Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಅವರೆಕಾಯಿ ಪಲ್ಯ ರೆಸಿಪಿ
ಪಲ್ಯ, ಸಾಂಬಾರ್, ಕುರುಕುರೆ ತಿನಿಸುಗಳ ತಯಾರಿಸಲು ಅತ್ಯುತ್ತಮ ಕಾಳು ಎಂಬ ಹೆಗ್ಗಳಿಕೆ ಪಡೆದುಕೊಂಡಿರುವುದು ಅವರೆಕಾಳು. ಅವರೆಕಾಳು ಬೀನ್ಸ್ ರೂಪದಲ್ಲಿದ್ದು, ಅದರ ಬಳಕೆಗಾಗಿ ಸೂಸುವುದು ಅಥವಾ ಬಿಡಿಸುವುದು ಎಂದರೆ ಸ್ವಲ್ಪ ಸಮಯ ಹಿಡಿಯುತ್ತದೆ. ಆದರೆ ಅದರಿಂದ ತಯಾರಿಸಿದ ತಿನಿಸು ಹಾಗೂ ಆಹಾರ ಪದಾರ್ಥಗಳು ಬಹಳ ರುಚಿಕರವಾಗಿರುತ್ತವೆ. ಕರ್ನಾಕದಲ್ಲಿ ಸಾಮಾನ್ಯವಾಗಿ ಪ್ರತಿಯೊಂದು ಮನೆಯಲ್ಲೂ ಅವರೆಕಾಯಿಯ ಪದಾರ್ಥಗಳನ್ನು ತಯಾರಿಸುತ್ತಾರೆ. ಅದರಲ್ಲಿ ಅವರೆಕಾಯಿ ಪಲ್ಯವು ವಿಶೇಷವಾದದ್ದು. ಅವರೆಕಾಯಿ ಬೆಳೆಯುವ ಸಮಯದಲ್ಲಿ ಪ್ರತಿಯೊಂದು ಮನೆಯಲ್ಲೂ ವಿವಿಧ ಬಗೆಯಿಂದ ಕೂಡಿರುವ ಅವರೆಕಾಳಿನ ಅಡುಗೆ ಮಾಡುತ್ತಾರೆ.
ಅಧಿಕ ಪೋಷಕಾಂಶವನ್ನು ಹೊಳಗೊಂಡಿರುವ ಅವರೆಕಾಯಿ ಸಮೃದ್ಧವಾದ ವಿಟಮಿನ್ಗಳನ್ನು ಒಳಗೊಂಡಿರುತ್ತದೆ. ಅವರೆಕಾಯಿಯೊಂದಿಗೆ ಆರೋಗ್ಯ ಭರಿತ ಮಸಾಲೆ ಹಾಗೂ ಕೊತ್ತಂಬರಿ ಸೊಪ್ಪುಗಳ ಬಳಕೆ ಮಾಡುವುದರ ಮೂಲಕ ಅದರ ಶಕ್ತಿ ಅಥವಾ ಪೋಷಕಾಂಶದ ಪ್ರಮಾಣವನ್ನು ದ್ವಿಗುಣಗೊಳಿಸಬಹುದು. ಸರಳ ಮತ್ತು ಸುಲಭ ವಿಧಾನದಲ್ಲಿ ತಯಾರಿಸಬಹುದಾದ ಈ ಪಾಕವಿಧಾನವನ್ನು ಬೋಲ್ಡ್ ಸ್ಕೈ ಇಂದು ನಿಮಗೆ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯ ಮೂಲಕ ತಿಳಿಸಿಕೊಡಲಿದೆ.

