ಗಸಗಸೆ ಪಾಯಸ ರೆಸಿಪಿ

By: Divya
Subscribe to Boldsky

ಕರ್ನಾಟಕದ ಸಾಂಪ್ರದಾಯಿಕ ಸಿಹಿ ತಿಂಡಿಗಳಲ್ಲಿ ಗಸಗಸೆ ಪಾಯಸವೂ ಒಂದು. ಈ ಸಿಹಿ ಭಕ್ಷ್ಯವನ್ನು ಮಂಗಳಕರ ಸಂದರ್ಭಗಳಲ್ಲಿ ಹಾಗೂ ಹಬ್ಬಗಳಲ್ಲಿ ತಯಾರಿಸುತ್ತಾರೆ. ಗಸಗಸೆ ಬೀಜ, ತೆಂಗಿನ ಕಾಯಿ ಹಾಗೂ ಬೆಲ್ಲ ಬಳಸಿ ಇದನ್ನು ತಯಾರಿಸಲಾಗುತ್ತದೆ. ದೇಹಕ್ಕೆ ಹೆಚ್ಚು ತಂಪನ್ನು ನೀಡುವ ಗಸಗಸೆ ಉತ್ತಮ ಪೋಷಕಾಂಶಗಳನ್ನು ಒಳಗೊಂಡಿದೆ.

ಬಾಯಿ ಹುಣ್ಣು ಮತ್ತು ನಿದ್ರಾಹೀನತೆ ಉಂಟಾದಾಗ ಈ ಪಾಯಸವನ್ನು ಸೇವಿಸುತ್ತಾರೆ. ಇದು ಔಷಧಿಯಂತೆ ಕಾರ್ಯ ನಿರ್ವಹಿಸಿ, ಆರೋಗ್ಯದ ಆರೈಕೆಯನ್ನು ಮಾಡುತ್ತದೆ. ಇದರ ಪಾಯಸವನ್ನು ಒಂದು ಗ್ಲಾಸ್‍ಗಿಂತ ಹೆಚ್ಚು ಸೇವಿಸಿದರೆ ನಿದ್ರೆಗೆ ಒಳಗಾಗಬೇಕಾಗುವುದು.

ನಿಮಗೆ ಬೆಲ್ಲದಿಂದ ತಯಾರಿಸಿದ ಸಿಹಿ ಇಷ್ಟವಾಗುತ್ತದೆ ಎಂದರೆ ಗಸಗಸೆ ಪಾಯಸವನ್ನು ಚಪ್ಪರಿಸಿ ತಿನ್ನುತ್ತೀರಿ. ಸರಳವಾದ ವಿಧಾನವನ್ನು ಒಳಗೊಂಡ ಈ ಪಾಕವಿಧಾನವನ್ನು ಬಹು ಬೇಗ ತಯಾರಿಸಬಹುದು. ಈ ಪಾಯಸ ತಯಾರಿಸುವುದು ಹೇಗೆ ಎಂದು ಹೆಚ್ಚು ಚಿಂತಿಸಬೇಕಿಲ್ಲ. ನಿಮಗಾಗಿ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯನ್ನು ನೀಡುತ್ತಿದ್ದೇವೆ...

gasagase payasa recipe
ಗಸಗಸೆ ಪಾಯಸ | ಗಸಗಸೆ ಪಾಯಸ ಮಾಡುವ ವಿಧಾನ | ಗಸಗಸೆ ಪಾಯಸ ರೆಸಿಪಿ | ಗಸಗಸೆ ಪಾಯಸ ಮಾಡುವುದು ಹೇಗೆ | ಖುಷ್ ಖುಷ್ ಖೀರ್ ರೆಸಿಪಿ
ಗಸಗಸೆ ಪಾಯಸ | ಗಸಗಸೆ ಪಾಯಸ ಮಾಡುವ ವಿಧಾನ | ಗಸಗಸೆ ಪಾಯಸ ರೆಸಿಪಿ | ಗಸಗಸೆ ಪಾಯಸ ಮಾಡುವುದು ಹೇಗೆ | ಖುಷ್ ಖುಷ್ ಖೀರ್ ರೆಸಿಪಿ
Prep Time
5 Mins
Cook Time
20M
Total Time
25 Mins

