Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಅರಿಶಿಣದಲ್ಲಿ ಕಲಬೆರಿಕೆಯಾಗಿದೆಯೇ? ನೀವೇ ಈ ಟೆಸ್ಟ್ ಮೂಲಕ ತಿಳಿಯಬಹುದು ನೋಡಿ
ನಾವು ಮಾರುಕಟ್ಟೆಯಿಂದ ಯಾವುದೇ ಆಹಾರ ವಸ್ತು ಖರೀದಿಸುವಾಗ ಅದು ಅಸಲಿಯೋ, ನಕಲಿಯೋ ಎಂದು ನೋಡಿ ಪರೀಕ್ಷಿಸಿ ಖರೀದಿಸಬೇಕು. ಎಲ್ಲರ ಕಿಚನ್ನಲ್ಲಿ ಉಪ್ಪಿನಂತೆಯೇ ಕಡ್ಡಾಯವಾಗಿ ಇರುವ ವಸ್ತು ಅರಿಶಿಣ, ನಮ್ಮ ಭಾರತೀಯ ಶೈಲಿಯ ಅಡುಗೆಗೆ ಅರಿಶಿಣ ಬೇಕೇ ಬೇಕು. ಅರಿಶಿಣವನ್ನು ನಾವು ಬರಿ ಸಾರಿನ ಬಣ್ಣಕ್ಕಷ್ಟೇ ಬಳಸುವುದಿಲ್ಲ, ಬದಲಿಗೆ ಅದರಲ್ಲಿರುವ ಆರೋಗ್ಯವರ್ಧಕ ಗುಣಗಳೂ ಪ್ರಮುಖ ಕಾರಣಗಳಾಗಿವೆ.
ದಿನಾ ಒಂದು ಚಿಕ್ಕ ತುಂಡು ಅರಿಶಿಣ ತಿಂದರೆ ದೇಹಕ್ಕೆ ಅಷ್ಟೊಂದು ಪ್ರಯೋಜನವಿದೆ, ಆದರೆ ಈ ಅರಿಶಿಣ ಖರೀದಿ ಮಾಡುವಾಗ ಅದರಲ್ಲಿ ಕಲಬೆರಿಕೆಯಾಗಿದೆಯೇ ಎಂದು ಪರಿಶೀಲಿಸುವುದು ಕೂಡ ಮುಖ್ಯ, ಏಕೆಂದರೆ ಆರೋಗ್ಯ ಪ್ರಶ್ನೆ.... ಈ ಅರಿಶಿಣ ಪರಿಶುದ್ಧವೇ ಅಥವಾ ಕೃತಕ ಬಣ್ಣ ಮಿಶ್ರ ಮಾಡಲಾಗಿದೆಯೇ ಎಂದು ತಿಳಿಯಲು ಈ ಪರೀಕ್ಷೆ ಮಾಡಿ ನೋಡಿ:

ನೀರಿನಲ್ಲಿ ಕಲೆಸಿ ನೋಡಿ
ನೀವು ಒಂದು ಗಾಜಿನ ಲೋಟಕ್ಕೆ ನೀರು ತುಂಬಿ ಅದರಲ್ಲಿ ಒಂದು ಚಮಚ ಅರಿಶಿಣ ಹಾಕಿ, ಅರಿಶಿಣ ಹೋಗಿ ತಳದಲ್ಲಿ ನಿಂತು ನೀರು ನಿಧಾನಕ್ಕೆ ಹಳದಿ ಬಣ್ಣದಿ ಬಣ್ಣಕ್ಕೆ ತಿರುಗಿದರೆ ಅದು ಶುದ್ಧ ಅರಿಶಿಣ. ಅದೇ ನೀವು ನೀರಿಗೆ ಹಾಕಿದ ತಕ್ಷಣ ಕರಗಿ ನೀರು ತುಂಬಾ ಹಳದಿ ಬಣ್ಣದಲ್ಲಿದ್ದರೆ ಅದಕ್ಕೆ ಕೃತಕ ಬಣ್ಣ ಮಿಶ್ರ ಮಾಡಲಾಗಿದೆ ಎಂದು ಹೇಳಬಹುದು.