Recipe By: ಕಾವ್ಯ
Recipe Type: ಪ್ರಮುಖ ಖಾದ್ಯ
Serves: 1
-
*ಅವರೆಕಾಯಿ ಬೀನ್ಸ್ - 1/2 ಬೌಲ್
*ಉದ್ದಿನ ಬೇಳೆ- 1/2 ಟೇಬಲ್ ಚಮಚ
*ಕಡ್ಲೆ ಬೇಳೆ - 1/2 ಟೇಬಲ್ ಚಮಚ
*ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು- ಒಂದು ಹಿಡಿ.
*ಹೆಚ್ಚಿಕೊಂಡ ಟೊಮೆಟೋ- 1/2
*ತೆಂಗಿನ ತುರಿ- 1/2 ಕಪ್
*ಹಸಿ ಮೆಣಸು - 4-5
*ನೀರು - 1 ಕಪ್
*ಒಗ್ಗರಣೆಗೆ - ಎಣ್ಣೆ
*ನಿಂಬೆ ರಸ - 1/2 ನಿಂಬೆ ಹಣ್ಣು
*ಕರಿಬೇವು - 2 ಎಳೆಗಳು.
*ಜೀರಿಗೆ - 1/2 ಟೇಬಲ್ ಚಮಚ
*ಕರಿಮೆಣಸಿನ ಪುಡಿ -1/2 ಟೇಬಲ್ ಚಮಚ
*ಸಾಸಿವೆ - 1/2 ಟೇಬಲ್ ಚಮಚ
*ಅರಿಶಿನ -1/4 ಟೇಬಲ್ ಚಮಚ.
-
1. ಕುಕ್ಕರ್ ತೆಗೆದುಕೊಳ್ಳಿ.
2. 1/2 ಬೌಲ್ ಅವರೆಕಾಳನ್ನು ಸೇರಿಸಿ.
3. 1 ಕಪ್ ನೀರನ್ನು ಸೇರಿಸಿ.
4. 1/4 ಟೇಬಲ್ ಚಮಚ ನೀರನ್ನು ಸೇರಿಸಿ.
5. ಕುಕ್ಕರ್ ಮುಚ್ಚಳವನ್ನು ಮುಚ್ಚಿ 10-15 ನಿಮಿಷಗಳ (3-4 ಸೀಟಿ) ಕಾಲ ಬೇಯಿಸಿ.
6. ಮುಚ್ಚಳವನ್ನು ತೆರೆದು ನೀರನ್ನು ಬಾಗಿಸಿ ತೆಗೆಯಿರಿ.
7. ಕಾಳನ್ನು ಒಂದು ಬೌಲ್ಗೆ ವರ್ಗಾಯಿಸಿ, ಸ್ವಲ್ಪ ಆರಲು ಬಿಡಿ.
8. ಒಂದು ಪಾತ್ರೆಯನ್ನು ತೆಗೆದುಕೊಳ್ಳಿ.
9. 2 ಟೇಬಲ್ ಚಮಚ ಎಣ್ಣೆಯನ್ನು ಸೇರಿಸಿ.
10. ಕಡ್ಲೆ ಬೇಳೆ, ಉದ್ದಿನ ಬೇಳೆ ಮತ್ತು ಸಾಸಿವೆ ಕಾಳನ್ನು ಸೇರಿಸಿ, ಹುರಿಯಿರಿ.
11. 1/2 ಟೇಬಲ್ ಚಮಚ ಜೀರಿಗೆ, ಕರಿಬೇವಿನ ಎಲೆ, ಹಸಿಮೆಣಸು, ಅರಿಶಿನ ಮತ್ತು ಟೊಮೆಟೋ ಸೇರಿಸಿ.
12. ಮೆಣಸಿನ ಪುಡಿಯನ್ನು ಸೇರಿಸಿ.
13. ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತ, ಚೆನ್ನಾಗಿ ಮಿಶ್ರಣ ಮಾಡಿ.
14. ಬೆಂದ ಅವರೆಕಾಯಿಯನ್ನು ಸೇರಿಸಿ.
15. 1/2 ಕಪ್ ತೆಂಗಿನ ತುರಿಯನ್ನು ಸೇರಿಸಿ.
16. ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ.
17. ಕರಿಮೆಣಸಿನ ಪುಡಿಯನ್ನು ಸೇರಿಸಿ.
18. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ.
19. ನಿಂಬೆ ಹಣ್ಣಿನ ರಸವನ್ನು ಸೇರಿಸಿ.
20. ಎಲ್ಲವನ್ನು ಸರಿಯಾಗಿ ಮಿಶ್ರಗೊಳಿಸಿ.
21. ಬಿಸಿ ಇರುವಾಗಲೇ ಚಪಾತಿ ಅಥವಾ ರೊಟ್ಟಿಯೊಂದಿಗೆ ಸವಿಯಲು ನೀಡಿ.
- 1. ಕೆಲವರಿಗೆ ಅತಿಯಾಗಿ ಅವರೆಕಾಯಿ ಬೇಯುವುದು ಇಷ್ಟವಾಗದು. ಹಾಗಾಗಿ ಕುಕ್ಕರ್ ಅಲ್ಲಿ ಬೇಯಿಸುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು.
- 2. ನಿಮ್ಮ ರುಚಿಗೆ ತಕ್ಕಷ್ಟು ಮೆಣಸಿನ ಪುಡಿಯನ್ನು ಸೇರಿಸಿ. ಹೆಚ್ಚು ಖಾರ ಬೇಕಿದ್ದರೆ ಚಿಟಕಿ ಮೆಣಸಿನ ಪುಡಿಯನ್ನು ಸೇರಿಸಿ, ರುಚಿಯನ್ನು ದ್ವಿಗುಣಗೊಳಿಸಿ.
- ಬಡಿಸುವ ಪ್ರಮಾಣ - 1 ಬೌಲ್
- ಕ್ಯಾಲೋರಿ - 950 ಕ್ಯಾಲ್
- ಕೊಬ್ಬು - 28 ಗ್ರಾಂ.
- ಪ್ರೋಟೀನ್ - 31 ಗ್ರಾಂ.
- ಕಾರ್ಬೋಹೈಡ್ರೇಟ್ - 145 ಗ್ರಾಂ
- ಸಕ್ಕರೆ - 15 ಗ್ರಾಂ
- ಫೈಬರ್ - 5 ಗ್ರಾಂ.
ಹಂತ ಹಂತವಾದ ಚಿತ್ರವಿವರಣೆ:
1. ಕುಕ್ಕರ್ ತೆಗೆದುಕೊಳ್ಳಿ.

