Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮೊಟ್ಟೆ ಸಾರು, ಟೊಮೆಟೊ ಪೇಸ್ಟ್ ಹಾಕಿ ಹೀಗೆ ಮಾಡಿದರೆ ಸೂಪರ್ ಆಗಿರುತ್ತೆ
ಮೊಟ್ಟೆ ಸಾರು ನೀವು ಅನೇಕ ರುಚಿಯಲ್ಲಿ ಮಾಡಬಹುದು, ಆದರೆ ಟೊಮೆಟೊ ಪೇಸ್ಟ್ ಮಾಡಿ ಮಾುವ ಮೊಟ್ಟೆಯ ಸಾರು ತುಂಬಾ ಸಿಂಪಲ್ ಹಾಗೂ ರುಚಿ ಹೆಚ್ಚು. ಡಾಬಾಗಳಲ್ಲಿ, ಹೋಟೆಲ್ಗಲ್ಲಿ ಸಿಗುತ್ತೆ ಈ ಬಗೆಯ ಮೊಟ್ಟಯ ಸಾರು, ಇದನ್ನು ಮಾಡುವುದು ಸುಲಭ ನೋಡಿ, ಬನ್ನಿ ಟೊಮೆಟೊ ಪೇಸ್ಟ್ ಹಾಕಿ ಮಾಡುವ ಮೊಟ್ಟೆ ಸಾರು ರೆಸಿಪಿ ನೋಡೋಣ:

ಬೇಕಾಗುವ ಸಾಮಗ್ರಿ
5-6 ಮೊಟ್ಟೆ (ನಿಮಗೆ ಎಷ್ಟು ಮೊಟ್ಟೆ ಬೇಕೋ ಅಷ್ಟು ಬಳಸಬಹುದು, ಒಂದು 6
ಮೊಟ್ಟೆಗಿಂತ ಹೆಚ್ಚು ಬಳಸುವುದಾದರೆ ನೀವು ಗ್ರೇವಿ ಹೆಚ್ಚು ತಯಾರಿಸಿ)
6 ಸಾಧಾರಣ ಗಾತ್ರದ ಹಣ್ಣಾದ ಟೊಮೆಟೊ
2 ಚಮಚ ಎಣ್ಣೆ
1 ಇಂಚು ದೊಡ್ಡದಿರುವ ಚಕ್ಕೆ
2 ಲವಂಗ
1 ಏಲಕ್ಕಿ
1 -2 ಹಸಿ ಮೆಣಸು
1 ಚಮಚ ಜೀರಿಗೆ
ಸ್ವಲ್ಪ ಅರಿಶಿಣ ಪುಡಿ
1 ಚಮಚ ಕಾಶ್ಮೀರಿ ಮೆಣಸಿನ ಪುಡಿ
1 ಚಮಚ ಕೊತ್ತಂಬರಿ ಪುಡಿ
1/2 ಚಮಚ ಗರಂ ಮಸಾಲ ಪುಡಿ
ಸ್ವಲ್ಪ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು
ಗ್ರೇವಿಗೆ ತಕ್ಕ ನೀರು
ಈ ಸಾರು ಮಾಡುವ ಮುನ್ನ ಮೊಟ್ಟೆಯನ್ನು ಮೊದಲಿಗೆ ಫ್ರೈ ಮಾಡಿ
ಪಾತ್ರೆಗೆ ಒಂದು ಚಮಚ ಎಣ್ಣೆ ಹಾಕಿ, ಅದರಲ್ಲಿ ಸ್ವಲ್ಪ ಅರಿಶಿನ ಪುಡಿ, ಖಾರದ ಪುಡಿ, ಸ್ವಲ್ಪ ಉಪ್ಪು ಹಾಕಿ ಅದರಲ್ಲಿ ಬೇಯಿಸಿದ ಮೊಟ್ಟೆ ಹಾಕಿ 4-5 ನಿಮಿಷ ಫ್ರೈ ಮಾಡಿ, ಹೀಗೆ ಮಾಡುವುದರಿಂದ ಮೊಟ್ಟೆ ಇನ್ನೂ ಟೇಸ್ಟ್ ಅನಿಸುವುದು. ಈ ಮೊಟ್ಟೆಯನ್ನು ತೆಗೆದು ತಟ್ಟೆಯಲ್ಲಿ ಹಾಕಿಡಿ.
