Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
ಕ್ರಿಸ್ಮಸ್ ಕೇಕ್: ಫ್ರೂಟ್ ಕೇಕ್ ರೆಸಿಪಿ
ಡಿಸೆಂಬರ್ ಬಂತೆಂದರೆ ಒಂದು ರೀತಿಯ ಸಡಗರ, ವರ್ಷದ ಕೊನೆಯಾಗುತ್ತಿದೆ, ಹೊಸ ವರ್ಷ ಬರಲಿದೆ ಎಂಬ ಸಂಭ್ರಮ, ಜೊತೆಗೆ ಕ್ರಿಸ್ಮಸ್ ಖುಷಿ. ಕ್ರಿಸ್ಮಸ್ ಎಂದ ಮೇಲೆ ಕೇಕ್ ಇರಲೇಬೇಕು. ಎಲ್ಲಾ ಸ್ವೀಟ್ಸ್‌ಗಿಂತ ಕೇಕ್‌ಗಳದ್ದೇ ಕಾರುಬಾರು.

ಈ ಕ್ರಿಸ್ಮಸ್‌ಗೆ ನೀವು ಮನೆಯಲ್ಲಿ ಪ್ಲಮ್ ಅಥವಾ ಫ್ರೂಟ್ಸ್ ಕೇಕ್ಸ್ ಮಾಡಬಯಸುವುದಾದರೆ ಇಲ್ಲಿದೆ ನೋಡಿ ಸ್ಟೆಪ್ ಬೈ ಸ್ಟೆಪ್ ರೆಸಿಪಿ. ಇದನ್ನುಮೊಟ್ಟೆ ಹಾಕದೆ ಮಾಡುವ ರೆಸಿಪಿ ನೀಡಲಾಗಿದೆ, ನೀವು ಬೇಕಾದರೆ ಮೊಟ್ಟೆ ಹಾಕಿ ಮಾಡಿದರೆ ಮತ್ತಷ್ಟು ರುಚಿಯಾಗಿರುತ್ತೆ.
Recipe By: Reena TK
Recipe Type: Cake
Serves: 8
-
ಬೇಕಾಗುವ ಸಾಮಗ್ರಿ
* 1/4 ಕಪ್ ಒಣದ್ರಾಕ್ಷಿ
* 1/4 ಕಪ್ ಕ್ರ್ಯಾನ್‌ಬೆರ್ರಿ
* ಸ್ವಲ್ಪ ಒಣ ಅಂಜೂರ
* ಸ್ವಲ್ಪ ಏಪ್ರಿಕಾಟ್
* ಸ್ವಲ್ಪ ಒಣ ಖರ್ಜೂರ
* 1 ಕಪ್ ದ್ರಾಕ್ಷಿ ಜ್ಯೂಸ್ ಅಥವಾ ಆ್ಯಪಲ್ ಜ್ಯೂಸ್ ಅಥವಾ ರೆಡ್ ವೈನ್/ಬ್ರಾಂಡಿ/ರಮ್
ಪ್ಲಮ್ ಕೇಕ್‌ಗೆ ಹಟ್ಟು ರೆಡಿ ಮಾಡಲು ಬೇಕಾಗುವ ಸಾಮಗ್ರಿ
* ಒಂದೂ ಕಾಲು ಕಪ್ ಬಿಸಿ ನೀರು
* 1 ಕಪ್ ಬ್ರೌನ್ ಶುಗರ್ (ಪುಡಿ)
(ನೀವು ಬೇಕಿದ್ದರೆ ಬಿಳಿ ಸಕ್ಕರೆ ಪುಡಿ ಮಾಡಿ ಬಳಸಬಹುದು)
* ಕಾಲು ಕಪ್‌ನಷ್ಟು ವೆಜೆಟೇಬಲ್ ಎಣ್ಣೆ
* 2 ಕಪ್ ಮೈದಾ
* 1/2 ಚಮಚ ಬೇಕಿಂಗ್ ಪೌಡರ್
* 1/2 ಚಮಚ ಚಕ್ಕೆ ಪುಡಿ
* ಚಿಟಿಕೆಯಷ್ಟು ಉಪ್ಪು
* 1/4 ಚಮಚ ಜಾಯಿಕಾಯಿ (nutmug powder)
* 1/2 ಚಮಚ ಏಲಕ್ಕಿ
* 1 ಚಮಚ ವೆನಿಲ್ಲಾ ರಸ
* 1/2 ಚಮಚ ನಿಂಬೆ ರಸ
* ಸ್ವಲ್ಪ ವಾಲ್ನಟ್
-
ಮಾಡುವುದು ಹೇಗೆ?
ಸ್ಟೆಪ್ 1
* ಒಂದು ಬೌಲ್‌ಗೆ ಒಣ ಹಣ್ಣುಗಳನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ. ಬಾದಾಮಿ, ವಾಲ್ನಟ್ ಇವುಗಳನ್ನು ಅಷ್ಟೆ ಚಿಕ್ಕ-ಚಿಕ್ಕ ಪೀಸ್‌ಗಳಾಗಿ ಕತ್ತರಿಸಿ ಹಾಕಿ. ನಿಮಗೆ ಬೇಕದಷ್ಟು ಡ್ರೈಫ್ರೂಟ್ಸ್ ಸೇರಿಸಬಹುದು.
