Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬಲು ಸುಲಭದಲ್ಲಿ ಮಾಡಬಹುದು ಬೆಳ್ಳುಳ್ಳಿ ಅನ್ನ, ರುಚಿಯಂತೂ ಬೊಂಬಾಟ್
ಚಿತ್ರಾನ್ನದಂತೆಯೇ ಸುಲಭದ ರೆಸಿಸಿ ಈ ಬೆಳ್ಳುಳ್ಳಿ ಅನ್ನ, ಚಿತ್ರಾನ್ನಕ್ಕಿಂತ ರುಚಿಯಲ್ಲಿ ಒಂದು ಕೈ ಮೇಲೆ ಅಂತ ಹೇಳಬಹುದು, ಈ ಬೆಳ್ಳುಳ್ಳಿ ಅನ್ನ ಬೆಳಗ್ಗೆ ಬ್ರೇಕ್ಫಾಸ್ಟ್ಗೆ ಮಾಡುವುದು ಸುಲಭ ಅಲ್ಲದೆ ಬೆಳ್ಳುಳ್ಳಿ ಬಳಸುವುದರಿಂದ ಜೀರ್ಣಕ್ರಿಯೆಗೂ ತುಂಬಾನೇ ಒಳ್ಳೆಯದು, ಬನ್ನಿ ಸುಲಭದಲ್ಲಿ ಮಾಡಬಹುದಾದ ಈ ಬೆಳ್ಳುಳ್ಳಿ ಅನ್ನ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
2 ಚಮಚ ತೆಂಗಿನೆಣ್ಣೆ (ತೆಂಗಿನೆಣ್ಣೆ ಬಳಸಲ್ಲ ಎಂದಾದರೆ ಇತರ ಅಡುಗೆಯೆಣ್ಣೆ
ಬಳಸಬಹುದು, ತುಪ್ಪ ಆದರೆ ಇನ್ನೂ ಟೇಸ್ಟ್ ಕೊಡುತ್ತೆ)
ಬೆಳ್ಳುಳ್ಳಿ 3(15-20 ಎಸಳು)
ಖಾರದ ಪುಡಿ 1 ಚಮಚ
ಖಾರದ ಪುಡಿ ಬಳಸದಿದ್ದರೆ ಹಸಿ ಮೆಣಸು 2-3(ನಿಮ್ಮ ಖಾರಕ್ಕೆ ತಕ್ಕಂತೆ
ಬಳಸಬಹುದು)
ಸಾಸಿವೆ 1/4 ಚಮಚ
ಉದ್ದು 1 ಚಮಚ
ಕಡ್ಲೆಬೇಳೆ 1 ಚಮಚ
ಈರುಳ್ಳಿ 1
ತೆಂಗಿನ ತುರಿ 1/2 ಕಪ್
ಅನ್ನ ಒಂದೂವರೆ ಕಪ್
ಸ್ವಲ್ಪ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
- ರಾತ್ರಿ ಮಾಡಿದ ಅನ್ನ ಉಳಿದಿದ್ದರೆ ಅದನ್ನು ಬಳಸಬಹುದು ಅಥವಾ ಅನ್ನ ಮಾಡಿ ಬಳಸಬಹುದು
- ತುಪ್ಪ ಅಥವಾ ತೆಂಗಿನೆಣ್ಣೆ ಹಾಕಿ ಬಿಸಿ ಮಾಡಿ ಬಳಿಕ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡಿ ಉದ್ದು ಹಾಗೂ ಕಡ್ಲೆ ಬೇಳೆ ಹಾಕಿ ಬಳಿ ಬೆಳ್ಳುಳ್ಳು ಎಸಳು ಹಾಕಿ ಫ್ರೈ ಮಾಡಿ, ಬೆಳ್ಳುಳ್ಳಿ ಕಂದು ಬಣ್ಣಕ್ಕೆ ಬಂದಾಗ ಈರುಳ್ಳಿ ಹಾಕಿ
- ನಂತರ ಉಪ್ಪು ಸೇರಿಸಿ
- ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ
- ನಂತರ ಉಡಿ ಆಫ್ ಮಾಡಿ ಅನ್ನ ಹಾಕಿ ಮಿಕ್ಸ್ ಮಾಡಿ
- ಬಳಿಕ ಸ್ವಲ್ಪ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿ ರುಚಿಯಾದ ಬೆಳ್ಳುಳ್ಳಿಅನ್ನ ರೆಡಿ.
