Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಾವಿನಕಾಯಿ ತೊಕ್ಕು ಈ ರೀತಿಯಲ್ಲೂ ಮಾಡಬಹುದು
ಮಳೆಗಾಲಕ್ಕೆ ಹೇಳಿ ಮಾಡಿಸಿದಂತಹ ಮಾವಿನಕಾಯಿ ತೊಕ್ಕು ತಯಾರಿಸುವ ಸುಲಭ ವಿಧಾನ ಇಲ್ಲಿದೆ
ಮಳೆಗಾಲ ಬಹುತೇಕ ಶುರುವಾಗಿದೆ. ಊಟದ ಸಮಯದಲ್ಲಿ ಬಿಸಿ ಬಿಸಿ ಗಂಜಿಯ ಜೊತೆಯಲ್ಲಿ ಏನಾದರೂ ಖಾರ ಖಾರ ಪದಾರ್ಥವಿದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಭಾಸವಾಗುತ್ತದೆ. ಹೊರಗಡೆ ಧಾರಾಕಾರ ಮಳೆ ಬರುತ್ತಿರುವಾಗ ಮನೆಯಲ್ಲಿ ಕುಳಿತು ಖಾರ ಪದಾರ್ಥದೊಂದಿಗೆ ಬಿಸಿ ಬಿಸಿ ಗಂಜಿಯ ಸವಿದವನೇ ಭಾಗ್ಯವಂತ.

ಈ ರುಚಿ ಯಾವುದೇ ಪಿಜ್ಜಾ, ಬರ್ಗರ್ನ್ನೂ ಮೀರಿಸುವಂತೆ ಇರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗಂತೂ ಸಾಮಾನ್ಯವಾಗಿ ಎಲ್ಲಾ ಕಡೆ ಕಾಟು ಮಾವಿನ ಕಾಯಿ ಸಿಗುತ್ತದೆ. ಇದನ್ನೇ ಬಳಸಿ ಸವಿ ಸವಿಯಾದ ಮಾವಿನ ತೊಕ್ಕು ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ
ಬೇಕಾಗುವ ಸಾಮಗ್ರಿ :ಬಲಿತ ಮಾವಿನಕಾಯಿ 4, 20 ಒಣ ಮೆಣಸು, 10 ಉಪ್ಪಿನಕಾಯಿಗೆ ಬಳಸುವ ಖಾರ ಒಣಮೆಣಸು, ಮೆಂತೆ 1 ಚಮಚ, ಇಂಗು ಮಧ್ಯಮ ನಿಂಬೆ ಗಾತ್ರ, ಕೊಬ್ಬರಿ ಎಣ್ಣೆ 6 ಚಮಚ, ಬೆಲ್ಲ 1.5 ಕಪ್, ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು : ತೆಂಗಿನ ಎಣ್ಣೆ 8 ಚಮಚ, ಸಾಸಿವೆ 2 ಚಮಚ, ಒಣ ಮೆಣಸು 3, ಬೇವಿನಸೊಪ್ಪು
ಮಾಡುವ ವಿಧಾನ : ಮಾವಿನ ಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು ಅದರ ಸಿಪ್ಪೆಗಳನ್ನು ಸುಲಿದುಕೊಳ್ಳಬೇಕು. ಸ್ವಲ್ಪ ಕೂಡ ಸಿಪ್ಪೆ ಕಾಣದಂತೆ ನೀವು ಮಾವಿನ ಕಾಯಿಯ ಸಿಪ್ಪೆಯನ್ನು ಸುಲಿಯಬೇಕು ಇಲ್ಲವಾದಲ್ಲಿ ತೊಕ್ಕು ಕಹಿ ರುಚಿಯನ್ನು ಹೊಂದುವ ಸಾಧ್ಯತೆ ಇರುತ್ತದೆ. ಮಾವಿನ ಕಾಯಿಗಳನ್ನು ಸುಲಿದುಕೊಂಡ ಬಳಿಕ ಅವುಗಳನ್ನು ಚೆನ್ನಾಗಿ ತುರಿದುಕೊಳ್ಳಬೇಕು.
ಮಾವಿನ ಕಾಯಿಗಳನ್ನು ತುರಿದುಕೊಂಡ ಬಳಿಕ ತೊಕ್ಕಿಗೆ ಬೇಕಾದ ಮಸಾಲೆ ತಯಾರಿಸಿಕೊಳ್ಳಬೇಕು. ಒಂದು ಬಾಣಲೆಯನ್ನು ಮಧ್ಯಮ ಉರಿಯಲ್ಲಿ ಗ್ಯಾಸ್ ಸ್ಟೌನ ಮೇಲಿಡಿ. ಬಾಣಲೆ ಸ್ವಲ್ಪ ಬಿಸಿಯಾಗುತ್ತಿದ್ದಂತೆಯೇ ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಿ. ಎಣ್ಣೆ ಬಿಸಿಯಾದ ಬಳಿಕ ಮೆಣಸಿನಕಾಯಿಯನ್ನು ಹುರಿಯಲು ಆರಂಭಿಸಿ. ಮೆಣಸಿನಕಾಯಿ ದಪ್ಪಗಾಗುತ್ತಿದ್ದಂತೆಯೇ ಇದಕ್ಕೆ ಇಂಗು ಹಾಗೂ ಮೆಂತೆಯನ್ನು ಕ್ರಮವಾಗಿ ಸೇರಿಸಿಕೊಂಡು ಮತ್ತೊಮ್ಮೆ ಹುರಿಯಲು ಆರಂಭಿಸಿ. ಮಸಾಲೆ ಪದಾರ್ಥಗಳ ಹಸಿವಾಸನೆ ಹೋಗಿ ಘಮವಾದ ಪರಿಮಳ ಬರುವವರೆಗೂ ನೀವು ಹುರಿದುಕೊಳ್ಳಬೇಕು.