* ನಂತರ 1 ಕಪ್ ದ್ರಾಕ್ಷಿ ಜ್ಯೂಸ್ ಅಥವಾ ಬ್ರಾಂಡಿ/ರಮ್ ಹೀಗೆ ನಿಮಗಿಷ್ಟವಾದದ್ದನ್ನು ಸೇರಿಸಿ. ಆಲ್ಕೋಹಾಲ್ ಬಳಸಿದರೆ ರುಚಿ ಹೆಚ್ಚು.
* ಆಲ್ಕೋಹಾಲ್‌ನಲ್ಲಿ ಡ್ರೈ ಫ್ರೂಟ್ಸ್ ಅನ್ನು ಒಂದು ರಾತ್ರಿ ಇಡಿ. ದ್ರಾಕ್ಷಿ ಜ್ಯೂಸ್‌ನಲ್ಲಿ ನೆನೆಹಾಕಿದ್ದರೆ 2 ಗಂಟೆ ಇಟ್ಟರೆ ಸಾಕು, ಇಲ್ಲದಿದ್ದರೆ ದ್ರಾಕ್ಷಿ ಜ್ಯೂಸ್ ಹಾಳಾಗುವುದು.
ಸ್ಟೆಪ್ 2
ಒಂದು ಬೌಲ್‌ನಲ್ಲಿ11/4 ಕಪ್ ಬಿಸಿ ನೀರು ಹಾಕಿ, ಅದಕ್ಕೆ ಅ ಕಪ್ ಸಕ್ಕರೆ ಪುಡಿ ಹಾಕಿ. ಈಗ ಎಣ್ಣೆ ಹಾಕಿ, ಎಣ್ಣೆ ಬದಲಿಗೆ ಬೆಣ್ಣೆ ಕೂಡ ಬಳಸಬಹುದು.
* ನಂತರ ಚೆನ್ನಾಗಿ ಕಲೆಸಿ, ಸಕ್ಕರೆ ಸಂಪೂರ್ಣ ಕರಗಬೇಕು.
* ನಂತರ ಎರಡು ಕಪ್ ಮೈದಾ ಹಿಟ್ಟು ಹಾಕಿ.
* ಈಗ ಒಂದು ಚಮಚ ಬೇಕಿಂಗ್ ಪುಡಿ, ಅರ್ಧ ಚಮಚ ಅಡುಗೆ ಸೋಡಾ ಹಾಕಿ.
* ನಂತರ ಚಕ್ಕೆ ಪುಡಿ, ಜಾಯಿಕಾಯಿ ಪುಡಿ, ಏಲಕ್ಕಿ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಅರ್ಧ ನಿಂಬೆಯನ್ನು ತುರಿದು ಹಾಕಿ.
* ಒಂದು ಚಮಚ ವೆನಿಲ್ಲಾ ರಸ ಸೇರಿಸಿ.
* ಈಗ ಮಿಕ್ಸ್ ಮಾಡಿ, ತುಂಬಾ ಮಿಕ್ಸ್ ಮಾಡಬೇಡಿ, ಕೇಕ್ ಗಟ್ಟಿಯಾಗುವುದು.
* ನೆನೆ ಹಾಕಿದ ಡ್ರೈ ಪ್ರೂಟ್ಸ್ ಹಿಂಡಿ ಕೇಕ್ ಮಿಶ್ರಣಕ್ಕೆ ಹಾಕಿ.
* ಗೋಡಂಬಿ, ಬಾದಾಮಿ ಸೇರಿಸಿ.
* ಈಗ ಕೇಕ್ ಹಿಟ್ಟನ್ನು ಕೇಕ್ ಮೌಲ್ಡ್ ಅಥವಾ ಬ್ರೆಡ್ ಮೌಲ್ಡ್‌ಗೆ ಎಣ್ಣೆ ಸವರಿ ಸುರಿಯಿರಿ.
ಕೇಕ್ ತಯಾರಿ
ಈಗ ಓವನ್ ಪ್ರೀಹೀಟ್ ಮಾಡಿ ಕೇಕ್ ಅನ್ನು 180 ಡಿಗ್ರಿ C ಅಥವಾ 356 ಡಿಗ್ರಿ F ಉಷ್ಣತೆಗೆ 40 ನಿಮಿಷ ಬೇಯಿಸಿ.
* ನಂತರ ಓವನ್‌ನಿಂದ ತೆಗೆದು ತಣ್ಣಗಾಗಲು ಬಿಡಿ. ನಂತರ ಕತ್ತರಿಸಿ ಸರ್ವ್ ಮಾಡಿ.
- * ಮೊಟ್ಟೆ ಹಾಕದೆ ಮಾಡುವುದಾದರೆ ತುಂಬಾ ಎಣ್ಣೆ ಹಾಕಿ, ಮೊಟ್ಟೆ ಬಳಸುವುದಾದರೆ ಎಣ್ಣೆ ಕಡಿಮೆ ಸಾಕು. * ಬೇಯುವಾಗ ಗಮನಿಸಿ, ತುಂಬಾ ಹೊತ್ತಾದರೆ ಸೀದು ಹೋಗುವುದು.
- ಸರ್ವ್ - 1/4 ಕೆಜಿ
- ಕ್ಯಾಲೋರಿ - 390ಕ್ಯಾ
- ಕೊಬ್ಬು - 9ಗ್ರಾಂ
- ಪ್ರೊಟೀನ್ - 7 ಗ್ರಾಂ
- ಕಾರ್ಬ್ಸ್ - 71 ಗ್ರಾಂ



Click it and Unblock the Notifications