Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
ಸುಲಭದಲ್ಲಿ ಮಾಡಿ ಈ ಸಾಂಬಾರ್ ಪುಡಿ: 1 ಚಮಚ ಸಾಂಬಾರ್ಗೆ ಹಾಕಿದರೆ ಸಾಕು ಸೂಪರ್ ರುಚಿ
ನೀವು ಸಾಂಬಾರ್ ಪುಡಿ ಹೊರಗಡೆಯಿಂದ ತಂದು ಬಳಸುತ್ತಿದ್ದರೆ ಮನೆಯಲ್ಲಿಯೇ ಪುಡಿ ತಯಾರಿಸಿ, ಸಾಂಬಾರ್ ಮಾಡಿ, ಅದರ ರುಚಿಗೆ ಮನೆಯವರೆಲ್ಲಾ ನಿನ್ನ ಕೈಪುಣ್ಯ ತುಂಬಾ ಚೆನ್ನಾಗಿದೆ ಎಂದು ಹೊಗಳುತ್ತಾರೆ. ಈ ಪುಡಿ ರೆಡಿ ಮಾಡಿಟ್ಟು ಒಂದು ಚಮಚ ಸಾಂಬಾರ್ ಪುಡಿ, ಸ್ವಲ್ಪ ಹೆಚ್ಚು ಸಾಂಬಾರ್ ಮಾಡುವುದಾದರೆ 2 ಚಮಚ ಸೇರಿಸಿದರೆ ಸಾಕು ರುಚಿ-ರುಚಿಯಾದ ಸಾಂಬಾರ್ ರೆಡಿ.

ಬೇಕಾಗುವ ಸಾಮಗ್ರಿ
ಒಂದೂವರೆ ಕಪ್ ಕೊತ್ತಂಬರಿ ಬೀಜ
ಒಣ ಮೆಣಸು 1/4 ಕೆಜಿ (ತುಂಬಾ ಖಾರವಿದ್ದರೆ ಸ್ವಲ್ಪ ಕಡಿಮೆ ಹಾಕಿ)
10-15 ಕಾಶ್ಮೀರಿ ಒಣ ಮೆಣಸು
3 ಚಮಚ ಕಡ್ಲೆಬೇಳೆ
3 ಚಮಚ ಉದ್ದಿನ ಬೇಳೆ
2 ಚಮಚ ಜೀರಿಗೆ ಪುಡಿ
2 ಚಮಚ ಮೆಂತೆ ಬೀಜ
1 ಚಮಚ ಕಾಳುಮೆಣಸು
ಸಾಂಬಾರ್ ಪುಡಿ ಮಾಡುವ ವಿಧಾನ:
ತವಾ ಬಿಸಿ ಮಾಡಿ ಕಡಿಮೆ ಉರಿಯಲ್ಲಿ ಪ್ರತಿಯೊಂದು ಮಸಾಲೆ ಸಾಮಗ್ರಿ ಪ್ರತ್ಯೇಕಾಗಿ
ಹುರಿಯಿರಿ.
ಹುರಿದ ಸಾಮಗ್ರಿಯನ್ನು ತಟ್ಟೆಗೆ ಹಾಕಿ ಆರಲು ಬಿಡಿ
ನಂತರ ಮಿಕ್ಸಿ ಜಾರ್ಗೆ ಹಾಕಿ ಮಿಕ್ಸ್ಯಲ್ಲಿ ನುಣ್ಣನೆ ರುಬ್ಬಿ.
ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟು ಸಾಂಬಾರ್ಗೆ ಬಳಸಿ.
ಮತ್ತೊಂದು ಸಾಂಬಾರ್ ಮಸಾಲ
ನೀವು ಸಾಂಬಾರ್ ಇನ್ನೂ ಸ್ವಲ್ಪ ವಸ್ತುಗಳನ್ನು ಸೇರಿಸಿದರೆ ರುಚಿ ಇನ್ನೂ ಸ್ವಲ್ಪ
ಭಿನ್ನವಾಗಿರುತ್ತದೆ.
ಹೌದು ನೀವು ಮೇಲಿನ ಸಾಮಗ್ರಿಗೆ ಕರಿಬೇವು ಕೂಡ ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಿ
ಸೇರಿಸಿ.
