Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಬ್ರೇಕ್‌ಫಾಸ್ಟ್‌ಗೂ ಸೈ, ಲಂಚ್‌ಗೂ ಸೈ! 15 ನಿಮಿಷದಲ್ಲಿ ತಯಾರಿಸಿ ಈ ತಿಂಡಿ.. ಮಾಡೋದು ಹೇಗೆ?
ಮಾರ್ನಿಂಗ್ ಬ್ರೇಕ್‌ಫಾಸ್ಟ್‌ಗೂ ಸೈ, ಲಂಚ್ ಬಾಕ್ಸ್‌ಗೂ ಸೈ ಮತ್ತು ಸಂಜೆ ಸ್ನ್ಯಾಕ್ಸ್‌ಗೂ ಸೈ! ಜಸ್ಟ್ 15 ನಿಮಿಷದಲ್ಲಿ ಮಾಡಿ ಈ ತಿಂಡಿ! ಹೌದು, ಬಹುತೇಕರು ಬೆಳಗ್ಗಿನ ಗಡಿಬಿಡಿಯಲ್ಲಿ ಏನಾದರೂ ಕ್ವಿಕ್ ಆಗಿ ಮಾಡುವ ಬ್ರೇಕ್‌ಫಾಸ್ಟ್‌ಗಳನ್ನು ಇಷ್ಟಪಡುತ್ತಾರೆ. ಮಕ್ಕಳು ನಿತ್ಯ ಬೇರೆ ಏನಾದರೂ ಬೇಕು ಅಂತ ಹಠ ಮಾಡ್ತಾರೆ. ನಿನ್ನೆ (ಹಿಂದಿನ ದಿನ) ಇಡ್ಲಿ ಮಾಡಿದ್ದೆ, ಇಂದು ಹೊಸ ತಿಂಡಿ ಬೇಕು ಅನ್ನೋದು ಸಾಮಾನ್ಯ. ಇಂಹತ ಪರಿಸ್ಥಿತಿಯಲ್ಲಿ ಫ್ರೈಡ್ ರೈಸ್ (Fried rice) ಒಂದೊಳ್ಳೆಯ ಆಯ್ಕೆ. ಈ ಫ್ರೈಡ್ ರೈಸ್ ತಯಾರಿಸುವುದು ಸುಲಭ ಮತ್ತು ಇದು ಬೇಗನೆ ರೆಡಿ ಆಗುತ್ತದೆ.
ಬೆಳಗ್ಗಿನ ಜಾವ ಆತುರದಲ್ಲಿ, ಟಿಫಿನ್‌ಗೆ (morning breakfast) ಏನು ತಯಾರಿಸಬೇಕೆಂದು ತುಂಬಾ ಜನರಿಗೆ ಅರ್ಥ ಆಗಲ್ಲ. ಈ ಗಡಿಬಿಡಿಯಿಂದ, ಹಲವರು ಹೊರಗಿನ ತಿಂಡಿ (ಆಹಾರ) ತಿನ್ನುತ್ತಾರೆ. ಹೊರಗಿನ ಆಹಾರ ಹೆಚ್ಚು ತಿನ್ನುವುದು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ನೀವು ಕೂಡ ಬೆಳಗ್ಗೆ ಟಿಫಿನ್ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಖಂಡಿತವಾಗಿಯೂ ಈ ತಿಂಡಿ ಪ್ರಯತ್ನಿಸಿ. ನೀವು ಕಚೇರಿಗೆ ಹೋಗುವ ಒತ್ತಡ ಅಥವಾ ಆತುರದಲ್ಲಿದ್ದರೆ, ಫ್ರೈಡ್ ರೈಸ್ ಅನ್ನು (Fried rice Recipe) ಕೇವಲ 15 ರಿಂದ 20 ನಿಮಿಷಗಳಲ್ಲಿ ತಯಾರಿಸಬಹುದು. ಇದು ತುಂಬಾ ಟೇಸ್ಟಿಯಿಂದ ಕೂಡಿರುತ್ತದೆ.

