ಫ್ರೂಟ್ ಚಾಟ್ ರೆಸಿಪಿ/ ಹಣ್ಣುಗಳ ಚಾಟ್ ಪಾಕವಿಧಾನ

Posted By: Divya pandith
Subscribe to Boldsky

ಕುರುಕಲು ತಿಂಡಿಯನ್ನು ತಿಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುವ ಬದಲು, ಬಣ್ಣ ಬಣ್ಣದ ಹಣ್ಣುಗಳ ಹೋಳನ್ನು ಸವಿದರೆ ಆರೋಗ್ಯಕ್ಕೆ ಒಳ್ಳೆಯದು. ಮಕ್ಕಳು ಆಟವಾಡಿ ಬಂದಾಗ ಅಥವಾ ಶಾಲೆಯಿಂದ ಮನೆಗೆ ಮರಳಿದಾಗ ಸವಿಯಲು ಹಣ್ಣುಗಳನ್ನು ನೀಡಬೇಕು. ಆದರೆ ನಿತ್ಯವೂ ಅದೇ ಹಣ್ಣು ಎಂದಾದರೆ ಅವರಿಗೆ ಅಷ್ಟು ಆಕರ್ಷಕ ಹಾಗೂ ರುಚಿಕರವಾದ ತಿಂಡಿ ಎನಿಸದು. ಅದಕ್ಕೆ ಬದಲು ಹಣ್ಣಿನ ಚಾಟ್ ಅಥವಾ ಫ್ರೂಟ್ ಚಾಟ್ ಮಾಡಿಕೊಟ್ಟರೆ ಪ್ರೀತಿಯಿಂದ ಸವಿಯುತ್ತಾರೆ.

ಫ್ರೂಟ್ ಚಾಟ್/ ಹಣ್ಣಿನ ಚಾಟ್ ಪಂಜಾಬ್ ಮತ್ತು ದೆಹಲಿಯ ಜನಪ್ರಿಯವಾದ ಬೀದಿ ಆಹಾರ. ವಿವಿಧ ಹಣ್ಣುಗಳ ಮಿಶ್ರಣಕ್ಕೆ ನಿಂಬೆ ಹುಳಿ, ಉಪ್ಪು, ಚಾಟ್ ಮಸಾಲೆಯನ್ನು ಬೆರೆಸಿ ನೀಡಲಾಗುತ್ತದೆ. ವಿವಿಧ ಹಣ್ಣುಗಳು ವಿಭಿನ್ನ ರುಚಿಗಳಿಂದ ಕೂಡಿರುತ್ತವೆ. ಅದಕ್ಕೆ ಹಾಕುವ ಸಮ ಪ್ರಮಾಣದ ಉಪ್ಪು, ಹುಳಿ, ಖಾರ ನಾಲಿಗೆಗೆ ಇನ್ನಷ್ಟು ಮುದ ನೀಡುತ್ತವೆ. ಇದನ್ನು ಕೇವಲ ಮಕ್ಕಳಷ್ಟೇ ಅಲ್ಲ. ದೊಡ್ಡವರೂ ಸವಿಯಬಹುದು. ಹಬ್ಬದ ಸಂದರ್ಭದಲ್ಲಿ ಅಥವಾ ವ್ರತಾಚರಣೆಯ ಸಮಯದಲ್ಲಿ ಇದನ್ನು ತಯಾರಿಸಿಕೊಂಡು ತಿನ್ನಬಹುದು.

ಆರೋಗ್ಯಕ್ಕೆ ಪೂರಕವಾದ ಈ ಫ್ರೂಟ್ ಚಾಟ್/ಹಣ್ಣಿನ ಚಾಟ್ ಅನ್ನು ತಯಾರಿಸುವುದು ಬಲು ಸುಲಭ. ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ಪಾಕವಿಧಾನವನ್ನು ನೀವು ಮಾಡಲು ಉತ್ಸುಕರಾಗಿದ್ದರೆ ಈ ಕೆಳಗೆ ನೀಡಿರುವ ವಿಡಿಯೋ ಹಾಗೂ ಹಂತ ಹಂತವಾದ ಪಾಕವಿಧಾನದ ಮೊರೆ ಹೋಗಬಹುದು.

fruit chaat recipe
ಫ್ರೂಟ್ ಚಾಟ್ ರೆಸಿಪಿ |ಹಂತ ಹಂತವಾದ ಹಣ್ಣುಗಳ ಮಿಶ್ರಣ ಪಾಕವಿಧಾನ | ಫ್ರೂಟ್/ಹಣ್ಣುಗಳ ಚಾಟ್ ವೀಡಿಯೋ ರೆಸಿಪಿ |ವ್ರತ ರೆಸಿಪಿ |ಭಾರತೀಯ ಹಣ್ಣುಗಳ ಮಿಶ್ರಣದ ಪಾಕವಿಧಾನ.
ಫ್ರೂಟ್ ಚಾಟ್ ರೆಸಿಪಿ |ಹಂತ ಹಂತವಾದ ಹಣ್ಣುಗಳ ಮಿಶ್ರಣ ಪಾಕವಿಧಾನ | ಫ್ರೂಟ್/ಹಣ್ಣುಗಳ ಚಾಟ್ ವೀಡಿಯೋ ರೆಸಿಪಿ |ವ್ರತ ರೆಸಿಪಿ |ಭಾರತೀಯ ಹಣ್ಣುಗಳ ಮಿಶ್ರಣದ ಪಾಕವಿಧಾನ.
Prep Time
10 Mins
Cook Time
5M
Total Time
15 Mins

Recipe By: ಸೌಮ್ಯಾ ಶೇಖರ್

Recipe Type: ಉಪಹಾರ

Serves: 4 ಮಂದಿಗೆ

Ingredients
  • ಬಾಳೆಹಣ್ಣು - 2

    ಸೇಬು-1

    ಸೀಬೆ ಹಣ್ಣು/ಕಾಯಿ -1

    ದಾಳಿಂಬೆ - 1/2

    ಕಿವಿ ಹಣ್ಣು -1

    ಮರಸೇಬು (ಪಿಯರ್) - 1

    ನಿಂಬೆ ರಸ - 4 ಟೀ ಚಮಚ

    ಕಲ್ಲುಪ್ಪು (ರಾಕ್ ಸಾಲ್ಟ್) - ರುಚಿಗೆ

    ಚಾಟ್ ಮಸಾಲ - 1/2 ಟೀ ಚಮಚ

Red Rice Kanda Poha
How to Prepare
  • 1. ಬಾಳೆ ಹಣ್ಣಿನ ಸಿಪ್ಪೆ ತೆಗೆದು ವೃತ್ತಾಕಾರದಲ್ಲಿ ಕತ್ತರಿಸಿಕೊಳ್ಳಬೇಕು.

    2. ಸೇಬು ಹಣ್ಣಿನ ಬೀಜಗಳನ್ನು ತೆಗೆದು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ.

    3. ಸೀಬೆ ಹಣ್ಣಿನ ಸಿಪ್ಪೆ ತೆಗೆದು ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ.

    4. ದಾಳಿಂಬೆ ಹಣ್ಣನ್ನು ಸರಿಯಾಗಿ ಎರಡು ಭಾಗ ಮಾಡಿ, ಒಂದು ಭಾಗದ ಬೀಜಗಳನ್ನು ತೆಗೆದು ಒಂದು ಕಪ್‍ನಲ್ಲಿ ಇರಿಸಿ.

    5. ಕಿವಿ ಹಣ್ಣಿನ ಸಿಪ್ಪೆಯನ್ನು ತೆಗೆದು ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ.

    6. ಮರಸೇಬು(ಪಿಯರ್) ಹಣ್ಣಿನ ಸಿಪ್ಪೆ ಹಾಗೂ ಬೀಜವನ್ನು ತೆಗೆದು ಹೋಳುಗಳನ್ನಾಗಿ ಕತ್ತರಿಸಿ.

    7. ಈ ಎಲ್ಲಾ ಹಣ್ಣನ್ನು ಒಂದು ದೊಡ್ಡ ಬೌಲ್/ಪಾತ್ರೆಯಲ್ಲಿ ಹಾಕಿ.

    8. ನಿಂಬೆ ರಸವನ್ನು ಸೇರಿಸಿ.

    9. ನಂತರ ಕಲ್ಲುಪ್ಪನ್ನು ಹಾಕಿ.

    10. ಚಾಟ್ ಮಸಾಲವನ್ನು ಸೇರಿಸಿ.

    11. ಇವೆಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ, ಸವಿಯಲು ನೀಡಿ.