ಈಗಾಗಲೇ ಹುರಿದುಕೊಂಡ ಮಸಾಲೆಯನ್ನು ತಣ್ಣಗಾಗಲು ಬಿಡಬೇಕು. ಬಳಿಕ ಇವುಗಳನ್ನು ಮಿಕ್ಸಿಯಲ್ಲಿ ಹಾಕಿ ನೀರನ್ನು ಬಳಸದೇ ಪೌಡರ್ ಮಾಡಿಕೊಳ್ಳಿ.
ಈಗ ಇನ್ನೊಂದು ಬಾಣಲೆಯನ್ನು ತೆಗೆದುಕೊಂಡು ಇದಕ್ಕೆ ತೆಂಗಿನ ಎಣ್ಣೆಯನ್ನು ಹಾಕಿಕೊಳ್ಳಿ. ಸಾಸಿವೆ , ಮೆಣಸಿನಕಾಯಿ ಹಾಗೂ ಬೇವಿನಸೊಪ್ಪನ್ನು ಹಾಕಿ ಹುರಿದುಕೊಳ್ಳಿ. ಬಳಿಕ ಈಗಾಗಲೇ ತುರಿದಿಟ್ಟುಕೊಂಡಿದ್ದ ಮಾವಿನಕಾಯಿಯನ್ನು ಇದಕ್ಕೆ ಸೇರಿಸಿಕೊಳ್ಳಿ. ಈಗ ನೀವು ತೆಗೆದಿಟ್ಟುಕೊಂಡ ಬೆಲ್ಲ ಹಾಗೂ ಉಪ್ಪನ್ನು ಸೇರಿಸಿಕೊಳ್ಳಿ. ನೀವು ಆಯ್ಕೆಮಾಡಿಕೊಂಡ ಮಾವಿನಕಾಯಿ ಎಷ್ಟು ಹುಳಿಯಾಗಿದೆ ಎನ್ನುವುದರ ಮೇಲೆ ಬೆಲ್ಲದ ಪ್ರಮಾಣವನ್ನು ನೀವು ನಿರ್ಧರಿಸಬೇಕಾಗುತ್ತದೆ.
ಮಾವಿನಕಾಯಿ ಬಾಡಿದ ಬಳಿಕ ನೀವು ಇದಕ್ಕೆ ರುಬ್ಬಿ ಪುಡಿಮಾಡಿಟ್ಟುಕೊಂಡ ಮಸಾಲೆಯನ್ನು ಸೇರಿಸಬೇಕು. ಸಣ್ಣ ಉರಿಯಲ್ಲಿ ಸುಮಾರು ಐದು ನಿಮಿಷಗಳ ಕಾಲ ಈ ಎಲ್ಲಾ ಮಿಶ್ರಣಗಳನ್ನು ಬೇಯಿಸಿ. ಈ ಮಿಶ್ರಣಗಳು ತಳ ಹಿಡಿಯದಂತೆ ನೋಡಿಕೊಳ್ಳಲು ನೀವು ಸೌಟಿನಿಂದ ಪದಾರ್ಥವನ್ನು ತಿರುಚುತ್ತಲೇ ಇರಬೇಕು. ಈಗ ಸವಿ ಸವಿಯಾದ ಮಾವಿನ ಕಾಯಿ ತೊಕ್ಕು ಸವಿಯಲು ಸಿದ್ಧ.
ಗಾಜಿನ ಬಾಟಲಿಗಳಲ್ಲಿ ಮಾವಿನಕಾಯಿ ತೊಕ್ಕನ್ನು ಹಾಕಿಟ್ಟುಕೊಂಡು ನೀವು ಬಹಳ ಸಮಯದರವೆಗೆ ಇದನ್ನು ಸೇವಿಸಬಹುದಾಗಿದೆ. ಆದಷ್ಟು ತೇವಾಂಶ ತಾಗದಂತೆ ನೀವು ನೋಡಿಕೊಳ್ಳಬೇಕು ಆಗ ಮಾತ್ರ ತೊಕ್ಕು ಬಹಳ ಸಮಯದವರೆಗೆ ಬಾಳಿಕೆ ಬರುತ್ತದೆ. ಬಿಸಿಬಿಸಿ ಗಂಜಿಯೊಂದಿಗೆ ಈ ತೊಕ್ಕನ್ನು ಸವಿಯುವ ಮಜವೇ ಬೇರೆ.



Click it and Unblock the Notifications
