Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ರೆಸಿಪಿ: ಚಳಿಗಾಲದಲ್ಲಿ ಆರೋಗ್ಯ ಒಳ್ಳೆಯದು ಈ ಗಾರ್ಲಿಕ್ ರೈಸ್

ನೀವು ಗಾರ್ಲಿಕ್ ರೈಸ್ ಅಂದ್ರೆ ಬೆಳ್ಳುಳ್ಳಿ ಅನ್ನ ಟೇಸ್ಟ್ ಮಾಡಿದ್ದೀರಾ? ಚಳಿಗಾಲಕ್ಕೆ ಹೇಳಿ ಮಾಡಿಸಿದ ರೆಸಿಪಿಯಿದು. ಈ ಅನ್ನ ತುಂಬಾನೇ ರುಚಿಯಾಗಿರುತ್ತೆ, ಚಿತ್ರಾನ್ನಕ್ಕಿಂತ ಸ್ವಲ್ಪ ಭಿನ್ನವಾಗಿರುತ್ತೆ. ಬೆಳಗ್ಗೆ ಬ್ರೇಕ್ಫಾಸ್ಟ್ಗೆ ಸುಲಭವಾಗಿ ಮಾಡಬಹುದಾದ ರೆಸಿಪಿ ಇದಾಗಿದ್ದು, ಇದರ ರುಚಿ ಖಂಡಿತ ಇಷ್ಟವಾಗುವುದು.

ಬನ್ನಿ ಬೆಳ್ಳುಳ್ಳಿ ಅನ್ನ ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: breakfast
Serves: 3
-
ಬೇಕಾಗುವ ಸಾಮಗ್ರಿ
1 ಕಪ್ ಅಕ್ಕಿ
30-35 ಎಸಳು ಬೆಳ್ಳುಳ್ಳಿ
2 ಈರುಳ್ಳಿ (ಸಾಧಾರಣ ಗಾತ್ರದ್ದು)
2 ಹಸಿ ಮೆಣಸು
2 ಒಣ ಮೆಣಸು
2 ಚಮಚ ತುಪ್ಪ / ಎಣ್ಣೆ
1/ 4 ಚಮಚ ಸಾಸಿವೆ
1 ಚಮಚ ಉದ್ದಿನ ಬೇಳೆ
2 ಚಮಚ ಕಡಲೆ ಬೇಳೆ
ಕರಿಬೇವು
ಕೊತ್ತಂಬರಿ ಸೊಪ್ಪು (Optional)
ರುಚಿಕೆ ತಕ್ಕ ಉಪ್ಪು
1/2 ನಿಂಬೆ ಹಣ್ಣು
-
ಮಾಡುವ ವಿಧಾನ:
* ಅನ್ನ ಮಾಡಿಡಿ.
* ಈಗ ಬಾಣಲೆ ಬಿಸಿ ಮಾಡಿ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಬೆಳ್ಳುಳ್ಳಿಯನ್ನು ಹಾಕಿ ಫ್ರೈ ಮಾಡಿ, ತೆಗೆದಿಡಿ.
* ಈಗ ಎಣ್ಣೆಗೆ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಅದಕ್ಕೆ ಕರಿಬೇವು ಹಾಕಿ.
* ಈಗ ತೊಗರಿ ಬೇಳೆ ಹಾಗೂ ಕಡಲೆ ಬೇಳೆ ಸೇರಿಸಿ. ಒಣ ಮೆಣಸು ಮುರಿದು ಹಾಕಿ.
* ಈಗ ಈರುಳ್ಳಿ, ಹಸಿ ಮೆಣಸು ಹಾಕಿ , ಈರುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವಾಗ, ಫ್ರೈ ಮಾಡಿದ ಬೆಳ್ಳುಳ್ಳಿ ಸೇರಿಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ, ಗ್ಯಾಸ್ ಸ್ಟೌವ್ ಆಫ್ ಮಾಡಿ.
* ಈಗ ಅನ್ನ ಹಾಕಿ, ಮಿಕ್ಸ್ ಮಾಡಿ ಸ್ವಲ್ಪ ನಿಂಬೆ ರಸ ಹಿಂಡಿ ಮತ್ತೊಮ್ಮೆ ಮಿಕ್ಸ್ ಮಾಡಿ, ಬೇಕಿದ್ದರೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿ ಬಿಸಿ ಇರುವಾಗಲೇ ಸರ್ವ್ ಮಾಡಿ.
- ನಾನಿಲ್ಲಿ 1 ಚಮಚ ಎಣ್ಣೆ, 1 ಚಮಚ ತುಪ್ಪ ಬಳಸಿದ್ದೇನೆ, ನಿಮಗೆ ಖಾರ ಬೇಕೆಂದರೆ ಇನ್ನೂ ಎರಡು ಹಸಿ ಮೆಣು ಅಧಿಕ ಸೇರಿಸಿ ಮಾಡಬಹುದು. ಮಕ್ಕಳಿಗಾದರೆ ಕಡಿಮೆ ಖಾರದಲ್ಲಿ ಮಾಡಿ ಕೊಟ್ಟರೆ ಇಷ್ಟಪಡುತ್ತಾರೆ.



Click it and Unblock the Notifications
