Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ರೆಸಿಪಿ: ಕುಕ್ಕರ್ನಲ್ಲಿಯೇ ಮಾಡಬಹುದು ಎಗ್ಲೆಸ್ ಕೇಕ್
ಕೇಕ್ ಮಾಡಬೇಕು, ಆದರೆ ನಮ್ಮ ಮನೆಯಲ್ಲಿ ಓವನ್ ಇಲ್ಲ ಎಂದು ನಿಮ್ಮ ಕೇಕ್ ತಯಾರಿ ಹುಮ್ಮಸ್ಸಿಗೆ ಬ್ರೇಕ್ ಹಾಕಬೇಕಾದ ಅಗ್ಯತವಿಲ್ಲ, ಏಕೆಂದರೆ ಕುಕ್ಕರ್ನಲ್ಲಿಯೂ ಮಾಡಬಹುದು. ಮನೆಯಲ್ಲಿ ಒಂದು 5 ಲೀಟರ್ ಕುಕ್ಕರ್ ಇದ್ದರೆ ನೀವು ಕೇಕ್ ಟ್ರೈ ಮಾಡಬಹುದು. ಅದರಲ್ಲೂ ಮಕ್ಕಳಿಗೆ ಮನೆಯಲ್ಲಿ ಈ ರೀತಿ ಕೇಕ್ ಎಲ್ಲಾ ತಯಾರಿಸಿದರೆ ತುಂಬಾನೇ ಖುಷಿಯಾಗುವುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಮೈದಾ 1ಕಪ್
ಬೇಕಿಂಗ್ ಪೌಡರ್
ಅನ್ಸಾಲ್ಟಡ್ ಬೆಣ್ಣೆ
ಕಂಡೆನ್ಸಡ್ ಹಾಲು
ಸಕ್ಕರೆ
ನೀರು
*****
ಕುಕ್ಕರ್ನ ತಳದಲ್ಲಿ ಹಾಕಲು ಕಲ್ಲುಪ್ಪು ಅಥವಾ ನದಿ ಬದಿಯಲ್ಲಿ ಸಿಗುವ
ಮರಳು ಹಾಕಿ
***********
* ಒಂದು ಬೌಲ್ನಲ್ಲಿ 1ಕಪ್ ಮೈದಾ ಹಿಟ್ಟು, 1/2 ಚಮಚ ಬೇಕಿಂಗ್ ಪೌಡರ್,
ಅನ್ಸಾಲ್ಟಡ್ ಬೆಣ್ಣೆ ಹಾಕುವುದಾದರೆ ಚಿಟಿಕೆಯಷ್ಟು ಉಪ್ಪು ಹಾಕಿ.
* ನಂತರ 1 ಚಮಚ ವೆನಿಲ್ಲಾ ರಸ ಹಾಕಿ ಮಿಕ್ಸ್ ಮಾಡಿ
* 5 ಲೀಟರ್ ಕುಕ್ಕರ್ ಗ್ಯಾಸ್ಕಿಟ್ ಅಥವಾ ರಬ್ಬರ್ ರಿಂಗ್ ತೆಗಿಯಿರಿ, ವಿಶಲ್
ಕೂಡ ತೆಗಿಯಿರಿ.
* ಕುಕ್ಕರ್ ತಳ ಭಾರವಾಗಿರಬೇಕು. ಈಗ ಕುಕ್ಕರ್ ತಳದಲ್ಲಿ ಕಲ್ಲುಪ್ಪು ಹಾಕಿ ಹರಡಿ,
ನೀವು ಬೇಕಾದರೆ ನದಿಯಲ್ಲಿ ಸಿಗುವ ಮರಳು ಹಾಕಬಹುದು.
* ಈಗ ಕಡಿಮೆ ಉರಿಯಲ್ಲಿ ಬಿಸಿ ಮಾಡಿ
* ಉರಿ ಕಡಿಮೆ ಇದ್ದಷ್ಟೂ ಒಳ್ಳೆಯದು.
