Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
Food: ಬೆಳಗ್ಗೆ ತಿಂಡಿಗೆ ರುಚಿ ರುಚಿಯ ಮಸಾಲೆ ರವೆ ಇಡ್ಲಿ ಮಾಡಿ ನೋಡಿ!!
ಬೆಳಗ್ಗೆ ತಿಂಡಿಗೆ ನೀವು ಇಡ್ಲಿ ಮಾಡಿ ಸವಿಯುಗವುದು ಬಹಳ ಕಾಮನ್, ಅದ್ರಲ್ಲೂ ದಕ್ಷಿಣ ಭಾರತದಲ್ಲಿ ಈ ಇಡ್ಲಿ ಸಾಂಬಾರ್ ಬಹಳ ಫೇಮಸ್. ಇಡ್ಲಿ ರಸಿಪಿ ಮಾಡೋದು ಬಹಳ ಸುಲಭ ಅನ್ನೋ ಕಾರಣಕ್ಕೆ ಹಲವರು ಮಾಡುತ್ತಿರುತ್ತಾರೆ. ಹಾಗೆ ಆರೋಗ್ಯದ ದೃಷ್ಟಿಯಲ್ಲಿ ಇಡ್ಲಿ ಬಹಳ ಉತ್ತಮ ಆಹಾರವಾಗುತ್ತದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಈ ಇಡ್ಲಿ ಸವಿಯೋಕೆ ಇಷ್ಟಪಡುತ್ತಾರೆ.
ಅದರಲ್ಲೂ ಬಗೆ ಬಗೆಯ ಇಡ್ಲಿಗಳು, ವಿವಿಧ ರುಚಿಯ ಇಡ್ಲಿಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಇಡ್ಲಿಗೆಂದೇ ವಿಶೇಷ ರುಚಿಯ ಸ್ವಾದ ನೀಡುವ ಹೋಟೆಲ್ಗಳನ್ನು ಕೂಡ ನಾವು ನೋಡಬಹುದು. ಇನ್ನು ಅದರಲ್ಲೂ ವಿಶೇಷ ರುಚಿಯ ಮಸಾಲೆ ಇಡ್ಲಿ ಮಾಡುವ ಕುರಿತು ನಿಮಗೆ ತಿಳಿದಿರಬಹುದು. ತರಕಾರಿಗಳು, ಮಸಾಲೆಗಳು ಸೇರಿ ಹಲವು ರೀತಿಯ ವಸ್ತುಗಳ ಬಳಸಿ ಮಾಡುವ ಇಡ್ಲಿ ಎಲ್ಲರ ಬಾಯಲ್ಲೂ ನೀರು ತರಿಸಲಿದೆ.

ನಾವಿಂದು ಸುಲಭವಾಗಿ ಹಾಗೆ ಮಸಾಲೆ ಭರಿತವಾಗಿ ರುಚಿ ರುಚಿಯ ರವೆ ಇಡ್ಲಿ ಮಾಡುವ ಕುರಿತು ನಾವಿಂದು ತಿಳಿದುಕೊಳ್ಳೋಣ. ಅದರಲ್ಲೂ ವಿಶೇಷವಾಗಿ ಮಸಾಲೆಗಳ ಹಾಕಿ ಮಾಡುವ ಈ ರೀತಿಯ ಇಡ್ಲಿ ಮಾಡಿ ಸವಿಯುವ ಕುರಿತು ತಿಳಿಯೋಣ.
