For Quick Alerts
ALLOW NOTIFICATIONS  
For Daily Alerts

ರೆಸಿಪಿ: ಹೀಗೆ ಮಾಡಿದರೆ ತುಂಬಾ ಟೇಸ್ಟಿಯಾಗಿರುತ್ತೆ ಎಗ್‌ ಫ್ರೈಡ್ ರೈಸ್‌

Posted By:
|

ಎಗ್‌ ಫ್ರೈಡ್‌ ರೈಸ್‌ ನೋಡಿದರೆ ಸಾಕು ಅದನ್ನು ತಿನ್ನಬೇಕೆಂದು ಅನಿಸುತ್ತದೆ ಅಲ್ಲವೇ? ಈಗೀನ ಪರಿಸ್ಥಿತಿಯಲ್ಲಿ ಹೊರಗಡೆಯಿಂದ ತಿನ್ನುವುದು ಅಷ್ಟು ಸುರಕ್ಷಿತವಲ್ಲ. ಈ ಎಗ್‌ ಫ್ರೈಡ್‌ರೈಸ್ ಅನ್ನು ತುಂಬಾ ರುಚಿಕರವಾಗಿ ಮನೆಯಲ್ಲಿಯೇ ಮಾಡಬಹುದು.

Egg Fried Rice Recipe

ಇಲ್ಲಿ ನಾವು ಸರಳವಾದ ರೆಸಿಪಿ ನೀಡಿದ್ದೇವೆ. ಇದನ್ನು ಒಮ್ಮೆ ಟ್ರೈ ಮಾಡಿದ್ದೇ ಆದರೆ ಮುಂದೆ ನೀವು ಹೊರಗಡೆಯಿಂದ ಫ್ರೈಡ್‌ರೈಸ್‌ ಬೇಡ ಮನೆಯದ್ದೇ ತುಂಬಾ ರುಚಿಯಾಗಿರುತ್ತೆ ಎಂದು ಹೇಳುವುದು ಗ್ಯಾರಂಟಿ. ಬನ್ನಿ ಎಗ್‌ ಫ್ರೈಡ್‌ರೈಸ್ ಮಾಡುವುದು ಹೇಗೆ ಎಂದು ನೊಡೋಣ:
Egg Fried Rice Recipe,ಎಗ್‌ ಫ್ರೈಡ್ ರೈಸ್‌ ರೆಸಿಪಿ
Egg Fried Rice Recipe,ಎಗ್‌ ಫ್ರೈಡ್ ರೈಸ್‌ ರೆಸಿಪಿ
Prep Time
20 Mins
Cook Time
10M
Total Time
30 Mins

Recipe By: Reena TK

Recipe Type: Meal

Serves: 2

Ingredients
  • ಬೇಕಾಗುವ ಸಾಮಗ್ರಿ

    3 ಚಮಚ ಎಣ್ಣೆ

    1 ಚಮಚ ಶುಂಠಿ (ಚಿಕ್ಕದಾಗಿ ಕತ್ತರಿಸಿದ್ದು)

    ಅರ್ಧ ಚಮಚ ಬೆಳ್ಳುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)

    1/4 ಕಪ್ ಸೆಲರಿ (Optional)

    1/4 ಕಪ್ ಸ್ಪ್ರಿಂಗ್ ಆನಿಯನ್ (ಚಿಕ್ಕದಾಗಿ ಕತ್ತರಿಸಿದ್ದು)

    1/2 ಕಪ್ ಬಟಾಣಿ (ಬೇಯಿಸಿದ್ದು)

