Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಗಣೇಶ ಚತುರ್ಥಿ ರೆಸಿಪಿ: ಓರಿಯೋ ಬಿಸ್ಕೆಟ್‌ನಿಂದ ಸುಲಭದಲ್ಲಿ ಮಾಡಬಹುದು ಈ ಮೋದಕ
ಈ ಗಣೇಶ ಚತುರ್ಥಿಗೆ ಎಷ್ಟು ಬಗೆಯ ಮೋದಕ ಮಾಡಬೇಕೆಂದು ಬಯಸಿದ್ದೀರಾ? ಗಣೇಶನಿಗೆ ಬಗೆ-ಬಗೆಯ ಮೋದಕಗಳನ್ನು ಅರ್ಪಿಸಿ ಪೂಜಿಸಲಾಗುವುದು. ಸೆಪ್ಟೆಂಬರ್ 18-19ರಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುವುದು. ಕೆಲವೊಂದು ಮೋದಕಗಳನ್ನು ನೀವು ಸುಲಭವಾಗಿ ತಯಾರಿಸಬಹುದು. ನಾವಿಲ್ಲಿ ಓರಿಯೋ ಬಿಸ್ಕೆಟ್ ಬಳಸಿ ಮೋದಕ ಮಾಡುವ ರೆಸಿಪಿ ನೀಡಿದ್ದೇವೆ. ಇದನ್ನು ಮಾಡು 3 ಸಾಮಗ್ರಿ ಸಾಕು. ಬನ್ನಿ ಇದನ್ನು ಮಾಡುವುದು ಹೇಗೆ?

ಬೇಕಾಗುವ ಸಾಮಗ್ರಿ
* ಓರಿಯೋ ವೈಟ್ ಪ್ಯಾಕ್ ಬಿಸ್ಕೆಟ್ ( 2 ಚಿಕ್ಕ ಪ್ಯಾಕೆಟ್)
* ಗಟ್ಟಿ ಹಾಲು 2-3 ಚಮಚ (condensed milk)
* ತೆಂಗಿನತುರಿ 3 ಚಮಚ
* ತುಪ್ಪ
ಮಾಡುವ ವಿಧಾನ:
ಸ್ಟಫಿಂಗ್ ಮಾಡುವುದು ಹೇಗೆ?
* ಓರಿಯೋ ಮೋದಕ್ ಮಾಡುವ ಮುನ್ನ ನೀವು ಸ್ಟಫಿಂಗ್‌ಗೆ ರೆಡಿ ಮಾಡಬೇಕು.
* ಓರಿಯೋ ಬಿಸ್ಕೆಟ್‌ನ ಬಿಳಿ ಕ್ರೀಮ್ ತೆಗೆದು ಅದನ್ನು ತೆಂಗಿನ ತುರಿ ಜೊತೆ
ಮಿಕ್ಸ್ ಮಾಡಿ.
ಮೋದಕದ ಹೊರಭಾಗವನ್ನು ತುಯಾರಿಸಲು
* ಓರಿಯೋ ಬಿಸ್ಕೆಟ್ ಅನ್ನು ಮಿಕ್ಸಿಯಲ್ಲಿ ನುಣ್ಣನೆ ಪುಡಿ ಮಾಡಿ
* ನಂತರ ಅದಕ್ಕೆ ಗಟ್ಟಿ ಹಾಲನ್ನು ಹಾಕಿ ಗಟ್ಟಿ ಪೇಸ್ಟ್ ಮಾಡಿ
(ನೀರಾಗಬಾರದು)
ಮಾಡುವ ವಿಧಾನ
ನೀವು ಮೋದಕ ಮೌಲ್ಡ್‌ಗೆ ತುಪ್ಪ ಸವರಿ
* ಈಗ ಬಿಸ್ಕೆಟ್ ಪೇಸ್ಟ್‌ನಿಂದ ಚಿಕ್ಕ ಉಂಡೆ ಮಾಡಿ, ನಂತರ ಬೆರಳಿನಿಂದ ರಂಧ್ರ
ಮಾಡಿ ಅದರಲ್ಲಿ ವೈಟ್ ಕ್ರೀಮ್ ಹಾಗೂ ತೆಂಗಿನತುರಿ ಮಿಶ್ರಣ ತುಂಬಿ
ಉಂಡೆಕಟ್ಟಿ
* ನಂತರ ಮೋದಕ ಮೌಲ್ಡ್‌ನಲ್ಲಿ ಹಾಕಿ ಬಿಗಿ ಮಾಡಿ
* ನಂತರ ಮೆಲ್ಲನೆ ತೆಗೆದರೆ ಓರಿಯೋ ಮೋದಕ ರೆಡಿ.



Click it and Unblock the Notifications
