Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸಿಹಿ ರೆಸಿಪಿ: ಎಳ್ಳು ಬೆಲ್ಲದಿಂದ ಮಾಡಿ ರುಚಿ ರುಚಿಯಾದ ಪರೋಟ
ಮಕರ ಸಂಕ್ರಾಂತಿಯ ರೆಸಿಪಿಯಲ್ಲಿ ಎಳ್ಳು ಪ್ರಮುಖ ಸ್ಥಾನ ಪಡೆದಿದೆ. ಎಳ್ಳು ಬೆಲ್ಲ- ಎಳ್ಳುಂಡೆ ಹೀಗೆ ಎಳ್ಳು ಬಳಸಿ ಹಬ್ಬದ ಅಡುಗೆ ತಯಾರಿಸಲಾಗುವುದು. ಎಳ್ಳು ಬಳಸುವುದಕ್ಕೂ ವೈಜ್ಞಾನಿಕ ಕಾರಣವಿದೆ, ಎಳ್ಳು ಚಲಿಗಾಲದಲ್ಲಿ ಮೈ ಬೆಚ್ಚಗಿಡಲು ಸಹಾಯ ಮಾಡುತ್ತದೆ. ಈ ಋತುಮಾನಕ್ಕೆ ಸೂಕ್ತವಾದ ಮತ್ತೊಂದು ರೆಸಿಪಿ ನೀಡಿದ್ದೇವೆ, ಅದುವೇ ಎಳ್ಳು ಪರೋಟ, ಇದೊಂದು ಸಿಹಿ ರೆಸಿಪಿಯಾಗಿದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
1 ಕಪ್ ಗೋಧಿ ಹಿಟ್ಟು
ನೀರು
ಪರೋಟ ಒಳಗಡೆ ತುಂಬಲು
1ಕಪ್ ಬೆಲ್ಲ
4 ಚಮಚ ಎಳ್ಳು (ಹುರಿದ ಎಳ್ಳು)
1 ಚಮಚ ಸೋಂಪು
ತುಪ್ಪ
ಮಾಡುವ ವಿಧಾನ
* ಗೋಧಿ ಹಿಟ್ಟನ್ನು ಚಪಾತಿಗೆ ಕಲೆಸುವಂತೆ ಕಲೆಸಿ 15 ನಿಮಿಷ ಇಡಿ.
* ನಂತರ ಅವುಗಳಿಂದ ಚಪಾತಿಗೆ ಉಂಡೆ ಕಟ್ಟುವಂತೆ ಕಟ್ಟಿ.
* ಮತ್ತೊಂದು ಬೌಲ್ನಲ್ಲಿ ಎಳ್ಳು, ಸೋಂಪು, ಬೆಲ್ಲ ಹಾಕಿ ಮಿಕ್ಸ್ ಮಾಡಿ
* ಈಗ ಚಪಾತಿಗೆ ತಟ್ಟುವಂತೆ ತಟ್ಟಿ ಅದರಲ್ಲ ಬೆಲ್ಲ- ಎಳ್ಳು ಉಂಡೆಯನ್ನು ಇಟ್ಟು
ನಂತರ ಮತ್ತೆ ಉಂಡೆ ಕಟ್ಟಿ ನಂತರ ಮತ್ತೆ ತಟ್ಟಿ, ತಟ್ಟುವಾಗ ಗೋಧಿ ಹುಡಿ ಹರಡಿ
ತಟ್ಟಿದರೆ ರೌಂಡಾಗಿ ತಟ್ಟಿದರೆ ಚೆನ್ನಾಗಿ ಬರುತ್ತದೆ.
* ಈಗ ತವಾಗೆ ತುಪ್ಪ ಸವರಿ ತಟ್ಟಿದ ಎಳ್ಳು ಪರೋಟ ಹಾಕಿ, ಅದರ ಮೇಲೆ ಕೂಡ ತುಪ್ಪ
ಸವರಿ ಬೇಯಿಸಿ.
* ಇದನ್ನು ತುಪ್ಪ ಅಥವಾ ಮಲೈ ಜೊತೆ ಸವಿಯಲು ತುಂಬಾನೇ ರುಚಿಯಾಗಿರುತ್ತದೆ.
ಸಲಹೆ
* ತುಪ್ಪ ಬದಲಿಗೆ ಎಣ್ಣೆ ಬಳಸಬಹುದು, ಆದರೆ ತುಪ್ಪ ಹಾಕಿದರೆ ರುಚಿ ಹೆಚ್ಚು.
* ಇದನ್ನು ತಯಾರಿ ಮಾಡಿಟ್ಟರೆ 2-3 ದಿನದವರೆಗೆ ಬಳಸಬಹುದು.
* ಈ ಸಿಹಿ ಪರೋಟ ಸಿಹಿ ಸಿಹಿಯಾಗಿ ತುಂಬಾ ಚೆನ್ನಾಗಿರಲಿದೆ.



Click it and Unblock the Notifications