1 ಚಮಚ ಸಾಸಿವೆ ಕೂಡ ರೋಸ್ಟ್ ಮಾಡಿ ಸೇರಿಸಬಹುದು
ಈಗ ಇವುಗಳನ್ನು ಪುಡಿ ಮಾಡಿಟ್ಟು ಬಳಸಬಹುದು.
ಹೊರಗಡೆಯ ಸಾಂಬಾರ್ ಪುಡಿಗಿಂತ ತುಂಬಾನೇ ರುಚಿಯಾಗಿರುತ್ತದೆ
ಈ ಸಾಂಬಾರ್ ಪುಡಿ ಸೇರಿಸಿ ಸಾಂಬಾರ್ ಮಾಡಿದರೆ ಅಡುಗೆ ತುಂಬಾನೇ
ರುಚಿಯಾಗಿರುತ್ತದೆ, ಮನೆಗೆ ಯಾರಾದರೂ ಅತಿಥಿ ಬಂದರೆ ನಿಮ್ಮ ಕೈಪುಣ್ಯ ತುಂಬಾನೇ
ಹೊಗಳುತ್ತಾರೆ.
ಈ ಸಾಂಬಾರ್ ಪುಡಿ ಸೇರಿಸಿ ಸಿಂಪಲ್ ಸಾಂಬಾರ್
ರೆಸಿಪಿ
ಸಾಂಬಾರ್ ಪುಡಿ ಒಂದೂವರೆ ಚಮಚ
ಈರುಳ್ಳಿ 1
ಸ್ವಲ್ಪ ಬೇಳೆ(1/4 ಕಪ್)
ಟೊಮೆಟೊ 1
ನುಗ್ಗೆಕಾಯಿ 1
ಆಲೂಗಡ್ಡೆ 1
ಬದನೆ 1 '
ಕ್ಯಾರೆಟ್ 1 ರುಚಿಗೆ ತಕ್ಕ ಉಪ್ಪು
ಖಾರದ ಪುಡಿ 1/2 ಚಮಚ
ಕೊತ್ತಂಬರಿ ಪುಡಿ 1/ 2 ಚಮಚ
ಅರಿಶಿಣ ಪುಡಿ 1/4 ಚಮಚ
ಸ್ವಲ್ಪ ಕೊತ್ತಂಬರಿ ಸೊಪ್ಪು
ನೀವು ತರಕಾರಿ, ಬೇಳೆ ಸೇರಿಸಿ ಬೇಯಿಸಿ, ಕುಕ್ಕರ್ನಲ್ಲಿ ಆದರೆ ನುಗ್ಗೆಕಾಯಿ
ಮತ್ತೆ ಸೇರಿಸಿ. ನೀವು ಬೇಳೆ ಮತ್ತು ಇತರ ಸಾಮಗ್ರಿ ಹಾಕಿ, ರುಚಿಗೆ ತಕ್ಕ ಉಪ್ಪು,
ಬೇಯಲು ಬೇಕಾದ ನೀರು ಸೇರಿಸಿ, 2 ವಿಶಲ್ ಹೊಡೆದ ಮೇಲೆ ತಣ್ಣಗಾಗಲು ಬಿಡಿ
ನಂತರ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಬಳಿಕ ಸಾಸಿವೆ ಹಾಕಿ, ಸಾಸಿವೆ
ಚಟ್ಪಟ್ ಶಬ್ದ ಬರುವಾಗ ಬೇಯಿಸಿದ ತರಕಾರಿ ಜೊತೆಗೆ ನುಗ್ಗೆಕಾಯಿ ಸೇರಿಸಿ,
ನುಗ್ಗೆಕಾಯಿ ಬೇಯುವವರೆ ಒಂದು 5 ನಿಮಿಷ ಬೇಯಿಸಿ. ಬಳಿಕ ಮೆಣಸಿನ ಪುಡಿ,
ಕೊತ್ತಂಬರಿ ಪುಡಿ, ಸಾಂಬಾರ್ ಪುಡಿ, ಅರಿಶಿಣ ಪುಡಿ ಸೇರಿಸಿ ಕುದಿಸಿ, ಬಳಿಕ
ಸ್ವಲ್ಪ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಸಾಂಬಾರ್ ರೆಡಿ.



Click it and Unblock the Notifications
