Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಗಣೇಶ ಚತುರ್ಥಿ 2022: ಮಾಡಲು ಸುಲಭವಾದ ಭಿನ್ನ-ಭಿನ್ನ ಮೋದಕ ರೆಸಿಪಿ
ಗಣೇಶನಿಗೆ ಮೋದಕವೆಂದರೆ ತುಂಬಾ ಇಷ್ಟ. ಗಣೇಶ ಚತುರ್ಥಿಯಂದು ಗಣೇಶನಿಗೆ ನೈವೇದ್ಯವಾಗಿ ನೀಡಲು ಮೋದಕ ಇರಲೇಬೇಕು, ಅದರಲ್ಲೂ ವಿವಿಧ ಬಗೆಯ ಮೋದಕವನ್ನು ಗಣಪನಿಗೆ ಅರ್ಪಿಸಲಾಗುವುದು. ಈ ಗಣೇಶ ಚತುರ್ಥಿಗೆ ನೀವು ಮೋದಕವನ್ನು ಅಂಗಡಿಯಿಂದ ತರುವ ಬದಲು ಮನೆಯಲ್ಲಿಯೇ ಮಾಡಬಹುದಾಗಿದ್ದು ರೆಸಿಪಿ ಕೂಡ ಸುಲಭವಾಗಿದೆ .

ನಾವಿಲ್ಲಿ ಸುಲಭದಲ್ಲಿ ಮಾಡಬಹುದಾದ ಕೆಲ ಮೋದಕ ರೆಸಿಪಿ ನೀಡಿದ್ದೇವೆ ನೋಡಿ:

ಕೇಸರಿ ಮೋದಕ
ಬೇಕಾಗುವ ಸಾಮಗ್ರಿಗಳು
ಎರಡೂವರೆ ಕಪ್ ಹಾಲಿನ ಪುಡಿ
1/4 ಕಪ್ ತುಪ್ಪ
1/2ಕಪ್ ತರಿತರಿಯಾಗಿ ಪುಡಿ ಮಾಡಿದ ಬಾದಾಮಿ
1/2 ಚಮಚ ಕೇಸರಿ
3/4 ಕಪ್ ದಪ್ಪ ಹಾಲು
1/2 ಕಪ್ ಪುಡಿ ಮಾಡಿದ ಸಕ್ಕರ
1 ಚಮಚ ಏಲಕ್ಕಿ ಪುಡಿ
ತ ಯಾರಿಸುವ ವಿಧಾನ
* ಹಾಲನ್ನು ಕುದಿಸಿ, ಗ್ಯಾಸ್ ಆಫ್ ಮಾಡಿ ಕೇಸರಿ ಸೇರಿಸಿ 20-30 ನಿಮಿಷ ಬಿಡಿ.
* ಈಗ ನಾನ್ಸ್ಟಿಕ್ ಪ್ಯಾನ್ಗೆ ಕೇಸರಿ ಮಿಕ್ಸ್ ಮಾಡಿದ ಹಾಲು ಹಾಕಿ, ಅದಕ್ಕೆ ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಬಾದಾಮಿ ಪುಡಿ ಸೇರಿಸಿ, ಅದಕ್ಕೆ ಸಕ್ಕರೆ ಪುಡಿ ಹಾಗೂ ಹಾಲಿನ ಪುಡಿ ಸೇರಿಸಿ, ಗಂಟು ಕಟ್ಟದಂತೆ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಏಲಕ್ಕಿ ಪುಡಿ ಸೇರಿಸಿ ಕಡಿಮೆ ಉರಿಯಲ್ಲಿ ಸೌಟ್ನಿಂದ ತಿರುಗಿಸುತ್ತಾ 15 ನಿಮಿಷ ಮಿಕ್ಸ್ ಮಾಡುತ್ತಲೇ ಇರಿ.
* ಮಿಶ್ರಣ ಸ್ವಲ್ಪ ಗಟ್ಟಿಯಾದಾಗ ಅದನ್ನು ಮೋದಕ ಮೌಲ್ಡ್ ಒಳಗಡೆ ಹಾಕಿ ತೆಗೆದು ಮೋದಕವನ್ನು ಗಣಪನಿಗೆ ಅರ್ಪಿಸಿ ನಂತರ ನೀವೂ ಸವಿಯಿರಿ.