ಮಸಾಲೆ ರವೆ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ರವೆ- ಚಿರೋಟಿ ರವೆ ಅಥವಾ ಉಪ್ಪಿಟ್ಟು ರವೆ
- ಕ್ಯಾರೆಟ್
- ಕೊತ್ತಂಬರಿ ಸೊಪ್ಪು
- ಉಪ್ಪು
- ಉದ್ದಿನ ಬೇಳೆ
- ತೆಂಗಿನ ಕಾಯಿ
- ಗೋಡಂಬಿ
- ಕರಿಬೇವು
- ಅಡುಗೆ ಸೋಡಾ
- ಅರಶಿಣ
- ಸಾಸಿವೆ
- ಮೊಸರು
- ಹಸಿ ಮೆಣಸು
- ಎಣ್ಣೆ
ಮಸಾಲೆ ಇಡ್ಲಿ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಬಸಿಯಾದ ಎಣ್ಣಗೆ ಸಾಸಿವೆ, ಕಡಲೆ ಬೇಳೆ, ಚೂರು ಮಾಡಿಕೊಂಡ ಗೋಡಂಬಿ, ಉದ್ದಿನ ಬೇಳೆ, ಹಸಿ ಮೆಣಸು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಹೆಚ್ಚಿರುವ ಕರಿಬೇವು, ಹಾಗೂ ಕೊತ್ತಂಬರಿ, ತುರಿದುಕೊಂಡಿರುವ ಕ್ಯಾರೆಟ್ ಕೂಡ ಹಾಕಿಕೊಂಡು ಮಿಕ್ಸ್ ಮಾಡಿ 1 ನಿಮಿಷ ಬಿಡಿ.
ಈಗ ಇದಕ್ಕೆ ಅರಶಿಣ ಪುಡಿ, ರವೆಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಮಧ್ಯಮ ಉರಿಯಲ್ಲಿ 5 ನಿಮಿಷ ಹುರಿದುಕೊಳ್ಳಿ. ರವೆ ಘಮ ಘಮ ಎಂಬ ಸುವಾಸನೆ ಬರುವಾಗ ಒಲೆ ಆಫ್ ಮಾಡಿಕೊಂಡು ಅದಕ್ಕೆ ಸಣ್ಣ ಸಣ್ಣದಾಗಿ ಹೆಚ್ಚಿಕೊಂಡಿರು ತೆಂಗಿನಕಾಯಿಯ ಪೀಸ್ಗಳನ್ನು ಹಾಕಿಕೊಳ್ಳಿ.
ಈಗ ಇದಕ್ಕೆ 1 ಕಪ್ ಮೊಸರು ಹಾಕಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಮುಚ್ಚಳ ಮುಚ್ಚಿ 20 ನಿಮಿಷ ಬಿಡಿ. ಇದು ಗಟ್ಟಿಯಾಗುತ್ತದೆ. ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಾಗೆ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿಕೊಂಡು ಇಡ್ಲಿ ಹಿಟ್ಟು ಹದಕ್ಕೆ ಮಾಡಿಕೊಳ್ಳಿ.
ನಂತರ ಇದನ್ನು ಬದಿಗಿಟ್ಟು ಇಡ್ಲಿ ತಟ್ಟೆಗೆ ಎಣ್ಣೆ ಹಚ್ಚಿಕೊಂಡು ಬಳಿಕ ಇಡ್ಲಿ ಹಿಟ್ಟನ್ನು ಅದರಲ್ಲಿ ಹಾಕಿ ಕುಕ್ಕರ್ನಲ್ಲಿ ಇಟ್ಟು ಬೇಯಿಸಿಕೊಳ್ಳಿ. ಸುಮಾರು 10 ನಿಮಿಷ ಬೇಯಿಸಿಕೊಂಡರೆ ಸಾಕಾಗುತ್ತದೆ. 15 ನಿಮಿಷಕ್ಕಿಂತ ಹೆಚ್ಚು ಸಮಯ ಬೇಯಿಸಿಕೊಳ್ಳಬೇಡಿ. ಇಡ್ಲಿ ಗಟ್ಟಿಯಾಗಲಿದೆ. ಇಷ್ಟು ಮಾಡಿದ್ರೆ ನಿಮ್ಮ ಮುಂದೆ ಮಸಾಲೆ ಇಡ್ಲಿ ರೆಡಿಯಾಗುತ್ತದೆ. ಇದಕ್ಕೆ ಮಸಾಲಗಳ ಹಾಕಿ ಮಾಡುವುದರಿಂದ ರುಚಿ ಕೂಡ ಅದ್ಭುತವಾಗಿರಲಿದೆ. ಹೀಗಾಗಿ ಎಲ್ಲರಿಗೂ ಇದು ಇಷ್ಟವಾಗಲಿದೆ. ಬೆಳಗ್ಗೆ ತಿಂಡಿಗೆ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications