Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸೂಪರ್ ರುಚಿಯ ಮ್ಯಾಂಗೋ ಐಸ್‌ಕ್ರೀಮ್, ಕುಲ್ಫಿ ರೆಸಿಪಿ
ಸುಡು ಬಿಸಿಲಿಗೆ ಮಾವಿನ ಹಣ್ಣಿನ ಸ್ವಾದದ ಐಸ್‌ಕ್ರೀಮ್... ಆಹಾ! ಮಾವಿನ ಹಣ್ಣಿನ ಐಸ್‌ಕ್ರೀಮ್ ಅಂತ ಕೇಳಿದರೆ ಸಾಕು ಬಾಯಲ್ಲಿ ನೀರು ಬರುವುದು ಅಲ್ವಾ? ಹೇಳಿ ಕೇಳಿ ಇದು ಮಾವಿನ ಹಣ್ಣಿನ ಕಾಲ, ತರಾವರಿ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬಂದಿವೆ. ನಾವಿಲ್ಲಿ ತಾಜಾ ಮಾವಿನ ಹಣ್ಣು ಬಳಸಿ ಮಾವಿನ ಹಣ್ಣಿನ ಐಸ್‌ಕ್ರೀಂ ಮಾಡುವ ರೆಸಿಪಿ ನೀಡಿದ್ದೇವೆ ನೋಡಿ:

Recipe By: Reena TK
Recipe Type: Ice cream
Serves: 5
-
ಬೇಕಾಗುವ ಸಾಮಗ್ರಿ
* ನಾರಿಲ್ಲದ ಮಾವಿನ ಹಣ್ಣುಒಂದೂವರೆ ಕಪ್
* 1/2 ಕಪ್ ಸಕ್ಕರೆ
* 1/2 ಕಪ್ ಮಂದವಾದ ಹಾಲು(Condensed milk)
* 2 ಕಪ್ ಹಾಲು (ಕುದಿಸಿ ಆರಿಸಿದ್ದು)
1 ಚಮಚ ನಿಂಬೆರಸ
-
ಮಾಡುವುದು ಹೇಗೆ?
* ಮಾವಿನ ಹಣ್ಣಿಗೆ ಸಕ್ಕರೆ ಹಾಕಿ ನುಣ್ಣನೆ ರುಬ್ಬಿ
* ಒಂದು ದೊಡ್ಡ ಬೌಲ್‌ನಲ್ಲಿ ಹಾಕಿ, ಅದಕ್ಕೆ ತಣ್ಣನೆಯ ಹಾಲು, ಮಂದವಾದ, ಹಾಲು, ನಿಂಬೆರಸ ಹಾಕಿ ಮಿಕ್ಸ್ ಮಾಡಿ, ಅದನ್ನು ಒಂದು ಬೌಲ್‌ಗೆ ಹಾಕಿ ಅದನ್ನು ಅಲ್ಯುಮಿನಿಯಂ ಹಾಳೆ (Aluminum Foil)ನಿಂದ ಮುಚ್ಚಿ 6 ಗಂಟೆ ಫ್ರೀಝರ್‌ನಲ್ಲಿಡಿ.
* ನಂತರ ಫ್ರಿಡ್ಜ್‌ನಲ್ಲಿ ಹೊರತೆಗೆದು 5 ನಿಮಿಷ ಬಿಟ್ಟು ಮತ್ತೆ ಬ್ಲೆಂಡರ್‌ನಲ್ಲಿ ಹಾಕಿ ಬ್ಲೆಂಡ್ ಮಾಡಿ.
* ನಂತರ ಅದೇ ಪಾತ್ರೆಗೆ ಹಾಕಿ, ಗಾಳಿಯಾಡಂತೆ Aluminum Foilನಿಂದ ಮುಚ್ಚಿ ಮತ್ತೆ 10 ಗಂಟೆ ಇಟ್ಟರೆ ಐಸ್‌ಕ್ರೀಂ ರೆಡಿ.