    1/2 ಕಪ್ ಕ್ಯಾರೆಟ್

    1/4 ಕಪ್ ಬೀನ್ಸ್

    2 ಕಪ್ ಬೇಯಿಸಿದ ಅನ್ನ

    1 ಚಮಚ ಡಾರ್ಕ್ ಸೋಯಾ ಸಾಸ್

    1 ಚಮಚ ಎಳ್ಳೆಣ್ಣೆ

    1/2 ಚಮಚ ಬಿಳಿ ಕಾಳು ಮೆಣಸಿನ ಪುಡಿ

    2-3 ಮೊಟ್ಟೆ

Red Rice Kanda Poha
How to Prepare
  • ಮಾಡುವ ವಿಧಾನ

    * ಅಗಲವಾದ ಬಾಣಲಿಗೆ 1 ಚಮಚ ಎಣ್ಣೆ ಹಾಕಿ ಅದು ಬಿಸಿಯಾದಾಗ ಮೊಟ್ಟೆಯನ್ನು ಒಡೆದು ಹಾಕಿ ಎಣ್ಣೆಯಲ್ಲಿ ಫ್ರೈ ಮಾಡಿ. ಮೊಟ್ಟೆ ಕಂದು ಬಣ್ಣಕ್ಕೆ ತಿರುಗಲು ಬಿಡಬೇಡಿ. ಫ್ರೈಯಾದ ಮೊಟ್ಟೆಯನ್ನು ತೆಗೆದು ಒಂದು ಕಪ್‌ನಲ್ಲಿ ಹಾಕಿಡಿ.

    * ಈಗ ಅದೇ ಬಾಣಲಿಗೆ 2 ಚಮಚ ಎಣ್ಣೆ ಹಾಕಿ, ಶುಂಠಿ, ಈರುಳ್ಳಿ, ಸೆಲರಿ, ಸ್ಪ್ರಿಂಗ್ ಆನಿಯನ್‌ ಹಾಕಿ ಫ್ರೈ ಮಾಡಿ . ಆಗ ಪರಿಮಳ ಬರಲಾರಂಭಿಸುತ್ತದೆ, ಆಗ ಕ್ಯಾರೆಟ್ ಹಾಗೂ ಬಟಾಣಿ, ಬೀನ್ಸ್ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮತ್ತೆ ಫ್ರೈ ಮಾಡಿ. ಹೀಗೆ ಫ್ರೈ ಮಾಡುವಾಗ ಉರಿ ಅಧಿಕವಾಗಿರಲಿ. ಆಗ ತರಕಾರಿ ಚೆನ್ನಾಗಿ ರೋಸ್ಟ್ ಆಗಿ ರುಚಿ ಹೆಚ್ಚುವುದು.

    * ಈಗ ಅನ್ನ ಹಾಕಿ ಮಿಕ್ಸ್ ಮಾಡಿ, ಈಗ ಸೋಯಾ ಸಾಸ್, ವಿನೆಗರ್, ಎಳ್ಳೆಣ್ಣೆ, ಬಿಳಿ ಕಾಳು ಮೆಣಸಿನ ಪುಡಿ, ಬೇಕಿದ್ದರೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಒಂದು 2 ನಿಮಿಷ ಚೆನ್ನಾಗಿ ಮಿಶ್ರ ಮಾಡಿ, ಈಗ ಫ್ರೈ ಮಾಡಿಟ್ಟ ಹೊಟ್ಟೆ ಹಾಕಿ ಮತ್ತೊಮ್ಮೆ ಮಿಶ್ರ ಮಾಡಿದರೆ ಎಗ್‌ ಫ್ರೈಡ್ ರೈಸ್ ಸರ್ವ್ ಮಾಡಲು ರೆಡಿ.

Instructions
  • * ಎಗ್‌ ಫ್ರೈಡ್‌ ರೈಸ್‌ ಜೊತೆ ಮಶ್ರೂಮ್ ಕೂಡ ಹಾಕಿದರೆ ರುಚಿ ಮತ್ತಷ್ಟು ಚೆನ್ನಾಗಿರುತ್ತದೆ. * ಸೋಯಾ ಸಾಸ್‌ ಸ್ವಲ್ಪ ಅಧಿಕವೇ ಇರಲಿ, ಮೊಟ್ಟೆ ಹಾಕಿ ಮಿಶ್ರ ಮಾಡಿದ ಮೇಲೆ ಮತ್ತೊಮ್ಮೆ ಸ್ವಲ್ಪ ಸೋಯಾ ಸಾಸ್‌ ಹಾಕಿ ಮಿಶ್ರ ಮಾಡಿ.
Nutritional Information
  • ಸರ್ವ್ - 2 ಪ್ಲೇಟ್
  • ಕ್ಯಾಲೋರಿ - 583 ಕ್ಯಾ
  • ಪ್ರೊಟೀನ್ - 7.8ಗ್ರಾಂ
  • ಕಾರ್ಬ್ಸ್ - 28ಗ್ರಾಂ
[ 3.5 of 5 - 38 Users]
X
Desktop Bottom Promotion