Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಗಣೇಶ ಚತುರ್ಥಿಗೆ ತೆಂಗಿನಕಾಯಿ ಮೋದಕ ರೆಸಿಪಿ: ಈ ಮೋದಕ ತಿಂಗಳವರೆಗೆ ಇಡಬಹುದು
ಗಣೇಶ ಚತುರ್ಥಿ ಬಂತೆಂದರೆ ಮೋದಕಗಳದ್ದೇ ಕಾರುಬಾರು. ನೀವು ಬಗೆ ಬಗೆಯ ಮೋದಕಗಳನ್ನು ಮಾಡಬಹುದು. ಈಗಲೇ ಮೋದಕಗಳನ್ನು ಮಾಡಲು ಶುರು ಮಾಡಿರುತ್ತಾರೆ. ಏಕೆಂದರೆ ಗಣೇಶ ಮೋದಕ ಪ್ರಿಯ, ಹಾಗಾಗಿ ಬಗೆಬಗೆಯ ಮೋದಕಗಳನ್ನು ಮಾಡಲು ಶುರು ಮಾಡಿರುತ್ತರೆ. ಕೆಲವರು ನೂರೆಂಟು ಬಗೆಯ ಮೋದಕವನ್ನು ಗಣೇನಿಗೆ ಅರ್ಪಿಸುತ್ತಾರೆ. ಇಲ್ಲಿ ತೆಂಗಿನಕಾಯಿಯ ಮೋದಕ ನೀಡಲಾಗಿದೆ.
ತೆಂಗಿನಕಾಯಿಯಿಂದ ಭಿನ್ನ-ಭಿನ್ನವಾದ ಮೋದಕ ತಯಾರಸುತ್ತಾರೆ, ಅದರೆ ಇದು ಸ್ವಲ್ಪ ಭಿನ್ನವಾಗಿದೆ, ಅಲ್ಲದೆ ಈ ಮೋದಕ ತಯಾರಿಸಿದರೆ ನೀವು ತಿಂಗಳುಗಟ್ಟಲೆ ಇಟ್ಟು ಬಳಸಬಹುದು. ಬನ್ನಿ ತೆಂಗಿನಕಾಯಿಯ ಮೋದಕ ಮಾಡುವುದು ಹೇಗೆ ಎಮದು ನೋಡೋಣ:

ಸಲಹೆ: ಮೋದಕ ಅಚ್ಚು ಇದ್ದರೆ ತುಂಬಾ ಚೆನ್ನಾಗಿ ಬರುತ್ತದೆ.
ಇದರಲ್ಲಿ ಕೋಯಾ, ಮಂದ ಹಾಲು, ಗ್ಲುಟೇನ್ ಬಳಸಿಲ್ಲ
ಬೇಕಾಗುವ ಸಾಮಗ್ರಿ
2 ಕಪ್ ತೆಂಗಿನತುರಿ
1/2 ಕಪ್ ಹಾಲು(ಕಾಯಿ ಹಾಲು)
1/3 ಕಪ್ ಬೆಲ್ಲದ ಪುಡಿ
1 ಚಮಚ ಏಲಕ್ಕಿ
1/4 ಚಮಚ ಕೇಸರಿ(optional)
2 ಚಮಚ ತುಪ್ಪ
1 ಚಮಚ ಬಿಳಿ ಎಳ್ಳು
1 ಚಮಚ ನೆಲಗಡಲೆ
ಮಾಡುವುದು ಹೇಗೆ?
ಮೊದಲಿಗೆ ಬಿಳಿ ಎಳ್ಳನ್ನು ಹಾಕಿ ಹುರಿಯಬೇಕು
ನಂತರ ನೆಲಗಡಲೆ ಹಾಕಿ ಹುರಿಯಬೇಕು
ನಂತರ ಎರಡನ್ನೂ ಪುಡಿ ಮಾಡಿ
ಈಗ ತೆಂಗಿನ ತುರಿ ಹಾಗೂ ತುಪ್ಪ ತೆಗೆದುಕೊಳ್ಳಿ
ಈಗ ಪ್ಯಾನ್ಗೆ ತುಪ್ಪ ಹಾಕಿ ನಂತರ ಪುಡಿ ಮಾಡಿದ ತೆಂಗಿನ ತುರಿ, ತೆಂಗಿನಕಾಯಿ
ಹಾಲು, ಬೆಲ್ಲ ಹಾಕಿ ಹುರಿಯಿರಿ
ಏಲಕ್ಕಿ ಪುಡಿ ಸೇರಿಸಿ
ನಂತರ ಪುಡಿ ಮಾಡಿದ ಎಳ್ಳು, ನೆಲಗಡಲೆ ಹಾಕಿ ಮಿಕ್ಸ್ ಮಾಡಿ.
ನಂತರ ಸ್ವಲ್ಪ-ಸ್ವಲ್ಪ ಉಂಡೆ ಕಟ್ಟಿ ಮೋದಕ ಅಚ್ಚಿನಲ್ಲಿ ಹಾಕಿ ಪ್ರೆಸ್ ಮಾಡಿದರೆ
ಮೋದಕ ರೆಡಿ.
ಈ ಮೋದಕವನ್ನು ನೀವು ಸುಲಭವಾಗಿ ಹಾಗೂ ಪಟ್ ಅಂತ ಮಾಡಬಹುದು, ಇದನ್ನು ಮಾಡಿಟ್ಟರೆ ತಿಂಗಳವರೆಗೆ ಇಟ್ಟು ಬಳಸಬಹುದು.



Click it and Unblock the Notifications