ಕಾಯಿ ಮೋದಕ
ಬೇಕಾಗುವ ಸಾಮಗ್ರಿ
2 ಕಪ್ ಅಕ್ಕಿ ಹಿಟ್ಟು
1 ಕಪ್ ನೀರು
1 ಚಮಚ ತುಪ್ಪ
1/2 ಚಮಚ ಉಪ್ಪು
ಮೋದಕ ಒಳಗೆ ತುಂಬಲು
2 ಕಪ್ ತೆಂಗಿನ ತುರಿ
1 ಕಪ್ ಬೆಲ್ಲದ ಪುಡಿ
1 ಚಮಚ ತುಪ್ಪ
1/2 ಚಮಚ ಏಲಕ್ಕಿ
ತಯಾರಿಸುವ ವಿಧಾನ:
* ಮೊದಲಿಗೆ ಮೋದಕದ ಒಳಗೆ ತುಂಬಲು ರೆಡಿ ಮಾಡಬೇಕು.
* ನಂತರ ಮೋದಕ ಹಿಟ್ಟು ತಯಾರಿಸಬೇಕು.
* ಮೋದಕ ತಯಾರಿಸಿ ಅದರೊಳಗೆ ಬೆಲ್ಲ ಮಿಕ್ಸ್ ಮಾಡಿದ ತೆಂಗಿನ ತುರಿ ತುಂಬಿದರೆ ಕಾಯಿ ಮೋದಕ ರೆಡಿ.

ಓರಿಯೋ ಮೋದಕ
* 2 ಪ್ಯಾಕೆಟ್ ಓರಿಯೋ ಬಿಸ್ಕೆಟ್ ತಂದು ಅದರ ಕ್ರೀಮ್ ಸಪರೇಟ್ ಮಾಡಿ, ಬಿಸ್ಕೆಟ್ ಮಿಕ್ಸಿಯಲ್ಲಿ ಪುಡಿ ಮಾಡಿ.
* ಅದರ ಮೇಲೆ ಮಿಲ್ಕ್ಮೇಡ್ ಹಾಕಿ ಮಿಕ್ಸ್ ಮಾಡಿ.
* ಮಿಶ್ರಣ ತುಂಬಾ ನೀರು-ನೀರಾಗಬಾರದು, ಮಿಲ್ಕ್ಮೇಡ್ ನೋಡಿ ಹಾಕಿ.
* ಈಗ ಒಂದು ಕಪ್ ತೆಂಗಿನಕಾಯಿ ತುರಿ ತೆಗೆದು ಅದಕ್ಕೆ ಸಕ್ಕರೆ ಹಾಕಿ ಮಿಕ್ಸ್ ಮಾಡಿ.
* ಮೋದ ಮೌಲ್ಡ್ ತೆಗೆದು ಅದರಲ್ಲಿ ಮೊದಲಿಗೆ ಮಿಸ್ಕೆಟ್ ಮಿಶ್ರಣ ತುಂಬಿ ನಂತರ ಒಳಗಡೆ ತೆಂಗಿನಕಾಯಿ ತುರಿ ತುಂಬಿ, ಮೌಲ್ಡ್ನಿಂದ ಮೋದಕ ತೆಗೆದರೆ ಗಣಪನಿಗೆ ಅರ್ಪಿಸಿ ಸವಿಯಲು ರುಚಿಯಾ ಮೋದಕ ರೆಡಿ.



Click it and Unblock the Notifications
