Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಎಳ್ಳು ಬೆಲ್ಲ ಮನೆಯಲ್ಲಿ ಮಾಡಿದರೆ ಮಾತ್ರ ಸಂಕ್ರಾಂತಿಗೆ ವಿಶೇಷ ಕಳೆ ಅಲ್ವಾ?
ವರ್ಷದ ಮೊದಲ ಹಬ್ಬ ಸಂಕ್ರಾಂತಿ ಬಂದೇ ಬಿಡ್ತು. ಹಬ್ಬದ ತಯಾರಿಗಳು ಹೀಗಾಗಲೇ ಶುರುವಾಗಿರುತ್ತದೆ. ಸಂಕ್ರಾಂತಿ ಎಂದ ತಕ್ಷಣ ನೆನಪಿಗೆ ಬರುವುದು ಎಳ್ಳು-ಬೆಲ್ಲ. ಮನೆಯಲ್ಲಿ ಎಳ್ಳು ಬೆಲ್ಲ ತಯಾರಿಸಿ ಅದನ್ನು ಮನೆ ಮಂದಿಗೆ ಹಾಗೂ ಅಕ್ಕ-ಪಕ್ಕದ ಮನೆಯವರಿಗೆ ಹಂಚುವ ಪದ್ಧತಿ ಇದೆ. ಎಳ್ಳು ಬೆಲ್ಲ ಜೊತೆ ಸಕ್ಕರೆ ಅಚ್ಚುಗಳು ಹಾಗೂ ಕಬ್ಬು ಇಟ್ಟು ಹಂಚಿ ಬಂದರೆ ಮಾತ್ರ ಸಂಕ್ರಾಂತಿ ಹಬ್ಬಕ್ಕೊಂದು ಕಳೆ ಬರುವುದು.