Recipe By: ಕಾವ್ಯಶ್ರೀ ಎಸ್

Recipe Type: ಸಿಹಿ ತಿಂಡಿ

Serves: 4 ಮಂದಿಗೆ

Ingredients
 • ಗಸಗಸೆ - 3 ಚಮಚ

  ಬೆಲ್ಲ - 1/2 ಮಧ್ಯಮ ಗಾತ್ರದ ಬೌಲ್

  ನೀರು - 1/2 ಗ್ಲಾಸ್

  ತೆಂಗಿನತುರಿ - 1 ಕಪ್

  ಏಲಕ್ಕಿ - 2

  ನೀರು - 1/4 ಕಪ್

Red Rice Kanda Poha
How to Prepare
 • 1. ಬಿಸಿಯಾದ ದಪ್ಪ ತಳದ ಪಾತ್ರೆಯಲ್ಲಿ ಗಸಗಸೆಯನ್ನು ಹಾಕಿ

  2. ಎಣ್ಣೆ ರಹಿತವಾಗಿ, ಹೊಂಬಣ್ಣ ಬರುವವರೆಗೆ ಹುರಿಯಿರಿ.

  3. ಹುರಿದ ನಂತರ ಉರಿಯನ್ನು ಆರಿಸಿ, ಗಸಗಸೆಯನ್ನು ಆರಲು ಇಡಿ.

  4. ಈ ನಡುವೆಯೇ ಬಿಸಿಯಾದ ಪಾತ್ರೆಯಲ್ಲಿ ಬೆಲ್ಲವನ್ನು ಹಾಕಿರಿ.

  5. ಇದಕ್ಕೆ ಕಾಲು ಗ್ಲಾಸ್ ನೀರನ್ನು ಸೇರಿಸಿ ಚೆನ್ನಾಗಿ ಕದಡಿ.

  6. ಇದಕ್ಕೆ ಮುಚ್ಚಳವನ್ನು ಮುಚ್ಚಿ, ಬೆಲ್ಲ ಸಂಪೂರ್ಣವಾಗಿ ಕರಗಲು ಬಿಡಿ.

  7. ಈ ಸಮಯದಲ್ಲಿ ಗಸಗಸೆಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.

  8. ಅದೇರೀತಿ ತೆಂಗಿನ ತುರಿ ಮತ್ತು ಏಲಕ್ಕಿಯನ್ನು ಸೇರಿಸಿ ರುಬ್ಬಿಕೊಳ್ಳಬೇಕು.

  9. ಇದು ಮೃದುವಾದ ಪೇಸ್ಟ್‌ನಂತೆ ಆಗಲು ಕಾಲು ಕಪ್‍ನಷ್ಟು ನೀರನ್ನು ಸೇರಿಸಿಕೊಳ್ಳಿ.

  10. ಬೆಲ್ಲ ಕರಗಿದ ಮೇಲೆ ರುಬ್ಬಿಕೊಂಡ ತೆಂಗಿನ ತುರಿ ಹಾಗೂ ಗಸಗಸೆಯನ್ನು ಸೇರಿಸಿ.

  11. ಇವೆಲ್ಲವನ್ನು ಸೇರಿಸಿದ ಮೇಲೆ 2-3 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ.

  12. ತಳ ಹಿಡಿಯುವುದನ್ನು ತಡೆಯಲು ಆಗಾಗ ಕೈಯಾಡಿಸುತ್ತಲೇ ಇರಿ.

  13. ಸವಿಯಲು ನೀಡುವ ಮುನ್ನ ಒಮ್ಮೆ ಬಿಸಿಮಾಡಿ ಕೊಡಿ.

Instructions
 • 1. ಪಾಯಸದ ಪರಿಮಳ ಹಾಗೂ ರುಚಿಯನ್ನು ಹೆಚ್ಚಿಸಲು ಹಾಲನ್ನು ಬೆರೆಸಬಹುದು.
 • 2. ಪಾಯಸ ಸ್ವಲ್ಪ ದಪ್ಪ/ಗಟ್ಟಿಯಾಗಬೇಕೆಂದರೆ ಗಸಗಸೆ ಮತ್ತು ತೆಂಗಿನತುರಿ ರುಬ್ಬಿಕೊಳ್ಳುವಾಗ, ನೆನೆಸಿಟ್ಟುಕೊಂಡ ಅಕ್ಕಿಯನ್ನು ಸ್ವಲ್ಪ ಸೇರಿಸಿ ರುಬ್ಬಬಹುದು.
 • 3. ಪಾಯಸಕ್ಕೆ ಬೆಲ್ಲದ ಬದಲು ಸಕ್ಕರೆಯನ್ನು ಬಳಸಬಹುದು. ಆದರೆ ಇದರ ರುಚಿಯಲ್ಲಿ ಸಂಪೂರ್ಣ ಬದಲಾವಣೆ ಇರುತ್ತದೆ.
 • 4. ಒಣ ಹಣ್ಣುಗಳನ್ನು ಹುರಿದು ಪಾಯಸಕ್ಕೆ ಸೆರಿಸಬಹುದು. ಇದೊಂದು ಒಳ್ಳೆಯ ಆಯ್ಕೆಯೂ ಹೌದು.
Nutritional Information
 • ಸರ್ವಿಂಗ್ ಸೈಜ್ - 1 ಕಪ್
 • ಕ್ಯಾಲೋರೀಸ್ - 136 ಕ್ಯಾಲ್
 • ಫ್ಯಾಟ್ - 4 ಗ್ರಾಂ
 • ಪ್ರೋಟೀನ್ - 3 ಗ್ರಾಂ
 • ಕಾರ್ಬೋಹೈಡ್ರೇಟ್ - 14 ಗ್ರಾಂ
 • ಸಕ್ಕರೆ - 9 ಗ್ರಾಂ
 • ಐರನ್ - ಶೇ.5ರಷ್ಟು

