Latest Updates
-
ಮಳೆಗಾಲದಲ್ಲಿ ಡೆಂಗ್ಯೂ ಕಾಟ: ಮನೆಯಲ್ಲೇ 7 ನಿಮಿಷದ ಈ ಚೆಕ್ ಲಿಸ್ಟ್ ಪಾಲಿಸಿ, ಸುರಕ್ಷಿತವಾಗಿರಿ! -
ನಾಗರ ಪಂಚಮಿ: ದೇವಸ್ಥಾನದ ಕ್ಯೂನಲ್ಲಿ ನಿಲ್ಲುವಾಗ ಬೆನ್ನು, ಕಾಲು ನೋವು ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿ ವ್ಯಕ್ತಪಡಿಸುವ ಮುನ್ನ ಎಚ್ಚರ: ದಂಪತಿಗಳಿಗೆ ಇಲ್ಲಿದೆ ಡಿಜಿಟಲ್ ಶಿಷ್ಟಾಚಾರದ ಟಿಪ್ಸ್ -
ಮಳೆಗಾಲದ ಸಂಜೆ: ನಿಮ್ಮ ಅಪಾರ್ಟ್ಮೆಂಟ್ ಸೋರಿಕೆಯಾಗದಂತೆ ತಡೆಯಲು ಈ ತ್ವರಿತ ಟಿಪ್ಸ್ ಫಾಲೋ ಮಾಡಿ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: 30 ನಿಮಿಷದಲ್ಲಿ ಸುಂದರ ಪೂಕಳಂ ಬಿಡಿಸುವುದು ಹೇಗೆ? -
ಶ್ರಾವಣ ಸೋಮವಾರದ ವ್ರತ: ಆಫೀಸ್ ಕೆಲಸದ ನಡುವೆ ಮಧುಮೇಹಿಗಳು ಆರೋಗ್ಯವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್ -
ಮಳೆಗಾಲದ ಫೋಟೋಗಳು ವೈರಲ್ ಆಗಬೇಕಾ? ಈ ಸಿಂಪಲ್ ಮೊಬೈಲ್ ಟ್ರಿಕ್ಸ್ ಟ್ರೈ ಮಾಡಿ! -
ಆಗಸ್ಟ್ 17 ರಂದು ರಜೆ ಇದೆಯಾ? ಕೃಷ್ಣ ಜನ್ಮಾಷ್ಟಮಿ ಗೊಂದಲಕ್ಕೆ ಇಲ್ಲಿದೆ ಸ್ಪಷ್ಟ ಮಾಹಿತಿ -
ಪಾರ್ಸಿ ಹೊಸ ವರ್ಷದ ಸಂಭ್ರಮ: ನಿಮ್ಮ ಪಾರ್ಸಿ ಸಂಬಂಧಿಕರ ಮನೆಗೆ ಹೋಗುವಾಗ ಈ ಶಿಷ್ಟಾಚಾರಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ ನಂತರದ ಕ್ಲೀನಪ್: ಬಾಲ್ಕನಿ ಸ್ವಚ್ಛತೆ ಮತ್ತು ರಾಷ್ಟ್ರಧ್ವಜದ ಗೌರವಯುತ ನಿರ್ವಹಣೆ
ಗಣೇಶ ಚತುರ್ಥಿ ರೆಸಿಪಿ: ಬೆಲ್ಲ, ಶುಗರ್ ಫ್ರೀ ಮೋದಕ ರೆಸಿಪಿ
ಹಬ್ಬ ಹರಿದಿನ ಬಂದಾಗ ಎಷ್ಟು ಖುಷಿಯಾಗುವುದೋ, ಮಧುಮೇಹಿಗಳಿಗೆ ಅಷ್ಟೇ ಬೇಸರವಾಗುತ್ತದೆ, ಕಾರಣ ಹಬ್ಬದ ಖುಷಿಯಲ್ಲಿ ಸಿಹಿ ತಿನ್ನುವಂತೆ ಇಲ್ಲ. ಹಬ್ಬದ ಅಡುಗೆಯ ರುಚಿ ಅನಿಸುವುದೇ ಸಿಹಿ ಸವಿದಾಗ. ಇದೀಗ ಗೌರಿ-ಗಣೇಶ ಹಬ್ಬ ಬರುತ್ತಿದೆ. ಗಣೇಶನ ಹಬ್ಬದಲ್ಲಿ ಬಗೆ ಬಗೆಯ ಮೋದಕಗಳದ್ದೇ ಕಾರುಬಾರು.
