Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಎಗ್ ಬನಾನ ಪುಡ್ಡಿಂಗ್: ಪೇಸ್ಟ್ರಿ ಹಂಗೆ ಸೂಪರ್ ಮಮ್ಮಿ... ಅಂತ ಕುಣಿದಾಡುತ್ತಾರೆ ಮಕ್ಕಳು
ಮಕ್ಕಳಿಗೆ ಈ ಕೇಕ್, ಪೇಸ್ಟ್ರಿ ಇವೆಲ್ಲಾ ತುಂಬಾನೇ ಇಷ್ಟವಾಗುವುದು, ನೀವು ಬಾಳೆಹಣ್ಣು ಮತ್ತು ಮೊಟ್ಟೆ ಹಾಕಿ ರುಚಿಯಾದ ಪುಡ್ಡಿಂಗ್ ಮಾಡಬಹುದು, ಈ ಪುಡ್ಡಿಂಗ್ ಯಾವುದೇ ಪೇಸ್ಟ್ರಿಗಿಂತ ಕಡಿಮೆ ಇರಲ್ಲ, ಅಲ್ಲದೆ ಅಷ್ಟೊಂದು ರುಚಿಯಾಗಿರುತ್ತದೆ. ಇನ್ನು ಈ ಪುಡ್ಡಿಂಗ್ ಮಾಡಲು ಯಾವುದೇ ಮೈಕ್ರೋಓವನ್ ಬೇಕಾಗಿಲ್ಲ, ಗ್ಯಾಸ್ ಸ್ಟೌವ್‌ಮೇಲೆ ಮಾಡಬಹುದು, ಕಟ್ಟಿಗೆ ಒಲೆ ಮೇಲೆಯೂ ಮಾಡಬಹುದು ಅಷ್ಟೊಂದು ಚೆನ್ನಾಗಿರುತ್ತದೆ ಈ ಪುಡ್ಡಿಂಗ್ , ರೆಸಿಪಿ ಕೂಡ ಅಷ್ಟೇ ಸರಳವಾಗಿದೆ:
ಬೇಕಾಗುವ ಸಾಮಗ್ರಿ
ಬಾಳೆಹಣ್ಣು
ಮೊಟ್ಟೆ
ಸಕ್ಕರೆ 1 ಕಪ್
1 ಕಪ್ ಹಾಲು
ವೆನಿಲ್ಲಾ ಎಸೆನ್ಸ್ 1/2 ಚಮಚ (ಸೇರಿಸದೆಯೂ ಇರಬಹುದು)
ಶುಗರ್ ಕ್ಯಾರಮಲ್ ಮಾಡಲು
1 ಕಪ್ ಸಕ್ಕರೆ
ಮಾಡುವ ವಿಧಾನ
4-5 ಬಾಳೆಹಣ್ಣು (ಹೂಬಾಳೆಯಾದರೆ, ಪಚ್ಚೆಬಾಳೆಯಾದರೆ 2 ಸಾಕಾಗುತ್ತೆ)
ಮೊಟ್ಟೆ 2(ನಾಟಿ ಕೋಳಿ ಮೊಟ್ಟೆ ಅಥವಾ ಫಾರಂ ಕೋಳಿ ಮೊಟ್ಟೆ ಯಾವುದು ಇದೆಯೋ ಅದನ್ನು
ಸೇರಿಸಬಹುದು)
ಈಗ ನೀವು ಬಾಳೆಹಣ್ಣನ್ನು ಚಿಕ್ಕದಾಗಿ ಕತ್ತರಿಸಿ ಮಿಕ್ಸಿ ಜಾರ್‌ಗೆ ಹಾಕಿ, ಮೊಟ್ಟೆ
ಒಡೆದು ಹಾಕಿ(ಬಿಳಿ, ಹಳದಿ ಎರಡೂ ಹಾಕಿ)
ಒಂದು ಕಪ್ ಸಕ್ಕರೆ ಸೇರಿಸಿ,ವೆನಿಲ್ಲಾ ಎಸೆನ್ಸ್ ಇದ್ದರೆ ಸೇರಿಸಿ
ನಂತರ ಒಂದು ಹಾಲು ಹಾಕಿ, (ಹಾಲು ತಣ್ಣನೆಯ ಹಾಲು ಅಥವಾ ಕಾಯಿಸಿ ತಣ್ಣಗಾದ ಹಾಲು
ಯಾವುದಾದರು ಸರಿಯೇ)
