Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಎಮಾ ದಟ್ಶಿ ಎಂಬ ಸ್ವಾದಿಷ್ಟ ರೆಸಿಪಿ ನಿಮಗೆ ಗೊತ್ತಾ? ದೀಪಿಕಾಗು ಇದು ಫೇವರಿಟ್ ಅಂತೆ.!
ಅನ್ನದ ಜೊತೆ ನೀವು ರಸಂ, ಸಾಂಬಾರ್, ಮಜ್ಜಿಗೆ, ಪಲ್ಯ ಹೀಗೆ ಹತ್ತಾರು ವಿಧದ ಖಾದ್ಯ ಸವಿಯಲು ಇಚ್ಛಿಸುತ್ತೀರಿ. ಹಾಗೆ ಅನ್ನಕ್ಕೆ ಯಾವ ರುಚಿಯು ಇಲ್ಲದಿರುವುದರಿಂದ ಅದರ ಜೊತೆ ಸವಿಯಲು ರುಚಿಕರವಾದ ಅಡುಗೆಯೇ ಮಾಡಬೇಕು. ಇಲ್ಲದಿದ್ದರೆ ಅಂದಿನ ಊಟ ಬಾಯಿಗೆ ಹಿಡಿಸುವುದಿಲ್ಲ.
ಹೀಗಿದ್ದರೆ ನೀವು ಅನ್ನದ ಜೊತೆ ಸವಿಯಲು ರುಚಿ ರುಚಿಯ ಎಮಾ ದಟ್ಶಿ ಎಂಬ ಖಾದ್ಯ ಮಾಡಬಹುದು. ಹೌದು ಎಮಾ ದಟ್ಶಿ ಎಂಬುದು ಭೂತಾನ್‌ನಲ್ಲಿ ಅತೀ ಹೆಚ್ಚು ಫೇಮಸ್ ಆಗಿರುವ ಖಾದ್ಯವಾಗಿದೆ. ಜೊತೆಗೆ ಇದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೂ ಫೇವರಿಟ್ ಖಾದ್ಯವಂತೆ. ಆಕೆಯೇ ಒಂದು ಸಂದರ್ಶನದಲ್ಲಿ ಈ ಬಗ್ಗೆ ಹೇಳಿದ್ದರು.

ಜೊತೆಗೆ ಮನೆಯಲ್ಲಿ ದೀಪಿಕಾ ಖುದ್ದು ಈ ಎಮಾ ದಟ್ಶಿ ರೆಸಿಪಿ ಮಾಡುತ್ತಾರಂತೆ. ಅನ್ನದ ಜೊತೆ ಸವಿಯಲು ಇದು ಬಲು ರುಚಿಕರವಾಗಿರುತ್ತದೆ ಎಂಬುದು ದೀಪಿಕಾ ಪಡುಕೋಣೆಯ ಮಾತು. ಎಮಾ ದಟ್ಶಿ ಭೂತಾನ್‌ನಲ್ಲಿ ಸಾಂಪ್ರದಾಯಿಕ ಅಡುಗೆಯ ಸ್ಥಾನ ಪಡೆದಿದೆ. ಅಲ್ಲಿ ಹೆಚ್ಚಿನ ಚಳಿ ಇರುವ ಕಾರಣ ಈ ಖಾದ್ಯವನ್ನು ಹೆಚ್ಚಾಗಿ ಮಾಡುತ್ತಾರೆ.
ಹಾಗಾದರೆ ಈ ಎಮಾ ದಟ್ಶಿ ರೆಸಿಪಿ ಮಾಡುವುದು ಹೇಗೆ? ಅದಕ್ಕೆ ಬೇಕಾಗುವ ಪದಾರ್ಥಗಳೇನು? ಪಾಕ ವಿಧಾನವೇನು ಎಂಬುದನ್ನು ಇಲ್ಲಿ ನೀಡಲಾಗಿದೆ ನೋಡಿ.