ಮೋದಕಗಳನ್ನು ನೋಡುವಾಗ ತಿನ್ನಬೇಕೆಂಬ ಆಸೆ ಆಗುತ್ತಿದೆ, ತಿಂದರೆ ಎಲ್ಲಿ ಹೆಚ್ಚು ಕಡಿಮೆಯಾಗುವುದೇ ಎಂಬ ಭಯ, ಆದರೆ ಈ ಬಾರಿ ಮೋದಕ ಸವಿಯಲು ಮಿಸ್ ಮಾಡ್ಬೇಡಿ, ಏಕೆಂದರೆ ಯಾವುದೇ ಭಯವಿಲ್ಲದೆ ಸವಿಯಬಹುದು ಶುಗರ್ ಫ್ರೀ ಮೋದಕ.

ಬೇಕಾಗುವ ಸಾಮಗ್ರಿ
ತುಪ್ಪ 3 ಚಮಚ
ಗಸೆಗಸೆ 3-4 ಚಮಚ (ಅಲಂಕಾರಕ್ಕೆ ಮತ್ತೆ 3 ಚಮಚ ಗಸೆಗಸೆ ಬೇಕು)
ರುಬ್ಬಿದ ಖರ್ಜೂರ
ಪಿಸ್ತಾ 3-4 ಚಮಚ
ಗೋಡಂಬಿ 3-4 ಚಮಚ
ಎಣ್ಣೆ 3-4 ಚಮಚ
ಮಾಡುವ ವಿಧಾನ
* ಒಂದು ಬೌಲ್ ತುಂಬಾ ಖರ್ಜೂರ ತೆಗೆದು ಅದರ ಬೀಜನ್ನು ತೆಗೆಯಿರಿ.
* ನಂತರ ಗಟ್ಟಿಯಾಗಿ ಮಿಕ್ಸಿಯಲ್ಲಿ ರುಬ್ಬಿ
* ಗಸೆಗಸೆಯನ್ನು ಸ್ವಲ್ಪ ಹುರಿಯಿರಿ
* ಒಂದು ಬೌಲ್ಗೆ 2 ಚಮಚ ತುಪ್ಪ ಹಾಕಿ ಅದಕ್ಕೆ ರುಬ್ಬಿದ ಖರ್ಜೂರ ಹಾಕಿ.
* ಅದಕ್ಕೆ ಪಿಸ್ತಾ, ಬಾದಾಮಿ, ಗೋಡಂಬಿ, ರೋಸ್ಟ್ ಮಾಡಿದ ಗಸೆಗಸೆ ಸೇರಿಸಿ.
* ಮತ್ತೊಂದು ಪಾತ್ರೆಯಲ್ಲಿ ರೋಸ್ಟ್ ಮಾಡಿದ ಗಸೆಗಸೆ ಹಾಗೂ ಪುಡಿ ಮಾಡಿದ ಪಿಸ್ತಾ
ಹಾಕಿ.
* ಮೋದಕ ಮೌಲ್ಡ್ಗೆ ಎಣ್ಣೆ ಹಚ್ಚಿ ಅದರಲ್ಲಿ ಮೋದಕವನ್ನು ತುಂಬಿ ನಂತರ ಅದರಿಂದ
ತೆಗೆದು ಅದನ್ನು ಪಿಸ್ತಾ ಹಾಗೂ ಗಸೆಗಸೆ ಮಿಶ್ರಣದಲ್ಲಿ ಅದ್ದಿ ಶುಗರ್ ಫ್ರೀ ಮೋದಕ
ರೆಡಿ.
ಸೂಚನೆ: ಈ ಮೋದಕವನ್ನು ಮಧುಮೇಹಿಗಳು ಆಸೆಗಷ್ಟೇ ಸೇವಿಸಬೇಕು, ಖರ್ಜೂರದಲ್ಲಿ ಕಡಿಮೆ ಗ್ರೈಸೆಮಿಕ್ ಇಂಡೆಕ್ಸ್ ಇದೆ, ಆದ್ದರಿಂದ ಇದನ್ನು ತಿನ್ನಿ, ಆದರೆ ಅತಿಯಾಗಿ ತಿನ್ನಬೇಡಿ.



Click it and Unblock the Notifications