ಹಂತ ಹಂತವಾದ ಚಿತ್ರವಿವವರಣೆ

1. ಬಿಸಿಯಾದ ದಪ್ಪ ತಳದ ಪಾತ್ರೆಯಲ್ಲಿ ಗಸಗಸೆಯನ್ನು ಹಾಕಿ.

gasagase payasa recipe

2. ಎಣ್ಣೆ ರಹಿತವಾಗಿ, ಹೊಂಬಣ್ಣ ಬರುವವರೆಗೆ ಹುರಿಯಿರಿ.

gasagase payasa recipe

3. ಹುರಿದ ನಂತರ ಉರಿಯನ್ನು ಆರಿಸಿ, ಗಸಗಸೆಯನ್ನು ಆರಲು ಇಡಿ.

gasagase payasa recipe

4. ಈ ನಡುವೆಯೇ ಬಿಸಿಯಾದ ಪಾತ್ರೆಯಲ್ಲಿ ಬೆಲ್ಲವನ್ನು ಹಾಕಿರಿ.

gasagase payasa recipe

5. ಇದಕ್ಕೆ ಕಾಲು ಗ್ಲಾಸ್ ನೀರನ್ನು ಸೇರಿಸಿ ಚೆನ್ನಾಗಿ ಕದಡಿ.

gasagase payasa recipe

6. ಇದಕ್ಕೆ ಮುಚ್ಚಳವನ್ನು ಮುಚ್ಚಿ, ಬೆಲ್ಲ ಸಂಪೂರ್ಣವಾಗಿ ಕರಗಲು ಬಿಡಿ.

gasagase payasa recipe
gasagase payasa recipe

7. ಈ ಸಮಯದಲ್ಲಿ ಗಸಗಸೆಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.

gasagase payasa recipe

8. ಅದೇರೀತಿ ತೆಂಗಿನ ತುರಿ ಮತ್ತು ಏಲಕ್ಕಿಯನ್ನು ಸೇರಿಸಿ ರುಬ್ಬಿಕೊಳ್ಳಬೇಕು.

gasagase payasa recipe
gasagase payasa recipe

9. ಇದು ಮೃದುವಾದ ಪೇಸ್ಟ್‌ನಂತೆ ಆಗಲು ಕಾಲು ಕಪ್‍ನಷ್ಟು ನೀರನ್ನು ಸೇರಿಸಿಕೊಳ್ಳಿ.

gasagase payasa recipe
gasagase payasa recipe

10. ಬೆಲ್ಲ ಕರಗಿದ ಮೇಲೆ ರುಬ್ಬಿಕೊಂಡ ತೆಂಗಿನ ತುರಿ ಹಾಗೂ ಗಸಗಸೆಯನ್ನು ಸೇರಿಸಿ.

gasagase payasa recipe
gasagase payasa recipe

11. ಇವೆಲ್ಲವನ್ನು ಸೇರಿಸಿದ ಮೇಲೆ 2-3 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ.

gasagase payasa recipe

12. ತಳ ಹಿಡಿಯುವುದನ್ನು ತಡೆಯಲು ಆಗಾಗ ಕೈಯಾಡಿಸುತ್ತಲೇ ಇರಿ.

gasagase payasa recipe

13. ಸವಿಯಲು ನೀಡುವ ಮುನ್ನ ಒಮ್ಮೆ ಬಿಸಿಮಾಡಿ ಕೊಡಿ.

gasagase payasa recipe
[ 4 of 5 - 59 Users]
Please Wait while comments are loading...
Subscribe Newsletter