Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಬಾಯಿ ರುಚಿ ಹೆಚ್ಚಿಸುವ 2 ಬಗೆಯ ಕೆಂಪು ಚಟ್ನಿ ರೆಸಿಪಿ
ಜ್ವರ ಬಂದಾಗ ಬಾಯಿಗೆ ಯಾವ ಆಹಾರ ರುಚಿಸುವುದಿಲ್ಲ, ನೀವು ಈ ಚಟ್ನಿ ಮಾಡಿ ಕೊಡಿ ಗಂಜಿ ಕುಡಿಯಲು ಖುಷಿಯಾಗುವುದು. ಈ ಚಟ್ನಿಯನ್ನು ಬರಿ ಜ್ವರ ಬಂದಾಗ ಮಾತ್ರವಲ್ಲ, ಅನ್ನದ ಜೊತೆ ಸೈಡ್ ಐಟಂ ಆಗಿ ಕೂಡ ಬಳಸಬಹುದು, ಬನ್ನಿ ಈ ಚಟ್ನಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
6-8 ಒಣಮೆಣಸು
ಒಂದು ಬೆಳ್ಳುಳ್ಳಿ
1 ಈರುಳ್ಳಿ
ಉಪ್ಪು
ಸ್ವಲ್ಪ ಹುಣಸೆಹಣ್ಣು ಅಥವಾ ನಿಂಬೆ ಹಣ್ಣು
1 ಚಮಚ ತೆಂಗಿನೆಣ್ಣೆ
ಮಾಡುವ ವಿಧಾನ
- ಒಣ ಮೆಣಸು ತವಾದಲ್ಲಿ ಹುರಿಯಿರಿ
- ನಂತರ ಬೆಳ್ಳುಳ್ಳು ಎಸಳು ಹುರಿಯಿರಿ
- ನಂತರ ಸ್ವಲ್ಪ ತಣ್ಣಗಾಗಲು ಒಂದು ತಟ್ಟೆಗೆ ಹಾಕಿ
- ಬಳಿಕ ಒಂದು ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ
- ಈ ಸಾಮಗ್ರಿ ಮಿಕ್ಸಿ ಜಾರ್ಗೆ ಹಾಕಿ ಉಪ್ಪು, ಹುಣಸೆ ಹಣ್ಣು ಸೇರಿಸಿ ರುಬ್ಬಿ
- ಬಳಿಕ ಒಂದು ಚಮಚ ತೆಂಗಿನೆಣ್ಣೆ ಹಾಕಿದರೆ ಬೆಳ್ಳುಳ್ಳಿ ಕೆಂಪು ಚಟ್ನಿ ರೆಡಿ.
ಮತ್ತೊಂದು ಕೆಂಪು ಚಟ್ನಿ ರೆಸಿಪಿ
100ಗ್ರಾಂ ಒಣಮೆಣಸು
1 ಚಮಚ ಹುಣಸೆಹಣ್ಣು
1 ಚಮಚ ಸಾಸಿವೆ
ಸ್ವಲ್ಪ ಇಂಗು
1/2 ಚಮಚ ಮೆಂತೆ ಪುಡಿ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ:
- ಒಣ ಮೆಣಸಿನ ತೊಟ್ಟು ತೊಳೆದು ನಂತರ ಅದರ ನೀರಿನಂಶ ಹೋಗಲು ಟವಲ್ನಿಂದ ಒತ್ತಿ
- ನಂತರ ಪ್ಯಾನ್ಗೆ ಒಂದು ಚಮಚ ಹಾಕಿ ಒಣಮೆಣಸು ಹಾಕಿ ಫ್ರೈ ಮಾಡಿ, 2-3 ನಿಮಿಷ ಫ್ರೈ ಮಾಡಿ, ಆದರೆ ಒಣ ಕಪ್ಪು ಬಣ್ಣಕ್ಕೆ ತಿರುಗುವಷ್ಟು ಫ್ರೈ ಮಾಡಬೇಡಿ
- ಈಗ ಒಣ ಮೆಣಸನ್ನು ತಣ್ಣಗಾಗಲು ತಟ್ಟೆಗೆ ಹಾಕಿ, ನಂತರ ಸ್ವಲ್ಪ ಹುಣಸೆ ಹಣ್ಣು ಸೇರಿಸಿ, ಉಪ್ಪು ಸೇರಿಸಿ ರುಬ್ಬಿಡಿ
- ಈಗ ಪ್ಯಾನ್ಗೆ 2 ಚಮಚ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆ, ಇಂಗು, ಮೆಂತೆ ಪುಡಿ ಹಾಕಿ ರುಬ್ಬಿದ ಪೇಸ್ಟ್ಗೆ ಸೇರಿಸಿ.
