For Quick Alerts
ALLOW NOTIFICATIONS  
For Daily Alerts

ರೆಸಿಪಿ: ಮೈದಾ ಹಾಕದ ಬಾಳೆಹಣ್ಣಿನ ಬ್ರೆಡ್

Posted By:
|

ಬಾಳೆಹಣ್ಣಿನ ಹಲ್ವಾ, ಪುಡ್ಡಿಂಗ್ ಇವೆಲ್ಲಾ ಮಾಡಿರುತ್ತೀರಾ, ಆದರೆ ಇದರಿಂದ ಬ್ರೆಡ್ ಟ್ರೈ ಮಾಡಿದ್ದೀರಾ, ಇದೊಂದು ತುಂಬಾ ಸರಳವಾದ ರೆಸಿಪಿಯಾಗಿದ್ದು ಒಂದು ಗಂಟೆಯ ಒಳಗೆ ನೀವು ಈ ಬ್ರೆಡ್ ರೆಡಿ ಮಾಡಬಹುದು.

 Choco Banana Bread Recipe

ಇದನ್ನು ಮಾಡಿ ನೀವು ರೂಮ್‌ನ ಉಷ್ಣತೆಯಲ್ಲಿ ಇಟ್ಟು ಬಳಸಿ, ಫ್ರಿಡ್ಜ್‌ನಲ್ಲಿ ಇಡಬೇಡಿ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಇದಕ್ಕೆ ನೀವು ಪಚ್ಚೆ ಬಾಳೆಹಣ್ಣು ಅಥವಾ ತುಂಬಾ ಹಣ್ಣಾದ ಕದಳಿ ಬಳಸಬಹುದು, ಕದಳಿಯಾದರೆ 8-10 ಬಾಳೆಹಣ್ಣು ಹಾಕಿ, ಸಕ್ಕರೆ ಬದಲಿಗೆ ಜೇನು ಬಳಸಿದರೆ ಹೆಚ್ಚು ಆರೋಗ್ಯಕರ.

Banana Bread Recipe,ಬಾಳೆಹಣ್ಣಿನ ಬ್ರೆಡ್ ರೆಸಿಪಿ
Banana Bread Recipe,ಬಾಳೆಹಣ್ಣಿನ ಬ್ರೆಡ್ ರೆಸಿಪಿ
Prep Time
30 Mins
Cook Time
30M
Total Time
1 Hours0 Mins

Recipe By: Boldsky.com

Recipe Type: Bread

Serves: 5

Ingredients
  • ಬೇಕಾಗುವ ಸಾಮಗ್ರಿ

    ತುಂಬಾ ಹಣ್ಣಾದ ಬಾಳೆಹಣ್ಣು 3

    ಮೊಟ್ಟೆ 3

    ವೆನಿಲ್ಲಾ ರಸ 1 ಚಮಚ

    ಬಾದಾಮಿ ಪುಡಿ 2.5 ಕಪ್

    ಕೋಕಾ ಪುಡಿ 1/2 ಕಪ್

    ಅಡುಗೆ ಸೋಡಾ 1 ಚಮಚ

    ಉಪ್ಪು ಅರ್ಧ ಚಮಚ

    ಚಾಕೋ ಚಿಪ್ಸ್-1/2 ಕಪ್

    ಅಲಂಕಾರಕ್ಕೆ

    ಚಾಕೋಚಿಪ್ಸ್ 2 ಚಮಚ

    ವಾಲ್ನಟ್ 1/4 ಕಪ್

Red Rice Kanda Poha
How to Prepare
  • {recipe}ಮಾಡುವ ವಿಧಾನ

    * ಓವನ್‌ ಅನ್ನು 180 ಡಿಗ್ರಿ ಉಷ್ಣತೆಗೆ ಪ್ರೀಹೀಟ್ ಮಾಡಿ. ಬೇಕಿಂಗ್ ಟ್ರೇಗೆ ಬೆಣ್ಣೆ ಸವರಿ.

    * ಒಂದು ದೊಡ್ಡ ಬೌಲ್‌ನಲ್ಲಿ ಬಾಳೆಹಣ್ಣು, ಮೊಟ್ಟೆ, ಜೇನು ಎಲ್ಲಾ ಹಾಕಿ ಮ್ಯಾಶ್‌ ಮಾಡಿ, ನಂತರ ವೆನಿಲ್ಲಾ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

    * ನಂತರ ಬಾದಾಮಿ ಪುಡಿ, ಕೋಕಾ ಪುಡಿ, ಬೇಕಿಂಗ್‌ ಸೋಡಾ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ತಿರುಗಿಸಿ. ಸಿಹಿ ಸರಿಯಾಗಿದೆಯೇ ನೋಡಿ.

    * ಈಗ ಮಿಶ್ರಣವನ್ನು ಬೇಕಿಂಗ್‌ ಟ್ರೇಗೆ ಸುರಿದು ಅದರ ಮೇಲೆ ಚಾಕೋಚಿಪ್ಸ್ ಹಾಗೂ ವಾಲ್ನಟ್ ಹಾಕಿ 25-30 ನಿಮಿಷ ಬೇಯಿಸಿ. ನಂತರ ಓವನ್‌ನಿಂದ ತೆಗೆದು 10 ನಿಮಿಷ ತಣ್ಣಗಾಗಲು ಬಿಟ್ಟು ಕತ್ತರಿಸಿ.

Instructions
  • ಈ ಬ್ರೆಡ್‌ ಅನ್ನು 2 ದಿನ ಇಟ್ಟರೂ ಹಾಳಾಗುವುದಿಲ್ಲ.
Nutritional Information
  • ಕ್ಯಾಲೋರಿ - 222ಕ್ಯಾ
  • ಪ್ರೊಟೀನ್ - 77ಗ್ರಾಂ
  • ಕಾರ್ಬ್ಸ್ - 209ಗ್ರಾಂ
[ 5 of 5 - 25 Users]
X
Desktop Bottom Promotion