Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಫ್ರೂಟ್ ಚಾಟ್ ರೆಸಿಪಿ/ ಹಣ್ಣುಗಳ ಚಾಟ್ ಪಾಕವಿಧಾನ
ಕುರುಕಲು ತಿಂಡಿಯನ್ನು ತಿಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುವ ಬದಲು, ಬಣ್ಣ ಬಣ್ಣದ ಹಣ್ಣುಗಳ ಹೋಳನ್ನು ಸವಿದರೆ ಆರೋಗ್ಯಕ್ಕೆ ಒಳ್ಳೆಯದು. ಮಕ್ಕಳು ಆಟವಾಡಿ ಬಂದಾಗ ಅಥವಾ ಶಾಲೆಯಿಂದ ಮನೆಗೆ ಮರಳಿದಾಗ ಸವಿಯಲು ಹಣ್ಣುಗಳನ್ನು ನೀಡಬೇಕು. ಆದರೆ ನಿತ್ಯವೂ ಅದೇ ಹಣ್ಣು ಎಂದಾದರೆ ಅವರಿಗೆ ಅಷ್ಟು ಆಕರ್ಷಕ ಹಾಗೂ ರುಚಿಕರವಾದ ತಿಂಡಿ ಎನಿಸದು. ಅದಕ್ಕೆ ಬದಲು ಹಣ್ಣಿನ ಚಾಟ್ ಅಥವಾ ಫ್ರೂಟ್ ಚಾಟ್ ಮಾಡಿಕೊಟ್ಟರೆ ಪ್ರೀತಿಯಿಂದ ಸವಿಯುತ್ತಾರೆ.
ಫ್ರೂಟ್ ಚಾಟ್/ ಹಣ್ಣಿನ ಚಾಟ್ ಪಂಜಾಬ್ ಮತ್ತು ದೆಹಲಿಯ ಜನಪ್ರಿಯವಾದ ಬೀದಿ ಆಹಾರ. ವಿವಿಧ ಹಣ್ಣುಗಳ ಮಿಶ್ರಣಕ್ಕೆ ನಿಂಬೆ ಹುಳಿ, ಉಪ್ಪು, ಚಾಟ್ ಮಸಾಲೆಯನ್ನು ಬೆರೆಸಿ ನೀಡಲಾಗುತ್ತದೆ. ವಿವಿಧ ಹಣ್ಣುಗಳು ವಿಭಿನ್ನ ರುಚಿಗಳಿಂದ ಕೂಡಿರುತ್ತವೆ. ಅದಕ್ಕೆ ಹಾಕುವ ಸಮ ಪ್ರಮಾಣದ ಉಪ್ಪು, ಹುಳಿ, ಖಾರ ನಾಲಿಗೆಗೆ ಇನ್ನಷ್ಟು ಮುದ ನೀಡುತ್ತವೆ. ಇದನ್ನು ಕೇವಲ ಮಕ್ಕಳಷ್ಟೇ ಅಲ್ಲ. ದೊಡ್ಡವರೂ ಸವಿಯಬಹುದು. ಹಬ್ಬದ ಸಂದರ್ಭದಲ್ಲಿ ಅಥವಾ ವ್ರತಾಚರಣೆಯ ಸಮಯದಲ್ಲಿ ಇದನ್ನು ತಯಾರಿಸಿಕೊಂಡು ತಿನ್ನಬಹುದು.
ಆರೋಗ್ಯಕ್ಕೆ ಪೂರಕವಾದ ಈ ಫ್ರೂಟ್ ಚಾಟ್/ಹಣ್ಣಿನ ಚಾಟ್ ಅನ್ನು ತಯಾರಿಸುವುದು ಬಲು ಸುಲಭ. ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ಪಾಕವಿಧಾನವನ್ನು ನೀವು ಮಾಡಲು ಉತ್ಸುಕರಾಗಿದ್ದರೆ ಈ ಕೆಳಗೆ ನೀಡಿರುವ ವಿಡಿಯೋ ಹಾಗೂ ಹಂತ ಹಂತವಾದ ಪಾಕವಿಧಾನದ ಮೊರೆ ಹೋಗಬಹುದು.