ಸಲಹೆ: ನೀವು ಮೆಣಸು ಪುಡಿ ಬಳಸಿದರೆ ಅನ್ನ ಕೆಂಪು ಬಣ್ಣದಲ್ಲಿರಬಹುದು, ಹಸಿ
ಮೆಣಸು ಬಳಸಿದರೆ ಬಿಳಿ ಬಣ್ಣದಲ್ಲಿರುತ್ತದೆ
ಬೇಕಿದ್ದರೆ ಶೇಂಗಾ ಬೀಜ ಕೂಡ ಸೇರಿಸಬಹುದು.
ಅದಕ್ಕೆ ಕಾಂಬಿನೇಷನ್ ಆಗಿ ಈ ಚಟ್ನಿ ಬಳಸಿ
ತೆಂಗಿನ ತುರಿ ಅರ್ಧ ಕಪ್
ಈರುಳ್ಳಿ 1
ಹಸಿ ಮೆಣಸು 2-3 (ಖಾರಕ್ಕೆ ತಕ್ಕ ಹಾಗೆ)
ಸ್ವಲ್ಪ ಕೊತ್ತಂಬರಿ ಸೊಪ್ಪ
ಸ್ವಲ್ಪ ಹುಣಸೆಹಣ್ಣು
ರುಚಿಗೆ ತಕ್ಕ ಉಪ್ಪು
ಈ ಎಲ್ಲಾ ಸಾಮಗ್ರಿ ಹಾಕಿ ಚಟ್ನಿ ಮಾಡಿ, ತುಂಬಾ ಗಟ್ಟಿ ಚಟ್ನಿಯಲ್ಲ, ತುಂಬಾ ನೀರು-ನೀರಾಗಿಯೂ ಇರಬಹುದು, ಅಂಥ ಚಟ್ನಿ ಈ ಬೆಳ್ಳುಳ್ಳಿ ಅನ್ನದ ಜೊತೆ ಸವಿಯಲು ಚೆನ್ನಾಗಿರುತ್ತದೆ.
ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶ
ಮ್ಯಾಂಗನೀಸ್
ವಿಟಮಿನ್ ಬಿ6
ವಿಟಮಿನ್ ಸಿ
ಸೆಲೆನಿಯಮ್
ನಾರಿನಂಶ
ಬೆಳ್ಳುಳ್ಳಿಯಿಂದ ದೊರೆಯುವ ಪ್ರಯೋಜನಗಳು
ರೋಗ ನಿರೋಶಕ ಶಕ್ತಿ ಹೆಚ್ಚಿಸುತ್ತದೆ
ಬೆಳ್ಳುಳ್ಳಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಶೀತ, ಕೆಮ್ಮು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.
ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿ
ರಕ್ತದೊತ್ತಡ ನಿಯಂತ್ರಣದಲ್ಲಿಡಲು ಬೆಳ್ಳುಳ್ಳಿ ಸಹಕಾರಿಯಾಗಿದೆ. ಹೃದಯದ
ಆರೋಗ್ಯಕ್ಕೆ ಒಳ್ಳೆಯದು, ಪಾರ್ಶ್ವವಾಯು ಈ ಬಗೆಯ ಸಮಸ್ಯೆ ತಡೆಗಟ್ಟಲು
ಸಹಕಾರಿ.
ಕೊಲೆಸ್ಟ್ರಾಲ್ ಪ್ರಮಾಣ ನಿಯಂತ್ರಣದಲ್ಲಿಡಲು ಸಹಕಾರಿ. ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ.
ಬೆಳ್ಳುಳ್ಳಿ ಅನ್ನ ಮಾಡುವುದರಿಂದ ದೊರೆಯುವ ಪ್ರಯೋಜನಗಳು:
ಸುಲಭವಾಗಿ ಮಾಡಬಹುದಾಗಿರುವುದರಿಂದ ಬೆಳಗ್ಗೆ ಅರ್ಜೆಂಟಾಗಿ ಅಡುಗೆ ಮಾಡಬೇಕು ಎಂದಾಗ ಇದನ್ನು ಮಾಡಬಹುದು, ಉಪ್ಪಿಟ್ಟು ಆದರೆ ಕೆಲವರು ಇಷ್ಟಪಡಲ್ಲ, ಆದರೆ ಈ ಬೆಳ್ಳುಳ್ಳಿ ಅನ್ನ ಎಲ್ಲರಿಗೂ ಇಷ್ಟವಾಗುವುದು.



Click it and Unblock the Notifications