- ಮಾವಿನ ಹಣ್ಣಿನ ಐಸ್‌ಕ್ರೀಂಗೆ ಡ್ರೈ ಫ್ರೂಟ್ಸ್‌ನಿಂದ ಟಾಪಿಂಗ್ ಮಾಡಿ
ಕುಲ್ಫಿ ಮಾಡಲು ಬಯಸುವುದಾದರೆ
1/2 ಕಪ್ ಫ್ರೆಷ್ ಮಾವಿನ ಹಣ್ಣಿನ ತಿರುಳು
1/2 ಕಪ್ ಚಿಕ್ಕದಾಗಿ ಕತ್ತರಿಸಿದ ಮಾವಿನ ಹಣ್ಣು
1/4 ಚಮಚ ಕೇಸರಿ
1 ಚಮಚ ಬಿಸಿ ಹಾಲು
1 ಚಮಚ ಕಾರ್ನ್‌ಫ್ಲೋರ್
41/2 ಕಪ್ ಮಂದ ಹಾಲು
5 ಚಮಚ ಸಕ್ಕರೆ
1/4 ಚಮಚ ಏಲಕ್ಕಿ
ಮಾಡುವ ವಿಧಾನ
* 2 ಚಮಚ ಬಿಸಿ ಹಾಲಿಗೆ ಕೇಸರಿ ಹಾಕಿಡಿ
*2 ಚಮಚ ನೀರಿನಲ್ಲಿ ಕಾರ್ನ್‌ಪ್ಲೋರ್ ಹಾಕಿ ಕಲೆಸಿ.
* ಈಗ ದಪ್ಪ ತಳವಿರುವ ಪಾತ್ರೆಗೆ ಹಾಲನ್ನು ಹಾಕಿ ಕುದಿಸಿ.
* ಈಗ ಜೋಳದ ಹಿಟ್ಟು ಮಿಶ್ರಣ ಹಾಕಿ, ಗಂಟು ಕಟ್ಟದಂತೆ ಸೌಟ್‌ನಿಂದ ತಿರುಗಿಸಿ.
* ಈಗ ಸಕ್ಕರೆ ಸೇರಿಸಿ ತಿರುಗಿಸಿ, ನಂತರ ಕಡಿಮೆ ಉರಿಯಲ್ಲಿ 25 ನಿಮಿಷ
ಕುದಿಸಿ.
* ನಂತರ ಸ್ವಿಚ್ ಆಫ್ ಮಾಡಿ ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
* ಹಾಲು ತಣ್ಣಗಾದ ಮೇಲೆ ಅದಕ್ಕೆ ರುಬ್ಬಿದ ಮಾವಿನ ಹಣ್ಣಿನ ಪೇಸ್ಟ್ ಹಾಕಿ ಮಿಶ್ರ
ಮಾಡಿ, ನಂತರ ಕೇಸರಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಚಿಕ್ಕದಾಗಿ ಕತ್ತರಿಸಿದ ಮಾವಿನ ತುಂಡುಗಳನ್ನು ಹಾಕಿ ಮಿಶ್ರ ಮಾಡಿ.
* ನಂತರ ಕುಲ್ಫಿ ಮೌಲ್ಡ್‌ಗೆ ಹಾಕಿ 8 ಗಂಟೆಗೆ ಫ್ರೀಝರ್‌ನಲ್ಲಿಡಿ. ರುಚಿಯಾದ
ಕುಲ್ಫಿ ರೆಡಿ.
ರೆಡಿಯಾದ ಕುಲ್ಫಿಯನ್ನು ಫ್ರಿಡ್ಜ್‌ನಿಂದ ತೆಗೆದು 2 ನಿಮಿಷ ಬಿಟ್ಟು ಕುಲ್ಫಿ
ಮೌಲ್ಡ್‌ನಿಂದ ತೆಗೆದು ಸರ್ವ್ ಮಾಡಿ.



Click it and Unblock the Notifications
