Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
Fathers Day Recipe: ಈ ಮೂರು ಖಾದ್ಯ ಅಪ್ಪಂದಿರ ದಿನಕ್ಕೆ ಬೆಸ್ಟ್..! ಸಿಂಪಲ್ ಆದ್ರೂ ಸೂಪರ್ ಟೇಸ್ಟ್!
ಪ್ರತಿ ವರ್ಷ ಜೂನ್‌ನಲ್ಲಿ ವಿಶ್ವ ಅಪ್ಪಂದಿರ ದಿನವನ್ನಾಗಿ ಆಚರಿಸೋದು ನೋಡಬಹುದು. ತಂದೆ ಅಂದರೆ ಒಂದು ಶಕ್ತಿ, ತಂದೆ ದಾರಿ ತೋರಿಸುವ ಗುರುವಂತೆ. ತನ್ನ ಕುಟುಂಬಕ್ಕಾಗಿ ಸರ್ವಸ್ವವನ್ನು ಮುಡಿಪಾಗಿಡುವ ಓರ್ವ ತಪಸ್ವಿ ಎನ್ನಬಹುದು. ಹಾಗೆ ವರ್ಷಕ್ಕೊಮ್ಮೆ ತಂದೆಯ ಈ ತ್ಯಾಗವನ್ನು ನೆನೆಯಬೇಕಾದ ಕರ್ತವ್ಯ ಪ್ರತಿಯೊಬ್ಬರದ್ದು. ಆತನ ತ್ಯಾಗವನ್ನು ಹಲವು ರೀತಿ ವ್ಯಕ್ತಪಡಿಸಬಹುದಾದರು ನಾವು ಮನೆಯಲ್ಲೇ ಆತನ ಇಷ್ಟದ ಹಾಗೆ ಆರೋಗ್ಯಕ್ಕೂ ಉತ್ತಮವಾದ ಖಾದ್ಯಗಳ ಸವಿಯಲು ನೀಡುವ ಮೂಲಕ ವ್ಯಕ್ತಪಡಿಸೋಣ.
ಈ ವಿಶ್ವ ತಂದೆಯರ ದಿನದಂದು ನೀವು ಮನೆಯಲ್ಲಿ ಮಾಡಿ ಸವಿಯಲು ನೀಡಬಹುದಾದ ಸೂಪರ್ ಫುಡ್‌ಗಳ ಕುರಿತಾಗಿ ನಾವು ತಿಳಿದುಕೊಳ್ಳೋಣ. ಈ ಖಾದ್ಯ ನಿಮ್ಮ ತಂದೆಯ ನೆನಪಲ್ಲಿ ಸದಾ ಉಳಿಯುವಂತೆಯು ಹಾಗೆ ಆರೋಗ್ಯಕರ ಅಭ್ಯಾಸದ ಆರಂಭಕ್ಕೆ ಕಾರಣವಾಗಲಿ. ಹಾಗಾದ್ರೆ ಯಾವೆಲ್ಲಾ ಫುಡ್‌ಗಳು ಈ ದಿನ ನೀವು ಮಾಡಿ ಸವಿಯಬಹುದು.

ತಂದೆಯರ ದಿನದಂದು ನಾವು ಮೊದಲನೇಯದಾಗಿ ಅವಲಕ್ಕಿ ಒಗ್ಗರಣೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಅದರಲ್ಲೂ ಸುಲಭವಾಗಿ ಅಚ್ಚುಕಟ್ಟಾದ ರೀತಿಯಲ್ಲಿ, ಕಡಿಮೆ ಎಣ್ಣೆಯ ಬಳಸಿಕೊಂಡು ಮಾಡುವ ಈ ಆಹಾರ ನಿಮ್ಮ ತಂದೆ ಆರೋಗ್ಯಕ್ಕೆ ಬಹಳ ಉಪಯೋಗಕಾರಿ. ಹಾಗೆ ಫೈಬರ್ ಹೆಚ್ಚಿರುವ ಕಾರಣ ಜೀರ್ಣಕ್ರಿಯೆಗೆ ಇದು ಅತ್ಯುತ್ತಮ.
ಹಾಗಾದ್ರೆ ಈ ಅವಲಕ್ಕಿ ಒಗ್ಗರಣೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಒಗ್ಗರಣೆ ಅವಲಕ್ಕಿ ಮಾಡಲು ಬೇಕಾಗುವ ವಸ್ತುಗಳು
- ಅವಲಕ್ಕಿ
- ಈರುಳ್ಳಿ
- ಕಡಲೆ ಬೇಳೆ
- ಕಡಲೆ ಬೀಜ
- ಹಸಿ ಮೆಣಸು
- ಕರಿಬೇವು
- ಅರಶಿಣ
- ನಿಂಬೆ ಹಣ್ಣು
- ಕೊತ್ತಂಬರಿ
- ಉಪ್ಪು
- ಎಣ್ಣೆ
ಒಗ್ಗರಣೆ ಅವಲಕ್ಕಿ ಮಾಡುವ ವಿಧಾನವೇನು?
