Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರೆಸಿಪಿ: ಮಾಡಲು ಸುಲಭ, ತಿನ್ನಲು ಬಲು ರುಚಿ ಈ ಮೊಟ್ಟೆ ಪಲ್ಯ
ಮೊಟ್ಟೆಯನ್ನು ನೀವು ಅನೇಕ ರುಚಿಯಲ್ಲಿ ತಯಾರಿಸಬಹುದು, ನೀವು ಮೊಟ್ಟೆಯಿಂದ ಸಾರು ಅಥವಾ ಬುರ್ಜಿ ಮಾಡುವಾಗ ಗಮನಿಸಿರಬಹುದು ಮಾಡುವ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ರುಚಿಯಲ್ಲಿ ಬದಲಾವಣೆಯಾಗುತ್ತೆ, ಇದು ಕೂಡ ಅಂಥದ್ದೇ ಒಂದು ರೆಸಿಪಿಯಾಗಿದೆ.

ನೀವು ಎಗ್ ಬುರ್ಜಿ, ಎಗ್ ರೋಸ್ಟ್ ಎಲ್ಲಾ ಮಾಡಿದ್ದರೆ ಇದೊಂದು ಸರಳವಾದ ರೆಸಿಪಿ ಟ್ರೈ ಮಾಡಿ ನೋಡಿ, ರುಚಿ ನಿಮಗೆ ಖಂಡಿತ ಇಷ್ಟವಾಗುವುದು.
ಅನ್ನದ ಜೊತೆ ಸೈಡ್ ಡಿಶ್ ಆಗಿ ಸವಿಯಲು ಚೆನ್ನಾಗಿರುತ್ತದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Palya
Serves: 2
-
ಬೇಕಾಗುವ ಸಾಮಗ್ರಿ
ಬೇಯಿಸಿದ ಮೊಟ್ಟೆ 4
ಕ್ಯಾಪ್ಸಿಕಂ 1 (ಇದರ ಬೀಜ ಹಾಕಬೇಡಿ)
ಟೊಮೆಟೊ 1 (ಅದರ ಸಿಪ್ಪೆ ತೆಗೆಯಿರಿ, ಬೀಜ ಕೂಡ)
ಎಣ್ಣೆ 4 ಚಮಚ
ಅರಿಶಿಣ ಪುಡಿ 1/2 ಚಮಚ
ಜೀರಿಗೆ ಪುಡಿ 1 ಚಮಚ
ರುಚಿಗೆ ತಕ್ಕ ಉಪ್ಪು
ಖಾರದ ಪುಡಿ 1 ಚಮಚ
ಕಸೂರಿ ಮೇಥಿ 1 ಚಮಚ
ಎಗ್ ಮಸಾಲ 1 ಚಮಚ
ಸ್ವಲ್ಪ ಕೊತ್ತಂಬರಿ ಸೊಪ್ಪು
-
ಮಾಡುವ ವಿಧಾನ
* ಪ್ಯಾನ್ ತೆಗೆದು ಬಿಸಿ ಮಾಡಿ 4 ಚಮಚ ಎಣ್ಣೆ ಹಾಕಿ.
* ಎಣ್ಣೆ ಬಿಸಿಯಾದಾಗ ಕತ್ತರಿಸಿದ ಕ್ಯಾಪ್ಸಿಕಂ ಹಾಗೂ ಟೊಮೆಟೊ ಹಾಕಿ, ಅರಿಶಿಣ ಪುಡಿ, ಜೀರಿಗೆ ಪುಡಿ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಫ್ರೈ ಮಾಡಿ.
* ನಂತರ ಕಸೂರಿ ಮೇಥಿಯನ್ನು ಕೈಯಲ್ಲೇ ಪುಡಿ ಮಾಡಿ ಹಾಕಿ.
* ಈಗ ಮೊಟ್ಟೆಯನ್ನು ಕತ್ತರಿಸಿ ಮಸಾಲೆಗೆ ಹಾಕಿ.
* ಈಗ ಒಂದು ಚಮಚ ಎಗ್ ಮಸಾಲ ಹಾಕಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮೊಟ್ಟೆ ಪಲ್ಯ ರೆಡಿ.
- ಕ್ಯಾಪ್ಸಿಕಂ, ಟೊಮೆಟೊ ಜೊತೆಗೆ ಪಾಲಾಕ್ ಕೂಡ ಸೇರಿಸಿದರೆ ಇನ್ನೂ ಟೇಸ್ಟ್ ಆಗಿರುತ್ತೆ.
- ಕ್ಯಾಲೋರಿ - 160ಕ್ಯಾ
- ಕೊಬ್ಬು - 9ಗ್ರಾಂ
- ಪ್ರೊಟೀನ್ - 8ಗ್ರಾಂ



Click it and Unblock the Notifications