ಫ್ರೈಡ್ ರೈಸ್ ತಯಾರಿಸಲು ಬೇಕಾಗುವ ಪದಾರ್ಥಗಳು
- ಬೇಯಿಸಿದ ಅನ್ನ
- ಈರುಳ್ಳಿ
- ಬೆಳ್ಳುಳ್ಳಿ
- ಕ್ಯಾಪ್ಸಿಕಂ
- ಕ್ಯಾರೆಟ್
- ಮೆಣಸಿನಕಾಯಿ
- ಶುಂಠಿ
- ಕಪ್ಪು ಮೆಣಸಿನ ಪುಡಿ
- ಹಸಿರು ಈರುಳ್ಳಿ
- ಬೀನ್ಸ್
- ಉಪ್ಪು
- ಸೋಯಾ ಸಾಸ್
- ವಿನೆಗರ್
- ಅಡುಗೆ ಎಣ್ಣೆ
ಫ್ರೈಡ್ ರೈಸ್ ತಯಾರಿಸುವ ವಿಧಾನ
ಮೊದಲು, ಒಂದು ಕಪ್ ಬೇಯಿಸಿದ ಅನ್ನ ತೆಗೆದುಕೊಳ್ಳಿ. ರಾತ್ರಿ ಉಳಿದ ಅನ್ನವನ್ನು ಫ್ರೈಡ್ ರೈಸ್ ಮಾಡಲು ಬಳಸಬಹುದು. ಅಥವಾ ರಾತ್ರಿ ಅನ್ನ ಮಾಡಿ ಫ್ರಿಡ್ಜ್‌ನಲ್ಲಿ ಇಡಬಹುದು. ಬೇಕಾದರೆ, ಬೆಳಗ್ಗೆಯೇ ಬಿಸಿ ಅನ್ನ ಸಹ ಮಾಡಬಹುದು. ಈಗ ಒಂದು ಸಣ್ಣಗೆ ಕತ್ತರಿಸಿದ ಕ್ಯಾರೆಟ್ ತೆಗೆದುಕೊಳ್ಳಿ. ಸ್ವಲ್ಪ ಕ್ಯಾಪ್ಸಿಕಂ ಮತ್ತು 4 ರಿಂದ 5 ಬೀನ್ಸ್ ಸಣ್ಣಗೆ ಕತ್ತರಿಸಿ. ನೆನಪಿಡಿ, ನೀವು ಇತರೆ ತರಕಾರಿಗಳನ್ನು ಸಹ ಬಳಸಬಹುದು.
ಇದಾದ ಬಳಿಕ, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ ತೆಗೆದುಕೊಳ್ಳಿ. ಮತ್ತು 3 ರಿಂದ 4 ಎಸಳು ಬೆಳ್ಳುಳ್ಳಿಯನ್ನು ನುಣ್ಣಗೆ ಮಾಡಿ. ಸಣ್ಣಗೆ ಹೆಚ್ಚಿದ ಸಣ್ಣ ಶುಂಠಿ ತುಂಡು ಮತ್ತು ಒಂದು ಅಥವಾ ಎರಡು ಹಸಿ ಮೆಣಸಿನಕಾಯಿಗಳನ್ನು ಸಹ ಕತ್ತರಿಸಿಕೊಳ್ಳಿ. ಮನೆಯಲ್ಲಿ ತಾಜಾ ಈರುಳ್ಳಿ ಎಲೆ (ಈರುಳ್ಳಿ ಕಾವು) ಇದ್ದರೆ, ಸ್ವಲ್ಪ ಕತ್ತರಿಸಿ ಇದಕ್ಕೆ ಸೇರಿಸಿ. ಟೈಮ್ ಉಳಿಸಬೇಕು ಎಂದರೆ, ನೀವು ತರಕಾರಿಗಳನ್ನು ಮುಂಚಿತವಾಗಿ ಕತ್ತರಿಸಬಹುದು.