ಶುಗರ್ ಕ್ಯಾರಾಮಲ್ ಮಾಡಿಕೊಳ್ಳಿ
- ಈಗ ನೀವು ಒಂದು ಕಪ್ ಸಕ್ಕರೆಯನ್ನು ಬಾಣಲೆಗೆ ಹಾಕಿ ಕರಗಿಸಿ(ನೀರು ಹಾಕಬಾರದು)
- ಸಕ್ಕರೆ ಕರಗಿ ಕಂದು ಬಣ್ಣಕ್ಕೆ ತಿರುಗಿದರೆ ಶುಗರ್ ಕ್ಯಾರಾಮಲ್ ರೆಡಿ
- ಈಗ ಇದನ್ನು ನೀವು ಬೇಯಲು ಯಾವ ಪಾತ್ರೆ ಬಳಸುತ್ತೀರೋ ಅದಕ್ಕೆ ಸುರಿಯಿರಿ
- ಅದರ ಮೇಲೆ ರುಬ್ಬಿಟ್ಟ ಮಿಶ್ರಣ ಸುರಿಯಿರಿ
- ಈಗ ನೀವು ಸ್ವಲ್ಪ ದೊಡ್ಡ ಕುಕ್ಕರ್ ತೆಗೆದು ಅದರ ಅರ್ಧದಷ್ಟು ನೀರು ಹಾಕಿ ಮಿಶ್ರಣ ಹಾಕಿದ ಪಾತ್ರೆ ಇಡುವಾಗ ಅರ್ಧದಷ್ಟು ನೀರು ಆ ಪಾತ್ರೆಗೆ ತಾಗುವಂತೆ ಇರಬೇಕು. ನಂತರ 5-6 ವಿಶಲ್ ಬರುವವರೆ ಬೇಯಿಸಿ, ಇಲ್ಲಾ ಇಡ್ಲಿ ಪಾತ್ರೆಯಲ್ಲಿ 30 ನಿಮಿಷ ಬೇಯಿಸಿ
- ನಂತರ ಆವಿ ಹೋಗಿ ತಣ್ಣಗಾದ ಮೇಲೆ ಅದನ್ನು ಮತ್ತೊಂದು ತಟ್ಟೆಗೆ ಸುರಿದು ನಂತರ ಕತ್ತರಿಸಿ ಸರ್ವ್ ಮಾಡಿ, ತಿನ್ನಲು ಪೇಸ್ಟ್ರಿ ರೀತಿ ಸೂಪರ್ ಆಗಿರುತ್ತೆ. ಮಕ್ಕಳಿಗಂತೂ ತುಂಬಾನೇ ಇಷ್ಟವಾಗುವುದು ನೋಡಿ.
ಈ ಪುಡ್ಡಿಂಗ್ ತುಂಬಾನೇ ಸರಳವಾಗಿರುವುದರಿಂದ ಹೊರಗಡೆಯಿಂದಕಲರ್ ಹಾಕಿ ಮಾಡುವ ಪೇಸ್ಟ್ರಿ ತಂದು ಕೊಡುವುದಕ್ಕಿಂತ ಇದನ್ನು ಕೊಡಬಹುದು, ಇನ್ನು ಇದು ನೋಡಲು ಆಕರ್ಷಕವಾಗಿರುವುದರಿಂದ ಮಕ್ಕಳಿಗೆ ತುಂಬೇ ಇಷ್ಟವಾಗುವುದು, ನೀವು ಬೇಕಿದ್ದರೆ ಬರ್ತ್‌ಡೇಗೆ ಇದನ್ನು ತಯಾರಿಸಬಹುದು. ಈ ಪುಡ್ಡಿಂಗ್ ಇಷ್ಟವಾದರೆ ಕಮೆಂಟ್ ಮಾಡಿ, ನಿಮಗೆ ಗೊತ್ತಿರುವ ಸ್ಪೆಷಲ್ ರೆಸಿಪಿ ನಮ್ಮೊಂದಿಗೆ ಕಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಿ.



Click it and Unblock the Notifications

