For Quick Alerts
ALLOW NOTIFICATIONS  
For Daily Alerts

ರೆಸಿಪಿ: ರೋ ಫಿಶ್‌ ಫ್ರೈ

Posted By:
|

ನೀವು ನದಿ ಮೀನು ಇಷ್ಟ ಪಡುವುದಾದರೆ ರೋ ಫಿಶ್‌ನ ಫ್ರೈ ರೆಸಿಪಿ ಇಲ್ಲಿ ನೀಡಲಾಗಿದೆ. ರೋ ಫಿಶ್‌ನಲ್ಲಿ ಸ್ವಲ್ಪ ಮುಳ್ಳು ಅಧಿಕವಿದ್ದರೂ ತಿನ್ನಲು ತುಂಬಾ ರುಚಿಕರವಾದ ಮೀನಾಗಿದೆ. ಅದರಲ್ಲೂ ಫ್ರೈ ಮಾಡಲು ಸೂಪರ್‌ ಮೀನು ಇದಾಗಿದೆ. ನೀವು ರೋ ಫಿಶ್‌ ಫ್ರೈ ಮಾಡ ಬಯಸುವುದಾದರೆ ತುಂಬಾ ಸರಳವಾಗಿದೆ ಇದರ ರೆಸಿಪಿ.

Row Fish Fry

ಮೀನಿನ ರುಚಿ ಹೆಚ್ಚಲು ಅದಕ್ಕೆ ಬಳಸುವ ಮಸಾಲೆ ಮುಖ್ಯವಾಗಿರುತ್ತದೆ. ಮೀನಿನ ತುಂಡುಗಳು ಮಸಾಲೆಯನ್ನು ಚೆನ್ನಾಗಿ ಹೀರಿಕೊಂಡರೆ ಮೀನು ಕೂಡ ರುಚಿಕರವಾಗಿರುತ್ತದೆ. ಬನ್ನಿ ರೋ ಫಿಶ್‌ ಫ್ರೈ ಮಾಡುವುದು ಹೇಗೆ ಎಂದು ನೋಡೋಣ:

Row Fish Fry recipe, ರೋ ಫಿಶ್‌ ಫ್ರೈ ರೆಸಿಪಿ
Row Fish Fry recipe, ರೋ ಫಿಶ್‌ ಫ್ರೈ ರೆಸಿಪಿ
Prep Time
10 Mins
Cook Time
20M
Total Time
30 Mins

Recipe By: Reena TK

Recipe Type: side item

Serves: 6

Ingredients
  • ಬೇಜಾಗುವ ಸಾಮಗ್ರಿ

    ರೋ ಫಿಶ್ 1 ಕೆಜಿ

    ಖಾರದ ಪುಡಿ 2 ಚಮಚ

    ಅರಿಶಿಣ ಪುಡಿ ಅರ್ಧ ಚಮಚ

    ಹುಣಸೆ ರಸ 5 ಚಮಚ (ಎರಡು ನಿಂಬೆ ಹಣ್ಣು ಗಾತ್ರದಷ್ಟು ಹುಣಸೆಹಣ್ಣು)

    ರುಚಿಗೆ ತಕ್ಕ ಉಪ್ಪು

Red Rice Kanda Poha
How to Prepare
  • ಮಾಡುವ ವಿಧಾನ

    * ಹುಣಸೆ ಹಣ್ಣನ್ನು ಅರ್ಧ ಲೋಟ ಬಿಸಿ ನೀರಿಗೆ ಹಾಕಿಟ್ಟು, ಅದರ ರಸ ತಯಾರಿಸಿ. ಹುಣಸೆರಸ ಗಟ್ಟಿಯಾಗಿರಲಿ.

    * ಈಗ ಹುಣಸೆ ರಸಕ್ಕೆ ಖಾರದ ಪುಡಿ, ಅರಿಶಿಣ ಪುಡಿ, ಉಪ್ಪು ಹಾಕಿ ಗಟ್ಟಿ ಪೇಸ್ಟ್ ರೀತಿ ಕಲೆಸಿ.

    * ಇದರಲ್ಲಿ ಮೀನನ್ನು ಮಿಕ್ಸ್ ಮಾಡಿ 2 ತಾಸು ಇಡಿ. ಮಸಾಲೆ ಮಿಕ್ಸ್ ಮಾಡಿ ಫ್ರಿಡ್ಜ್‌ನಲ್ಲಿ ಬೇಕಾದರೆ ಇಡಬಹುದು.

    * ನಂತರ ತವಾಕ್ಕೆ 3-4 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಮೀನಿನ ತುಂಡುಗಳನ್ನು ಹಾಕಿ ಕಡಿಮೆ ಉರಿಯಲ್ಲಿ 10 ನಿಮಿಷ ಫ್ರೈ ಮಾಡಿ, ನಂತರ ಮಗುಚಿ ಮತ್ತೆ 10 ನಿಮಿಷ ಫ್ರೈ ಮಾಡಿದರೆ ಮೀನಿನ ಫ್ರೈ ರೆಡಿ.

Instructions
  • ಮೀನನ್ನು ತುಂಬಾ ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಈ ಮಸಾಲೆಯನ್ನು ಎಲ್ಲಾ ಬಗೆಯ ಮೀನಿನ ಫ್ರೈಗೆ ಬಳಸಬಹುದು
Nutritional Information
  • ಸರ್ವ್: - 1 ಕೆಜಿ
  • ಕೊಬ್ಬು - 12ಗ್ರಾಂ
  • ಪ್ರೊಟೀನ್ : - 39ಗ್ರಾಂ
  • ಕಾರ್ಬ್ಸ್ - 0
[ 4 of 5 - 16 Users]
X
Desktop Bottom Promotion