ಎಮಾ ದಟ್ಶಿ ಮಾಡಲು ಬೇಕಾಗುವ ಪದಾರ್ಥಗಳು
- ಹಸಿರು ಮೆಣಸಿನಕಾಯಿ-4 ರಿಂದ 5
- ಜಲಪೆನೊ ಮೆಣಸಿನಕಾಯಿ-2
- ಟೊಮೆಟೊ-1
- ಬೆಳ್ಳುಳ್ಳಿ-4
- ಎಣ್ಣೆ
- ನೀರು
- ಚೀಸ್-4 ತುಂಡು
- ಉಪ್ಪು
ಎಮಾ ದಟ್ಶಿ ಮಾಡುವ ವಿಧಾನ
ಮೊದಲು ಕೆಂಪು ಮೆಣಸಿನಕಾಯಿ ಮತ್ತು ಹಸಿ ಮೆಣಸಿನಕಾಯಿಯನ್ನು ಉದ್ದವಾಗಿ ಕತ್ತರಿಸಿಕೊಳ್ಳಿ ಒಂದು ಬಿಸಿ ಪ್ಯಾನ್‌ನಲ್ಲಿ, ಕತ್ತರಿಸಿದ ಈರುಳ್ಳಿ ಕತ್ತರಿಸಿದ ಮೆಣಸಿನಕಾಯಿಗಳು, ಜಲಪೆನೊ, ಬೆಳ್ಳುಳ್ಳಿ ಮತ್ತು ಟೊಮೆಟೊವನ್ನು ಹಾಕಿ ಮಿಶ್ರ ಮಾಡಿ. ನಂತರ ನೀರು, ಎಣ್ಣೆ ಮತ್ತು ರುಚಿಗೆ ಉಪ್ಪು ಸೇರಿಸಿ ಪ್ಯಾನ್ ಅನ್ನು ಒಂದು ಮುಚ್ಚಳದಿಂದ ಮುಚ್ಚಿ ಸುಮಾರು ಐದು ನಿಮಿಷಗಳ ಕಾಲ ಎಲ್ಲವನ್ನು ಬೇಯಿಸಿ.
ಇದರ ನಂತರ, ಅದಕ್ಕೆ ಚೀಸ್ ಸೇರಿಸಿ ಮತ್ತು ಪಾತ್ರೆಯನ್ನು ಮುಚ್ಚಿ ಐದು ನಿಮಿಷಗಳ ಕಾಲ ಬೇಯಿಸಿ. ಚೀಸ್ ಕರಗಿದ ನಂತರ, ಎಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿ ನಂತರ ಅದನ್ನು ಸೂಪ್ ಬೌಲ್‌ಗೆ ಹಾಕಿ ಬಡಿಸಿ. ಅನ್ನದ ಜೊತೆಗೆ ಇದನ್ನು ತಿನ್ನಲು ತುಂಬಾ ರುಚಿ ಆಗಿರುತ್ತದೆ.
ಭೂತಾನ್ ಆಹಾರದಲ್ಲಿ ಎಮಾ ದಟ್ಶಿ ಅತ್ಯಂತ ಪ್ರಸಿದ್ಧವಾದದ್ದು. ಭೂತಾನ್‌ನ ರಾಷ್ಟ್ರೀಯ ಭಾಷೆಯಾದ ಜೋಂಗ್‌ಖಾ ಭಾಷೆಯಲ್ಲಿ, ಎಮಾ ಎಂದರೆ ಮೆಣಸಿನಕಾಯಿ ಮತ್ತು ದಟ್ಶಿ ಎಂದರೆ ಚೀಸ್. ಸಾಂಪ್ರದಾಯಿಕವಾಗಿ, ಈ ಖಾದ್ಯದಲ್ಲಿ ಬಳಸುವ ಚೀಸ್ ಅನ್ನು ಹಸುವಿನ ಅಥವಾ ಯಾಕ್ ಪ್ರಾಣಿಯ ಹಾಲಿನ ಮೊಸರಿನಿಂದ ಮನೆಯಲ್ಲಿ ತಯಾರಿಸಲಾಗುತ್ತದೆ.
1 ಕಪ್ ಭೂತಾನ್ ಅಥವಾ ಇತರ ರೀತಿಯ ಚೀಸ್ (ಫೆಟಾ ಅಥವಾ ಸ್ವಿಸ್ ಚೀಸ್ ಅನ್ನು ಪರ್ಯಾಯವಾಗಿ ಬಳಸಬಹುದು) 1 ದೊಡ್ಡ ಈರುಳ್ಳಿ, ತೆಳುವಾಗಿ ಕತ್ತರಿಸಿದ 2 ಸಣ್ಣದಾಗಿ ಕೊಚ್ಚಿದ ಟೊಮ್ಯಾಟೊ 3 ಸಣ್ಣದಾಗಿ ಕೊಚ್ಚಿದ ಬೆಳ್ಳುಳ್ಳಿ ಲವಂಗ 1 ಚಮಚ ಸಸ್ಯಜನ್ಯ ಎಣ್ಣೆ ರುಚಿಗೆ ಉಪ್ಪು
ಎಮಾ ದಟ್ಶಿಯನ್ನು ಸಾಮಾನ್ಯವಾಗಿ ಭೂತಾನ್‌ನಲ್ಲಿ ಕೆಂಪು ಅಕ್ಕಿಯೊಂದಿಗೆ ಬಡಿಸಲಾಗುತ್ತದೆ, ಆದರೆ ನೀವು ಅದನ್ನು ಯಾವುದೇ ರೀತಿಯ ಅಕ್ಕಿ ಅಥವಾ ಬ್ರೆಡ್‌ನೊಂದಿಗೆ ಆನಂದಿಸಬಹುದು.



Click it and Unblock the Notifications
