Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಗೋಬಿ ಫ್ರೈ: ವೆಜ್ ಸ್ಪೆಷಲ್ ಅಡುಗೆಗೆ ಸೂಪರ್ ಸೈಡ್ ಡಿಶ್
Recipes
oi-Reena TK
Posted By: Reena TK
ಹೂಕೋಸು ಫ್ರೈ ಅನ್ನದ ಜೊತೆ ಸೈಡ್ ಡಿಶ್ ಆಗಿ ಸವಿಯಲು ಸೂಪರ್ ಟೇಸ್ಟ್, ಮಾಡುವುದು ಸುಲಭ ಕೂಡ. ಅಲ್ಲದೆ ಮನೆಗೆ ಯಾರಾದರೂ ಗೆಸ್ಟ್ ಬಂದಾಗ ಅಡುಗೆಗೆ ಇದನ್ನು ಮಾಡಿದರೆ ಇನ್ನೂ ಸ್ಪೆಷಲ್ ಅನಿಸುವುದು. ವೆಜೆಟೇರಿಯನ್ ಪಾರ್ಟಿಗೆ ಸೂಪರ್. ನಾನ್ವೆಜ್ ಪಾರ್ಟಿಯಲ್ಲಿ ಒಬ್ಬರಿಬ್ಬರು ವೆಜ್ ಮಾತ್ರ ಸೇವಿಸುವವರು ಇದ್ದರೆ ಅವರಿಗೆ ಸ್ಪೆಷಲ್ ಅಡುಗೆ ಏನು ಮಾಡುವುದು ಎಂದು ತಲೆ ಕೆಡಿಸಬೇಕಾಗಿಲ್ಲ, ಇದನ್ನು ಸುಲಭವಾಗಿ ಮಾಡಬಹುದು.

ಬೇಕಾಗುವ ಸಾಮಗ್ರಿ
ಹೂಕೋಸು 1
2 ಚಮಚ ಕಡ್ಲೆಹಿಟ್ಟು
2 ಚಮಚ ಅಕ್ಕಿ ಹಿಟ್ಟು
2 ಚಮಚ ಜೋಳದ ಹಿಟ್ಟು
1/4 ಚಮಚ ಅರಿಶಿಣ ಪುಡಿ
1/2 ಚಮಚ ಖಾರದ ಪುಡಿ
1/2 ಚಮಚ ಕೊತ್ತಂಬರಿ ಪುಡಿ
1/2 ಚಮಚ ನಿಂಬೆರಸ
1/2 ಚಮಚ ಉಪ್ಪು ಪುಡಿ
ಎಣ್ಣೆ 1 ಕಪ್
ಒಗ್ಗರಣೆಗೆ
1 ಚಮಚ ಎಣ್ಣೆ
1 ಈರುಳ್ಳಿ (ಬೇಕಿದ್ದರೆ ಹಾಕಬಹುದು)
4-5 ಬೆಳ್ಳುಳ್ಳಿ ಎಸಳು (ಚಿಕ್ಕದಾಗಿ ಕತ್ತರಿಸಿದ್ದು)
ಹಸಿ ಮೆಣಸು 1-2
ಮಾಡುವ ವಿಧಾನ
- ಹೂಕೋಸು ಬಿಡಿಸಿ ನೀರಿನಲ್ಲಿ ಹಾಕಿಡಿ, ನೀರಿಗೆ ಸ್ವಲ್ಪ ಅರಿಶಿಣ ಹಾಕಿಟ್ಟರೆ ಒಳ್ಳೆಯದು.
- ನಂತರ ಒಂದು ಬೌಲ್ಗೆ ಎಲ್ಲಾ ಸಾಮಗ್ರಿ ಹಾಕಿ ಮಿಕ್ಸ್ ಮಾಡಿ ಅದರಲ್ಲಿ ಹೂ ಕೋಸು ಹಾಕಿ ಮಿಕ್ಸ್ ಮಾಡಿ
- ಎಣ್ಣೆಯನ್ನು ಕಾಯಿಸಿ
- ಈಗ ಕಾದ ಎಣ್ಣೆಗೆ ಹೂಕೋಸು ಹಾಕಿ ಪ್ರೈ ಮಾಡಿ ತೆಗೆಯಿರಿ
- ಈಗ ಒಂದು ಬಾಣಲೆಗೆ ಒಂದು ಚಮಚ ಎಣ್ನೆ ಹಾಕಿ ಕರಿಬೇವು ಹಾಕಿ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಪ್ರೈ ಮಾಡಿ ಅದರಲ್ಲಿ ಹೂಕೋಸು ಫ್ರೈ ಹಾಕಿ ಮಿಕ್ಸ್ ಮಾಡಿ.
- ಇಷ್ಟು ಮಾಡಿದರೆ ಹೂಕೋಸು ಫ್ರೈ ರೆಡಿ.
Comments
[ of 5 - Users]
Story first published: Saturday, July 27, 2024, 21:02 [IST]
Other articles published on Jul 27, 2024



Click it and Unblock the Notifications
