Just In
Don't Miss
- News
ಶಾಪೂರ್ಜಿ ಪಲ್ಲೋಂಜಿ ಗ್ರೂಪ್ ಅಧ್ಯಕ್ಷರಾಗಿದ್ದ ಪಲ್ಲೋಂಜಿ ಮಿಸ್ತ್ರಿ ನಿಧನ
- Movies
ಅಭಿಮಾನಿಗಳಿಗೆ ಮನವಿ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್
- Finance
ಜಿಎಸ್ಟಿ ಕೌನ್ಸಿಲ್ ಸಭೆ ಆರಂಭ: ಈ ಮಾಹಿತಿ ತಿಳಿದಿರಿ
- Automobiles
ಬಿಡುಗಡೆಗೊಂಡಿರುವ ಹೊಸ ಸ್ಕಾರ್ಪಿಯೋ-ಎನ್ ಮಾದರಿಗಾಗಿ ಆಕ್ಸೆಸರಿಸ್ ಪರಿಚಯಿಸಿದ ಮಹೀಂದ್ರಾ
- Sports
ಆಸ್ಟ್ರೇಲಿಯಾ vs ಶ್ರೀಲಂಕಾ ಟೆಸ್ಟ್ ಸರಣಿ: ಮೊದಲ ಪಂದ್ಯದ ಸಂಭಾವ್ಯ ತಂಡ, ಪ್ರಿವ್ಯೂ
- Technology
ಸ್ಲೈಸ್ ಅಪ್ಲಿಕೇಶನ್ ಅನ್ನು ಕೂಡಲೇ ಡಿಲೀಟ್ ಮಾಡಿ ಎಂದ ಗೂಗಲ್? ಕಾರಣ ಏನು?
- Education
Cochin Shipyard Limited Recruitment 2022 : 106 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ
ರೆಸಿಪಿ: ಹಬ್ಬಕ್ಕೂ ಸೈ, ಬೇಸಿಗೆಗೂ ಸೈ ಈ ಮಿಲ್ಕಿ ಡ್ರಿಂಕ್
ಮೇ 3ರಂದು ರಂಜಾನ್, ಅಕ್ಷಯ ತೃತೀಯ, ಪರಶುರಾಮ ಜಯಂತಿ ಆಚರಿಸಲಾಗುತ್ತಿದೆ. ಇನ್ನು ಹೊರಗಡೆ ಬಿಸಿಲಿನ ಝಳ ಕೂಡ ತುಂಬಾನೇ ಇದೆ. ಮನೆಗೆ ಯಾರಾರೂ ನೆಂಟರಿಷ್ಟರು ಬಂದರೆ ಅವರಿಗೆ ಮಾಮೂಲಿ ಜ್ಯೂಸ್, ಮಿಲ್ಕ್ ಶೇಕ್ ಬದಲಿಗೆ ಈ ರೀತಿ ಮಾಡಿ ಕೊಡಿ, ನಿಮ್ಮ ಈ ಫಲೂಡಾ ತುಂಬಾನೇ ಇಷ್ಟವಾಗುವುದು.
ಇದನ್ನು ಫಲೂಡ ಎಂದು ಹೇಳುವುದಕ್ಕಿಂತ ಮಿಲ್ಕಿ ಡ್ರಿಂಕ್ ಎಂದು ಕರೆಯುವುದು ಸೂಕ್ತ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: drink
Serves: 4
-
ಬೇಕಾಗುವ ಸಾಮಗ್ರಿ
4 ಕಪ್ ಗಟ್ಟಿ ಹಾಲು (ನೀರು ಸೇರಿಸದ ಹಾಲು)
1 ಕಪ್ ಬಾದಾಮಿ ಪೇಸ್ಟ್
ಅರ್ಧ ಚಮಚ ಏಲಕ್ಕಿ ಪುಡಿ
2 ಚಮಚ ಹಾಲಿನ ಪುಡಿ
1 ಚಮಚ ಜೋಳದ ಪುಡಿ (ಕಾರ್ನ್‌ಫ್ಲೋರ್)
5 ಚಮಚ ರೆಡ್ ಸಿರಪ್ (optional) ಇದರ ಬದಲಿಗೆ ಸಕ್ಕರೆ ಬಳಸಬಹುದು
1 ಚಮಚ ಬಾದಾಮಿ ಕತ್ತರಿಸಿದ್ದು
1 ಚಮಚ ಪಿಸ್ತಾ ಕತ್ತರಿಸಿದ್ದು
-
ಮಾಡುವ ವಿಧಾನ
* ಒಂದು ದೊಡ್ಡ ಬೌಲ್‌ಗೆ ಹಾಲು ಹಾಕಿ, ಅದಕ್ಕೆ ಏಲಕ್ಕಿ ಪುಡಿ, ಕಾರ್ನ್ ಫ್ಲೋರ್, ಹಾಲಿನ ಪುಡಿ ಹಾಕಿ ಕಲೆಸಿ, ನಂತರ ರೆಡ್ ಸಿರಪ್ ಮಿಕ್ಸ್ ಮಾಡಿ.
* ಬೇಕಿದ್ದರೆ ತಣ್ಣಗಾಗಲು ಫ್ರಿಡ್ಜ್‌ನಲ್ಲಿ 20 ನಿಮಿಷ ಇಡಬಹುದು
* ಇಲ್ಲದಿದ್ದರೆ ಹಾಗೇ ಲೋಟಕ್ಕೆ ಸುರಿದು ಅದರ ಮೇಲೆ ಬಾದಾಮಿ, ಪಿಸ್ತಾ ಪುಡಿ ಉದುರಿಸಿ, ಬೇಕಿದ್ದರೆ ಡ್ರೈ ರೋಸ್ ಸೇರಿಸಿ ಸರ್ವ್ ಮಾಡಿ.
- ನೀವು ಇದಕ್ಕೆ ಚಿಯಾ ಬೀಜ ಅಥವಾ ಕಾಮ ಕಸ್ತೂರಿ ಬೀಜ ಸೇರಿಸಬಹುದು