Instructions
  • 1. ನಿಮಗೆ ಇಷ್ಟವಾಗುವ ಹಣ್ಣುಗಳನ್ನು ಸೇರಿಸಿಕೊಳ್ಳಬಹುದು.
  • 2. ನಿಮಗೆ ಹೆಚ್ಚು ಖಾರ ಬೇಕೆಂದರೆ ಖಾರದ ಪುಡಿ ಅಥವಾ ಕಾಳುಮೆಣಸಿನ ಪುಡಿಯನ್ನು ಸೇರಿಸಿಕೊಳ್ಳಬಹುದು.
  • 3. ಇದರ ಪರಿಮಳವನ್ನು ಹೆಚ್ಚಿಸಿಕೊಳ್ಳಲು ಜೀರಿಗೆ ಪುಡಿಯನ್ನು ಸೇರಿಸಬಹುದು.
  • 4. ಉತ್ಸವ ಅಥವಾ ವ್ರತಾಚರಣೆಗೆ ತಯಾರಿಸಿದ್ದರೆ ಕಲ್ಲುಪ್ಪಿನ ಬದಲು ಸಾಮಾನ್ಯ ಉಪ್ಪನ್ನು ಸೇರಿಸಿಕೊಳ್ಳಬಹುದು.
Nutritional Information
  • ಸರ್ವಿಂಗ್ ಸೈಜ್ - 1 ಬೌಲ್
  • ಕ್ಯಾಲೋರಿ - 120 ಕ್ಯಾಲ್
  • ಫ್ಯಾಟ್ - 0.7 ಗ್ರಾಂ.
  • ಪ್ರೋಟೀನ್ - 1.6 ಗ್ರಾಂ.
  • ಕಾರ್ಬೋಹೈಡ್ರೇಟ್ - 24.1 ಗ್ರಾಂ.
  • ಫೈಬರ್ - 2.7 ಗ್ರಾಂ.

ಹಂತ ಹಂತವಾದ ಹಣ್ಣುಗಳ ಮಿಶ್ರಣ ಪಾಕವಿಧಾನ

1. ಬಾಳೆ ಹಣ್ಣಿನ ಸಿಪ್ಪೆ ತೆಗೆದು ವೃತ್ತಾಕಾರದಲ್ಲಿ ಕತ್ತರಿಸಿಕೊಳ್ಳಬೇಕು.

fruit chaat recipe
fruit chaat recipe

2. ಸೇಬು ಹಣ್ಣಿನ ಬೀಜಗಳನ್ನು ತೆಗೆದು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ.

fruit chaat recipe
fruit chaat recipe

3. ಸೀಬೆ ಹಣ್ಣಿನ ಸಿಪ್ಪೆ ತೆಗೆದು ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ.

fruit chaat recipe
fruit chaat recipe

4. ದಾಳಿಂಬೆ ಹಣ್ಣನ್ನು ಸರಿಯಾಗಿ ಎರಡು ಭಾಗ ಮಾಡಿ, ಒಂದು ಭಾಗದ ಬೀಜಗಳನ್ನು ತೆಗೆದು ಒಂದು ಕಪ್‍ನಲ್ಲಿ ಇರಿಸಿ.

fruit chaat recipe

5. ಕಿವಿ ಹಣ್ಣಿನ ಸಿಪ್ಪೆಯನ್ನು ತೆಗೆದು ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ.

fruit chaat recipe
fruit chaat recipe

6. ಮರಸೇಬು(ಪಿಯರ್) ಹಣ್ಣಿನ ಸಿಪ್ಪೆ ಹಾಗೂ ಬೀಜವನ್ನು ತೆಗೆದು ಹೋಳುಗಳನ್ನಾಗಿ ಕತ್ತರಿಸಿ.

fruit chaat recipe
fruit chaat recipe

7. ಈ ಎಲ್ಲಾ ಹಣ್ಣನ್ನು ಒಂದು ದೊಡ್ಡ ಬೌಲ್/ಪಾತ್ರೆಯಲ್ಲಿ ಹಾಕಿ.

fruit chaat recipe

8. ನಿಂಬೆ ರಸವನ್ನು ಸೇರಿಸಿ.

fruit chaat recipe

9. ನಂತರ ಕಲ್ಲುಪ್ಪನ್ನು ಹಾಕಿ.

fruit chaat recipe

10. ಚಾಟ್ ಮಸಾಲವನ್ನು ಸೇರಿಸಿ.

fruit chaat recipe

11. ಇವೆಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ, ಸವಿಯಲು ನೀಡಿ.

fruit chaat recipe
fruit chaat recipe
For Quick Alerts
ALLOW NOTIFICATIONS
For Daily Alerts
    [ 5 of 5 - 90 Users]
    Read more about: fruits snacks navratri recipes
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more