ಸ್ಟೆಪ್ 2: ಈಗ ಅದೇ ಎಣ್ಣೆಗೆ ಕತ್ತರಿಸಿದ ಟೊಮೆಟೊ
ಹಾಕಿ, ಹಸಿ ಮೆಣಸು, ಶುಂಠಿ, ಚಕ್ಕೆ, ಲವಂಗ ಹಾಕಿ ಫ್ರೈ ಮಾಡಿ ( ಬೇಕಿದ್ದರೆ 2-3
ಎಸಳು ಬೆಳ್ಳುಳ್ಳಿ ಸೇರಿಸಬಹುದು)
ನಂತರ ಟೊಮೆಟೊವನ್ನು ಉರಿಯಿಂದ ಇಳಿಸಿ ತಣ್ಣಗಾದ ಮೇಲೆ ಪೇಸ್ಟ್ ಮಶಾಡಿ.
ಸ್ಟೆಪ್ 3
- ಈಗ ಸಾರಿನ -ಪಾತ್ರೆಗೆ 2 ಚಮಚ ಎಣ್ಣೆ ಹಾಕಿ, ಅದರಲ್ಲಿ ಈರುಳ್ಳಿ ಹಾಕಿ ಈರುಳ್ಳಿ ಮೆತ್ತಗಾಗುವವರೆಗೆ ಫ್ರೈ ಮಾಡಿ, ನಂತರ ಮಸಾಲೆ ಸಾಮಗ್ರಿ ಹಾಕಿ ಬಳಿಕ, ಟೊಮೆೊ ಪೇಸ್ಡ್ ಹಾಕಿ ಕುದಿಸಿ, ಬಳಿಕ ಮೊಟ್ಟೆ ಸೇರಿಸಿ.
- ಸ್ವಲ್ಪ ಕ್ರೀಮ್ ಅಥವಾ ಮೊಸರು ಸೇರಿಸಿದರೆ ಇನ್ನೂ ಟೇಸ್ಟ್ ಆಗಿರುತ್ತದೆ, ಇಲ್ಲದಿದ್ದರೂ ಒಕೆ, ಉಪ್ಪು ಸರಿಯಾಗಿದೆಯೇ ನೋಡಿ, ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮೊಟ್ಟೆ ಸಾರು ರೆಡಿ.
- ಟಿಪ್ಸ್: ನೀವು ಇಡೀ ಮೊಟ್ಟೆ ಹಾಕಬಹುದು ಅಥವಾ ಕತ್ತರಿಸಿ ಹಾಕಬಹುದು
- ಟೊಮೆಟೊ ಪೇಸ್ಟ್ ಹಾಕಿ ಮಾಡುವಾಗ ಮೊಟ್ಟೆ ಮಸಾಲೆ ಇದ್ದರೆ ಒಂದು ಚಮಚ ಮೊಟ್ಟೆ ಮಸಾಲೆ ಸೇರಿಸಬಹುದು
- ಮೊಟ್ಟೆಯನ್ನು ಫ್ರೈ ಮಾಡಿ ಹಾಕಿ, ಇದರಿಂದ ಮೊಟ್ಟೆ ಇನ್ನಷ್ಟು ರುಚಿ ಅನಿಸುವುದು, ಮೊಟ್ಟೆಗೆ ನೈಫ್ನಿಂದ ಗೆರೆ ಹಾಕಿದ್ದರೆ ಮಸಾಲೆ ಚೆನ್ನಾಗಿ ಹೀರಿಕೊಳ್ಳುತ್ತದೆ.
- ಇನ್ನು ನೀವು ಎಣ್ಣೆ ಹಾಕುವಾಗ ಸ್ವಲ್ಪ ಕರಿಬೇು ಬೇಕಿದ್ದರೆ ಸೇರಿಸಬಹುದು.
- ಟೊಮೆಟೊ ಪೇಸ್ಟ್ ಹಾಕಿದ ತಕ್ಷಣ ನೀರು ಹಾಕಬೇಡಿ, ಟೊಮೆಟೊ ಪೇಸ್ಟ್ ಸ್ವಲ್ಪ ಕುದಿ ಬರಲಿ, ನಂತರವಷ್ಟೇ ಸೇರಿಸಿ.



Click it and Unblock the Notifications
