Latest Updates
-
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ?
ಫಿಶ್ ಪಾಪ್ಕಾರ್ನ್ ಮಾಡುವುದು ತುಂಬಾ ಸುಲಭ ಗೊತ್ತೇ?
ಚಿಕನ್ ಅಥವಾ ಫಿಶ್ ಪಾಪ್ಕಾರ್ನ್ ನಾವು ಹೊರಗಡೆಯಿಂದ ಕೊಂಡು ಸವಿದಾಗ ಒಂದಿಷ್ಟು ದುಡ್ಡು ಕೊಟ್ಟಿರುತ್ತೇವೆ, ಆದರೆ 5-6 ಪೀಸ್ ಇರುತ್ತದೆ, ಮನಸ್ಸಿಗೆ ತೃಪ್ತಿ ಆಗುವಷ್ಟು ತಿನ್ನಬೇಕೆಂದರೆ ಅಷ್ಟೇ ದುಡ್ಡು ಖರ್ಚಾಗುತ್ತದೆ. ಇನ್ನೂ ಮನೆಯವರೆಲ್ಲಾ ಸವಿದರೆ ಜೇಬಿಗೆ ಕತ್ತರಿ ಗ್ಯಾರಂಟಿ. ಹಾಗಂತ ನಿಮಗೆ ಫಿಶ್ ಪಾಪ್ಕಾರ್ಬ್ ತುಂಬಾ ಇಷ್ಟವಾಗಿದ್ದರೆ ನೀವು ಮನಸ್ಸಿಗೆ ತೃಪ್ತಿ ಆಗುವಷ್ಟು ಮನೆಯಲ್ಲಿಯೇ ಮಾಡಿ ಸವಿಯಬಹುದು. ಇದು ತುಂಬಾ ಕಷ್ಟದ ವಿಧಾನ ಎಂದು ನೀವು ಭಾವಿಸಿದರೆ ಅದು ತಪ್ಪು.
ಅಡುಗೆ ಜ್ಞಾನ ಸ್ವಲ್ಪ ಇದ್ದರೂ ಸಾಕು ನೀವು ರುಚಿ ರುಚಿಯಾದ ಪಾಪ್ಕಾರ್ನ್ ಮಾಡಿ ತಿನ್ನಬಹುದು. ನಾವಿಲ್ಲಿ ಫಿಶ್ ಪಾಪ್ಕಾರ್ನ್ನ ತುಂಬಾ ಸರಳವಾದ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿ
250 ಗ್ರಾಂ ಭಾಷಾ ಫಿಶ್ (ನೀವು ಮಾಂಸ ಮಧ್ಯದಲ್ಲಿ ಮುಳ್ಳಿಲ್ಲದ ಮೀನು ಆಯ್ಕೆ
ಮಾಡಬಹುದು)
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
1 ಚಮಚ ಮೆಣಸಿನ ಪುಡಿ
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಕಾಳುಮೆಣಸಿನ ಪುಡಿ
1 ಕಪ್ ಮೈದಾ
* 1 ಕಪ್ ಬ್ರೆಡ್ ಚೂರು
ಫಿಶ್ ಪಾಪ್ಕಾರ್ನ್ ಮಾಡುವುದು ಹೇಗೆ?
* ನೀವು ಮೀನನ್ನು ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಿ, ನಂತರ ತೊಳೆದು
ಅದರಲ್ಲಿರುವ ನೀರು ಹೋಗಲು ರಂಧ್ರವಿರುವ ಪಾತ್ರೆಯಲ್ಲಿ ಹಾಕಿಡಿ ಅಥವಾ ಡ್ರೈ
ಟವಲ್ನಿಂದ ಮೆಲ್ಲನೆ ಪ್ಯಾಟ್ ಮಾಡಿ.
* ಅದಕ್ಕೆ ಖಾರದ ಪುಡಿ, ಕಾಳು ಮೆಣಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ,
ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ಹೊತ್ತು ಇಟ್ಟರೆ ಮಸಾಲೆ
ಚೆನ್ನಾಗಿ ಹೀರಿಕೊಳ್ಳುತ್ತದೆ.
* ಮೈದಾವನ್ನು ಒಂದು ಬೌಲ್ನಲ್ಲಿ ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಮಿಕ್ಸ್
ಮಾಡಿ
* ಮತ್ತೊಂದು ಬೌಲ್ನಲ್ಲಿ ಮೊಟ್ಟೆ ಹೊಡೆದು ಹಾಕಿ ಅದರಲ್ಲಿ ಸ್ವಲ್ಪ ಉಪ್ಪು,
ಕಾಳುಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ.
* ಒಂದು ಬೌಲ್ನಲ್ಲಿ ಬ್ರೆಡ್ ಚೂರುಗಳನ್ನು ಇಡಿ.
* ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ.
* ಮೀನಿನ ಪೀಸ್ ಅನ್ನು ಮೊದಲು ಮೈದಾದಲ್ಲಿ ಅದ್ದಿ, ನಂತರ ಮೊಟ್ಟೆಯಲ್ಲಿ ಅದ್ದಿ,
ನಂತರ ಬ್ರೆಡ್ ಚೂರಿನಲ್ಲಿ ಅದ್ದಿ ಎಣ್ಣೆಯಲ್ಲಿ ಹಾಕಿ ಡೀಪ್ ಫ್ರೈ ಮಾಡಿ
ತೆಗೆಯಿರಿ.
ನಂತರ ಮನೆಯವರ ಜೊತೆ ಕೂತು ಈ ಸ್ನ್ಯಾಕ್ಸ್ ಸವಿದರೆ ತುಂಬಾ ಮಜಾವಾಗಿರುತ್ತೆ.



Click it and Unblock the Notifications