ಅದೇ ಸಮಯದಲ್ಲಿ ಹೀಗೆ ಮಾಡಿ
* ನೀವು ಪ್ರತ್ಯೇಕ ಪ್ಯಾನ್ನಲ್ಲಿ 40ಗ್ರಾಂನಷ್ಟು ಬೆಣ್ಣೆ ಹಾಕಿ.
* ಅದಕ್ಕೆ 1/2 ಕಪ್ ಕಂಡೆನ್ಸ್ಡ್ ಹಾಲು ಹಾಕಿ.
* 3 ಚಮಚ ಸಕ್ಕರೆ ಹಾಕಿ.
* ಈಗ 1/2 ಕಪ್ ನೀರು ಹಾಕಿ
* ಈಗ ಕಡಿಮೆ ಉರಿಯಲ್ಲಿ ಬೇಯಿಸಿ
* ಬೆಣ್ಣೆ ಕರಗುವಷ್ಟು ಹೊತ್ತು ಬೇಯಿಸಿ, ಎಲ್ಲಾ ಚೆನ್ನಾಗಿ ಕರಗುವಷ್ಟು ಹೊತ್ತು
ಮಿಕ್ಸ್ ಮಾಡಿ.
* ಈ ಮಿಶ್ರಣ ಮೆಲ್ಲನೆ ಬಿಸಿಯಾದಾಗ ತಕ್ಷಣವೇ ಹಿಟ್ಟನ್ನು ಹಾಕಿ, ಗಂಟು ಕಟ್ಟದಂತೆ
ಮಿಶ್ರ ಮಾಡಿ.
* ಹಿಟ್ಟು ತುಂಬಾನೇ ಗಟ್ಟಿಯಾಗಬಾರದು, ನೀರು ನೀರಿನಂತೆಯೂ ಇರಬಾರದು. ಹಿಟ್ಟು
ಮೀಡಿಯಂ ಆಗಿರಬೇಕು. ಆದಷ್ಟು ನೀರು ಕಡಿಮೆ ಇಡಿ, ಆವಾಗ ಬೇಕಾದರೆ
ಸೇರಿಸಬಹುದು.
* ಮಿಕ್ಸ್ ಮಾಡಿ, ಆದರೆ ಅತಿಯಾಗಿ ಮಿಕ್ಸ್ ಮಾಡಬೇಡಿ.
* ಈಗ ಮಿಶ್ರಣವನ್ನು ಮೆಲ್ಲನೆ ಪಾತ್ರೆಗೆ ಸುರಿಯಿರಿ.
* ಅದನ್ನು ಕುಕ್ಕರ್ನೊಳಗಡೆ ಮೆಲ್ಲನೆ ಇಳಿಸಿ ಇಡಿ.
* ಕುಕ್ಕರ್ನ ಮುಚ್ಚಳ ಮುಚ್ಚಿ, ಆದರೆ ರಬ್ಬರ್ ರಿಂಗ್ ಹಾಗೂ ವಿಶಲ್
ತೆಗೆದಿರಬೇಕು.
* ಕಡಿಮೆ ಉರಿಯಲ್ಲಿ 40-50 ನಿಮಿಷ ಬೇಯಿಸಬೇಕು.
* ಮೇಲ್ಭಾಗ ಗೋಲ್ಡನ್ ಬಣ್ಣಕ್ಕೆ ತಿರುಗಿದ್ದರೆ ಕೇಕ್ ರೆಡಿ.
* ನಂತರ ಆ ಪಾತ್ರೆಯನ್ನು ಹಿಡಿಕೆಯ ಸಹಾಯದಿಂದ ಮೆಲ್ಲನೆ ತೆಗೆಯಿರಿ ನಂತರ ಕೇಕ್
ಪೀಸ್ಗಳಾಗಿ ಕತ್ತರಿಸಿ.
ಇದೇ ರೆಸಿಪಿಯನ್ನು ಓವನ್ನಲ್ಲಿ ಮಾಡಬಹುದೇ?
ಮಾಡಬಹುದು, ಓವನ್ ಇತರ ಕೇಕ್ ಮಾಡುವಂತೆ ಇದನ್ನು
ತಯಾರಿಸಬಹುದು.



Click it and Unblock the Notifications