ಲ್ಯಾಬ್ ಟೆಸ್ಟ್ ಮಾಡುವುದಾದರೆ
ಒಂದು ವೇಳೆ ಅರಿಶಿಣ ಶುದ್ಧ ಇಲ್ಲ ಎಂದಾದರೆ ನೀವು ಲ್ಯಾಬ್ ಟೆಸ್ಟ್ನಲ್ಲಿಯೂ ಮಾಡಬಹುದು. ವಿಜ್ಞಾನ ವಿದ್ಯಾರ್ಥಿಯಾಗಿದ್ದರೆ ಲ್ಯಾಬ್ನಲ್ಲಿಯೂ ಪರಿಸೀಲಿಸಬಹುದು. ಸ್ವಲ್ಪ ಅರಿಶಿಣಕ್ಕೆ ಸ್ಟ್ರಾಂಗ್ ಹೈಡ್ರೋಕ್ಲೋರಿಕ್ ಆಸಿಡ್ ಸೇರಿಸಿ ಮಿಕ್ಸ್ ಮಾಡಿದರೆ ಅರಿಶಿಣದಲ್ಲಿ ಕಲಬೆರಿಕೆಯಾಗಿದ್ದರೆ ಮಿಶ್ರಣ ಪಿಂಕ್ ಬಣ್ಣಕ್ಕೆ ತಿರುಗುತ್ತದೆ, ಅದೇ ಶುದ್ಧ ಅರಿಶಿಣವಾದರೆ ಆ ರೀತಿ ಬಣ್ಣ ಬದಲಾಗುವುದಿಲ್ಲ.
FSSAI ಕೂಡ ಅರಿಶಿಣದ ಶುದ್ಧತೆ ಹೇಗೆ ಕಂಡು ಹಿಡಿಯುವುದು ಎಂಬುವುದರ ಬಗ್ಗೆ
ಹೇಳಿದೆ:
ನೀವು ಒಂದು ಲೋಟ ನೀರಿಗೆ ಒಂದು ಚಮಚ ಶುದ್ಧ ಅರಿಶಿಣ ಹಾಕಿ ಕಲೆಸಿಡಿ
ಅದೇ ರೀತಿ ಮತ್ತೊಂದು ಲೋಟದಲ್ಲಿ ಬಣ್ಣ ಮಿಶ್ರಿತ ಅರಿಶಿಣ ಕಲೆಸಿಡಿ
ಸ್ವಲ್ಪ ಹೊತ್ತು ಬಿಟ್ಟು ನೋಡಿದರೆ ಶುದ್ಧವಾದ ಅರಿಶಿಣ ಕಲೆಸಿಟ್ಟ ನೀರಿನ
ಲೋಟದಲ್ಲಿ ತೆಳು ಅರಿಶಿಣ ಬಣ್ಣವಿರುತ್ತದೆ
ಅದೇ ಬಣ್ಣ ಮಿಶ್ರವಾಗಿರುವ ಅರಿಶಿಣ ಹಾಕಿದ ಲೋಟ ತುಂಬಾನೆ ಹಳದಿ
ಬಣ್ಣದಲ್ಲಿರುತ್ತದೆ.
ಕಲಬೆರಿಕೆಯ ಅರಿಶಿಣ ಆರೋಗ್ಯ ಸಮಸ್ಯೆ ಹೆಚ್ಚಿಸುತ್ತದೆ
ಸಾಮಾನ್ಯವಾಗಿ ಅಡುಗೆಗೆ ಹೆಚ್ಚು ಅರಿಶಿಣ ಬಳಸಲ್ಲ, ಒಂದು ಚಮಚ, 1/2 ಚಮಚ ಈ ರೀತಿಯಾಗಿ ಅರಿಶಿಣ ಬಳಸುತ್ತೇವೆ. ಅಷ್ಟು ಅರಿಶಿಣದಲ್ಲಿ ಅಷ್ಟೊಂದು ಆರೋಗ್ಯವರ್ಧಕ ಗುಣಗಳಿರುತ್ತದೆ, ಅದೇ ಕಲಬೆರಿಕೆಯ ಅರಿಶಿಣ ಸೇವನೆಯಿಂದ ಕ್ಯಾನ್ಸರ್ ಸೇರಿ ಅನೇಕ ಮಾರಕ ರೋಗಗಳು ಬರಬಹುದು.
ಶುದ್ಧ ಅರಿಶಿಣ ಬಳಸುವುದರಿಂದ ಈ ಪ್ರಯೋಜನಗಳಿವೆ:
ಅರಿಶಿಣ ಉರಿಯೂತದ ಸಮಸ್ಯೆ ತಡೆಗಟ್ಟುತ್ತದೆ
ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ.
ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಕಡಿಮೆ ಮಾಡುತ್ತದೆ
ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ
ಅಲ್ಜೈಮರ್ಸ್ ಕಾಯಿಲೆ ತಡೆಗಟ್ಟುತ್ತದೆ
ಖಿನ್ನತೆ ತಡೆಗಟ್ಟುತ್ತದೆ
ಸಂಧಿವಾತ ಸಮಸ್ಯೆ ಇರುವವರಿಗೆ ಅರಿಶಿಣ ತುಂಬಾ ಒಳ್ಳೆಯದು.



Click it and Unblock the Notifications