Recipe By: ಸೌಮ್ಯಾ ಶೇಖರ್
Recipe Type: ಉಪಹಾರ
Serves: 4 ಮಂದಿಗೆ
-
ಬಾಳೆಹಣ್ಣು - 2
ಸೇಬು-1
ಸೀಬೆ ಹಣ್ಣು/ಕಾಯಿ -1
ದಾಳಿಂಬೆ - 1/2
ಕಿವಿ ಹಣ್ಣು -1
ಮರಸೇಬು (ಪಿಯರ್) - 1
ನಿಂಬೆ ರಸ - 4 ಟೀ ಚಮಚ
ಕಲ್ಲುಪ್ಪು (ರಾಕ್ ಸಾಲ್ಟ್) - ರುಚಿಗೆ
ಚಾಟ್ ಮಸಾಲ - 1/2 ಟೀ ಚಮಚ
-
1. ಬಾಳೆ ಹಣ್ಣಿನ ಸಿಪ್ಪೆ ತೆಗೆದು ವೃತ್ತಾಕಾರದಲ್ಲಿ ಕತ್ತರಿಸಿಕೊಳ್ಳಬೇಕು.
2. ಸೇಬು ಹಣ್ಣಿನ ಬೀಜಗಳನ್ನು ತೆಗೆದು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ.
3. ಸೀಬೆ ಹಣ್ಣಿನ ಸಿಪ್ಪೆ ತೆಗೆದು ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ.
4. ದಾಳಿಂಬೆ ಹಣ್ಣನ್ನು ಸರಿಯಾಗಿ ಎರಡು ಭಾಗ ಮಾಡಿ, ಒಂದು ಭಾಗದ ಬೀಜಗಳನ್ನು ತೆಗೆದು ಒಂದು ಕಪ್‍ನಲ್ಲಿ ಇರಿಸಿ.
5. ಕಿವಿ ಹಣ್ಣಿನ ಸಿಪ್ಪೆಯನ್ನು ತೆಗೆದು ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ.
6. ಮರಸೇಬು(ಪಿಯರ್) ಹಣ್ಣಿನ ಸಿಪ್ಪೆ ಹಾಗೂ ಬೀಜವನ್ನು ತೆಗೆದು ಹೋಳುಗಳನ್ನಾಗಿ ಕತ್ತರಿಸಿ.
7. ಈ ಎಲ್ಲಾ ಹಣ್ಣನ್ನು ಒಂದು ದೊಡ್ಡ ಬೌಲ್/ಪಾತ್ರೆಯಲ್ಲಿ ಹಾಕಿ.
8. ನಿಂಬೆ ರಸವನ್ನು ಸೇರಿಸಿ.
9. ನಂತರ ಕಲ್ಲುಪ್ಪನ್ನು ಹಾಕಿ.
10. ಚಾಟ್ ಮಸಾಲವನ್ನು ಸೇರಿಸಿ.
11. ಇವೆಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ, ಸವಿಯಲು ನೀಡಿ.
- 1. ನಿಮಗೆ ಇಷ್ಟವಾಗುವ ಹಣ್ಣುಗಳನ್ನು ಸೇರಿಸಿಕೊಳ್ಳಬಹುದು.
- 2. ನಿಮಗೆ ಹೆಚ್ಚು ಖಾರ ಬೇಕೆಂದರೆ ಖಾರದ ಪುಡಿ ಅಥವಾ ಕಾಳುಮೆಣಸಿನ ಪುಡಿಯನ್ನು ಸೇರಿಸಿಕೊಳ್ಳಬಹುದು.
- 3. ಇದರ ಪರಿಮಳವನ್ನು ಹೆಚ್ಚಿಸಿಕೊಳ್ಳಲು ಜೀರಿಗೆ ಪುಡಿಯನ್ನು ಸೇರಿಸಬಹುದು.
- 4. ಉತ್ಸವ ಅಥವಾ ವ್ರತಾಚರಣೆಗೆ ತಯಾರಿಸಿದ್ದರೆ ಕಲ್ಲುಪ್ಪಿನ ಬದಲು ಸಾಮಾನ್ಯ ಉಪ್ಪನ್ನು ಸೇರಿಸಿಕೊಳ್ಳಬಹುದು.
- ಸರ್ವಿಂಗ್ ಸೈಜ್ - 1 ಬೌಲ್
- ಕ್ಯಾಲೋರಿ - 120 ಕ್ಯಾಲ್
- ಫ್ಯಾಟ್ - 0.7 ಗ್ರಾಂ.
- ಪ್ರೋಟೀನ್ - 1.6 ಗ್ರಾಂ.
- ಕಾರ್ಬೋಹೈಡ್ರೇಟ್ - 24.1 ಗ್ರಾಂ.
- ಫೈಬರ್ - 2.7 ಗ್ರಾಂ.
ಹಂತ ಹಂತವಾದ ಹಣ್ಣುಗಳ ಮಿಶ್ರಣ ಪಾಕವಿಧಾನ
1. ಬಾಳೆ ಹಣ್ಣಿನ ಸಿಪ್ಪೆ ತೆಗೆದು ವೃತ್ತಾಕಾರದಲ್ಲಿ ಕತ್ತರಿಸಿಕೊಳ್ಳಬೇಕು.


2. ಸೇಬು ಹಣ್ಣಿನ ಬೀಜಗಳನ್ನು ತೆಗೆದು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ.


3. ಸೀಬೆ ಹಣ್ಣಿನ ಸಿಪ್ಪೆ ತೆಗೆದು ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ.


4. ದಾಳಿಂಬೆ ಹಣ್ಣನ್ನು ಸರಿಯಾಗಿ ಎರಡು ಭಾಗ ಮಾಡಿ, ಒಂದು ಭಾಗದ ಬೀಜಗಳನ್ನು ತೆಗೆದು ಒಂದು ಕಪ್‍ನಲ್ಲಿ ಇರಿಸಿ.

5. ಕಿವಿ ಹಣ್ಣಿನ ಸಿಪ್ಪೆಯನ್ನು ತೆಗೆದು ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ.


6. ಮರಸೇಬು(ಪಿಯರ್) ಹಣ್ಣಿನ ಸಿಪ್ಪೆ ಹಾಗೂ ಬೀಜವನ್ನು ತೆಗೆದು ಹೋಳುಗಳನ್ನಾಗಿ ಕತ್ತರಿಸಿ.


7. ಈ ಎಲ್ಲಾ ಹಣ್ಣನ್ನು ಒಂದು ದೊಡ್ಡ ಬೌಲ್/ಪಾತ್ರೆಯಲ್ಲಿ ಹಾಕಿ.

8. ನಿಂಬೆ ರಸವನ್ನು ಸೇರಿಸಿ.

9. ನಂತರ ಕಲ್ಲುಪ್ಪನ್ನು ಹಾಕಿ.

10. ಚಾಟ್ ಮಸಾಲವನ್ನು ಸೇರಿಸಿ.

11. ಇವೆಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ, ಸವಿಯಲು ನೀಡಿ.





Click it and Unblock the Notifications