ಎಳ್ಳು-ಬೆಲ್ಲ ಮಾರುಕಟ್ಟೆಯಲ್ಲಿ ಸಿಗುವುದಾದರೂ ಮನೆಯಲ್ಲಿಯೇ ಮಾಡಿ, ಹಂಚುವ ಖುಷಿಯೇ ಬೇರೆ ಅಲ್ವಾ? ಸಣ್ಣ-ಸಣ್ಣ ಚೂರುಗಳಾಗಿ ಮಾಡಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ, ಹುರಿದ ಬಿಳಿ ಎಳ್ಳನ್ನುಸೇರಿಸಿ ಎಳ್ಳು-ಬೆಲ್ಲವನ್ನು ತಯಾರಿಸಲಾಗುವುದು.
ಸಂಕ್ರಾಂತಿ ಹಬ್ಬ ಚಳಿಗಾಲದಲ್ಲಿ ಬರುತ್ತದೆ. ಚಳಿಗೆ ಎಳ್ಳು ಬೆಲ್ಲ ತುಂಬಾ ಒಳ್ಳೆಯದು. ಇದನ್ನು ಮಾಡಿಟ್ಟರೆ ತುಂಬಾ ಸಮಯದವರಿಗೂ ಸವಿಯಬಹುದು. ಇಲ್ಲಿ ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೆಲ್ಲ ಮಾಡಿ ಎಲ್ಲರಿಗೆ ಶುಭ ಹಾರೈಸಲು ರೆಸಿಪಿ ನೀಡಿದ್ದೇವೆ ನೋಡಿ.
Recipe By: Reena TK
Recipe Type: Sweet
Serves: 20
-
ಬೇಕಾಗುವ ಸಾಮಗ್ರಿ
* ಬಿಳಿ ಎಳ್ಳು ಒಂದು ಕಪ್
* ಬೆಲ್ಲ ಒಂದು ಕಪ್
* ಒಣ ಕೊಬ್ಬರಿ ಒಂದು ಕಪ್
* ಹುರಿಗಡಲೆ ಒಂದು ಕಪ್
* ಬತಾಸು
* ಜೀರಿಗೆ ಪೆಪ್ಪರ್‌ಮಿಂಟ್
-
ಮಾಡುವ ವಿಧಾನ:
* ಮೊದಲಿಗೆ ಬೆಲ್ಲ ಮತ್ತು ಒಣಕೊಬ್ಬರಿಯನ್ನು ಚಿಕ್ಕ-ಚಿಕ್ಕ ಚೂರುಗಳಾಗಿ ಕತ್ತರಿಸಿ.
* ಕಡಲೇಕಾಯಿ ಬೀಜವನ್ನು ಹುರಿದು ಸಿಪ್ಪೆ ತೆಗೆಯಿರಿ.
* ಬಿಳಿ ಎಳ್ಳನ್ನು ಹದವಾಗಿ ಹುರಿದುಟ್ಟುಕೊಳ್ಳಿ.
* ಎಳ್ಳು ತಣ್ಣಗಾದ ಮೇಲೆ ಅದಕ್ಕೆ ಬೆಲ್ಲ, ಒಣಕೊಬ್ಬರಿ, ಸಿಪ್ಪೆ ಸುಲಿದ ಕಡಲೇಕಾಯಿ ಬೀಜ, ಹುರಿಗಡಲೆ ಹಾಕಿ ಮಿಶ್ರ ಮಾಡಿ.
* ನಂತರ ಸಕ್ಕರೆ ಅಚ್ಚು, ಬತಾಸು, ಜೀರಿಗೆ ಪೆಪ್ಪರ್‌ಮಿಂಟ್ ಹಾಕಿ ಅಲಂಕರಿಸಿದರೆ ಸಂಕ್ರಾಂತಿಯ ಎಳ್ಳು-ಬೆಲ್ಲ ರೆಡಿ.
- ಸಂಕ್ರಾಂತಿ ಹಬ್ಬ ಚಳಿಗಾಲದಲ್ಲಿ ಬರುತ್ತದೆ. ಚಳಿಗೆ ಎಳ್ಳು ಬೆಲ್ಲ ತುಂಬಾ ಒಳ್ಳೆಯದು. ಇದನ್ನು ಮಾಡಿಟ್ಟರೆ ತುಂಬಾ ಸಮಯದವರಿಗೂ ಸವಿಯಬಹುದು. ಇಲ್ಲಿ ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೆಲ್ಲ ಮಾಡಿ ಸವಿಯಿರಿ.
- Serving size - 1 ಕಪ್ g
- Calories - 313 cal
- Fats - 53.97 g
- Proteins - 55.97 g
- Fibre - 28.7 g
ಮಾಡುವ ವಿಧಾನ:
* ಮೊದಲಿಗೆ ಬೆಲ್ಲ ಚಿಕ್ಕ-ಚಿಕ್ಕ ಚೂರುಗಳಾಗಿ ಕತ್ತರಿಸಿ.

ಕೊಬ್ಬರಿಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ

* ಕಡಲೇಕಾಯಿ ಬೀಜವನ್ನು ಹುರಿದು ಸಿಪ್ಪೆ ತೆಗೆಯಿರಿ.

* ಬಿಳಿ ಎಳ್ಳನ್ನು ಹದವಾಗಿ ಹುರಿದುಟ್ಟುಕೊಳ್ಳಿ.

* ಎಳ್ಳು ತಣ್ಣಗಾದ ಮೇಲೆ ಅದಕ್ಕೆ ಬೆಲ್ಲ, ಒಣಕೊಬ್ಬರಿ, ಸಿಪ್ಪೆ ಸುಲಿದ ಕಡಲೇಕಾಯಿ ಬೀಜ, ಹುರಿಗಡಲೆ ಹಾಕಿ ಮಿಶ್ರ ಮಾಡಿ. ನಂತರ ಸಕ್ಕರೆ ಅಚ್ಚು, ಬತಾಸು, ಜೀರಿಗೆ ಪೆಪ್ಪರ್‌ಮಿಂಟ್ ಹಾಕಿ ಅಲಂಕರಿಸಿದರೆ ಸಂಕ್ರಾಂತಿಯ ಎಳ್ಳು-ಬೆಲ್ಲ ರೆಡಿ.




ಕನ್ನಡ ಬೋಲ್ಡ್ ಸ್ಕೈ ಓದುಗರಿಗೆ ಸಂಕ್ರಾಂತಿ ಹಬ್ಬದ
ಶುಭಾಶಯಗಳು...



Click it and Unblock the Notifications