- ಚಟ್ನಿ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್ನಲ್ಲಿಟ್ಟು ದೋಸೆ, ಅನ್ನ, ಚಟ್ನಿಗೆ ಬಳಸಬಹುದು, ಇದು ತಿಂಗಳವರೆಗೆ ಬಾಳಿಕೆ ಬರುತ್ತದೆ.
ಈ ಬೆಳ್ಳುಳ್ಳಿ ಚಟ್ನಿಯ ಪ್ರಯೋಜನಗಳು
ಕೆಮ್ಮು, ಶೀತಕ್ಕೆ ಉತ್ತಮ ಮನೆಮದ್ದು ಬೆಳ್ಳುಳ್ಳಿ ಹಾಕಿದ ಈ ಚಟ್ನಿ. ಎರಡು ಎಸಲು
ಬೆಳ್ಳುಳ್ಳಿಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ತುಂಬಾನೇ ಒಳ್ಳೆಯದು, ಮಕ್ಕಳಿಗೆ
ಶೀತ, ಮೆಮ್ಮು ಇದ್ದಾಗ ಬೆಳ್ಳುಳ್ಳಿ ಜಜ್ಜಿ ಬಟ್ಟೆಯಲ್ಲಿ ಸುತ್ತಿ ಮಕ್ಕಳ ಎದೆ
ಭಾಗದಲ್ಲಿ ಕಟ್ಟುತ್ತಾರೆ, ಇದರಿಂದ ಮೂಗು ಕಟ್ಟಿದ್ದರೆ ಸರಿಯಾಗಿ ಉಸಿರಾಟಕ್ಕೆ
ತೊಂದರೆಯಾಗಲ್ಲ.
ಬೆಳ್ಳುಳ್ಳಿ ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಬೆಳ್ಳುಳ್ಳಿಯಲ್ಲಿರುವ ಎಲಿಸಿನ್ (Allicin) ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್
ಕಡಿಮೆ ಮಾಡಲು ಸಹಕಾರಿ, ಇದರಿಂದಾಗಿ ಆರೋಗ್ಯಕ್ಕೆ ತುಂಬಾಬೇ ಒಳ್ಳೆಯದು.
ಜೀರ್ಣಕ್ರಿಯೆಗೆ ಒಳ್ಳೆಯದು
ಜ್ವರ ಬಂದಾಗ ಈ ಜೀರ್ಣಕ್ರಿಯೆ ನಿಧಾನವಾಗುವುದು, ಈ ಬೆಳ್ಳುಳ್ಳಿ ಚಟ್ನಿ
ಜೀರ್ಣಕ್ರಿಯೆಗೆ ಸಹಕಾರಿ.
ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ
ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಈ ಬೆಳ್ಳುಳ್ಳಿ ಸಹಕಾರಿ.
ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ
ಬೆಳ್ಳುಳ್ಳಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಕಾರಿ.
ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು
ಮ್ಯಾಂಗನೀಸ್
ವಿಟಮಿನ್ ಬಿ6
ವಿಟಮಿನ್ ಸಿ
ಸೆಲೆನಿಯಮ್
ನಾರಿನಂಶ
ಕ್ಯಾಲ್ಸಿಯಂ, ಸತು, ಪೊಟಾಷ್ಯಿಯಂ, ಕಬ್ಬಿಣದಂಶ
ಈ ಮೆಣಸಿನ ಬೆಳ್ಳುಳ್ಳಿ ಚಟ್ನಿ ಮಳೆಗಾಲದಲ್ಲಿ ಊಟದ ಜೊತೆ ಸ್ವಲ್ಪ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ಇದನ್ನು ತಿಂದರೆ ತಿಂದ ಆಹಾರ ತುಂಬಾ ಚೆನ್ನಾಗಿ ಜೀರ್ಣವಾಗುವುದು.
ಇಂಗು, ಕೆಂಪು ಮೆಣಸು ಹಾಕಿ ಮಾಡಿದ ಚಟ್ನಿ ಕೂಡ ಬಾಯಿ ರುಚಿಸುತ್ತದೆ, ಇಂಗು, ಮೆಂತೆ ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು.



Click it and Unblock the Notifications