಾಡಿದ ಹೂಕೋಸ್ ಹಾಕಿ ಮಿಶ್ರ ಮಾಡಿದರೆ ಡ್ರೈ ಗೋಬಿ ರೆಡಿ.
ಇದನ್ನು ಫ್ರೈಡ್ ರೈಸ್ ಜೊತೆ ಸರ್ವ್ ಮಾಡಿದರೆ ಮತ್ತಷ್ಟು ಟೇಸ್ಟಿಯಾಗಿರುತ್ತೆ.
- ಮಂಚೂರಿಯನ್ ಅನ್ನು ಡ್ರೈ ಮಾಡ ಬಯಸುವುದಾದರೆ ಒಂದೇ ಬಾರಿಗೆ ತುಂಬಾ ಗರಿ ಗರಿ ಮಾಡುವ ಬದಲು, ಒಮ್ಮೆ ಎಣ್ಣೆಯಲ್ಲಿ ಕರಿದು, ನಂತರ ಮತ್ತೊಮ್ಮೆ ಕರಿಯುವುದು ಒಳ್ಳೆಯದು.
- ಸರ್ವ್ - 1 ಪ್ಲೇಟ್
- ಕ್ಯಾಲೋರಿ - 542 ಕ್ಯಾ
- ಪ್ರೊಟೀನ್ - 5.6 ಗ್ರಾಂ
- ಕಾರ್ಬ್ಸ್ - 30.5 ಗ್ರಾಂ
- ನಾರಿನಂಶ - 4.7 ಗ್ರಾಂ



Click it and Unblock the Notifications