ಈಗ ಅವಲಕ್ಕಿಯನ್ನು ಮೊದಲು ನೀರಿನಲ್ಲಿ 3 ನಿಮಿಷ ನೆನೆಸಬೇಕು. ನಂತರ ಈ ಅವಲಕ್ಕಿಯನ್ನು ತೆಗೆದಿಟ್ಟುಕೊಳ್ಳಿ. ಈಗ ಬಾಣಲೆಗೆ ಎಣ್ಣೆ ಹಾಕಿ ಕಡಲೆ ಬೀಜ ಹಾಕಿ ಫ್ರೈ ಮಾಡಿಕೊಂಡು ತೆಗೆದಿಟ್ಟುಕೊಳ್ಳಿ. ಈಗ ಕಡಲೆ ಬೇಳೆ, ಸಾಸಿವೆ, ಜೀರಿಗೆ ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಹಸಿ ಮೆಣಸು, ಈರುಳ್ಳಿ, ಕರಿಬೇವು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ಈಗ ಅರಶಿಣ ಹಾಕಿ ನಂತರ ಫ್ರೈ ಮಾಡಿಕೊಂಡಿದ್ದ ಕಡಲೆ ಬೀಜ ಹಾಕಿಕೊಂಡು ಬಳಿಕ ಅವಲಕ್ಕಿಯನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಿಮಗೆ ಬೇಕಿದ್ದರೆ ಸ್ವಲ್ಪ ತೆಂಗಿನಕಾಯಿ ಉರಿ ಸೇರಿಸಿಕೊಳ್ಳಿ. ಕೊನೆಯಲ್ಲಿ ನಿಂಬೆ ಹುಳಿ ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ಅದ್ಭುತ ರುಚಿಯ ಅವಲಕ್ಕಿ ಒಗ್ಗರಣೆ ರೆಡಿಯಾಗುತ್ತದೆ. ನೀವು ಈ ಕೆಳಗಿನ ವಿಡಿಯೋದಲ್ಲಿ ನೀಡಲಾಗಿರುವ ಸೂಚನೆಯಂತೆಯೂ ರುಚಿ ರುಚಿಯ ಈ ಖಾದ್ಯ ಮಾಡಬಹುದು.
ಆಲೂ ಬೋಂಡಾ ರೆಸಿಪಿ
ಸಂಜೆ ಸಮಯಕ್ಕೆ ಸ್ನ್ಯಾಕ್ಸ್ ಆಗಿ ನೀವು ಆಲೂಬೋಂಡಾ ಮಾಡಬಹುದು. ಇದರ ರುಚಿ ಒಮ್ಮೆ ಸವಿದರೆ ನೀವು ಆಗಾಗ ಮತ್ತೆ ಮತ್ತೆ ಸವಿಯಲು ಮುಂದಾಗುತ್ತೀರಿ. ಹಾಗಾದ್ರೆ ಈ ಆಲೂ ಬೋಂಡಾ ಮಾಡುವುದು ಹೇಗೆ?, ಆಲೂ ಬೋಂಡಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಲೂ ಬೋಂಡಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಆಲೂಗಡ್ಡೆ (ಬೇಯಿಸಿರುವುದು)
- ಕೊತ್ತಂಬರಿ
- ಕಡಲೆ ಹಿಟ್ಟು
- ಶುಂಠಿ
- ಹಸಿ ಮೆಣಸು
- ಸಾಸಿವೆ
- ಪುದಿನ
- ಈರುಳ್ಳಿ
- ಅರಶಿಣ
- ಖಾರದ ಪುಡಿ
- ಗರಂ ಮಸಾಲೆ
- ಎಣ್ಣೆ
- ಉಪ್ಪು
ಆಲೂ ಬೋಂಡಾ ಮಾಡುವುದು ಹೇಗೆ?
ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಕಡಲೆ ಹಿಟ್ಟು ಹಾಕಿಕೊಂಡು ಅದಕ್ಕೆ ಅರಶಿಣ, ಖಾರದ ಪುಡಿ, ಉಪ್ಪು ಹಾಕಿಕೊಂಡು ಡ್ರೈ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಬೇಕು. ಈಗ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಸಾಸಿವೆ, ಈರುಳ್ಳಿ, ಹಸಿ ಮೆಣಸುಮ ಶುಂಠಿ, ಅರಶಿಣ ಹಾಕಿ ಮಿಕ್ಸ್ ಮಾಡಿಕೊಂಡು ಫ್ರೈ ಆಗಲು ಬಿಡಿ.