2. 1/2 ಬೌಲ್ ಅವರೆಕಾಳನ್ನು ಸೇರಿಸಿ.

3. 1 ಕಪ್ ನೀರನ್ನು ಸೇರಿಸಿ.

4. 1/4 ಟೇಬಲ್ ಚಮಚ ನೀರನ್ನು ಸೇರಿಸಿ.

5. ಕುಕ್ಕರ್ ಮುಚ್ಚಳವನ್ನು ಮುಚ್ಚಿ 10-15 ನಿಮಿಷಗಳ (3-4 ಸೀಟಿ) ಕಾಲ ಬೇಯಿಸಿ.


6. ಮುಚ್ಚಳವನ್ನು ತೆರೆದು ನೀರನ್ನು ಬಾಗಿಸಿ ತೆಗೆಯಿರಿ.


7. ಕಾಳನ್ನು ಒಂದು ಬೌಲ್ಗೆ ವರ್ಗಾಯಿಸಿ, ಸ್ವಲ್ಪ ಆರಲು ಬಿಡಿ.

8. ಒಂದು ಪಾತ್ರೆಯನ್ನು ತೆಗೆದುಕೊಳ್ಳಿ.

9. 2 ಟೇಬಲ್ ಚಮಚ ಎಣ್ಣೆಯನ್ನು ಸೇರಿಸಿ.

10. ಕಡ್ಲೆ ಬೇಳೆ, ಉದ್ದಿನ ಬೇಳೆ ಮತ್ತು ಸಾಸಿವೆ ಕಾಳನ್ನು ಸೇರಿಸಿ, ಹುರಿಯಿರಿ.



11. 1/2 ಟೇಬಲ್ ಚಮಚ ಜೀರಿಗೆ, ಕರಿಬೇವಿನ ಎಲೆ, ಹಸಿಮೆಣಸು, ಅರಿಶಿನ ಮತ್ತು ಟೊಮೆಟೋ ಸೇರಿಸಿ.





12. ಮೆಣಸಿನ ಪುಡಿಯನ್ನು ಸೇರಿಸಿ.

13. ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತ, ಚೆನ್ನಾಗಿ ಮಿಶ್ರಣ ಮಾಡಿ.


14. ಬೆಂದ ಅವರೆಕಾಯಿಯನ್ನು ಸೇರಿಸಿ.

15. 1/2 ಕಪ್ ತೆಂಗಿನ ತುರಿಯನ್ನು ಸೇರಿಸಿ.

16. ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ.

17. ಕರಿಮೆಣಸಿನ ಪುಡಿಯನ್ನು ಸೇರಿಸಿ.

18. ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ.

19. ನಿಂಬೆ ಹಣ್ಣಿನ ರಸವನ್ನು ಸೇರಿಸಿ.

20. ಎಲ್ಲವನ್ನು ಸರಿಯಾಗಿ ಮಿಶ್ರಗೊಳಿಸಿ.

21. ಬಿಸಿ ಇರುವಾಗಲೇ ಚಪಾತಿ ಅಥವಾ ರೊಟ್ಟಿಯೊಂದಿಗೆ ಸವಿಯಲು ನೀಡಿ.







Click it and Unblock the Notifications