ಈಗ ಗ್ಯಾಸ್ ಮೇಲೆ ಬಾಣಲೆ ಇಟ್ಟು ಬಿಸಿ ಮಾಡಿ. ಉರಿಯನ್ನು ಹೆಚ್ಚು ಇಡಿ. ಫ್ರೈಡ್ ರೈಸ್ ಅನ್ನು ಹೆಚ್ಚು ಉರಿಯಲ್ಲಿ ಮಾಡಬೇಕು. ಈಗ ಅದಕ್ಕೆ 2 ರಿಂದ 3 ಚಮಚ ಅಡುಗೆ ಎಣ್ಣೆ ಹಾಕಿ. ಇದಕ್ಬೆಕೆ ಳ್ಳುಳ್ಳಿ ಹಾಕಿ ಹುರಿಯಿರಿ. ಈರುಳ್ಳಿ ಕೂಡ ಬೆರೆಸಿ. ಶುಂಠಿ ಮತ್ತು ಮೆಣಸಿನಕಾಯಿ ಸೇರಿಸಿ ಹಾಗೆಯೇ ಮಿಕ್ಸ್ ಮಾಡಿ. ಈಗ ಕತ್ತರಿಸಿದ ತರಕಾರಿಗಳನ್ನು ಇದಕ್ಕೆ ಸೇರಿಸಬೇಕು. ಹಾಗೆಯೇ ಹೆಚ್ಚಿನ ಉರಿಯಲ್ಲಿ ಚೆನ್ನಾಗಿ ರೋಸ್ಟ್ ಮಾಡಿ. ತರಕಾರಿಗಳು ಬೆಂದ ಬಳಿಕ, ಅದಕ್ಕೆ ಅನ್ನ (ಅಕ್ಕಿ) ಸೇರಿಸಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿ, ಮಿಕ್ಸ್ ಮಾಡಿ.
ಟಿಫನ್ ಬಾಕ್ಸ್, ಲಂಚ್ ಬಾಕ್ಸ್ ಮತ್ತು ಸ್ನ್ಯಾಕ್ಸ್‌ಗೆ ಬೆಸ್ಟ್
ಈಗ ಅದಕ್ಕೆ ಒಂದು ಸ್ಪೂನ್ ಸೋಯಾ ಸಾಸ್ ಮತ್ತು ಒಂದು ಚಮಚ ವಿನೆಗರ್ ಹಾಕಿ. ಅದಕ್ಕೆ ಒಂದು ಚಿಟಿಕೆ ಸಕ್ಕರೆಯನ್ನೂ ಬಳಸಬಹುದು. ಸಕ್ಕರೆ ಸೇರಿಸುವುದರಿಂದ ಫ್ರೈಡ್ ರೈಸ್‌ನ ರುಚಿ ಸಮತೋಲನವಾಗಿರುತ್ತದೆ. ಹಾಗೆಯೇ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಅದರ ಮೇಲೆ ಒಂದು ಸ್ಪೂನ್ ಕರಿಮೆಣಸಿನ ಪುಡಿ ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ. ನೀವು ಅದಕ್ಕೆ ಪನೀರ್ ಸಹ ಸೇರಿಸಬಹುದು. ಇಷ್ಟು ಮಾಡಿದರೆ ಸಾಕು, ಕೆಲವೇ ನಿಮಿಷಗಳಲ್ಲಿ ಬಿಸಿಬಿಸಿಯಾದ ಫ್ರೈಡ್ ರೈಸ್ ಸಿದ್ಧವಾಗುತ್ತದೆ. ಇದನ್ನು ಮಕ್ಕಳ ಟಿಫನ್ ಬಾಕ್ಸ್, ನಿಮ್ಮ ಆಫೀಸ್‌ನ ಲಂಚ್ ಬಾಕ್ಸ್ ಮತ್ತು ಸಂಜೆ ಸ್ನ್ಯಾಕ್ಸ್‌ಗೂ ಬಳಸಬಹುದು.



Click it and Unblock the Notifications