2 ನಿಮಿಷ ಫ್ರೈ ಮಾಡಿದ ಬಳಿಕ ತೆಗೆದು ಬದಿಗಿಟ್ಟುಕೊಳ್ಳಿ. ಈಗ ಬೇಯಿಸಿದ ಆಲೂಗಡ್ಡೆಯನ್ನು ಪುಡಿ ಮಾಡಿಕೊಂಡು ಅದಕ್ಕೆ ಕೊತ್ತಂಬರಿ, ಪುದಿನ, ಉಪ್ಪು, ಗರಂ ಮಸಾಲೆ ಹಾಕಿ. ಹಾಗೆ ಖಾರದ ಪುಡಿ ಸಹ ಹಾಕಿ ಒಗ್ಗರಣೆ ಕೂಡ ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಂಡು ಕಲಸಿ ನಂತರ ಉಂಡೆ ಮಾಡಿಟ್ಟುಕೊಳ್ಳಿ, ಈಗ ಇದನ್ನು ಕೆಲಸ ಹಿಟ್ಟಿಗೆ ಅದ್ದಿಕೊಂಡು ಬಾಣಲೆಗೆ ಬಿಡಬೇಕು. ಇದು ಬಹಳ ರುಚಿಯಾಗಿ ಬರಲಿದೆ. ಇಷ್ಟಾದರೆ ಆಲೂ ಬೋಂಡಾ ರೆಡಿಯಾಗುತ್ತದೆ.
ಸೇಬು ಹಣ್ಣಿನ ಹಲ್ವಾ
ಸೇಬು ಆರೋಗ್ಯಕ್ಕೆ ಎಷ್ಟು ಉತ್ತಮ ಎಂದು ನೀವು ತಿಳಿದಿರಬಹುದು. ಇನ್ನು ಈ ಸೇಬು ಹಣ್ಣಿನಿಂದ ರುಚಿ ರುಚಿಯಾದ ಹಲ್ವಾ ಮಾಡಬಹುದು ಎಂಬುದು ನಿಮಗೆ ಗೊತ್ತಾ? ಸೇಬು ಹಣ್ಣಿನಿಂದ ನಾವಿಂದು ಹಲ್ವಾ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಸೇಬು ಹಣ್ಣಿನ ಹಲ್ವಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಂಬುದನ್ನು ತಿಳಿದುಕೊಳ್ಳೋಣ.
ಸೇಬು ಹಣ್ಣಿನ ಹಲ್ವಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಸೇಬು ಹಣ್ಣು
- ಗೋಡಂಬಿ
- ತುಪ್ಪ
ಸೇಬು ಹಣ್ಣಿನ ಹಲ್ವಾ ಮಾಡುವುದು ಹೇಗೆ?
ಮೊದಲು ಬಾಣಲೆಯಲ್ಲಿ 2 ಸ್ಪೂನ್ ತುಪ್ಪ ಹಾಕಿ ಅದಕ್ಕೆ ಗೋಡಂಬಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಈಗ ಸೇಬು ಹಣ್ಣಿಗಳನ್ನು ತುರಿದು ಅದನ್ನು ಬಾಣಲೆಗೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಅದಕ್ಕೆ ಸಕ್ಕರೆ ಸಹ ಹಾಕಿ ಮತ್ತೆ 2 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಹಾಗೆ ಒಂದು ಸ್ಪೂನ್ ತುಪ್ಪ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಮತ್ತೆ 2 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಮೊದಲು ಫ್ರೈ ಮಾಡಿಕೊಂಡಿದ್ದ ಗೋಡಂಬಿಗಳನ್ನು ಹಾಕಿ ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ಸೇಬು ಹಣ್ಣಿನ ಹಲ್ವಾ ಸಿದ್ದವಾಗುತ್ತೆ. ನೀವು ಕೂಡ ಇದನ್ನು ತಂದೆಯಂದಿರ ದಿನದಂದು ಮನೆಯಲ್ಲಿ ಮಾಡಿ ಸವಿಯಬಹುದು. ಇದನ್ನು ಮಾಡಲು ಕಡಿಮೆ ಸಮಯ ಹಾಗೆ ಕಡಿಮೆ ವಸ್ತುಗಳು ಸಾಕಾಗುತ್ತವೆ.



Click it and Unblock the Notifications
